Horoscope: ಈ ರಾಶಿಯವರಿಗೆ ಪ್ರೀತಿಯನ್ನು ಉಳಿಸಿಕೊಳ್ಳಲು ಕಷ್ಟವಾಗುವುದು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 18, 2023 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 18 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ಈ ರಾಶಿಯವರಿಗೆ ಪ್ರೀತಿಯನ್ನು ಉಳಿಸಿಕೊಳ್ಳಲು ಕಷ್ಟವಾಗುವುದು
ಪ್ರಾತಿನಿಧಿಕ ಚಿತ್ರ
Follow us on

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಡಿಸೆಂಬರ್ 18) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:16 ರಿಂದ 09:41ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:53 ರಿಂದ 03:18ರ ವರೆಗೆ.

ಧನು ರಾಶಿ : ಹಲವರ‌ ವಿರೋಧದ‌ ನಡುವೆಯೂ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಮಿಂಚಿದ ಕಾರ್ಯವನ್ನು ಎಷ್ಟೆಂದು ಚಿಂತಿಸುವಿರಿ.‌ ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ನಿಮ್ಮ ಧಾರ್ಮಿಕ ನಂಬುಗೆಗೆ ಯಾರಿಂದಲಾದರೂ ಘಾಸಿ ಉಂಟಾದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಸಂಗಾತಿಗಾಗಿ ಸ್ವತಃ ನೀವೇ ಅನ್ವೇಷಣೆ ಮಾಡುವಿರಿ. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ವಾಹನದಲ್ಲಿ ಸಂಚಾರ ಮಾಡುವುದಕ್ಕೆ ಕೆಲವು ತೆಡೆಗಳು ಬರಬಹುದು. ದೈಹಿಕ‌ಶ್ರಮವು ಇಂದು ಹೆಚ್ಚಿರುವುದು.

ಮಕರ ರಾಶಿ : ಹೋರಾಟವನ್ನು ಬೊಟ್ಟು ಮಾತುಕತೆಯಿಂದ ನಿಮಗೆ ಆಗಬೇಕಾದುದನ್ನು ಮಾಡಿಕೊಳ್ಳಿ. ಇಂದಿನ‌ ಪ್ರಯಾಣದಲ್ಲಿ ಬಂಧುಗಳು ಅನಿರೀಕ್ಷಿತವಾಗಿ ಸಿಗುವರು. ನಿಮ್ಮ ಗುಣವನ್ನು ದುರುಪಯೋಗ ಮಾಡಿಕೊಂಡಾರು. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಎಂದೂ ನಂಬದವರ ಮಾತನ್ನು ಇಂದು ನಂಬಬೇಕಾದೀತು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವನ್ನು ಮಾಡಿಕೊಂಡು ಸಂಕಟಪಡಬೇಕಾಗುವುದು.

ಕುಂಭ ರಾಶಿ : ಎಷ್ಟೋ ದಿನಗಳಿಂದ ಹಾಗೆಯೇ ಉಳಿದಿದ್ದ ಕೆಲಸಕ್ಕೆ ಚಾಲನೆ ಸಿಗಲಿದೆ. ಇಂದು ನಡೆದ ಅಹಿತಕರ‌ ಘಟನೆಯನ್ನು ಕೆಟ್ಟ ಗಳಿಗೆ ಎಂದು ಮರೆತುಬಿಡುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ವಿವಾಹದಲ್ಲಿ ಆಸಕ್ತಿಯು ಕಡಿಮೆ ಇರುವುದು. ಹಳೆಯ ನೆನಪಿನಿಂದ ಹೊರ ಬರಲು ಅವಕಾಶವು ಬೇಕಾಗುವುದು‌. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ನಿಷ್ಠುರದ ಮಾತಿನಿಂದ ಅನಂತರ ಪಶ್ಚಾತ್ತಾಪಗೊಳ್ಳುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ಮೊದಲು ಪ್ರಯಾಣವು ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು. ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು.

ಮೀನ ರಾಶಿ : ಪ್ರೀತಿಯನ್ನು ಉಳಿಸಿಕೊಳ್ಳಲು ನಿಮ್ಮಿಂದ ಕಷ್ಟವಾಗುವುದು. ಸಣ್ಣ ಕಲಹವು ದ್ವೇಷವಾಗಿ ಪರಿಣಮಿಸಬಹುದು. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಗಾವಣೆಯ ಭೀತಿ ಕಾಡಲಿದೆ. ನಿಮ್ಮ ಇತರ ಚಟುವಟಿಕೆಗಳು ಬೆಳಕಿಗೆ ಬರಬಹುದು. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ. ಒಂದೇ ವಿಷಯವನ್ನು ಹಲವರಿಂದ ಕೇಳಿ ಬೇಸರವಾಗುವುದು‌.

-ಲೋಹಿತ ಹೆಬ್ಬಾರ್ – 8762924271 (what’s app only)