Nitya Bhavishya: ಇಂದಿನ ರಾಶಿಭವಿಷ್ಯ, ಯೋಗ್ಯರನ್ನು ಕರೆದು ಭೋಜನದಿಂದ ಸಂತೃಪ್ತಿಪಡಿಸಿ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 5) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 5 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೂಲಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ 10:54 ರಿಂದ 12:31ರ ವರೆಗೆ, ಗುಳಿಕ ಕಾಲ 02:08 ರಿಂದ 03:44ರ ವರೆಗೆ
ಧನು: ನಿಮ್ಮ ಗೌಪ್ಯತೆಯನ್ನು ಕಾಪಾಡಲು ನೀವು ವಿಫಲರಾಗುವಿರಿ. ಉದ್ಯೋಗದಲ್ಲಿ ನೀವು ದಿಕ್ಕು ತೋಚದೆ ಬಹಳ ಆತಂಕ ಪಡುವಿರಿ. ನಿಮ್ಮದೇ ಆದ ಕೆಲಸಗಳು ನಿಮಗೆ ಬೇಕಾದಷ್ಟು ಇದ್ದರೂ ನೀವು ಅವುಗಳನ್ನು ಲೆಕ್ಕಿಸದೇ ನೀವು ಆರಾಮಾಗಿ ಇರುವಿರಿ. ವಿದೇಶಕ್ಕೆ ಹೋಗುವ ಸೂಚನೆ ಇಂದು ಸಿಗಬಹುದು. ಯಂತ್ರಗಳ ಉದ್ಯಮವನ್ನು ಮಾಡುತ್ತಿದ್ದರೆ ಅಧಿಕಲಾಭವು ಆಗಬಹುದು. ಅವಶ್ಯಕತೆಗೆ ಅನುಸಾರವಾಗಿ ನಿಮ್ಮ ಖರ್ಚನ್ನು ಮಾಡಿ. ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾದೀತು. ಮಾತನಾಡದೇ ನಿಮ್ಮ ಕೆಲಸದಲ್ಲಿ ಮಗ್ನರಾಗಿರಿ. ಕುಜನು ಅಷ್ಟಮದಲ್ಲಿ ಇದ್ದು ಏನಾದರೂ ಅನಾಹುತವನ್ನು ಮಾಡಿಸಿಯಾನು. ಸುಬ್ರಹ್ಮಣ್ಯನ ಸ್ತೋತ್ರ ಮಾಡಿ.
ಮಕರ: ನಿಮಗೆ ಇಂದು ಧೈರ್ಯವು ಕಡಿಮೆ ಆದಂತೆ ತೋರುತ್ತದೆ. ಯಾವ ಕೆಲಸವನ್ನೂ ನೀವು ಭಯಮುಕ್ತವಾಗಿ ಮಾಡಲಾರಿರಿ. ಆಸ್ತಿಯನ್ನು ಇನ್ನೊಬ್ಬರು ಒಡೆದುಕೊಳ್ಳಲು ಸಂಚು ರೂಪಿಸುತ್ತಿರುವರು. ಆಹಾರವು ನಿಮಗೆ ಸರಿಯಾದ ಸಮಯಕ್ಕೆ ಸಿಗದು. ಯಾರಾದರೂ ಯೋಗ್ಯರನ್ನು ಕರೆದು ಭೋಜನದಿಂದ ಸಂತೃಪ್ತಿ ಪಡಿಸಿ. ನಿಮ್ಮದೇ ಮಕ್ಕಳು ನಿಮ್ಮ ವಿರುದ್ಧ ಮಾತನಾಡುವ ಸಾಧ್ಯತೆ ಇದೆ. ತಾಯಿಯಿಂದ ನಿಮಗೆ ಬೆಂಬಲವು ಸಿಗಬಹುದು. ಆಲಸ್ಯದಿಂದ ಹೊರಬಂದರೆ ನಿಮಗೆ ಹತ್ತಾರು ದಾರಿಗಳು ಕಾಣಿಸಿಕೊಂಡಾವು. ಮಿತಿ ಮೀರಿದ ನಿಮ್ಮ ವರ್ತನೆಯು ಕಿರಿಕಿರಿಯನ್ನು ಉಂಟುಮಾಡೀತು.
ಕುಂಭ: ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಿದ್ದು ನಿಮಗೆ ಗೊತ್ತಾಗಿ ನೀವು ಅವರನ್ನು ದೂರವಿಡುವಿರಿ. ಅವಸರದಿಂದ ಏನನ್ನೂ ಮಾಡಲು ಹೋಗುವುದು ಬೇಡ. ಪ್ರೇಮವು ಬೂದಿ ಮುಚ್ಚಿದ ಕಂಡದಂತೆ ಇರುವುದು. ಹೊರ ಬರಲು ಸಮಯವನ್ನು ಕಾಯಬೇಕಾಬಹುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ. ಯಾರ ಸಹವಾಸವೂ ಬೇಡ ಎಂಬ ನಿರ್ಲಿಪ್ತ ಭಾವವೂ ನಿಮ್ಮಲ್ಲಿ ಉಂಟಾಗಬಹುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡುವುದು ನೆನಪಿನಲ್ಲಿ ಇರಲಿ. ಭೂಮಿಯ ವ್ಯವಹಾರವು ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು. ಭೂವರಾಹನ ಸ್ಮರಣೆಯ ಜೊತೆ ಇಂದಿನ ಕೆಲಸವನ್ನು ಆರಂಭಿಸಬಹುದು.
ಮೀನ: ನಿಮ್ಮ ಕಾರ್ಯಗಳಿಗೆ ಇಂದು ಸಂಗಾತಿಯು ಬೆಂಬಲ ನೀಡಬಹುದು. ಕಛೇರಿಯಲ್ಲಿ ಉಳಿದ ಕೆಲಸಗಳನ್ನು ಮಾಡಲು ನೀವು ಇಂದು ಆದ್ಯತೆ ನೀಡುವಿರಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದ್ದು ಅದರ ವೇಗವನ್ನು ನೀವು ಹೆಚ್ಚಿಸುವಿರಿ. ಯಂತ್ರೋಪಕರಣಗಳು ಹಾಳಾಗಿ ಹಣವು ಖರ್ಚಾಗಬಹುದು. ನಿಮ್ಮನ್ನು ನಂಬಿದವರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಿಕೊಡುವಿರಿ. ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಯುಕ್ತಿಯಿಂದ ಕೆಲಸವನ್ನು ಮಾಡಿ. ಅಧಿಕಾರಿಗಳಿಂದ ಕಿರಿಕಿರಿ ಆಗುವ ಸಂಭವವಿದೆ. ಶನೈಶ್ಚರನಿಗೆ ನಮಸ್ಕರಿಸಿ ನೀವು ಮುಂದುವರಿಯುವುದು ಒಳ್ಳೆಯದು.
-ಲೋಹಿತಶರ್ಮಾ – 8762924271