AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 21 November : ಇಂದು ಈ ರಾಶಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವರು

ದಿನ ಭವಿಷ್ಯ, 21, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಪ್ರತಿಪತ್ ತಿಥಿ ಶುಕ್ರವಾರ ಶಿಕ್ಷಣದಲ್ಲಿ ಪ್ರಗತಿ, ಹೂಡಿಕೆಗೆ ಮಹತ್ತ್ವ, ದಾಂಪತ್ಯದಲ್ಲಿ ಭಿನ್ನತೆ, ಗುರಿ ಬದಲಾವಣೆ, ಆರೋಗ್ಯದಲ್ಲಿ ಕ್ಷೀಣತೆ ಇವೆಲ್ಲ ಇಂದಿನ ಭವಿಷ್ಯ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

Horoscope Today 21 November : ಇಂದು ಈ ರಾಶಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 21, 2025 | 12:09 AM

Share

ಮೇಷ ರಾಶಿ :

ಇಂದು ನೀವು ಎಲ್ಲವನ್ನೂ ವಿವರವಾಗಿ ಹೇಳಬೇಕಿಲ್ಲ. ಅರ್ಥಮಾಡಿಕೊಳ್ಳವ ಸಾಮರ್ಥ್ಯ ಅಧಿಕವಾಗಲಿದೆ. ಹೆಚ್ಚು ನಿರೀಕ್ಷೆಯನ್ನು ಬಂಧುಗಳಿಂದ ಮಾಡುವುದು ಬೇಡ. ಇಂದು ನೀವು ಸಂಗಾತಿಯ ವಿಚಾರಕ್ಕೆ ಖರ್ಚು ಮಾಡಬೇಕಾಗುವುದು. ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ಆಸೆಯನ್ನು ಈಡೇರಿಸಿಕೊಂಡು ಸಂತೋಷಪಡುವಿರಿ. ದಾನದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವಿರಿ. ನಿಮ್ಮ ಬಗ್ಗೆ ಒಳ್ಳೆಯ ಭಾವವು ಬರಬಹುದು. ಸಂಗಾತಿಯ ಇಂದಿನ ಮಾತುಕತೆಗಳು ವಾಗ್ವಾದಕ್ಕೆ ತಿರುಗಬಹುದು. ಕಷ್ಟದ ಮೆಲುಕು ಹಾಕುವ ಸಂದರ್ಭ ಬರಬಹುದು. ತಪ್ಪನ್ನು ತಪ್ಪು ಎಂದು ಸರಿಯಾಗಿ ಹೇಳಿ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಬಹಳ‌ ದಿನಗಳ ಸ್ನೇಹಿತರ ಜೊತೆ ಪ್ರಯಾಣ ಸಾಧ್ಯ. ಗೊಂದಲದಿಂಸ ತೀರ್ಮಾನ ಮಾಡುವುದು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಆರಂಭವೇ ಸರಿಯಾಗದೇ ಇರುವುದರಿಂದ ಗುರಿಯೂ ತಪ್ಪಬಹುದು. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರುವುದು.

ವೃಷಭ ರಾಶಿ :

ಆಲೋಚನೆಗಳು ಮೂಡಿ ಸೃಜನಶೀಲತೆ ಹೆಚ್ಚುತ್ತದೆ. ಒಟ್ಟಾಗಿ ಇದ್ದರೆ ಮಾತ್ರ ಕಾರ್ಯವನ್ನು ಸಾಧಿಸಲು ಸಾಧ್ಯ. ನಿಮ್ಮ ಯಶಸ್ಸಿಗೆ ಯಾರಾದರೂ ಕಪ್ಪುಚುಕ್ಕೆ ಇಡಬಹುದು. ಇಂದು ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡುವ ಸಂದರ್ಭವು ಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ಪುಣ್ಯಸ್ಥಳಗಳ ಭೇಟಿ ಮಾಡವಿರಿ. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಇಂದಿನ‌ ದುಡಿಮೆ ಇಂದಿಗಾದೀತು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಆದರೆ ಮಾತನಾಡುವಾಗ ಕಟುವಾಗಿ ಹೇಳುವ ಸಾಧ್ಯತೆ. ಆಸ್ತಿಯನ್ನು ಮಾರಾಟ‌ ಮಾಡಲು ಇಚ್ಛೆ ಇರುವುದು.

ಮಿಥುನ ರಾಶಿ :

ಮಂದಗತಿಯಲ್ಲಿ ಇದ್ದ ಕೆಲಸಗಳು ವೇಗ ಪಡೆಯುತ್ತವೆ. ಧೈರ್ಯದಿಂದ ಮುನ್ನಡೆವ ಕಾರಣ ಸಮಸ್ಯೆಗಳಿಹೆ ಸ್ಪಷ್ಟ ಪರಿಹಾರ ಸಿಗುತ್ತದೆ. ನಿಮ್ಮ‌ ಯೋಚನೆಗೆ ತಕ್ಕ ಫಲ ಸಿಗುವುದು. ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗವುದು. ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ಆರ್ಥಿಕದಿಂದ ನೀವು ಬಲವಾಗುವಿರಿ. ಧನವು ನಷ್ಟವಾದ ಕಾರಣ ಹತಾಶೆಯು ನಿಮ್ಮಲ್ಲಿ ಬರಬಹುದು. ಬೇಡವೆಂದರೂ ನಿಮಗೆ ಧನಸಹಾಯ ಬರುವುದು. ವ್ಯವಹಾರದಲ್ಲಿ ಪಾರದರ್ಶಕತೆ ಕಾಣಿಸುವುದು. ಸಹೋದರಿಗೆ ಉಡುಗೊರೆ ನೀಡಿ ಖುಷಿಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಗೊಂದಲು ಇರಲಿದೆ. ಇಂದು ಎಲ್ಲರಿಂದ ಪ್ರತ್ಯೇಕವಾಗಿ ಇರಲು ಇಷ್ಟಪಡುವಿರಿ. ಸಂಗಾತಿಯ ಮನೋಭಾವಕ್ಕೆ ವಿರುದ್ಧವಗಿರುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಿಂದ ತಿಳಿದು ಖುಷಿಯಾಗುವುದು. ರಾಜಕೀಯದಲ್ಲಿ ಮುಂದುವರಿಯುವುದು ಕಷ್ಟವೆನಿಸಬಹುದು.

ಕರ್ಕಾಟಕ ರಾಶಿ :

ಭವಿಷ್ಯದ ದೃಷ್ಟಿಯಿಂದ ಹೊಸ ಕಲಿಕೆಯನ್ನು ಆರಂಭಿಸುವಿರಿ. ಸುಪ್ತಾವಸ್ಥೆಯಲ್ಲಿ ಇರುವ ನಿಮ್ಮ ಕಾರ್ಯಕ್ಕೆ ಜಾಗರೂಕತೆ ಉಂಟಾದೀತು. ಸರ್ಕಾರಕ್ಕೆ ಕೊಡಬೇಕಾದ ಹಣವನ್ನು ಇಂದು ಕೊಡಲಿದ್ದೀರಿ. ಪ್ರಭಾವೀ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭವು ಬರಬಹುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಹಿಂದೇಟು ಹಾಕುವಿರಿ. ನೀವು ಯಾರಿಗೋ ಗುರಿಯಿಟ್ಟು ಬಿಟ್ಟ ಬಾಣ ಮತ್ಯಾರನ್ನೋ ತಲುಪಬಹುದು. ನಟರ ನಿರೀಕ್ಷೆಯು ಸತ್ಯವಾಗುವುದು. ಸಂಬಂಧಗಳ ನಡುವೆ ಪರಸ್ಪರ ಸೌಹಾರ್ದವು ಇರಲಿದೆ. ಸಾಹಸಕ್ಕೆ ಕಾರ್ಯಕ್ಕೆ ಹೋದಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ಗುರುವು ನಿಮ್ಮನ್ನು ಆಧ್ಯಾತ್ಮಿಕತೆಗೆ ಪ್ರೇರಣೆ ನೀಡಬಹುದು. ದುರಾಲೋಚನೆಯು ನಿಮ್ಮ ಮಾರ್ಗವನ್ನು ಬದಲಾಯಿಸುವುದು. ಮಕ್ಕಳ ಮೇಲೆ ನಿಮ್ಮ ಅನುಕಂಪವು ಹೆಚ್ಚಾಗುವುದು.

ಸಿಂಹ ರಾಶಿ :

ಬಾಂಧವ್ಯದ ಭಾವಗಳು ಗಾಢವಾಗಿ ಕಾಡಬಹುದು. ಹಳೆಯ ಒಡಕುಗಳ ಅತಿಯಾದ ಮಾತಿನಿಂದ ಬರಲಿದೆ. ಆದರೆ ಇದು ನಿಮ್ಮ ಅಂತಶ್ಶಕ್ತಿಯನ್ನು ಹೆಚ್ಚಿಸುವ ದಿನವೂ ಹೌದು. ಖದೀರಿ ಮಾಡಿದ ನಿವೇಶನವನ್ನು ಹೊಂದಾಣಿಕೆಯ ಕೊರತೆಯಿಂದ ಮಾರಾಟ ಮಾಡುವಿರಿ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಬರುವ ಪ್ರಶಂಸೆಯ ಮಾತನ್ನು ಅಲ್ಲಗಳೆಯುವಿರಿ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯ ಉಂಟಾದೀತು. ಬರಬೇಕಾದ ಹಣವನ್ನು ಪಡೆದರೂ ಖರ್ಚಿಗೆ ದಾರಿ ತೆರೆದುಕೊಂಡು ಇರುವುದು. ಆಸ್ತಿಯ ಕಲಹವನ್ನು ಮನೆಯಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ. ಕಲಾವಿದರಿಗೆ ಅವಕಾಶವು ಬರುವುದು. ವಿದೇಶದ ವ್ಯವಹಾರಕ್ಕೆ ಮತ್ತಷ್ಟು ಬಲ ಬರಬಹುದು. ಉನ್ನತ ಸ್ಥಾನವು ನಿಮ್ಮನ್ನು ಕರೆಯಬಹುದು. ಗೃಹನಿರ್ಮಾಣದ ರೂಪವನ್ನು ನಿರ್ಧರಿಸಿಕೊಳ್ಳುವಿರಿ. ಗುಪ್ತ ಲಾಭ, ಹಠಾತ್ ಅವಕಾಶಗಳು ಕಾಣಿಸುವ ದಿನ. ಪ್ರಯಾಣಕ್ಕೆ ಮನಸ್ಸು ಇರದು.

ಕನ್ಯಾ ರಾಶಿ :

ಸಂಬಂಧಗಳಲ್ಲಿ ಸಮತೋಲನ ಹೆಚ್ಚುತ್ತದೆ. ನಿಮ್ಮ ಕಾರ್ಯದ ಮೂಲಕ ಮನೆಯವರ ಹೃದಯ ಗೆಲ್ಲುವಿರಿ. ಇಂದು ಇನ್ನೊಬ್ಬರಿಗೆ ಬರುವ ಧನಕ್ಕೆ ಸಹಾಯ ಮಾಡುವಿರಿ. ನಿಮ್ಮ ಅಪರೂಪದ ವಸ್ತುವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ಯಾರಾದರೂ ಅಂದುಕೊಂಡಾರು ಎನ್ನುವ ಹಿಂಜರಿಕೆಯು ಇರಲಿದೆ‌. ವಿದೇಶದ ಹೂಡಿಕೆಗೆ ಗಟ್ಟಿಯಾದ ಮನಸ್ಸು ಮಾಡುವಿರಿ. ಸಂಗಾತಿಯ ಮಾತಿನಿಂದ ಬೇಸರವಾಗಲಿದೆ. ಸಮಯ ಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ವೃತ್ತಿಯನ್ನು ಉತ್ಸಾಹದಿಂದ ಮಾಡುವಿರಿ. ಸಂಗಾತಿಯು ನಿಮಗೆ ಕೆಲವು ಉಪಯುಕ್ತ ಮಾತುಗಳನ್ನು ಹೇಳಬಹುದು. ಒತ್ತಡವನ್ನು ನಿವಾರಿಸಿಕೊಳ್ಳಲು ಕೆಲವು ವಿಧಾನಗಳು ಇರಲಿದೆ. ಹಣಕಾಸಿನಲ್ಲಿ ಸ್ಥಿರತೆ, ಬರುವ ಹಣ, ಉಳಿಕೆ ಎರಡೂ ಒಳ್ಳೆಯದಾಗಿ ಕಾಣಿಸುತ್ತವೆ. ಸಂಬಂಧವು ಇಂದು ಉಪಯೋಗಕ್ಕೆ ಬರುವುದು. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.

ತುಲಾ ರಾಶಿ :

ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಬಹುದು ಆದರೆ ನೀವು ಅದನ್ನು ಚಾತುರ್ಯದಿಂದ ನಿರ್ವಹಿಸುತ್ತೀರಿ. ನೀವು ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ಶತ್ರುಗಳ ಹುಡುಕಾಟದಲ್ಲಿ ಸಫಲರಾಗುವುದಿಲ್ಲ. ಕೆತ್ತನೆಯ ಕಲಾವಿದರಿಗೆ ಹೆಚ್ಚು ಬೇಡಿಕೆ ಬರಬಹುದು. ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ಸ್ಪರ್ಧೆಯಲ್ಲಿ ಸೋಲಾಗದಿದ್ದರೂ ಹಿನ್ನೆಲೆ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ಪರೀಕ್ಷೆಯ ವಿದ್ಯಾರ್ಥಿಗಳು ನಿರ್ಧರಿಸಿ. ಭೂಮಿಯ ವ್ಯವಹಾರವು ಗೊಂದಲಮಯ ಆಗಬಹುದು. ಪ್ರೀತಿಯನ್ನು ದೂರಮಾಡಿಕೊಳ್ಳಲಿದ್ದೀರಿ. ನಿಮ್ಮ ಮೇಲೆ ಅಸಂಬದ್ಧ ಮಾತುಗಳು ಕೇಳಿಬರುವುದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ನರ ದೌರ್ಬಲ್ಯ, ತಲೆ ಬೇನೆ ಕಾಣಬಹುದು. ಸಮಯಕ್ಕೆ ಆಹಾರ ಮತ್ತು ವಿಶ್ರಾಂತಿ ಅವಶ್ಯಕ. ನೀವು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಕೊಳ್ಳುವ ಹಾಗೆ ಆಗಬಹುದು.

ವೃಶ್ಚಿಕ ರಾಶಿ :

ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಪ್ರಯತ್ನ ಮಾಡುವಿರಿ. ನೀವು ಮಾಡಿದ ಕೆಲಸಕ್ಕೆ ಮಾನ್ಯತೆ ಸಿಗಲಿದೆ. ಯಾವ ವೈಯಕ್ತಿಕ ಜೀವನವನ್ನು ಸುಮ್ಮನೆ ಪ್ರವೇಶಿಸವುದು ಬೇಡ. ದೂರದ ಬಂಧುಗಳ ಆಗಮನವು ಆಗಲಿದೆ. ಹಳೆಯ ಘಟನೆಗಳು ವಿಸ್ಮರಣೆಯಾಗಬಹುದು. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಸಕಾಲಕ್ಕೆ ಯಾವದೂ ಆಗದೇ ಎಲ್ಲವೂ ಅಸ್ತವ್ಯಸ್ತವಾಗಲಿದೆ. ಬೆಲ್ಲದ ಮಾತುಗಳು ಕೇಳಲಷ್ಟೇ ಹಿತ. ನಿಮ್ಮ ಇರುವಿಕೆಯನ್ನು ತೋರಿಸುವ ಪ್ರಯತ್ನ ಮಾಡುವಿರಿ. ನೌಕರರ ವಿಷಯದಲ್ಲಿ ಕೋಪಗೊಳ್ಳುವ ಸನ್ನಿವೇಶ ಬರಬಹುದು. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ.‌ ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು‌. ಕಪಟತೆಯು ನಿಮಗೆ ಗೊತ್ತಾಗದೇ ನಡೆಯುವುದು. ಅಹಂಕಾರ ಮಾತುಗಳಲ್ಲಿ ಹೊರಬರದಂತೆ ಜಾಗರೂಕರು. ಸ್ನೇಹಿತರ ಜೊತೆಗಿನ ಮಾತುಕಥೆಯಲ್ಲಿ ಸ್ಪಷ್ಟತೆ ಇರಲಿ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಗೃಹನಿರ್ಮಾಣದಲ್ಲಿ ಗೊಂದಲ ಮಾಡಿಕೊಳ್ಳುವಿರಿ.

ಧನು ರಾಶಿ :

ಹಳೆಯ ಭಾವನೆಗಳು ಸಮಸ್ಯೆಗಳು ಪಾಲುದಾರಿಕೆಯಲ್ಲಿ ತಲೆದೋರಬಹುದು. ಮಹಿಳಾ ಉದ್ಯಮವು ಬಹಳ ವೇಗವಾಗಿ ಪ್ರಚಾರಕ್ಕೆ ಬರಬಹುದು. ಆದರೆ ಆದಾಯ ಕಡಿಮೆ. ನಿಮ್ಮ ಕೆಲಸಕ್ಕೆ ಹಣ ದೊರಕುವುದು ಎಂಬ ನಿರೀಕ್ಷೆಯು ಇರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಉತ್ಪಾದನೆಯ ಹಂತದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ. ನಿಮ್ಮ‌ ಮಾತುಗಳಿಗೆ ನೌಕರರು ಬೆಲೆಕೊಡದೇ ಹೋಗಬಹುದು. ಸಂಬಂಧವನ್ನು ಆತ್ಮೀಯಗೊಳಿಸಲು ಪ್ರಯತ್ನಪಡುವಿರಿ. ಉದ್ಯೋಗದ ಸ್ಥಳದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಪ್ರಕೃತಿಯ ಬಳಿಯಲ್ಲಿ ಸ್ವಲ್ಪ ಸಮಯ ಕಳೆದರೆ ಮನಸ್ಸು ಹಗುರವಾಗುತ್ತದೆ. ಮಾತನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾಗಿ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಮಾತಿನಿಂದಲೇ ಸರಿಮಾಡಿಕೊಳ್ಳಿ.

ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಅದ್ಯಾತ್ಮಿಕ ರಹಸ್ಯವೇನು ಗೊತ್ತಾ?

ಮಕರ ರಾಶಿ :

ಮಾತಿನಿಂದ ಕೆಲಸಗಳನ್ನು ಸಲೀಸಾಗಿ ಮುಗಿಸಬಹುದು. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯೋಗವಾಗುವ ಸಾಧ್ಯತೆ. ನೀವು ವಿಶ್ವಾಸ ಯೋಗ್ಯರ ಜೊತೆ ಹೆಚ್ಚು ಬೆರೆಯುವಿರಿ. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಬೇಡದ ಸಲಹೆಯನ್ನು ಕೊಡಬಹುದು. ಆರ್ಥಿಕ ವಿಚಾರದಲ್ಲಿ ತಂದೆ‌ ಮಕ್ಕಳ ನಡುವೆ ಮಾತಿನ ಚಕಮಕಿ‌ ಏಳುವುದು. ವಿವಾಹದಲ್ಲಿ ನಿರಾಸಕ್ತಿಯು ಬರಬಹುದು. ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಆರ್ಥಿಕತೆಯ ಮೇಲೆ ಹೆಚ್ಚು ಒಲವು ಉಂಟಾಗುವುದು.ಕುಟುಂಬದಲ್ಲೂ ಹರ್ಷಕರ ವಾತಾವರಣ ಇರಲಿದೆ. ಸ್ತ್ರೀಯರಿಂದ ಕೆಲವು ಸಹಾಯವು ಸಿಗುವುದು. ಮಕ್ಕಳನ್ನು‌ ಮನೆಯಿಂದ ಹೊರಗೆ ಕಳುಹಿಸಿ ಓದಿಸುವುದು ಸೂಕ್ತವಾದೀತು.‌ ಮಾತಿನಲ್ಲಿ ನಿಖರತೆ ಇರಲಿ. ಪ್ರತಿ ಕ್ಷಣವೂ ಅಮೂಲ್ಯ ಎನ್ನಿಸುವಂತೆ ಕಾರ್ಯವಿರುವುದು.‌ ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ.

ಕುಂಭ ರಾಶಿ :

ಮನಸ್ಸಿನಲ್ಲಿ ಎರಡು ದಿಕ್ಕಿನ ಆಲೋಚನೆಗಳು ಬರಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಕಳೆದ ಕಷ್ಟದ ದಿನಗಳು ನಿಮಗೆ ಇಂದು ಖುಷಿ ಎನಿಸಬಹುದು. ಅತಿಯಾದ ಬಂಧನವು ನಿಮಗೆ ಕಿರಿಕಿರಿ ತರಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ಸರ್ಕಾರದ ಕಡೆಯಿಂದ ನಿಮಗೆ ಆಗಬೇಕಾದ ಕಾರ್ಯವು ವಿಳಂಬ. ನಿಮ್ಮ ನಂಬಿಕೆಗೆ ತೊಂದರೆಯಾಗುವುದು.‌ ಸಂಗಾತಿಯ ಕಹಿಯಾದ ಮಾತುಗಳು ನಿಮಗೆ ಜೀರ್ಣವಾಗದು. ಇಂದು ವ್ಯಯಕ್ಕಿಂತ ಸಂಗ್ರಹಕ್ಕೆ ಆದ್ಯತೆ ನೀಡಿ. ಮನೆಯವರ ಜೊತೆ ಸಣ್ಣ ಮಾತುಕತೆಗಳು ನಿಮ್ಮ ಮನಸ್ಸಿಗೆ ಶಾಂತಿ ತರಬಹುದು. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು.‌ ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರ್ಕಾರದ ಕೆಲಸಕ್ಕಾಗಿ ಓಡಾಡುವುದು ನಿಮಗೆ ಬೇಸರ ತಂದೀತು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.

ಮೀನ ರಾಶಿ :

ಅತಿಯಾಗಿ ಆತುರದಿಂದ ಮಾಡುವ ನಿರ್ಧಾರಗಳು ಸಮಸ್ಯೆ ತರಬಹುದಾದ್ದರಿಂದ ಶಾಂತ ಮನಸ್ಸಿನಿಂದ ಮುಂದುವರಿದರೆ ಯಶಸ್ಸು ಖಚಿತ. ನೀವು ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಬಹುದು. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ವಾಹನ ಸಂಚಾರಕ್ಕೆ ತೊಂದರೆ ಬರಬಹುದು. ಉತ್ತಮ‌ ಕುಲದ ಸಂಬಂಧವು ವಿವಾಹಕ್ಕೆ ನಿಮಗೆ ಸಿಗಲಿದೆ. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲಸದ ವೇಗವೂ ಚುರುಕಾಗಿರುತ್ತದೆ. ಹೊಸ ಯೋಜನೆಗಳನ್ನು ಆರಂಭಿಸಲು ದಿನ ಅನುಕೂಲ. ಕಾರಣವಿಲ್ಲದೇ ಕೋಪವು ಬರುವುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು. ಬಹು ದಿನಗಳ ಅನಂತರ ಮನೆಯವರ ಜೊತೆ ಕಾಲ ಕಳೆಯುವ ಅವಕಾಶ ಸಿಗುವುದು.‌ ದಾಂಪತ್ಯದಲ್ಲಿ ಪರಸ್ಪರ ಕಾದಾಟವು ಮಿತಿಮೀರಬಹುದು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಖುಷಿಪಡಿಸುವಿರಿ. ಗೆಳೆತನದಲ್ಲಿ ಮಿತಿ ಇರಲಿ.

21 ನವೆಂಬರ್​ 2025ರ ಶುಕ್ರವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಶೋಭನ, ಕರಣ : ಬವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:40 – 12:05, ಗುಳಿಕ ಕಾಲ 07:48 – 09:14, ಯಮಗಂಡ ಕಾಲ 14:57 – 16:23

-ಲೋಹಿತ ಹೆಬ್ಬಾರ್-8762924271 (what’s app only)

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ