Horoscope: ದಿನಭವಿಷ್ಯ; ಈ ರಾಶಿಯವರು ದಾಂಪತ್ಯದಲ್ಲಿ ಬರುವ ಕಲಹವನ್ನು ಸುಮ್ಮನಿದ್ದು ಶಾಂಯಗೊಳಿಸಿ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ; ಈ ರಾಶಿಯವರು ದಾಂಪತ್ಯದಲ್ಲಿ ಬರುವ ಕಲಹವನ್ನು ಸುಮ್ಮನಿದ್ದು ಶಾಂಯಗೊಳಿಸಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2023 | 12:45 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06-22ಕ್ಕೆ, ಸೂರ್ಯಾಸ್ತ ಸಂಜೆ 06 – 19ಕ್ಕೆ, ರಾಹು ಕಾಲ ಮಧ್ಯಾಹ್ನ 12:21 – 01:51ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:53 – 09:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:52 – 12:21ರ ವರೆಗೆ.

ಧನು ರಾಶಿ : ಚಂಚಲ ಮನಃಸ್ಥಿತಿಯು ನಿಮ್ಮ ಕಛೇರಿಯ ಕೆಲಸಗಳನ್ನು ಅಸ್ತವ್ಯಸ್ತ ಮಾಡಬಹುದು. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ವಿಳಂಬವಾಗಿ ನಡೆಯುವ ವಿವಾಹಕ್ಕೆ ಸಂತೋಷವಿರಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ದಾಂಪತ್ಯದಲ್ಲಿ ಬರುವ ಕಲಹವನ್ನು ಸುಮ್ಮನಿದ್ದು ಶಾಂಯಗೊಳಿಸಿ. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಸಾಧ್ಯವಾಗದು.‌ ಸಂಕೋಚದ ಸ್ವಭಾವದಿಂದ ನೀವು ಬಂದ ಅವಕಾಶವನ್ನು ಕೈ ಬಿಡುವಿರಿ. ಕೆಲವರು ನಿಮ್ಮ ಮಾತನ್ನು ವಿರೋಧಿಸುವರು. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು. ಇಂದು ಸಾಮಾಜಿಕ ಗೌರವವನ್ನು ಬಯಸುವಿರಿ. ಹಳೆಯ ಪ್ರೇಮವು ನಿಮ್ಮನ್ನು ಕಾಡಬಹುದು. ಚಾಲಕವೃತ್ತಿಯರಿಗೆ ಅಪಮಾನವಾಗಬಹುದು.

ಮಕರ ರಾಶಿ : ನಿಮ್ಮ ಕುಲ ಕಸುಬಿಗೆ ತೊಂದರೆ ಆದೀತು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.‌ ಕುಟುಂಬಕ್ಕೆ ನಿಮ್ಮಿಂದ ಶುಭ ವಾರ್ತೆಯು ಬರಬಹುದು. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟ ಹಣವು ಸಾಕಾಗದೇ ಸಾಲವನ್ನು ಮಾಡಬೇಕಾದೀತು.‌ ಇಂದು ನೀವು ಅಂದುಕೊಂಡಷ್ಟು ಕೆಲಸವು ಆಗುವತನಕ ಫಲವನ್ನು ಬಿಡುವುದಿಲ್ಲ.

ಕುಂಭ ರಾಶಿ : ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದು. ತಾಯಿಯ ಕಡೆಯಿಂದ ಧನದ ನಿರೀಕ್ಷೆಯಲ್ಲಿ ಇರುವಿರಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸಬೇಕಾದೀತು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ. ನೀವು ಕೊಟ್ಟ ಸಾಲವು ಪುನಃ ಬರಬಹುದು. ನಿಮ್ಮ ಕುಟುಂಬದ ವಿಚಾರವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ‌ ಮಾಡಲು ಸಂಗಾತಿಗೆ ಹೇಳುವಿರಿ. ಹನುಮಾನ್ ಚಾಲೀಸ್ ಪಠನವನ್ನು ಮಾಡಿ.

ಮೀನ ರಾಶಿ : ಇಂದು ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ‌ ಕಾಲವನ್ನು ಕಳೆಯುವಿರಿ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಇಂದು ನೀವು ಬಂಧುಗಳ ಬಳಿ ಸಾಲಕ್ಕೆ ಕೈ ಚಾಚುವು ಬೇಡ. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯನ್ನು ಪ್ರಶ್ನಿಸಬಹುದು. ಹಳೆಯ ಸಾಲವನ್ನು ಉಳಿಸಿಕೊಂಡೇ ಮತ್ತೊಂದು ಸಾಲವನ್ನು ಮಾಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆಗಿರುವುದು ನಿಮಗೆ ಧೈರ್ಯ ಬರಲಿದೆ. ಯಾವದೇ ಉದ್ವೇಗಕ್ಕೆ ಒಳಗಾಗದೇ ಸಮಾಧಾನದ ಮನಃಸ್ಥಿತಿಯಲ್ಲಿ ಇರಿ. ಆದಾಯವನ್ನು ಹೆಚ್ಚಿಸಿಕೊಳ್ಳುವ ತುಡಿತವು ಅಧಿಕವಾಗಬಹುದು.

-ಲೋಹಿತಶರ್ಮಾ – 8762924271 (what’s app only)

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ