ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 10:52 ರಿಂದ 12:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:01 ರಿಂದ 09:26ರ ವರೆಗೆ.
ಧನು ರಾಶಿ : ನ್ಯಾಯಾಲಯದಲ್ಲಿ ಜಯವನ್ನು ಸಾಧಿಸುವಿರಿ. ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡುವಿರಿ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ ಪಾಲಿಗೆ ಬರುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು. ಇಂದಿನ ನಿಮ್ಮ ಉತ್ಸಾಹವು ಸಮಾರಂಭಗಳಲ್ಲಿ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ.
ಮಕರ ರಾಶಿ : ವಿದ್ಯುತ್ ಉಪಕರಣಗಳು ದುರಸ್ತಿಗೆ ಬರಬಹುದು. ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ಯಾರನ್ನೂ ಕುರುಡಾಗಿ ನಂಬವುದು ಬೇಡ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ.
ಕುಂಭ ರಾಶಿ : ವ್ಯವಹಾರದಲ್ಲಿ ಚಾತುರ್ಯ ಸಾಲದು. ಒತ್ತಡವನ್ನು ನೀವು ಸಹಜಸ್ವಭಾವವಾಗಿ ಸ್ವೀಕರಿಸುವಿರಿ. ನೀವು ಬಹಳ ಕಾಲದಿಂದ ಪ್ರಮುಖ ಕೆಲಸದಲ್ಲಿ ತೊಂದರೆಯಾಗುತ್ತಿದ್ದು, ಅದು ಕೊನೆಗೊಳ್ಳಬಹುದು. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಹಣದ ಪರಿಸ್ಥಿತಿ ಉತ್ತಮವಾಗಿದ್ದರೂ, ಯಥಾಯೋಗ್ಯವಾದ ಖರ್ಚೂ ಇರಲಿದೆ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಕಂಡುಬರುವುದು. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ಹೆಚ್ಚಿಸುವುದು. ಆಪ್ತರಿಂದ ನಡೆವಳಿಕೆಗೆ ಟೀಕೆಗಳು ಬರಬಹುದು.
ಮೀನ ರಾಶಿ : ಪಾಲುದಾರಿಕೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವುದು ಹಾಗೆಯೇ ಉಳಿದುಕೊಳ್ಳುವುದು. ಗೃಹಬಳಕೆಯ ವಸ್ತುಗಳಿಂದ ಹೆಚ್ಚಿನ ಲಾಭವಿರುವುದು. ಉದ್ಯಮದಲ್ಲಿ ಬರುವ ಸಮಸ್ಯೆಯನ್ನೂ ನಿವಾರಿಸಿಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲವೇ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಬೇಸರಿಸದೇ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದದಿಂದ ಬೇಸರ ಇರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವು ಸಂತೋಷಗೊಳ್ಳುವರು. ಅಪರಿಚಿತರನ್ನು ನಂಬಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ.
-ಲೋಹಿತಶರ್ಮಾ -8762924271 (what’s app only)