Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ನಾಗ ದೇವರಿಗೆ ಗೋವಿನ ಶುದ್ಧ ಹಾಲಿನಿಂದ ಅಭಿಷೇಕ ಮಾಡಿ, ದೇಹಪೀಡೆಯು ಶಮನವಾಗುವುದು

| Updated By: Rakesh Nayak Manchi

Updated on: Aug 21, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ನಾಗ ದೇವರಿಗೆ ಗೋವಿನ ಶುದ್ಧ ಹಾಲಿನಿಂದ ಅಭಿಷೇಕ ಮಾಡಿ, ದೇಹಪೀಡೆಯು ಶಮನವಾಗುವುದು
ದಿನಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 21 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:43ರ ವರೆಗೆ.

ಧನು ರಾಶಿ: ವಿವಾಹಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕಗಳು ಬರಲಿದ್ದು ನಿಶ್ಚಯವಾದ ವಿವಾಹವು ಅನ್ಯಾನ್ಯ ಕಾರಣಗಳಿಂದ ಮುಂದೆ ಹೋಗುವುದು. ದೈವಜ್ಞರನ್ನು ಭೇಟಿಯಾಗಿ ಸಮಸ್ಯೆಗೆ ಇರುವ ಪರಿಹಾರವನ್ನು ಪಡೆದು, ಅದನ್ನು ಕುಲಪುರೋಹಿತರ ಸಮಕ್ಷಮದಲ್ಲಿ ಮಾಡಿಸಿ. ವಿದ್ಯೆಯ ಕಾರಣಕ್ಕೆ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಒತ್ತಡದ ಕಾರಣದಿಂದ ಶಿರೋವೇದನೆ ಕಾಣಿಸಿಕೊಳ್ಳುವುದು. ಇಂದು ನೀವು ಮಾಡಿದ ಕೆಲಸವು ನಿಷ್ಪ್ರಯೋಜಕ ಆಗಬಹುದು. ಇಂದಿನ ಬೇಸರವನ್ನು ಕಳೆಯಲು ಎಲ್ಲಿಗಾದರೂ ಹೊರಗೆ ಹೋಗಲಿದ್ದೀರಿ. ಅಶಕ್ತರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಕಲಾವಿದರಿಗೆ ಸೂಕ್ತ ಸ್ಥಾನಮಾನವು ಪ್ರಾಪ್ತವಾಗದೇ ಹೋಗುವುದು.

ಮಕರ ರಾಶಿ: ನಿಮ್ಮ ವಾಹನಕ್ಕಾಗಿ ಅಧಿಕ ಖರ್ಚನ್ನು ಮಾಡಬೇಕಾಗಿ ಬರಬಹುದು. ಆಲಸ್ಯದಿಂದ ಇರುವ ಕಾರಣ ಕಛೇರಿಯಲ್ಲಿ ಮೇಲಧಿಕಾರಿಯಿಂದ ನಿಮಗೆ ಸೂಚನೆ ಬರಬಹುದು. ಮಿತ್ರರ ನಡುವೆ ಬರುವ ಮನಸ್ತಾಪಗಳು ಅಯಾ ಸಂದರ್ಭಕ್ಕೆ ಮಾತ್ರ ಆಗಿರಲಿ. ನಿಮಗೆ ಬರುವ ಜವಾಬ್ದಾರಿಯನ್ನು ನೀವು ತಳ್ಳಿಹಾಕುವಿರಿ. ಪ್ರೇಮ ಪಾಶಕ್ಕೆ ಬೀಳುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಹೆಚ್ಚೆಯನ್ನು ಇಡಿ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ಸರಿ ಮಾಡಿಕೊಳ್ಳಿ. ಪ್ರೀತಿಯ ಮಾತುಗಳೇ ನಿಮ್ಮತ್ತ ಜನರನ್ನು ಆಕರ್ಷಿಸುವುದು ಮತ್ತು ವ್ಯಾಪಾರವು ಲಾಭದಾಯಕವಾಗುವುದು. ಮಹಾಗಣಪತಿ ಸ್ತೋತ್ರವು ನಿಮ್ಮ ಅಡೆತಡೆಗಳನ್ನು ನಿವಾರಿಸುವುದು.

ಕುಂಭ ರಾಶಿ: ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡುವಿರಿ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡುವ ತಾಳ್ಮೆ ಹಾಗೂ ಸಮಯ ಎರಡೂ ಇರಬಾರದು. ಬರಬೇಕಾದ ಹಣದಲ್ಲಿ ಸ್ವಲ್ಪ ಬಂದಿದ್ದು ನಿಮಗೆ ಸಂತೋಷವಾಗಲಿದೆ. ಇಂದು ನಿಮ್ಮ ಉತ್ಸಾಹವನ್ನು ಯಾರೂ ಕಡಿತಗೊಳಿಸಲು ಸಾಧ್ಯವಿಲ್ಲ. ಎಂತಹ ಕೆಲಸವೂ ಅನಾಯಾಸವಾಗಿ ಮುಗಿಯುವುದು. ಆದಾಯದ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಲಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಇಂದಿನ ನಿಮ್ಮ ಪ್ರಯಾಣವು ಬಹಳ ಗೊಂದಲ ಮಯವಾಗಿ ಇರುವರು. ಇನ್ನೊಬ್ಬರನ್ನು ಬೊಟ್ಟು ತೋರಿಸುವುದು ಕಡಿಮೆ ಮಾಡಿ.

ಮೀನ ರಾಶಿ: ಕುಟುಂಬದಲ್ಲಿ ಹಿರಿಯರಿಗೆ ಅನಾರೋಗ್ಯದಿಂದ ಆತಂಕದ ವಾತಾವರಣ ಇರಲಿದೆ. ಬಹಳ ದಿನಗಳಿಂದ ಮಾಡಬೇಕಿದ್ದ ಆಭರಣ ಖರೀದಿಯನ್ನು ಮುಂದೂಡಿ ಇಂದು ಖರೀದಿಸುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಿಸುವವರಾಗಿದ್ದರೆ ನಿಮಗೆ ಅನೇಕ ವಸ್ತುಗಳು ಲಾಭವಾಗಿ ಬರಲಿವೆ. ಬೆನ್ನು ನೋವು ಅಧಿಕವಾಗುವುದು. ವೃತ್ತಿಯನ್ನೇ ನಂಬಿ ಜೀವನವನ್ನು ನಡೆಸುವವರಿಗೆ ಹಠಾತ್ ಆಗಿ ಕೆಲಸದಿಂದ ಕೈ ಬಿಡುವುದು ಕಷ್ಟವಾದೀತು. ನಿಮ್ಮ ತಂತ್ರಗಳು ವ್ಯಾಪಾರದಲ್ಲಿ ಲಾಭವನ್ನು ತಂದೀತು. ಸಮಯಕ್ಕೆ ಉಚಿತವಾದ ಮಾತನ್ನು ಆಡಿ. ನಾಗ ದೇವರಿಗೆ ಶುದ್ಧ ಗೋವಿನ ಕ್ಷೀರದಿಂದ ಅಭಿಷೇಕ ಮಾಡಿ. ನಿಮ್ಮ ದೇಹಪೀಡೆಯು ಶಮನವಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ