Horoscope: ನೀವಾಡಿದ ಸುಳ್ಳು ನಿಮ್ಮವರ ಮನಸ್ಸಿಗೆ ನಾಟುವುದು, ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗುವುದು

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ನೀವಾಡಿದ ಸುಳ್ಳು ನಿಮ್ಮವರ ಮನಸ್ಸಿಗೆ ನಾಟುವುದು, ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗುವುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 21, 2023 | 12:15 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 21 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಾಗಪಂಚಮಿಗೆ ಎಲ್ಲರಿಗೂ ಶುಭಾಶಯಗಳು. ಅನಂತಂ ವಾಸಕೀ ಶೇಷಂ ಪದ್ಮನಾಭಂ ಚ ಕಂಬಲಮ್ | ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಲಿನಂ ತಥಾ ||

ಎಂದು ಪಠಿಸಿ ನವ ನಾಗರ ಸ್ಮರಣೆಯನ್ನು ಮಾಡಿ ನಾಗದೋಷದಿಂದ ಉಂಟಾದ ದೇಹಪೀಡೆ, ಸಂತಾನಕ್ಕೆ ಪ್ರತಿಬಂಧಕವಾದ ದೋಷ ಹಾಗೂ ಕಾರ್ಯಗಳಲ್ಲಿ ಉಂಟಾಗುವ ವಿಘ್ನಗಳನ್ನೆಲ್ಲ ಪರಿಹರಿಸುವಂತೆ ಬೇಡಿಕೊಳ್ಳಿ. ನಾನಾ ವಿಧವಾದ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಪ್ರಸಾದವನ್ನು ಸ್ವೀಕರಿಸಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:02 ರಿಂದ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 14:09 ರಿಂದ 15:43ರ ವರೆಗೆ.

ಮೇಷ ರಾಶಿ : ನಿಮಗೆ ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳಬೇಕು ಎಂದು ಅನ್ನಿಸುವುದು. ಸಹೋದ್ಯೋಗಿಗಳ ಸಹಕಾರದಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ನಿಮಗೆ ಅಚ್ಚರಿಯನ್ನು ಉಂಟುಮಾಡಬಹುದು. ಕೆಲವರ ವ್ಯಕ್ತಿತ್ವವು ನೀವು ಅನುಸರಿಸುವಿರಿ. ಅಪರಿಚಿತರು ಇರುವ ಕಡೆ ನೀವು‌ ಮೌನಕ್ಕೆ ಶರಣಾಗುವಿರಿ. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ಭಾವನೆಗಳನ್ನು ಲೆಕ್ಕಿಸದೇ ಕೆಲಸದಲ್ಲಿ ಮಗ್ನರಾಗುವಿರಿ. ಆಹಾರದಿಂದ ನಿಮಗೆ ತೊಂದರೆ ಆಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ನಾಗದೇವರ ಆರಾಧನೆಯನ್ನು ಮಾಡಿ.

ವೃಷಭ ರಾಶಿ : ನೀವಾಡಿದ ಸುಳ್ಳು ನಿಮ್ಮವರ ಮನಸ್ಸಿಗೆ ನಾಟುವುದು. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗುವುದು. ಎಲ್ಲ ವಿಚಾರದಲ್ಲಿಯೂ ಗೊಂದಲವನ್ನು ಮಾಡಿಕೊಳ್ಳುವಿರಿ. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಮನಸ್ಸು ಬಹಳ ದುರ್ಬಲವಾಗಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೋಗದೇ ಕಾರ್ಯದಲ್ಲಿಯೇ ಹೆಚ್ಚು ತೊಡಗಿಕೊಳ್ಳುವರು. ಯೋಗ್ಯತೆ ಇದ್ದರೂ ಯೋಗದ ಅಭಾವದಿಂದ ಎತ್ತರಕ್ಕೆ ಏರಲು ಸಮಯವನ್ನು ತೆಗೆದುಕೊಳ್ಳಬೇಕಾಗಬಹುದು. ಪ್ರಯಾಣದಿಂದ ಆಯಾಸವಾಗಲಿದೆ. ವಿಶ್ರಾಂತಿಯ ಅವಶ್ಯಕತೆ ಇರಲಿದೆ. ಯಾವ ಸಂದರ್ಭದಲ್ಲೂ ನೀವು ಸಹಾಯಕ್ಕೆ ಸಿಗುವಿರಿ.

ಮಿಥುನ ರಾಶಿ : ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗುವುದು. ಕಾರ್ಯದ‌ ಕಡೆ ಹೆಚ್ಚು ಗಮನವಿರಲಿ. ಯಾರಿಗೂ ಸಾಲವಾಗಿ ಹಣವನ್ನು ಕೊಡುವುದು ಬೇಡ. ಪುನಃ ಬರುತ್ತದೆ ಎಂಬ ನಿರೀಕ್ಷೆಯೂ ಬೇಡ. ಒತ್ತಡವು ಆಧಿಕವಾದರೆ ಎಲ್ಲಿಗಾದರೂ ಹೋಗಿ ಬನ್ನಿ. ರಾಜಕೀಯವಾಗಿ ನೀವು ಹೊಸ‌ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಿರಿ. ಸ್ನೇಹಿತರ ಜೊತೆಗಿನ ಓಡಾಟದಿಂದ‌ ನಿಮ್ಮವರಿಗೆ ಅನುಮಾನವು ಬರಬಹುದು. ನೀವಾಡುವ ಮಾತು ಜವಾಬ್ದಾರಿಯುತ ಸ್ಥಾನದಿಂದ ಬರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕುಟುಂಬದ ವಿಚಾರವನ್ನು ನೀವೇ ಎತ್ತಿಕೊಂಡು ಕಲಹವನ್ನು ಸೃಷ್ಟಿಸಿ ಆಮೇಲೆ ಜಾರಿಕೊಳ್ಳುವಿರಿ. ಸಾಮಾನ್ಯರ ನಡುವೆ ಸಮಾನ್ಯರಂತೆ ವರ್ತಿಸಿ.

ಕರ್ಕ ರಾಶಿ : ಅಧಿಕಾರ ಪ್ರಾಪ್ತಿಯ ಬೆನ್ನಲ್ಲೇ ಶತ್ರುಗಳನ್ನೂ ಕಟ್ಟಿಕೊಳ್ಳುವಿರಿ. ಹಿತಶತ್ರುಗಳಿಂದ ಎಚ್ಚರವಾಗಿರುವುದು ಅವಶ್ಯಕ. ಚಂಚಲ‌ವಾದ ಮನಸ್ಸು ನಿಮ್ಮ ಸಂಗತಿಯನ್ನು ಮರೆಮಾಚಿಸಬಹುದು. ನಿಮ್ಮ ಆದಾಯದ ಮೂಲವನ್ನು ಯಾರಾದರೂ ಕುತೂಹಲದಿಂದ ಕೇಳಿಯಾರು. ನಿಮ್ಮ ಮನಸ್ಸು ನಕಾರತ್ಮಕ ಚಿಂತನೆಯಲ್ಲಿಯೇ ಹೆಚ್ಚು ಇರಲಿದೆ. ಹಳೆಯ ಗೆಳತಿಯು ನಿಮ್ಮನ್ನು ಪುನಃ ಇಷ್ಟಪಡುವರು. ಯಾರದರೂ ನಿಮ್ಮ ಪರಿಚಿತರನ್ನುವಂತೆ ನಟಿಸಬಹುದು. ಎಷ್ಟೇ ತಾಳ್ಮೆಯಿಂದ ವರ್ತಿಸಿದರೂ ನಿಮಗೆ ಸಿಗಬೇಕಾದ ಫಲವು ಸಿಗದು. ದಾಂಪತ್ಯಜೀವನವು ಅಲ್ಪ ಸರಸ ಸ್ವಲ್ಪ ವಿರಸದಿಂದಲೂ ಇರುವುದು.

ಲೋಹಿತಶರ್ಮಾ – 8762924271 (what’s app only)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ