Horoscope: ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು- ಎಚ್ಚರ

|

Updated on: Dec 28, 2023 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 28 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು- ಎಚ್ಚರ
ರಾಶಿ ಭವಿಷ್ಯ
Follow us on

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಡಿಸೆಂಬರ್ 28) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪುನರ್ವಸು, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 01:58 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:21 ರಿಂದ 09:45ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:09 ರಿಂದ 12:34ರ ವರೆಗೆ.

ಧನು ರಾಶಿ : ಕಾರ್ಯದ ಒತ್ತಡವು ನಿಮಗೆ ಏನು ಮಾಡಬೇಕೆಂದು ತೋಚದೇ ಸಂಕಟಪಡುವಿರಿ. ಯಾರದೋ ಮಾತಿನಿಂದ ನೀವು ದುಃಖಪಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚನ್ನು ನೀವು ಮಾಡಬೇಕಾಗಯವುದು. ಅನಾರೋಗ್ಯದಿಂದ ಇದ್ದರೂ ನಿಮ್ಮ ಕರ್ತವ್ಯವನ್ನು ಮಾಡುವಿರಿ. ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಈ ದಿನ ನೀವು ಸಂತೋಷವಾಗಿರುವಿರಿ. ಆದರೆ ಅಸಭ್ಯ ವರ್ತನೆಯು ಕೆಲವರಿಂದ ಮಾತುಗಳು ಕೇಳಿಬರಬಹುದು. ಕೆಲಸದ ಬಿಡುವಿಲ್ಲದಿದ್ದರೂ ಇನ್ನಿತರ ಚಟುವಟಿಕೆಯಲ್ಲಿ ಭಾಗ ವಹಿಸುವಿರಿ.

ಮಕರ ರಾಶಿ : ತುರ್ತು ಹಣಕಾಸಿನ ಸಮಸ್ಯೆಯು ಎದುರಾದ ಸ್ನೇಹಿತರಿಂದ ಸಂಪತ್ತನ್ನು ಪಡೆದುಕೊಳ್ಳುವಿರಿ. ನ್ಯಾಯಾಲಯದಲ್ಲಿ ನಿಮಗೆ ಜಯ ಸಿಗುವ ಸಂಭವವು ಅಸಾಧ್ಯ. ವ್ಯಾಪಾರದಲ್ಲಿ ಹಿನ್ನಡೆಯನ್ನು ಪಡೆಯಬೇಕಾಗುವುದು. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ದೀರ್ಘಕಾಲದ ರೋಗದಿಂದ ಬಳಲಿಕೆಯು ನಿಮಗೆ ಅಭ್ಯಾಸವಾಗಲಿದೆ. ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಇಂದು ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನು ವಿಳಂಬದಿಂದ ಬರುವುದು. ಕುಟುಂಬ ವಾತಾವರಣವು ಇಂದು ಹೆಚ್ಚು ಭಾವನಾತ್ಮಕವಾಗಿ ಇರುತ್ತದೆ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಕಾಣಿಸಿಕೊಳ್ಳುವುದು.

ಕುಂಭ ರಾಶಿ : ಇಂದು ವಸ್ತ್ರ ಮತ್ತು ಅಗತ್ಯ ವಸ್ತುಗಳ ವ್ಯಾಪಾರಿಗಳಿಗೆ ಸಂತಸವಿರುವುದು. ಹೆಚ್ಚು ಖರೀದಿಯ ಆರ್ಡರ್ ಗಳು ಬರಲಿದೆ. ದೈನಂದಿನ ಕೆಲಸದಲ್ಲಿ ಬದಲಾವಣೆಯನ್ನು ನೀವು ಅಪೇಕ್ಷಿಸುವಿರಿ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಖಾಸಗಿ ಸಂಸ್ಥೆ ದೂರದೃಷ್ಟಿಯ ಯೋಜನೆಯು ಪ್ರಯೋಜನವಾದೀತು. ಇಂದು ಮನೆಯ ಸದಸ್ಯರ ಮನವೊಲಿಸುವುದು ಕಷ್ಟವಾಗದು.‌ ನಿರಾಶೆಯನ್ನು ಉಂಟುಮಾಡವ ಆಲೋಚನೆಗಳನ್ನು ತಪ್ಪಿಸಿ.

ಮೀನ ರಾಶಿ : ಇಂದು ಯಂತ್ರೋಪಕರಣಗಳ ಮಾರಾಟದಿಂದ ಹೆಚ್ಚಿನ ಲಾಭವನ್ನು ನೀವು ಕಾಣಬಹುದು. ನಿಮ್ಮದೇ ಸ್ಥಿರಾಸ್ತಿ ವ್ಯವಹಾರದಲ್ಲಿ ನಿಮಗೆ ಅನುಕೂಲವಾಗುವಂತೆ ಆಗುವುದು. ಮಾನಸಿಕ ನೆಮ್ಮದಿಯು ನಿಮ್ಮ ಹಲವು ಕೆಲಸಗಳನ್ನು ಮಾಡಲು ಸಹಾಯಕವಾಗುವುದು. ವಾಹನದ ತೊಂದರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು‌. ಮರಣ ಭಯವು ಕಾಡಬಹುದು. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳುವಿರಿ. ಯಾರ ಮೇಲೂ ಅವಮಾನ ಬೇಡ.
ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು.‌ ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಕೆಲವು ವಿಷಯಗಳ ಬಗ್ಗೆ ಮನೆಯ ಹಿರಿಯರಿಂದ ವ್ಯತ್ಯಾಸಗಳು ಆಗಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)