Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?

ವೃಷಭ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರಾಗಿದ್ದಾರೆ.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?
ವೃಷಭ ರಾಶಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Aug 21, 2023 | 6:02 AM

ಚಂದ್ರನು ವೃಷಭ ರಾಶಿಯಲ್ಲಿ (Taurus) ಇದ್ದಾಗ ಜನಿಸಿದವರದು ವೃಷಭ ರಾಶಿ ಆಗುವುದು. ಈ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ವಿಲಾಸೀ ಅಥವಾ ಐಷಾರಾಮೀ ಜೀವನವನ್ನು ಹೆಚ್ಚು ಇಷ್ಟಪಡುವಿರಿ. ಅಗಲವಾದ ಮುಖ ಹಾಗೂ ತೊಡೆಯನ್ನು ಉಳ್ಳವರಾಗಿರುವಿರಿ. ನಿಮ್ಮ ಎಡ ಮತ್ತು ಬಲ ಭಾಗಗಳಲ್ಲಿ ಮಚ್ಚೆಯು ಇರುವುದು.

ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರು. ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುವರು ಮತ್ರು ನಾಯಕನ ಗುಣವುಳ್ಳವರು ಆಗುವರು. ವಿಶಾಲವಾದ ವಕ್ಷಸ್ಥಳವು ಇರುವುದು. ಇವರಿಗೆ ಕನ್ಯಾ ಸಂತಾನವು ಅಧಿಕವಾಗಿ ಇರುವುದು. ಕಫ ಪ್ರಕೃತಿಯವರು ನೀವಾಗಿರುವಿರಿ.

ಇದನ್ನೂ ಓದಿ: Nag Panchami 2023: ನಾಗರ ಪಂಚಮಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವವು? ಇಲ್ಲಿದೆ ನೋಡಿ

ನೀವು ಸಂಬಂಧಗಳಿಂದ, ಸಂಪತ್ತಿನಿಂದ ಹಾಗೂ ಮಕ್ಕಳಿಂದಲೂ ದೂರವಿರಬೇಕಾದ ಸ್ಥಿತಿಯು ಬರುವುದು. ಇವರು ಅದೃಷ್ಟವಂತರು ಹಾಗೂ ಸೌಭಾಗ್ಯವುಳ್ಳವರಾಗಿರುವಿರಿ. ನಿಮ್ಮಲ್ಲಿ ಎಲ್ಲವನ್ನೂ ಸ್ವೀಕರಿಸುವ ಕ್ಷಮಾಗುಣವಿದೆ.

ವೃಷಭ ರಾಶಿಯವರಿಗೆ ಹಸಿವು ಹೆಚ್ಚಿರುವುದು. ಸ್ತ್ರೀಯಾದರೆ ಪುರುಷರಿಗೆ, ಪುರುಷನಾದರೆ ಸ್ತ್ರೀಯರಿಗೆ ಹೆಚ್ಚು ಪ್ರಿಯನಾಗುವನು. ನಿಮ್ಮ ಮಿತ್ರರು ಎಲ್ಲ ಸಂದರ್ಭದಲ್ಲಿಯೂ ನಿಮ್ಮನ್ನು ಬಿಟ್ಟು ಹೋಗಲಾರರು. ಅಂತಹ ಮಿತ್ರರನ್ನು ಸಂಪಾದಿಸಿಕೊಳ್ಳುವಿರಿ. ಜೀವನದ ಮಧ್ಯ ಹಾಗೂ ಅಂತ್ಯಭಾಗದಲ್ಲಿ ನೀವು ಹೆಚ್ಚು ಸಂತೋಷವಾಗಿ ಇರುವಿರಿ.

ತೆಳ್ಳಗಿನ ವೃತ್ತಾಕರದ ಶರೀರವುಳ್ಳವರು, ಇವರ ಮಾತು ಮೃದುವಾಗಿ ಇರುವುದು, ಆಕರ್ಷಕ ಕಣ್ಣುಗಳು ಇವರದಾಗಿರಲಿದೆ. ಚಂದ್ರನು ವೃಷಭ ರಾಶಿಯ ಅಧಿಪತಿಯೇ ಆದ ಕಾರಣ ಚಂದ್ರನಿಂದ ಆಗಬಹುದಾದ ಲಕ್ಷಣಗಳನ್ನು ಹೇಳಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ