Horoscope Today 28 November : ಇಂದು ಈ ರಾಶಿಯವರ ಪ್ರೇಮವು ಕೇವಲ ತೋರಿಕೆಯಾಗಿರುವುದು

ದಿನ ಭವಿಷ್ಯ, 28, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ ಶುಕ್ರವಾರ ದುಡುಕು ನಿರ್ಧಾರ, ಹಣಕ್ಕಾಗಿ ಓಡಾಟ, ಗಣ್ಯರ ಭೇಟಿ, ಕಾನೂನಾತ್ಮಕ ಹೋರಾಟ, ನಿಯಮ ಉಲ್ಲಂಘನೆ, ಪುಣ್ಯ ಸ್ಥಳದ ಭೇಟಿ, ಆರೋಗ್ಯ ತಪಾಸಣೆ, ಪ್ರೀತಿಯಲ್ಲಿ ಸವಾಲು ಇವೆಲ್ಲ ಇಂದಿನ ವಿಶೇಷ.

Horoscope Today 28 November : ಇಂದು ಈ ರಾಶಿಯವರ ಪ್ರೇಮವು ಕೇವಲ ತೋರಿಕೆಯಾಗಿರುವುದು
ದಿನ ಭವಿಷ್ಯ
Updated By: ಅಕ್ಷತಾ ವರ್ಕಾಡಿ

Updated on: Nov 28, 2025 | 11:01 AM

ಮೇಷ ರಾಶಿ:

ಪ್ರೀತಿಯಲ್ಲಿ ಭಾವನಾತ್ಮಕ ಬೆಂಬಲ ಸಿಕ್ಕರೂ ಪೂರ್ಣ ಸಂತೋಷವಿರದು. ಇಂದು ಇನ್ನೊಬ್ಬರನ್ನು ನೋಡಿ ಬದುಕುವುದಕ್ಕಿಂತ ನಿಮ್ಮನ್ನೇ ನೋಡಿದರೆ ಒಳ್ಳೆಯದು. ನೀವು ಇಂದು ಸ್ನೇಹಿತನ ನಂಬಿಕೆಯ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ನಿಮ್ಮ ಕಾರ್ಯವನ್ನು ಇಂದೇ ಮುಗಿಸುವ ಚಿಂತೆಯಲ್ಲಿ ಇರುವಿರಿ. ಇಂದಿನ ಹಣಕಾಸಿನ‌ ಹರಿವು ನಿಮಗೆ ಸಂತೋಷವನ್ನು ಕೊಡಬಹುದು. ಸಂಸ್ಥೆಗಾಗಿ ನೀವು ಕೆಲಸದಲ್ಲಿ ಉತ್ತಮ ನಿರ್ಧಾರವನ್ನು ಏಕಾಂಗಿಯಾಗಿ ಮಾಡುವಿರಿ. ಆರೋಗ್ಯದಲ್ಲಿ ಮಾನಸಿಕ ದಣಿವು ಕಾಣಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಲಿದೆ. ಇಂದು ಕಾರ್ಯದಲ್ಲಿ ಸ್ವಲ್ಪ ಒತ್ತಡವು ಇರಲಿದೆ. ನಿಮಗೆ ಕೊಟ್ಟ ಸಣ್ಣ ಕೆಲಸವನ್ನೂ ಶಿಸ್ತು ಹಾಗೂ ಉತ್ಸಾಹದಿಂದ ಮಾಡುವಿರಿ.

ವೃಷಭ ರಾಶಿ:

ಹಣಕ್ಕೆ ಹೊಸ ಅವಕಾಶ ಕಂಡರೂ ಅಪಾಯ ತಪ್ಪಬೇಕಾದ ದಿನ. ಕೆಲಸದಲ್ಲಿ ನಿಮ್ಮ ಹೊಸ ಆಲೋಚನೆಗಳು ಮೆಚ್ಚುಗೆ ಪಡೆಯುತ್ತವೆ. ಇಂದು ನಿಮ್ಮ ಅಸತ್ಯಗಳನ್ನು ಜನರು ಎಂದಿನಂತೆ ನಂಬಲಾರರು. ಇಂದು ನಿವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥ‌ಮಾಡುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಆರೋಗ್ಯದ ವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಿಮ್ಮ ಜವಾಬ್ದಾರಿಯ ಕಾರ್ಯಗಳು ಮುನ್ನೆಲೆಗೆ ಬರಬಹುದು. ಅಪರೂಪದ ದ್ರವ್ಯಗಳ ಸಂಗ್ರಹವನ್ನು ಮಾಡುವಿರಿ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ನಿದ್ರೆ ಕೊರತೆಯಿಂದ ಆರೋಗ್ಯ ಕುಗ್ಗಬಹುದು. ಪ್ರೀತಿಯಲ್ಲಿ ನೀವು ಅಂದುಕೊಂಡ ಬದಲಾವಣೆ ಆಗದು. ನಿಮ್ಮ ವಿರುದ್ಧ ನಡೆಯುವ ತಂತ್ರವನ್ನು ನೀವು ಅರಿತುಕೊಳ್ಳುವಿರಿ. ನಿಮ್ಮ ಸಿದ್ಧಾಂತದ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು.

ಮಿಥುನ ರಾಶಿ:

ವ್ಯವಹಾರದಲ್ಲಿ ಹಿಡಿತ ಅಗತ್ಯವಾಗಿದ್ದು ಕೆಲಸ ನಿಧಾನವಾದರೂ ಸ್ಥಿರವಾಗಿರುತ್ತದೆ. ಇಂದು ಸ್ಪರ್ಧಾತ್ಮಕವಾಗಿ ನೀವು ಗೆಲ್ಲಲೇಬೇಕು. ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ವಾದವನ್ನು ಮಾಡುವ ಮುಂದಿರುವ ಜನರನ್ನು ನೋಡಿಕೊಳ್ಳಿ. ನಾಲಿಗೆಯನ್ನು ಹೇಗಾದರೂ ಹರಿ ಬಿಡುವುದು ಬೇಡ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು.‌ ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕಾರ್ಯದಲ್ಲಿ ಒತ್ತಡವು ಮೇಲಧಿಕಾರಿಗಳಿಂದ ಬರುವುದು. ಆರೋಗ್ಯ ಸಮತೋಲನದಲ್ಲಿದ್ದು ಪ್ರೀತಿಯಲ್ಲಿ ಶಾಂತ ಸಂಭಾಷಣೆ ಸಂಬಂಧ ಸುಧಾರಿಸುತ್ತದೆ. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿ ಇರಲಿ. ಆಗಬೇಕಾದ ವಿವಾಹವನ್ನು ತಪ್ಪಿಸುವ ಸಾಧ್ಯತೆ ಇದೆ. ಬೇಕಾದ ವಸ್ತುವನ್ನೇ ನೀವು ಯಾರಿಗಾದರೂ ಕೊಟ್ಟು ಕಳೆದುಕೊಳ್ಳುವಿರಿ.

ಕರ್ಕಾಟಕ ರಾಶಿ:

ಆರ್ಥಿಕ ಲಾಭವಾಗುತ್ತಾ ಹೊರಗಿನ ಸಂಪರ್ಕಗಳಿಂದ ಕೆಲಸ ಪ್ರಗತಿ ಕಾಣುತ್ತದೆ. ಆರೋಗ್ಯದಲ್ಲಿ ಕಾಲು ನೋವು ಕಾಣಬಹುದು. ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೋಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು ಇಂದು. ಕಾರ್ಯದಲ್ಲಿ ಆಗುವ ವ್ಯತ್ಯಸದಿಂದ ಕೋಪಗೊಳ್ಳುವುದು ಬೇಡ. ಒಂದು ನಾಣ್ಯಕ್ಕೆ ಎರಡು ಮುಖಗಳು. ಎರಡೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದಿಲ್ಲ. ಆದರೇ ಇಬ್ಬರಲ್ಲಿ ಯಾರೊಬ್ಬರು ಇಲ್ಲದಿದ್ದರೂ ಇಬ್ಬರೂ ಇರುವುದಿಲ್ಲ. ವಿದ್ಯಾರ್ಥಿಗಳ ಓದುವ ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಸರಿಯಾದ ತಿಳಿವಳಿಕೆ ಅಗತ್ಯ. ಅತ್ಯಂತ ಬೆಲೆ ಬಾಳುವ ಮರಗಳೂ ಎಂದಿಗೂ ಅಲ್ಪಕಾಲದಲ್ಲಿ ಬೆಳೆಯುವುದಿಲ್ಲ. ಪ್ರೀತಿಯಲ್ಲಿ ಗೊಂದಲ ನಿವಾರಿಸಿಕೊಂಡು ಸಂಬಂಧ ಮೃದುಗೊಳ್ಳುತ್ತದೆ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಿ.

ಸಿಂಹ ರಾಶಿ:

ಹೂಡಿಕೆ ಲಾಭದ ಸೂಚನೆ ನೀಡಲಿದ್ದು ಕೆಲಸದಲ್ಲಿ ಸುಪ್ತವಾಗಿ ಸ್ಪರ್ಧೆ ಇರಬಹುದು. ದೇಹದ ಒಳಗಡೆ ಸ್ವಲ್ಪ ಬಿಸಿ ಹೆಚ್ಚಾಗಿ ಆರೋಗ್ಯದ ತೊಂದರೆ. ಇಂದು ನಿಮಗೆ ಸಕಾಲಕ್ಕೆ ಸಿಗುವ ಸಹಾಯದಿಂದ ಸಂತೋಷ. ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಸಾಮಾಜಿಕ ಗೌರವದಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರುವುದು. ಪ್ರೀತಿಯಲ್ಲಿ ಆಳವಾದ ಆತ್ಮೀಯತೆ ಹೆಚ್ಚಿ ಸಂಬಂಧ ಗಾಢವಾಗುತ್ತದೆ. ಭೂಮಿಯ ಮೇಲೆ ಹೂಡಿಕೆ ಮಾಡುವುದು ನಿಮಗೆ ಸೂಕ್ತ ಎನಿಸಬಹುದು. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ:

ಹಣ ಲಾಭದ ಸೂಚನೆ ಇದ್ದು ಕೆಲಸದಲ್ಲಿ ನಿಮ್ಮ ಯೋಜನೆ ಯಶಸ್ಸು ತರುತ್ತವೆ. ನಿಮ್ಮ ಹಸ್ತಕ್ಷೇಪವು ಇತರರಿಗೆ ಕಷ್ಟವಾಗದು.‌ ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶಪ್ರಯಾಣದಿಂದ ಖುಷಿಯು ಇರಲಿದೆ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವರು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ. ಆರೋಗ್ಯ ಹಗುರವಾಗಿದ್ದು ಪ್ರೀತಿಯಲ್ಲಿ ಹೊಸ ಮೃದುತನದಿಂದ ಸಂಬಂಧ ಸಮತೋಲನವಾಗುತ್ತದೆ. ಮನೆಯಲ್ಲಿ ನಡೆಯುವ ವಿವಾಹದ ಮಾತುಕತೆಗಳಿಂದ ನಿಮಗೆ ಖುಷಿಯಾಗುವುದು. ಖ್ಯಾತಿಯನ್ನು ಪಡೆಯುವ ಆಸೆಯಾಗುವುದು.

ತುಲಾ ರಾಶಿ:

ಹೂಡಿಕೆಯಲ್ಲಿ ಜಾಗರೂಕತೆ ಅಗತ್ಯವಾಗಿರುವ ದಿನ. ಆರೋಗ್ಯದಲ್ಲಿ ಶ್ವಾಸದ ತೊಂದರೆ ಕಾಣಬಹುದು. ದುಷ್ಟರ ಜೊತೆಗೂ ರಾಜಿ ಮಾಡಿಕೊಳ್ಳುವ ಸನ್ನಿವೇಶ.‌ ಇಲ್ಲವಾದರೆ ನಿಮಗೆ ನೆಮ್ಮದಿ ಇರದು. ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ನಿಮಗೆ ಇಂದು ಧೈರ್ಯದ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗುವುದು. ನೇರವಾದ ಮಾತಿನಿಂದ ನಿಮಗೇ ನೋವಾಗುವುದು. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರದು. ಪ್ರೀತಿಯಲ್ಲಿ ಸಂಗಾತಿಯ ಮನಸ್ಸು ಅಸ್ಥಿರವಾಗಿ ಸಂಬಂಧದಲ್ಲಿ ಅಹಿತವನ್ನು ತರಬಹುದು. ಅಚಾತುರ್ಯವು ನಿಮ್ಮಿಂದ ಆಗಬಹುದು. ವೃತ್ತಿಯಲ್ಲಿ ನಿಮಗೆ ಯಾರಿಂದಲಾದರೂ ಅನನುಕೂಲತೆಯು ಸೃಷ್ಟಿಯಾಗಬಹುದು.

ವೃಶ್ಚಿಕ ರಾಶಿ:

ಆರೋಗ್ಯ ಬಲವಾಗಿ ನಿಂತು ಪ್ರೀತಿಯಲ್ಲಿ ಸಂತೋಷದ ಕ್ಷಣಗಳು ಹೆಚ್ಚುತ್ತವೆ. ಸಂಬಂಧ ಗಟ್ಟಿಯಾಗುತ್ತದೆ.
ಇಂದು ಖರ್ಚು ಮಾಡುವ ಮೊದಲು ಏನು ಲಾಭವಿದೆ ಎಂಬ ಲೆಕ್ಕಾಚಾರದಲ್ಲಿ ಇರುವಿರಿ. ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಭವಿಷ್ಯದ ಜೀವನದ ಬಗ್ಗೆ ಭಯವು ಇರುವುದು. ಹಣದ ಹರಿವು ಸುಧಾರಿಸಿ ಕೆಲಸದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಒಪ್ಪಿಗೆ ಪಡೆಯುತ್ತವೆ. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು. ಪರಿಚಿತರ ಮಾತು ನಿಮ್ಮ ಮನಸ್ಸಿಗೆ ನಾಟುವುದು. ಕಳೆದುಹೋದ ಸಂಬಂಧವನ್ನು ಮತ್ತೆ ಸರಿ ಮಾಡಿಕೊಳ್ಳುವಿರಿ.

ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಧನು ರಾಶಿ:

ಪ್ರೀತಿಯಲ್ಲಿ ಭಾವನಾತ್ಮಕ ಒತ್ತಡ ಹೆಚ್ಚಿ ಸಂಬಂಧದಲ್ಲಿ ಅಸಮಾಧಾನ ಉಂಟಾಗಬಹುದು. ಇಂದು ನೀವು ಭಾವಪರವಶರಾಗುವ ಸಾಧ್ಯತೆ ಇದೆ. ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಡೆಯುವುದು. ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಬಂಗಾರದ ಬಗ್ಗೆ ವ್ಯಾಮೋಹ ಹೆಚ್ಚಾಗಲಿದೆ. ಸಂಗಾತಿಯನ್ನು ಹಣಕ್ಕಾಗಿ ಪೀಡಿಸುವಿರಿ. ಪ್ರೀತಿ ಪಾತ್ರರನ್ನು ನೀವು ದೂರಮಾಡುವಿರಿ. ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯು ಮುಖ್ಯವಾದೀತು. ಹಣ ಹರಿವು ನಿಧಾನವಾಗಿದ್ದು ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗುವ ದಿನ. ಆರೋಗ್ಯ ದಣಿವನ್ನು ತರಬಹುದು. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಎಲ್ಲ ಸನ್ನಿವೇಶದಲ್ಲಿಯೂ ನಿಮ್ಮ ವರ್ತನೆಯನ್ನು ಸರಿಯಾಗಿ ಇರಲಿ. ಸಂಗಾತಿಯ ಮೇಲೆ ನಿಮಗೆ ಸಿಟ್ಟು ಬರಲಿದೆ. ದೂರದ ಬಂಧುಗಳ ಸಮಾಗಮವಾಗಬಹುದು.

ಮಕರ ರಾಶಿ:

ಹಣದ ಖರ್ಚು ಸ್ವಲ್ಪ ಹೆಚ್ಚಾದರೂ ಕೆಲಸದಲ್ಲಿ ಸ್ಪಷ್ಟತೆ ದೊರೆತು ಪ್ರಗತಿ ಕಾಣುತ್ತದೆ. ಇಂದು ನಿಮ್ಮ‌ ಬಗ್ಗೆ ಬರುವ ಅಪವಾದವನ್ನು ನೀವು ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ತೃಪ್ತಿ ಇರದು. ನಿಮ್ಮ ಇಂದಿನ ಕೆಲಸವು ಯಶಸ್ಸಿನ ಶಿಖರವನ್ನು ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ಸಂಗಾತಿಯ ವಿಚಾರದಲ್ಲಿ ಸಂಪೂರ್ಣ ಖುಷಿ ಇರುವುದು. ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ತೋರಿಸುವುದಿಲ್ಲ. ಅನ್ಯರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಅಪರಿಚಿತ ಕರೆಗಳಿಗೆ ನೀವು ಸ್ಪಂದಿಸಲಾರಿರಿ. ಆಹಾರದ ಉದ್ಯಮಕ್ಕೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಮಾತಗಳನ್ನು‌ ಇಂದು ಕಡಿಮೆ ಆಡಲಿದ್ದೀರಿ. ಆರೋಗ್ಯ ಮಧ್ಯಮವಾಗಿದ್ದು ಪ್ರೀತಿಯಲ್ಲಿ ಗೊಂದಲ ನಿವಾರಣೆ ಕಂಡು ಸಂಬಂಧ ಸುಧಾರಿಸುತ್ತದೆ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು.

ಕುಂಭ ರಾಶಿ:

ಇಂದು ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ಮೆಚ್ಚುಗೆ ಸಿಗುತ್ತದೆ. ಪ್ರೀತಿಯಲ್ಲಿ ಹಿತಭಾವನೆ ಹೆಚ್ಚಿ ಸಂಬಂಧ ಮೃದುವಾಗುತ್ತದೆ. ನೀವು ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ಅಪ್ತರ ಮೇಲಿನ ನಂಬಿಕೆಯು ನಷ್ಟವಾಗುವುದು. ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕೋಪಗೊಳ್ಳಬಹುದು. ನಿಮ್ಮ ಮಾತಿನಿಂದ ಸಮಾಧಾನವು ಬರುವುದು. ದೂರದ ಮಕ್ಕಳನ್ನು ನೋಡುವ ಆಸೆ ಆಗಲಿದೆ. ಉದ್ಯಮದ ಕಾರಣ ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನ್ನಿ್ಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ಹಣ ಸ್ಥಿರವಾಗಿದ್ದು ಆರೋಗ್ಯ ಉತ್ತಮವಾಗಿ ಸಹಕರಿಸುವ ದಿನ. ನಿಮ್ಮ ಮಾತಿಗೆ ಬೆಂಬಲವು ಸಿಗುವುದು. ನಿಮ್ಮ ಸೌಂದರ್ಯವು ಇತರರಿಗೆ ಇಷ್ಟವಾಗದು. ಹಲವು ಮಾನಸಿಕ ತೊಡಕುಗಳಿಂದ ನೀವು ಹೊರಬರುವಿರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ.

ಮೀನ ರಾಶಿ:

ಹಣದಲ್ಲಿ ಸಣ್ಣ ಅಸ್ಥಿರತೆ ಮತ್ತು ಆರೋಗ್ಯದಲ್ಲಿ ದಣಿವು ಕಂಡರೂ ಕೆಲಸ ಸ್ವಲ್ಪ ಗತಿ ಪಡೆಯುತ್ತದೆ. ಪ್ರೀತಿಯಲ್ಲಿ ಕೊಟ್ಟ ಹಳೆಯ ಮಾತಿನಿಂದ ಒತ್ತಡ ಬೀಳಬಹುದು. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಮಕ್ಕಳ ಮದುವೆಯ ಚಿಂತೆಯೂ ಒಮ್ಮಿಂದೊಮ್ಮೆಲೆ ಬರಬಹುದು. ನಿಮ್ಮ ಮಾತಿಗೆ ಕುಟುಂಬವು ಸಮ್ಮತಿಸಬಹುದು. ಔದಾರ್ಯವು ಅಧಿಕವಾಗಿ ಬೇಡ. ಆರ್ಥಿಕವಾಗಿ ಬಲಗೊಳ್ಳಲು ನೀವು ದೈವಕ್ಕೆ ಶರಣಾಗುವಿರಿ. ಇಂದು ಏಕಾಗ್ರತೆಯಿಂದ ಕಾರ್ಯವನ್ನು ಮಾಡಲು ಕಷ್ಟವಾದೀತು. ಆಗಬೇಕಾದ ಕಾರ್ಯಕ್ಕೆ ಇಂದಿನ ಸುತ್ತಾಟವು ವ್ಯರ್ಥವಾದೀತು. ಸಂಬಂಧದಲ್ಲಿ ಅಸಮಾಧಾನ ಕಂಡರೂ ನಡುವೆ ಚಿಕ್ಕ ವಿವಾದ ಸಂಭವಿಸಿದರೂ ಸುಖಾಂತ್ಯವಾಗಲಿದೆ. ಗೃಹನಿರ್ಮಾಣದ ಕಾರ್ಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು.

28 ನವೆಂಬರ್​ 2025ರ ಶುಕ್ರವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಧ್ರುವ, ಕರಣ : ಬವ, ಸೂರ್ಯೋದಯ – 06 – 25 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:42 – 12:08, ಯಮಗಂಡ ಕಾಲ 14:59 – 16:24, ಗುಳಿಕ ಕಾಲ 07:51 – 09:16,

-ಲೋಹಿತ ಹೆಬ್ಬಾರ್-8762924271 (what’s app only)

Published On - 12:15 am, Fri, 28 November 25