Horoscope: ದಿನಭವಿಷ್ಯ; ಇಂದಿನ ಈ ರಾಶಿಯವರ ವ್ಯವಹಾರವು ಎಂದಿಗಿಂತ ಹೆಚ್ಚು ಚೆನ್ನಾಗಿ ಆಗಲಿದೆ

| Updated By: Rakesh Nayak Manchi

Updated on: Sep 30, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ; ಇಂದಿನ ಈ ರಾಶಿಯವರ ವ್ಯವಹಾರವು ಎಂದಿಗಿಂತ ಹೆಚ್ಚು ಚೆನ್ನಾಗಿ ಆಗಲಿದೆ
ಇಂದಿನ ರಾಶಿಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 30 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೇವತೀ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 22ಕ್ಕೆ, ರಾಹು ಕಾಲ ಬೆಳಗ್ಗೆ 09:23 – 10:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 – 03:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:23 – 07:53ರ ವರೆಗೆ.

ಧನು ರಾಶಿ: ಆರ್ಥಿಕತೆಯು ನಿಮ್ಮ ಕೈ ಮೀರಬಹುದು. ಸ್ವಂತಿಕೆಯನ್ನು ಕಾರ್ಯದಲ್ಲಿ ಬಳಸಿಕೊಳ್ಳಿ. ನಿಮ್ಮ ನಿಧಾನಗತಿಯನ್ನು ಬದಲಿಸಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗಬಹುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮೊದಲು ಆರ್ಥಿಕ ಲಾಭವನ್ನು ನಿರೀಕ್ಷಿಸದೇ ಕಾರ್ಯವನ್ನು ಆರಂಭಿಸಿ. ಆದುದರ ಬಗ್ಗೆ ಆಲೋಚಿಸಿ ಪ್ರಯೋಜನವಿಲ್ಲ. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು. ನಿಮ್ಮ‌ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವರು. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡಾಡುವುದು. ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗದು. ಗೊಂದಲು ಹೆಚ್ಚಿರುವುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ಸಮಾರಂಭದಲ್ಲಿ ಆಪ್ತರ ಭೇಟಿಯಾಗಲಿದೆ. ಹಳೆಯ ಗೆಳತಿಯು ನಿಮ್ಮನ್ನು ಮಾತನಾಡಿಸಲು ಬರಬಹುದು. ನಿಮ್ಮ ಇನ್ನೊಬ್ಬರ ವೈಯಕ್ತಿಕ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲ ಇರುವುದು.

ಮಕರ ರಾಶಿ: ಭೂಮಿಯ ವಿಚಾರವು ಇತ್ಯರ್ಥವಾಗಿ ಮನಸ್ಸಿಗೆ ಸಮಾಧಾನ ಇರುವುದು. ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ಖಾಸಗಿ ಸಂಸ್ಥೆಯು ನಿಮ್ಮ ಕಾರ್ಯಕ್ಕೆ ಉನ್ನತ ಸ್ಥಾನವನ್ನು ಕೊಡುವುದು. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಚೆನ್ನಾಗಿ ಇರದು. ಸಣ್ಣ ವಿಚಾರಗಳಿಂದ ಸಂಗಾತಿಯ ನಡುವೆ ವೈಮನಸ್ಯ ಉಂಟಾಗುವುದು. ವಿಶೇಷ ಕೆಲಸಕ್ಕೆ ಹೊರಡುವ ಮೊದಲು ಕುಲದೇವರ ಸ್ಮರಣೆಯನ್ನು ಮಾಡಿ. ನಿಮ್ಮ ನೇರ ನುಡಿಯು ಎದುರಿನವನನ್ನು ಘಾಸಿ ಮಾಡಬಹುದು.

ಕುಂಭ ರಾಶಿ: ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ಘಟನೆಯಿಂದ ನಿಮಗೆ ಬಹಳ ಬೇಸರ ತರಿಸಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ಇಂದಿನ ನಿಮ್ಮ ವ್ಯವಹಾರವು ಎಂದಿಗಿಂತ ಹೆಚ್ಚು ಚೆನ್ನಾಗಿ ಆಗಲಿದೆ. ಹೂಡಕೆಯ ಹಣದಲ್ಲಿ ತೊಡಕಾಗಬಹುದು. ಸರ್ಕಾರದಿಂದ ಬರುವ ಹಣವು ಬಾರದೇ ಇರುವುದು. ನಿಮ್ಮ ಇಂದಿನ ಕಾರ್ಯವು ಪೂರ್ವಯೋಜನೆಯಂತೆ ನಡೆಯದು. ಅಪರೂಪದ ಬಂಧುಗಳು ಸಿಗುವರು.

ಮೀನ ರಾಶಿ: ಲಾಭವಾಗುತ್ತದೆ ಎಂದು ಏನಾದರೂ ಮಾಡುವುದು ಸರಿಯಾಗದು. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ದೇಹಾಯಾಸದಿಂದ ಕಷ್ಟವಾಗಲಿದೆ. ಇಂದು ನೀವು ಕುಲದೇವತಾರಾಧನೆಯಲ್ಲಿ ಮಗ್ನರಾಗುವಿರಿ. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ. ಉದ್ಯಮದಲ್ಲಿ ಆದಾಯವನ್ನು ಹೆಚ್ಚಿಸಲು ನೌಕರರ ಜೊತೆ ಮಾತನಾಡುವಿರಿ. ಮನೆಯ ಕಾರ್ಯವನ್ನು ಸರಿದೂಗಿಸುವು ನಿಮಗೆ ಕಷ್ಟ ಎನಿಸಬಹುದು. ಕಟ್ಟಡವನ್ನು ನಿರ್ಮಾಣದವರಿಗೆ ದೊಡ್ಡ ಯೋಜನೆ ಸಿಗಲಿದೆ. ನಿಮಗೆ ಬರುವ ಹಣದ ವಿಚಾರದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ