Daily Horoscope: ಈ ರಾಶಿಯವರ ಸ್ವಭಾವದಲ್ಲಿ ಬದಲಾವಣೆ ಕಾಣಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2023 | 12:10 AM

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರ ಸ್ವಭಾವದಲ್ಲಿ ಬದಲಾವಣೆ ಕಾಣಬಹುದು
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 10 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ರಿಂದ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:48 ರಿಂದ 09:24ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:01 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ.

ಮೇಷ: ನಿಮ್ಮ ಸಮಾಧಾನಚಿತ್ತವೇ ಎಲ್ಲ ಸಂದರ್ಭವನ್ನು ಹಿಡಿತಕ್ಕೆ ತರಲು ಸಹಾಯ ಮಾಡುವುದು. ಸಂಗಾತಿಗೆ ಉಡುಗೊರೆಯನ್ನು ನೀಡಿ ಕೋಪವನ್ನು ಕಡಿಮೆ ಮಾಡಿಸುವಿರಿ. ಇಷ್ಟಪಟ್ಟರ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ನಿಮ್ಮ ಆಲೋಚನೆಯಂತೆ ಹೊಸ ಕಾರ್ಯಗಳು ಆರಂಭವಾಗುವುದು. ಬಯಸಿದ್ದನ್ನು ಪಡೆಯುವ ತನಕ ನಿಮ್ಮ ಹೋರಾಟವು ಇರಲಿದೆ. ನಿಮ್ಮ ಉತ್ಸಾಹಕ್ಕೆ ತೊಂದರೆಯಾಗಬಹುದು. ಸಮಯವನ್ನು ಹೆಚ್ಚು ತೆಗೆದುಕೊಂಡು ಇಂದೇ ಮುಗಿಸುವಿರಿ. ಇದರಿಂದ ನಿರಾಳ ಎನಿಸಬಹುದು.

ವೃಷಭ: ಮೂಲಭೂತ ವಿಚಾರದಲ್ಲಿ ನಿಮ್ಮ ನಿಲುವನ್ನು ಹೇಳಿರಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಷಯವನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ಆಪ್ತರ ಜೊತೆ ನಿಮ್ಮನ್ನು ಹಂಚಿಕೊಳ್ಳುವಿರಿ. ಬಾಯಾರಿಕೆಯು ಇಂದು ಹೆಚ್ಚಾದೀತು. ನಿಮ್ಮ ಸ್ವಭಾವದಲ್ಲಿ ಬದಲಾವಣೆಯಾಗಲಿದೆ. ಪ್ರಣಯದಲ್ಲಿ ಅತಿಯಾದ ಆಸಕ್ತಿಯೂ ಇರುವುದು. ಬಂಧುವರ್ಗವು ನಿಮ್ಮ ವಿವಾಹದ ಖುಷಿಯಲ್ಲಿ ಇರಲಿದೆ. ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಪತ್ತಿಗಾಗಿ ನೀವು ಬಹಳ ಶ್ರಮಪಡುವಿರಿ. ಆರ್ಥಿಕತೆಯ ಅಭಿವೃದ್ಧಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ.

ಮಿಥುನ: ಹೂಡಿಕೆಗೆ ಮೇಲಿಂದ ಮೇಲೆ ಒತ್ತಡವು ಬರಬಹುದು. ಈ ದಿನವನ್ನು ಕೆಲಸದ ಜೊತೆ ಕಳೆಯುವಿರಿ. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಮುಕ್ತಾಯವಾಗಬಹುದು. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಹಳೆಯ ವ್ಯಾಧಿಯಿಂದ ಬಳಸಬಹುದು. ಎಲ್ಲಿಯೋ ಇಟ್ಟಕೊಂಡು ನಿಮ್ಮ ವಸ್ತುವನ್ನು ಕಳೆದುಕೊಳ್ಳುವಿರಿ. ವಿರಾಮದಿಂದ ಬಂದ ಕಾರಣ ನಿಮ್ಮ ಕಛೇರಿಯ ಕೆಲಸವೇ ಇಂದು ಅಧಿಕವಾದೀತು. ಅತಿಥಿಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ಪ್ರೀತಿಯಿಂದ ನಿಮ್ಮನ್ನು ಗೆಲ್ಲುವರು. ವಿಷ್ಣುಸಹಸ್ರನಾಮವನ್ನು ಪಠಿಸಿ.

ಕಟಕ: ನಿಮ್ಮ ಕೆಲಸಗಳು ನಿಮಗೇ ಇಷ್ಟವಾಗದೇ ಹೋದೀತು.
ಕೆಲವು ವಿಚಾರಗಳಿಗೆ ಕುಟುಂಬದಿಂದ ವಿರೋಧವು ಬರಬಹುದು. ಅದನ್ನು ಗಮನಸಿಕೊಂಡು ವಿಷಯವನ್ನು ಪ್ರಸ್ತಾಪಿಸಿ. ಸ್ನೇಹಿತರ ಜೊತೆ ಸುತ್ತಟ ಹಾಗೂ ಉತ್ತಮ ಭೋಜನವು ಸಿಗಲಿದೆ. ನಿಮ್ಮದಲ್ಲದ್ದನ್ನು ಪಡೆಯಲು ನೀವು ಬಯಸುವಿರಿ. ಹಠ ಸ್ವಭಾವವನ್ನು ಕಡಿಮೆ ಮಾಡಿಕೊಂಡರೆ ಉತ್ತಮ.
ನಿಮ್ಮ ಗೆಳೆಯನನ್ನು ಬಯಸುವರು. ಮಾನಸಿಕವಾಗಿ ಕಿರಿಕಿರಿ ಎನಿಸದರೆ ಕುಲದೇವರನ್ನು ಸ್ಮರಿಸಿ ಮುನ್ನಡೆಯಿರಿ. ಸಜ್ಜರ ಸಹಾವಸವು ನಿಮಗೆ ಸಿಗಬಹುದು.

ಸಿಂಹ: ನಿಮ್ಮನ್ನು ಕಾರ್ಯಕ್ಕೆ ಉಪಯೋಗಿಸಿಕೊಂಡು ಬಿಡಬಹುದು. ಇದು ನಿಮಗೆ ಸಿಟ್ಟನ್ನು ತರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಅದನ್ನು ಸರಿ ಮಾಡುವಿರಿ.‌ ಸಹೋದರರ ನಡುವೆ ಮನಸ್ತಾಪವು ಬರಬಹುದು. ವಿವಾಹೇತರ ಸಂಬಂಧವು ನಿಮಗೆ ಬೇಸರ ತರಿಸಬಹುದು. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯಬಹುದು. ಸ್ವಂತ ಉದ್ಯೋಗದತ್ತ ನಿಮ್ಮ ಚಿತ್ತ ಹೊರಳಬಹುದು. ಅಂತರಂಗವನ್ನು ನೋಡಿಕೊಳ್ಳುವುದು ಉತ್ತಮ. ಸೂರ್ಯನಮಸ್ಕಾರವನ್ನು ಮಾಡಿ. ಕ್ಷಣಿಕದತ್ತ ನಿಮ್ಮ ಗಮನವಿರುವುದು.

ಕನ್ಯಾ: ನೀವು ನಿರಂತರ ಕಾರ್ಯವನ್ನು ಬದಲಿಸುತ್ತಿರುವುದು ನಿಮ್ಮ ಅಭ್ಯಾಸವಾಗಲಿದೆ. ದಾನವನ್ನು ಮಾಡಿ ಪುಣ್ಯವನ್ನು ಸಂಪಾದಿಸುವಿರಿ. ನಿಮ್ಮ ಮಕ್ಕಳ ಮನೋಭಾವವನ್ನು ಅರಿತುಕೊಂಡ ಇಷ್ಟವಾದುದನ್ನು ಮಾಡಿ. ವ್ಯಾಪಾರದಿಂದ ನಿಮ್ಮ ಆರ್ಥಿಕತೆಯು ಸಬಲವಾಗಬಹುದು. ಮಕ್ಕಳನ್ನು ಹಣಕಾಸಿನ ಕಾರಣದಿಂದ ಓದನ್ನು ನಿಲ್ಲಿಸಬೇಡಿ. ಕಛೇರಿಯಲ್ಲಿ ನಿಮಗೆ ಸ್ತ್ರೀಯಿಂದ ಸಹಾಯವಾದರೂ ಜನರು ಅದನ್ನು ಅಪಾರ್ಥಮಾಡಿಕೊಳ್ಳಬಹುದು. ಸಿಗಬೇಕಾದವರಿಗೆ ಕಾದು ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ನಾಗರ ಆರಾಧನೆಯನ್ನು ಮಾಡಿ. ಯಶಸ್ಸಿಗೆ ಇರುವ ಬಂಧನವು ಕಳಚಿಕೊಳ್ಳುವುದು.