AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ಈ ರಾಶಿಯವರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ಈ ರಾಶಿಯವರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ
ರಾಶಿಭವಿಷ್ಯImage Credit source: iStock Photo
TV9 Web
| Edited By: |

Updated on: Sep 30, 2023 | 12:15 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 30 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೇವತೀ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 22ಕ್ಕೆ, ರಾಹು ಕಾಲ ಬೆಳಗ್ಗೆ 09:23 – 10:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 – 03:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:23 – 07:53ರ ವರೆಗೆ.

ಮೇಷ ರಾಶಿ: ಕೆಲಸದಲ್ಲಿ ಗೊಂದಲವು ಉಂಟಾಗಬಹುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಕುಟುಂಬದ ಸದಸ್ಯರ ಪ್ರೀತಿಯು ಸಿಕ್ಕಿ ಹರ್ಷಿಸುವಿರಿ. ಆಕಸ್ಮಿಕ ವಾರ್ತೆಯಿಂದ ಉದ್ವೇಗಕ್ಕೆ ಒಳಗಾಗುವಿರಿ. ಇಂದಿನ ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತೂ ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ. ಕಾಲು ನೋವಿನಿಂದ ಓಡಾಡುವುದು ಕಷ್ಟವಾದೀತು. ನಿಮ್ಮ ವರ್ತಮಾನದ ಸನ್ನಿವೇಶವನ್ನು ನೀವು ಆಪ್ತರಿಗೆ ತಿಳಿಸುವಿರಿ.

ವೃಷಭ ರಾಶಿ: ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ‌ ಮನಸ್ಸನ್ನು ಚುಚ್ಚುವುದು. ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಕೆಲವು ದುರಭ್ಯಾಸವನ್ನು ಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂದಿದ್ದರೂ ಆಗದು. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ತಾಯಿಯು ನಿಮಗೆ ಹಿತವಚನವನ್ನು ಹೇಳುವರು. ಯಾವುದನ್ನೂ ತಿಳಿವಳಿಕೆ ಇಲ್ಲದೇ ಮುಂದುವರಿಯುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿ ಕಾಣಿಸುವುದು.

ಮಿಥುನ ರಾಶಿ: ಇಂದು ಅಧಿಕ ಸುತ್ತಾಟವು ಇರುವುದು. ಸಗಟು ವ್ಯವಹಾರವು ನಿಂದು ಕಷ್ಟವಾಗಬಹುದು. ಸಕಾಲಕ್ಕೆ ಭೋಜನವು ನಿಮಗೆ ಮಾಡಲು ಸಾಧ್ಯವಾಗದೇ ಇದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ಸುಲಭದ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋಧಕರಿಗೆ ಒಳ್ಳೆಯದೆಂದು ಅವಕಾಶವು ಸಿಗುವುದು. ಆರೋಗ್ಯದ ವ್ಯತ್ಯಯಸಲ್ಲಿಯೂ ನೀವು ಉತ್ಸಾಹದಿಂದ ಮಾಡುವ ಕೆಲಸಕ್ಕೆ ಪ್ರಶಂಸೆ ಮಾಡುವರು. ಸಾಮಾಜಿಕ ಕೆಲಸಗಳು ನಿಮಗೆ ದಿನದ ಕೆಲಸದಂತೆ ಅಭ್ಯಾಸವಾಗುವುದು.‌ ಬಂಧುಗಳ ಆಗಮನವು ಖುಷಿಕೊಡುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂರ್ಯನ ಆರಾಧನೆಯನ್ನು ಮಾಡಿ.

ಕಟಕ ರಾಶಿ: ಯಾವುದನ್ನೂ ಒಪ್ಪಿಕೊಳ್ಳುವ ಮೊದಲು ನಿಮಗೆ ನಾಲ್ಕು ಬಾರಿ ಯೋಚಿಸಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಇಂದಿನ ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ಹಣವನ್ನು ಸರಿಯಾದ ಕಡೆಗೆ ಹೂಡಲು ಮಾರ್ಗದರ್ಶನವನ್ನು ಪಡೆಯಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ನಿಮ್ಮ‌ ಅಭಿಪ್ರಾಯವೂ ಮುಖ್ಯವಾಗಬಹುದು. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ನಿಮ್ಮ ವಸ್ತುಗಳ ಉಪಯೋಗವನ್ನು ನೀವು ಬಹಳ ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳವಾಗಿ ಮಾತನಾಡುವುದು ನಿಮಗೆ ಬಾರದು. ಹೊಸ ಕೆಲಸಕ್ಕೆ ಸೇರಲು ನಿಮ್ಮಲ್ಲಿ ಬಹಳ ಉತ್ಸಾಹವು ಇರುವುದು. ಮಕ್ಕಳನ್ನು ನೀವು ನಿಮ್ಮ ಶಿಸ್ತಿಗೆ ತರಲು ಪ್ರಯತ್ನಿಸುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ