Horoscope: ದಿನಭವಿಷ್ಯ, ಕೋಪವನ್ನು ನಿಯಂತ್ರಣಕ್ಕೆ ತಂದುಕೊಂಡಷ್ಟು ಈ ರಾಶಿಯವರ ಕಾರ್ಯವು ಯಶಸ್ಸು ಪಡೆಯುವುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಕೋಪವನ್ನು ನಿಯಂತ್ರಣಕ್ಕೆ ತಂದುಕೊಂಡಷ್ಟು ಈ ರಾಶಿಯವರ ಕಾರ್ಯವು ಯಶಸ್ಸು ಪಡೆಯುವುದು
ಇಂದಿನ ರಾಶಿಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Aug 21, 2023 | 12:30 AM

ಇಂದಿನ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:43ರ ವರೆಗೆ.

ಸಿಂಹ ರಾಶಿ: ಗೆಳೆಯರು ಮಾಡಿದ ತಮಾಷೆಯು ನಿಮಗೆ ಕಂಟಕವಾಗಬಹುದು. ನಿಮ್ಮ ಇಂದಿನ ಕೆಲಸವು ಆದರೂ ಅದಕ್ಕೆ ಹೆಚ್ಚು ಶ್ರಮ, ಸಮಯ ಎರಡನ್ನೂ ಕೊಡಬೇಕಾದೀತು. ನೀವಿಂದು ಕುಳಿತಲ್ಲಿ ಕುಳಿತುಕೊಳ್ಳದೇ ನೀರಿನಿಂದ ಹೊರಬಂದ ಮೀನಿನಂತೆ ಒದ್ದಾಡುವಿರಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಗಳೂ ಇರಲಿ. ಯಾರನ್ನಾದರೂ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೋಪವನ್ನು ನಿಯಂತ್ರಣಕ್ಕೆ ತಂದುಕೊಂಡಷ್ಟು ನಿಮ್ಮ ಕಾರ್ಯವು ಯಶಸ್ಸು ಪಡೆಯುವುದು.ಇಂದಿನ ಕೆಲವು ಸಂದಿಗ್ಧವಾದ ಪರಿಸ್ಥಿತಿಯನ್ನು ನೀವು ಸರಳವಾಗಿ ನಿಭಾಯಿಸಲು ಕಲಿಯುವ ಅವಶ್ಯಕತೆ ಇದೆ.‌ ನಿಮ್ಮ ಸೌಂದರ್ಯಕ್ಕೆ ಯಾರಾದರೂ ಮನಸೋಲಬಹುದು.

ಕನ್ಯಾ ರಾಶಿ: ನಿಮಗೆ ಗೊತ್ತೇ ಇರದ ಕೆಲಸದಿಂದ ನಿಮಗೆ ಅಪವಾದವು ಕೇಳಿಬರುವುದು. ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲೂ ಆಗದು. ಬೇರೆ ಬೇರೆ ಆಲೋಚನೆಯು ನಿಮ್ಮ ಕೆಲಸದ ವೇಗವನ್ನು ನಿಯಂತ್ರಿಸುವುದು. ಪ್ರೇಮವು ನಿಮಗೆ ವಿಘ್ನದಂತೆ ತೋರಬಹುದು. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡುವರು. ಮಕ್ಕಳ ವಿಚಾರಕ್ಕೆ ಅಪಮಾನವನ್ನು ಎದುರಿಸಬೇಕಾಗಬಹುದು. ಎಲ್ಲ ಕಡೆಗಳಿಂದಲೂ ನಿಮ್ಮ ಅಸಮಾಧಾನವಾಗುತ್ತಿದ್ದು ಯಾರ ಬಳಿಯೂ ಹೇಳಿಕೊಳ್ಳಲಾಗದ ಸ್ಥಿತಿಯೂ ಇರಲಿದೆ. ಅನಾರೋಗ್ಯದ ಕಾರಣ ಹಣವೂ ನಿಮ್ಮ ಕೈಯಲ್ಲಿ ಇರದು. ಯಾರನ್ನಾದರೂ ಕೇಳೋಣ ಎಂದರೆ ನಿಮ್ಮ‌ ಮಾತಿನ ಮೇಲೆ ಯಾರಿಗೂ ವಿಶ್ವಾಸವೇ ಬಾರದು. ಭವಿಷ್ಯದ ಸುಂದರ ದಿನಗಳೊಂದೇ ನಿಮಗೆ ಸದ್ಯದ ಭರವಸೆ ಆಗಿದೆ‌.

ತುಲಾ ರಾಶಿ: ಇಂದು ನೀವು ಬಂಧುಗಳಿಗೆ ಸಹಕಾರ ಮಾಡುವಿರಿದಾರೂ ಪ್ರತಿಫಲದ ಅಪೇಕ್ಷೆಯು ಇರಲಿದೆ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರು ಇದ್ದರೆ ಅವರಿಂದ ದೂರವಿರಿ. ಬೇರೆಯವರಿಗೆ ತೊಂದರೆಯನ್ನು ನೀಡಿ ಕೆಲಸವನ್ನು ಸಾಧಿಸುವುದು ನಿಮಗೆ ಇಷ್ಟವಾಗದು. ಕಾನೂನಿಗೆ ಸಂಬಂಧಿಸಿದ್ದನ್ನು ಏಕಾಂಗಿಯಾಗಿ ನಿಭಾಯಿಸಿ ಜಯಿಸುವಿರಿ. ನೀವು ಕೊಟ್ಟ ಹಣವನ್ನು ಹಿಂದಿರುಗಿ ಪಡೆಯಲು ಕಷ್ಟವಾದೀತು. ವಿನಾಕಾರಣ ಮನಸ್ಸು ಬೆಳಗಿನಿಂದಲೇ ಮಂಕಾಗಿ ಇರುವುದು. ಬಂಧುಗಳ ಕಷ್ಟವನ್ನು ಹಂಚಿಕೊಳ್ಳುವಿರು. ಸರ್ಪರಾಜನಾದ ಆದಿಶೇಷನನ್ನು ಪೂಜಿಸಿ. ದೇಹಕ್ಕೆ ಸಂಬಂಧಿಸಿದ ರೋಗವು ಮಾಯವಾಗುವುದು.

ವೃಶ್ಚಿಕ ರಾಶಿ: ಆಸ್ತಿಯ ಖರೀದಿಯ ವಿಚಾರದಲ್ಲಿ ನಿಮಗೆ ಸರಿಯಾ ನಿರ್ಧಾರವನ್ನು ತೆಗೆದುಕೊಳ್ಳಲಾಗದೇ ಒದ್ದಾಡುವಿರಿ. ಇನ್ನೊಬ್ಬರ ಆದಾಯದ ಮೇಲೆ ಕಣ್ಣು ಹಾಕುವುದು ಸರಿಯಲ್ಲ. ನಿಮ್ಮ ಬಲವಾದ ಇಚ್ಛಾಶಕ್ತಿಯು ನಿಮಗೆ ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿಯಾಗುವುದು. ನಿಮ್ಮ ಯೋಗ್ಯವಾದ ಯೋಜನೆ ಇದ್ದರೂ ಅದನ್ನು ಸಂದರ್ಭಕ್ಕೆ ಸರಿಯಾಗಿ ಹೇಳುವುದು ಉತ್ತಮ. ಯಾರದೋ ಬಳಿ ಹೇಳಿ ಅದರ ಯಶಸ್ಸನ್ನು ಮತ್ಯಾರೋ ಪಡೆಯುವಂತೆ ಆಗುವುದು. ನಿಮ್ಮ ಬಗ್ಗೆ ಇದ್ದ ಪೂರ್ವಾಗ್ರಹದ ಭಾವನೆಗಳು ನಿಮ್ಮ‌ಇಂದಿನ ವರರ್ತನೆಯಿಂದ ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ಮೌನವಹಿಸುವಿರಿ. ನಿಮ್ಮ ವಿರುದ್ಧ ಏನಾದರೂ ನಡೆದರೆ ಕುಗ್ಗುವ ಅವಶ್ಯಕತೆ ಇಲ್ಲ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ