Daily Horoscope: ಸಣ್ಣ ವಿಚಾರಕ್ಕೆ ಕೋಪ ಬೇಡ, ಆರೋಗ್ಯ ಹದಗೆಡುವ ಸಾಧ್ಯತೆ
ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 03 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ:ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:46 ರಿಂದ 09:23 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:52 ರಿಂದ 12:37 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:50 ರ ವರೆಗೆ.
ಮೇಷ: ಇಂದಿನ ನಿಮ್ಮ ಪ್ರಯಾಣ ವ್ಯರ್ಥವಾಗಬಹುದು. ಅನಿರೀಕ್ಷಿತವಾಗಿ ಆರ್ಥಿಕ ನಷ್ಟವಾಗಬಹುದು. ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ. ಹೊಸ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಸ್ನೇಹಿತರು ನಿಮ್ಮಿಂದ ದೂರಾಗಬಹುದು. ನಿಮ್ಮ ಮಾತನ್ನು ಧಿಕ್ಕರಿಸುವರು. ಸಂಗಾತಿಯ ಜೊತೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತ ದಿನವನ್ನು ಕಳೆಯುವಿರಿ. ನಿಮ್ಮೆದುರು ಆಗುವ ಎಲ್ಲ ಘಟನೆಗಳನ್ನು ಸಮಾಧಾನ ಚಿತ್ತದಿಂದ ಗಮನಿಸಿ. ದೈವದಲ್ಲಿ ಹೆಚ್ಚು ವಿಶ್ವಾಸವಿಟ್ಟು ಮುಂದೆ ಹೆಜ್ಜೆ ಇಡಿ.
ವೃಷಭ: ಒಂದುಷ್ಟು ಶಿಸ್ತಿನಿಂದ ನೀವು ಇರಬೇಕಾದೀತು. ನಿಮ್ಮ ಗಂಭೀರವಾದ ನಡೆಯು ಕೆಲವರಿಗೆ ಕಷ್ಟವಾಗಬಹುದು. ದೂರ ಬಂಧುಗಳು ನಿಮ್ಮನ್ನು ಭೇಟಿಯಾಗಲು ಬರುವರು. ನಿಮ್ಮ ಮಾತಿನಿಂದ ಸಂತೋಷಪಡುವರು. ಆಹಾರದ ಅಭಾವದಿಂದ ನಿಮಗೆ ತೊಂದರೆಯಾದೀತು. ಪುಣ್ಯಸ್ಥಳಗಳಿಗೆ ಹೋಗುವಿರಿ. ಉತ್ತಮ ಉದ್ಯೋಗವನ್ನು ಬಿಟ್ಟುಕೊಳ್ಳುವಿರಿ. ಯಾರ ಮಾತಿಗೂ ಗೌರವವನ್ನು ಕೊಡದೇ ನಿಮ್ಮದೇ ಚಿಂತನೆಯಲ್ಲಿ ಇರುವಿರಿ. ಸ್ವಭಾವವನ್ನು ಬದಲಿಸಿಕೊಳ್ಳಬೇಕಾದೀತು. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು.
ಮಿಥುನ: ಕಛೇರಿಯಲ್ಲಿ ನಿಮ್ಮ ಸಾಮರ್ಥ್ಯವು ಅರ್ಥವಾಗುವುದು. ಎಲ್ಲರಂತೆ ಬದುಕಬೇಕು ಎಂಬ ಆಸೆ ಇದ್ದರೂ ಆರ್ಥಿಕವಾಗಿ ಬಲವಾಗಲು ಕಷ್ಟವಾದೀತು. ಹಳೆಯ ಘಟನೆಗಳು ಮರೆತುಹೋಗುವ ಸಾಧ್ಯತೆ ಇದೆ. ನೀವು ಹೆಚ್ಚಿನ ಮಾರ್ಗದರ್ಶನವನ್ನು ಹಿರಿಯರಿಂದ ಬಯಸುವಿರಿ. ಉನ್ನತ ಹುದ್ದೆಯನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಿರಿ. ಕಳೆದುಹೋದುದರ ಬಗ್ಗೆ ಬಹಳ ಚಿಂತನೆಯನ್ನು ಮಾಡುವಿರಿ. ಸಂಗಾತಿಯ ಕಡೆಯಿಂದ ಪ್ರೀತಿಯು ಸಿಗಲಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಚ್ಛಿಸುವುದಿಲ್ಲ. ನಿಮ್ಮ ಸಂದರ್ಭೋಚಿತ ಸಲಹೆಯನ್ನು ಸ್ವೀಕರಿಸುವರು.
ಕಟಕ: ನಿಮ್ಮ ಸ್ನೇಹಿತರ ಬಳಗ ದೊಡ್ಡದಿದ್ದು ಎಲ್ಲರಿಗೂ ಸಂತೋಷವನ್ನು ಕೊಡುವಿರಿ. ಅಪರಿಚಿತ ಊರಿಗೆ ಹೋಗಿ ಸ್ವಲ್ಪ ಕಷ್ಟವಾದೀತು. ಮನೆಯಿಂದ ಅಶುಭವಾರ್ತೆಯು ಬರಬಹುದು. ಮನಸ್ಸನ್ನು ಗಟ್ಟಿಮಾಡಿಕೊಳ್ಳಿ. ಜ್ವರದಿಂದ ಬಳಲುವಿರಿ. ಪ್ರಯಾಣದ ಆಯಾಸವು ನಿಮಗೆ ಕಾರ್ಯದಲ್ಲಿ ನಿರಾಸಕ್ತಿ ಇರಲಿದೆ. ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಳ್ಳಬೇಡಿ. ಮಕ್ಕಳು ನಿಮ್ಮ ಬಳಿ ಏನನ್ನಾದರೂ ಹೇಳಿಕೊಳ್ಳಲು ಬಯಸಬಹುದು. ಅದನ್ನು ಆಲಿಸಿ. ವಿದೇಶದಿಂದ ಸ್ವದೇಶಕ್ಕೆ ಬರಲು ಇಚ್ಛಿಸುವಿರಿ. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ.
ಸಿಂಹ: ನಿಮ್ಮ ಸಂಕಟವನ್ನು ಪರಿಹರಿಸಿಕೊಳ್ಳಲು ದೈವದ ಮೊರೆ ಹೊಗುವಿರಿ. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಯಶಸ್ಸು ಕುಂಟಿತವಾಗಲಿದೆ. ಸುಳ್ಳನ್ನು ಹೇಳಿ ಸತ್ಯವನ್ನು ಮುಚ್ಚಿಡುವಿರಿ. ನೋವಾಗುವಂತೆ ನೀವು ಮಾತನಾಡುವಿರಿ. ನಿಮ್ಮ ಅತಿಯಾದ ಮಾತು ಇನ್ನೊಬ್ಬರಿಗೆ ಕಿರಿಕಿರಿಯನ್ನು ಉಂಟುಮಾಡೀತು. ಯಾರ ಸಲಹೆಯನ್ನೂ ಕೇಳದೇ ಹೂಡಿಕೆ ಮಾಡುವಿರಿ. ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಂಡು ಬೇಸರವಾಗಲಿದೆ. ದಾಂಪತ್ಯದಲ್ಲಿ ಕೆಲವು ಜೀರ್ಣವಾಗದ ಮಾತುಗಳನ್ನು ಕೇಳುವಿರಿ.
ಕನ್ಯಾ: ನಿಮ್ಮಿಂದ ಆಗದ ಕೆಲಸವನ್ನು ಮತ್ತೆ ಮತ್ತೆ ಮಾಡಲು ಹೋಗಿ ಅಪಮಾನಕ್ಕೆ ಒಳಗಾಗಬೇಡಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಇಷ್ಟಪಡಲು ನೀವು ಕಾರಣವನ್ನು ಹುಡುಕುವಿರಿ. ಏಕಾಗ್ರತೆಯಿಂದ ಇರಲು ನಿಮಗೆ ಕಷ್ಟವಾದೀತು. ಕೆಲಸಕ್ಕಾಗಿ ಬಹಳ ಸಮಯ ಕಾಯಬೇಕಾಗಬಹುದು. ಅದರೂ ಇಂದೇ ಆಗುತ್ತದೆ ಎಂಬ ನಿರೀಕ್ಷೆ ಬೇಡ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವಿರಿ. ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಬಹುದು. ಬಹಳ ದಿನಗಳ ಅನಂತರ ಸಹೋದರನ ಜೊತೆ ಕೆಲವು ಸಮಯವನ್ನು ಕಳೆಯುವಿರಿ.