AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಈ ರಾಶಿವಯವರಿಗೆ ಇಂದು ಅನಿರೀಕ್ಷಿತ ತಿರುವುಗಳಿಂದ ಬಹಳ ಉದ್ವೇಗ ಉಂಟಾಗಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 5) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಈ ರಾಶಿವಯವರಿಗೆ ಇಂದು ಅನಿರೀಕ್ಷಿತ ತಿರುವುಗಳಿಂದ ಬಹಳ ಉದ್ವೇಗ ಉಂಟಾಗಬಹುದು
ಜ್ಯೋತಿಷ್ಯ
ವಿವೇಕ ಬಿರಾದಾರ
|

Updated on: Jun 05, 2023 | 12:15 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 5 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೂಲಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ 10:54 ರಿಂದ 12:31ರ ವರೆಗೆ, ಗುಳಿಕ ಕಾಲ 02:08 ರಿಂದ 03:44ರ ವರೆಗೆ

ಸಿಂಹ: ಕಷ್ಟವು ನಿಮ್ಮನ್ನು ಒಂದರಮೇಲೊಂದು ಬಂದು ಕಾಡಿದರೂ ನಿಮ್ಮ ಧೈರ್ಯವು ಕುಗ್ಗದು. ಹೊಸ ಕೆಲಸವನ್ನು ನೀವು ಆರಂಭಿಸುವ ಹುನ್ನಾರವು ಒಳ್ಳೆಯದೇ. ಕಾಲ, ದೇಶವನ್ನು ಗಮನಿಸಿಕೊಂಡು ಮುಂದುವರಿಯುವುದು ಉತ್ತಮ. ನಿಮಗೆ ಹಣದ ಚಿಂತೆ ಇರಲಿದ್ದು ಹೊಂದಿಸಿಕೊಳ್ಳಲು ಬೇಕಾದ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ದೌರ್ಬಲ್ಯಗಳನ್ನು ನೀವು ಇಂದು ಅವಲೋಕನ ಮಾಡಿಕೊಳ್ಳಬಹುದು. ಸಂದರ್ಭಕ್ಕೆ ಯೋಗ್ಯವಾದ ಮಾತುಗಳನ್ನು ನೀವಾಡಿ. ನಿಮ್ಮ ಕೆಲಸವನ್ನು ಮುಗಿಸದೇ ಇದ್ದುದಕ್ಕೆ ಕಾರಣವನ್ನು ಹುಡುಕಬೇಡಿ.

ಕನ್ಯಾ: ನಿಮಗೆ ಸಮಾಜಮುಖೀ ಕಾರ್ಯವನ್ನು ಮಾಡಲು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ ಕಾಣಬಹುದು. ಕಛೇರಿಯ ಒತ್ತಡದಲ್ಲಿ ನಿಮಗೆ ಉತ್ಸಾಹವನ್ನು ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಪತ್ನಿಯ ವಿಚಾರದಲ್ಲಿ ನೀವು ನಿರ್ಲಕ್ಷ್ಯ ತೋರಿಸಿದ್ದೀರಿ ಎಂದು ನಿಮ್ಮನ್ನು ದೂರಬಹುದು. ಅಕಾರಣಾವಾಗಿ ಬೈಯುವುದು ಸರಿಯಲ್ಲ. ನಿಮ್ಮ ಮೇಲೆ ಅಪನಂಬಿಕೆಗಳು ಬರಬಹುದು. ಮಾನಸಿಕವಾಗಿ ನೀವು ಸ್ಥೈರ್ಯವನ್ನು ಕಳೆದುಕೊಳ್ಳಬಹುದು. ತಂದೆಯ ಸಹಕಾರವು ನಿಮಗೆ ಸಿಗಲಿದೆ‌. ಸೋಲಿಂದ ಹೆದರುವ ಅವಶ್ಯಕತೆ ಇಲ್ಲ.‌ ಧೃತಿಗೆಡದೇ ಕಾರ್ಯವನ್ನು ಸಾಧಿಸಲು ಯೋಜನೆಯನ್ನು ಹೂಡಿ. ನಾರಾಯಣನ ಸ್ಮರಣೆಯನ್ನು ಮಾಡಿ.

ತುಲಾ: ಅನಿರೀಕ್ಷಿತ ತಿರುವುಗಳು ನಿಮಗೆ ಬಹಳ ಉದ್ವೇಗವನ್ನು ಉಂಟುಮಾಡೀತು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಕ್ಷಪಾತಕ್ಕೆ ಸಂಬಂಧಿಸಿದಂತೆ ಅಪವಾದಗಳು ಕೇಳಿಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಸದಾ ಇಟ್ಟಕೊಳ್ಳಬೇಕಾದೀತು. ನಾಳೆಗೋಸ್ಕರ ಅತಿಯಾದ ಆಲೋಚನೆ ಬೇಡ.‌ ಇವತ್ತಿನ ದಿನವನ್ನು ಸುಂದರವಾಗಿ ಇರಿಸಿಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಮಕ್ಕಳ ಜೊತೆಗಿನ ಸಲುಗೆಯು ನಿಮಗೆ ಕಷ್ಟವಾದೀತು. ಕೆಟ್ಟ ಕೆಲಸಗಳು ನಿಮ್ಮನ್ನು ಆಕರ್ಷಿಸಬಹುದು. ಸ್ವಂತಿಕೆಯನ್ನು ಇಲ್ಲಿ ಉಪಯೋಗಿಸಿ ಕೆಲಸಮಾಡಿ.

ವೃಶ್ಚಿಕ: ನಿಮ್ಮವರ ಜೊತೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ನಿಮ್ಮ ಜೊತೆ ಕೆಲಸ ಮಾಡುವವರೂ ನಿಮ್ಮ ವರ್ತನೆಯನ್ನು ಸಹಿಸಲಾರದೇ ದೂರ ಉಳಿಯಬಹುದು. ಇಂದು ನೀವು ನಿಮಗೆ ಅನುಕೂಲವಾದ ಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳಲು ಬಯಸುವಿರಿ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಫಲವನ್ನು ಕೊಡುವುದಿಲ್ಲ. ಆಂತರಿಕ ಕಲಹವು ಅತಿಯಾದ ವ್ಯಥೆಯನ್ನು ಉಂಟುಮಾಡೀತು. ಸೌಂದರ್ಯಕ್ಕೆ ಮನಸೋಲುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಮೇಲೆ ಆದಷ್ಟು ನಿಯಂತ್ರಣವಿರಲಿ. ಬೇಡದ್ದರ ಕಡೆಗೆ ಮನಸ್ಸನ್ನು ಹರಿಸುವುದು ಬೇಡ.

-ಲೋಹಿತಶರ್ಮಾ – 8762924271

ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ