Horoscope Today: ರಾಶಿಭವಿಷ್ಯ, ಈ ರಾಶಿಯವರು ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ
ಧನುಸ್ಸು, ಮಕರ, ಕುಂಭ, ಮೀನಾ ರಾಶಿಯವರ ಜುಲೈ 25 ರ ಮಂಗಳವಾರದ ದಿನ ಭವಿಷ್ಯದ ಮಾಹಿತಿ ಇಲ್ಲಿದೆ. ಧನು ರಾಶಿಯವರು ಯಾರ ಮೇಲೂ ದೋಷಾರೋಪವನ್ನು ಮಾಡುವುದು ಒಳ್ಳೆಯದಲ್ಲ. ಅಲ್ಲದೆ, ನಿಮ್ಮ ಗೆಳೆತನವು ಸಂಗಾತಿಗೆ ಅಸೂಯೆಯನ್ನು ಉಂಟುಮಾಡಬಹುದು.

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ.
ಧನು: ನೀವು ಇಂದು ಅಸರಂಭಿಸಿದ ಕಾರ್ಯವನ್ನು ಪೂರ್ಣ ಆಗುವವರೆಗೂ ಬಿಡುವವರಲ್ಲ. ಸಂಗಾತಿಯ ಜೊತೆ ಸಮಯ ಕಳೆಯುವ ಮನಸ್ಸಾಗುವುದು. ವಿದೇಶದ ಸ್ನೇಹಿತನ ಪರಿಚಯವಾಗುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಹೇಳಿ ಪಡೆದುಕೊಳ್ಳುವಿರಿ. ಯಾರ ಮೇಲೂ ದೋಷಾರೋಪವನ್ನು ಮಾಡುವುದು ಒಳ್ಳೆಯದಲ್ಲ. ನೀವು ಇಂದು ಕೆಲವರಿಗೆ ಅಪ್ರಾಮಾಣಿಕರಂತೆ ತೋರಬಹುದು. ನಿಮ್ಮ ಗೆಳೆತನವು ಸಂಗಾತಿಗೆ ಅಸೂಯೆಯನ್ನು ಉಂಟುಮಾಡಬಹುದು. ಉಸಿರಾಟದ ತೊಂದರೆ ಬರುವ ಸಾಧ್ಯ ಇದೆ. ಪ್ರಾಣಾಯಾಮವನ್ನು ಅಭ್ಯಾಸ ಮಾಡಿ.
ಮಕರ: ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವು ಕಡಿಮೆ ಸಿಗಲಿದೆ. ಯಾರದೋ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿರಿ. ಆರ್ಥಿಕ ನಷ್ಟದ ಹಾಗೂ ಸಮಯದ ನಷ್ಟವಾಗಿ ಬೇಸರಿಸುವಿರಿ. ಆಪ್ತರು ನೀಡುವ ಹಣಕ್ಕಾಗಿ ನೀವು ಇಂದು ಕಾಯುವಿರಿ. ವಾಹನದ ನಷ್ಟವು ನಿಮಗೆ ನಿಮಗೆ ಹೊರೆಯಾದೀತು. ಇನ್ನೊಬ್ಬರ ವಸ್ತುವನ್ನು ಮರಳಿಕೊಡಲು ನೀವು ಮರೆತಿದ್ದು ಇಂದು ಹಿಂದಿರುಗಿಸುವಿರಿ. ಸಮಾಜಿಕ ಗೌರವವನ್ನು ನೀವಿಂದು ಒಡೆಯುವಿರಿ. ಉತ್ತಮ ಆಹಾರವನ್ನು ಸೇವಿಸುವಿರಿ. ವಾಹನ ಸಂಚಾರವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.
ಕುಂಭ: ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಸ್ತ್ರೀಯರಿಂದ ಸಹಾಯವು ನಿಮಗೆ ಸಿಗಲಿದೆ. ಒತ್ತಡದ ನಿವಾರಣೆ ಸುತ್ತಾಡಿ ಬರುವ ಮನಸ್ಸಾದೀತು. ನಿಮ್ಮನಷ್ಟದ ಉದ್ಯೋಗಕ್ಕೆ ಆಪ್ತರ ಸಲಹೆಯು ಉಪಯೋಗಕ್ಕೆ ಬರಬಹುದು. ತಂದೆ ಹಾಗೂ ಮಕ್ಕಳ ಮಧ್ಯ ಕೆಲವು ವಿಚಾರಗಳಿವೆ ಭಿನ್ನಾಭಿಪ್ರಾಯಗಳು ಬರಬಹುದು. ಉನ್ನತಮಟ್ಟದ ಅಧಿಕಾರಿಗಳ ಸಹಾಯವನ್ನು ನೀವು ಬಯಸುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹೊಸಬರ ಗೆಳೆತನವಾಗಲಿದೆ. ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಲು ನೀವು ವ್ಯಾಯಾಮವನ್ನು ಮಾಡುವಿರಿ.
ಮೀನ: ಇಂದು ನಿಮ್ಮ ಅನೇಕ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ರಕ್ಷಣಾವ್ಯವಸ್ಥೆಯಲ್ಲಿ ಇರುವವರಿಗೆ ಸ್ಥಾನ ಬದಲಾವಣೆ ಆಗವಹುದು. ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವು ಓದಿಗೆ ಪೂರಕವಾಗಿ ಇರದು. ಬೇರೆ ಕಡೆಗೆ ಇರಲು ಬಯಸುವಿರಿ. ಆರ್ಥಿಕತೆಯ ಹಿನ್ನಡೆಯಿಂದಾಗಿ ಕಾರ್ಯಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯವನ್ನು ಬಯಸುವಿರಿ. ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳಗಳ್ಳಿ. ಪ್ರಯಾಣ ಮಾಡುವ ಸ್ಥಿತಿಯು ಬರಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




