ಮಿತ್ರರಿಂದ ಹೊಸ ಯೋಜನೆ ಬಗ್ಗೆ ಮಾಹಿತಿ ಸಿಗಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ಸಪ್ತಮೀ ತಿಥಿ ಗುರುವಾರ ಮಕ್ಕಳಿಗೆ ಸಮಯಾಭಾವ, ಸ್ಪರ್ಧಾತ್ಮಕತೆಗೆ ಗಮನ, ಸಮನ್ವಯದ ಕೊರತೆ, ಆತ್ಮಸ್ಥೈರ್ಯಕ್ಕೆ ಜಯ ಇವು ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಮಿತ್ರರಿಂದ ಹೊಸ ಯೋಜನೆ ಬಗ್ಗೆ ಮಾಹಿತಿ ಸಿಗಬಹುದು
ಜ್ಯೋತಿಷ್ಯ
Edited By:

Updated on: Jul 17, 2025 | 1:37 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಗ್ರೀಷ್ಮ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುನರ್ವಸು, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಅತಿಗಂಡ, ಕರಣ: ಭದ್ರ, ಸೂರ್ಯೋದಯ – 06 : 12 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:48 – 17:26, ಯಮಘಂಡ ಕಾಲ 09:17 – 10:54, ಗುಳಿಕ ಕಾಲ 12:32 – 14:10

ತುಲಾ ರಾಶಿ: ಸಾಂಸಾರಿಕ ಬದುಕಿನಲ್ಲಿ ಇಂದು ಸಣ್ಣಪುಟ್ಟ ಕಲಹಗಳಿದ್ದರೂ ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರದು. ಮರ್ಯಾದಿಗೆ ಅಂಜಿ ಮಾಡಬೇಕಾದ ಕೆಲಸಗಳನ್ನು ಮುಂದೂಡುವಿರಿ. ವೃತ್ತಿಪರ ಜೀವನದಲ್ಲಿ ಆತ್ಮವಿಮರ್ಶೆಗೆ ಅವಕಾಶ ಇಟ್ಟುಕೊಳ್ಳಿ. ಯಾವುದೇ ಸಮಸ್ಯೆಗೆ ಸಂಗಾತಿಯೊಂದಿಗೆ ಚರ್ಚೆ ಮಾಡುವುದು ಉತ್ತಮ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸ್ವಲ್ಪ ಬಳಲಿಕೆ ಸಾಧ್ಯ. ಹಿಂದೆ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವು ಸಿಗಲಿದೆ. ನೂತನ ಸ್ಥಳವನ್ನು ಖರೀದಿಸಲಿದ್ದೀರಿ. ಹೊಗಳಿಕೆಯಿಂದ ನಿಮ್ಮ ಬಳಿ ಕಾರ್ಯವನ್ನು ಮಾಡಿಸಿಕೊಳ್ಳುವರು. ಹಿತಶತ್ರುಗಳ ಬಗ್ಗೆ ತಿಳಿದಿರುವುದು ಒಳ್ಳೆಯದು. ಅವರ ಜೊತೆ ಹೆಚ್ಚಿನ ಚರ್ಚೆಯನ್ನು ಮಾಡಬೇಡಿ. ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ನಿಮ್ಮದಾದ ಸ್ವಂತ ಬಳಗವನ್ನು ತಯಾರು ಮಾಡಿಕೊಳ್ಳುವಿರಿ. ಇಂದು ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಯಾವಾಗಲೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ.

ವೃಶ್ಚಿಕ ರಾಶಿ: ಎಷ್ಟೇ ಆಪ್ತರಾದರೂ ಸಹಕಾರವನ್ನು ಕೇಳುವಾಗ ಹಿಂದೇಟು ಹಾಕುವಿರಿ. ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತ್ವದಿಂದ ಇರಬೇಕಾಗುತ್ತದೆ. ಆತ್ಮವಿಶ್ವಾಸ ಎಲ್ಲ ಕೆಲಸಕ್ಕೆ ನೆರವಾಗಲಿದೆ. ಹೊಸ ಯೋಜನೆಯ ಹುಡುಕಾಟದಲ್ಲಿ ಇರುವಿರಿ. ಸರ್ಕಾರಿ ಕೆಲಸಗಳಿಗೆ ಹೊಂದಿಕೆಯಾಗುವ ದಿನ. ಹಣಕಾಸಿನ ಸ್ಥಿತಿ ಚಿಗುರುತ್ತಾ ಹೋಗುತ್ತದೆ. ಸಂಬಂಧಿಕರಿಂದ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಒಳ್ಳೆಯ ಹೆಸರು ಪಡೆಯುವಿರಿ. ನಿಮ್ಮ ಅಹಂಕಾರವೇ ನಿಮಗೆ ಪೆಟ್ಟುಕೊಡಬಹುದು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುನ್ನಡೆಯಿರಿ. ಉತ್ತಮ ಆಲೋಚನೆಗಳು ನಿಮ್ಮನ್ನು ಕೈ ಹಿಡಿದು ನಡೆಸುವುವು. ಯಾರನ್ನೋ ಸಂಗಾತಿಯನ್ನಾಗಿ ಒಪ್ಪಿಕೊಳ್ಳಲು ಇಷ್ಟವಾಗದು. ಪ್ರಯಾಣವನ್ನು ಅನಿವಾರ್ಯವಾದರೆ ಮಾಡಿ. ಆಲಸ್ಯಕ್ಕೆ ನೀವೆರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿ. ಕೆಲಸಗಳನ್ನು ಅದು ಕೆಡಿಸೀತು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ನಾಟಕೀಯತೆಯಿಂದ ನೀವು ಹೊರಬಂದರೆ ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು.

ಧನು ರಾಶಿ: ಇಂದು ನಿಮಗೆ ಹಳೆಯ ಘಟನೆಗಳು ಕಾಡಬಹುದು. ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸಿ ನಿಮಗೆ ಸಿಕ್ಕ ಯಶಸ್ಸನ್ನು ಅನುಭವಿಸಿ. ಹತ್ತಾರು ಅವಕಾಶಗಳು ತೆರೆದಿದ್ದರೂ ಯಾವುದೂ ನಿಮಗೆ ಸೂಕ್ತವಾಗಿ ಇರಲಾರದು. ಸಹೋದ್ಯೋಗಿಗಳ ಜೊತೆ ಸಮನ್ವಯ ಅಗತ್ಯವಾಗಿ ಬೇಕು. ವ್ಯಾಪಾರ ಲಾಭದಲ್ಲಿ ಏರುಪೇರು ಕಂಡುಬರಬಹುದು. ಆತ್ಮಸ್ಥೆರ್ಯ ಕಾಪಾಡಿಕೊಳ್ಳಿ. ಕೆಲಸದ ಒತ್ತಡ ಜಾಸ್ತಿಯಾಗಬಹುದು. ಕುಟುಂಬದಲ್ಲಿ ಹಿರಿಯರ ಮಾತಿಗೆ ಕಿವಿಗೊಡಿ. ಹಣದ ನಿರ್ವಹಣೆ ಸಾವಧಾನದಿಂದ ಮಾಡಿ. ನೀವು ಸರಿಯಾಗಿ ಇದ್ದರೂ ಬೇರೆಯವರಿಗೆ ಸರಿ ಇಲ್ಲದಂತೆ ಕಾಣಿಸುವುದು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲುವಿರಿ. ಉದ್ವೇಗವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ಕೆಲಸಗಳು ಅಪೂರ್ಣವಾಗಲಿವೆ. ಕಳೆದುದರ ಬಗ್ಗೆ ಚಿಂತೆ ಬೇಡ. ಎಲ್ಲಿಯೂ ವ್ಯಕ್ತಿಗತ ಅಭಿಪ್ರಾಯವನ್ನು ನೀವು ಪ್ರಕಟಿಸುವುದು ಬೇಡ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು.‌

ಮಕರ ರಾಶಿ: ನಿಮ್ಮ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲರೂ ಸೇರಿ ಅಂತಿಮ‌ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ಎಲ್ಲದಕ್ಕೂ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುವರು. ಮಿತ್ರರಿಂದ ಹೊಸ ಯೋಜನೆ ಬಗ್ಗೆ ಮಾಹಿತಿ ಸಿಗಬಹುದು. ಹಳೆಯ ಸಾಲ ತೀರಿಸಲು ಅವಕಾಶ ಇರುತ್ತದೆ. ವ್ಯಾಪಾರಿಗಳಿಗೆ ಒಳ್ಳೆಯ ಸಮಯ, ಲಾಭ ಇದೆ. ಮನಸ್ಸಿನಲ್ಲಿ ಸಂತೋಷ ಇರುತ್ತದೆ. ಕುಟುಂಬದಲ್ಲಿ ಮಕ್ಕಳಿಂದ ಖುಷಿ ಇರುತ್ತದೆ. ನಿಮ್ಮವರ ಮೇಲೆ ನಂಬಿಕೆ ಇರಲಿ. ಬಂದಿದ್ದನ್ನು ಸ್ವೀಕರಿಸುವ ಸ್ವಭಾವದಿಂದ ಹೆಚ್ಚು ಸುಖವಾಗಿ ಇರಬಹುದು. ಭೂಮಿಯ ವ್ಯವಹಾರವು ತಕ್ಕ ಮಟ್ಟಿಗೆ ಲಾಭವನ್ನು ನೀಡುತ್ತದೆ, ನಿರೀಕ್ಷಿಸಿದಷ್ಟು ಅಲ್ಲ. ವೃತ್ತಿಯಲ್ಲಿ ನಿಮ್ಮ ಮಾತನ್ನು ಕೇಳಿಸುವುದು ಕಷ್ಡವಾಗುವುದು. ಆದ್ದರಿಂದ ಮಾತನ್ನು ಕಡಿಮೆ ಮಾಡಿ, ಕೆಲಸದ ಕಡೆ ಗಮನವಿರಲಿ. ನೂತನ ವಸ್ತುಗಳನ್ನು ಖರೀದಿಸುವಿರಿ. ಸಂಗಾತಿಯ ನೋವಿನಲ್ಲಿ ಭಾಗಿಯಾಗಲಾಗದು. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ‌ ಕೊರತೆ ಆಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ.

ಕುಂಭ ರಾಶಿ: ಇಂದು ನಿಮ್ಮ ಮನಸ್ಸು ಅನೇಕರು ಕೊಡುವ ಸಲಹೆಗಳ ಕಾರಣ ಚಂಚಲವಾಗಿರಲಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಮನೆ ಖರೀದಿ ವಿಚಾರವು ಕುಟುಂಬದಲ್ಲಿ ಚರ್ಚೆಗೆ ಬರುವುದು. ಆರೋಗ್ಯದಲ್ಲಿ ತಲೆನೋವಿನ ಮುನ್ಸೂಚನೆ ಕಾಣಿಸುವುದು. ಬಂಧುಗಳೊಂದಿಗೆ ಗಂಭೀರ ಮಾತುಕತೆ ನಡೆಯಬಹುದು. ಆದಾಯದ ಜೊತೆಗೆ ಖರ್ಚು ಏರಿಕೆಯಾಗುವ ಸಾಧ್ಯತೆ. ಸ್ನೇಹಿತರ ಜೊತೆಗಿನ ಅನುಬಂಧವು ಸ್ವಲ್ಪ ಹದಗೆಡಬಹುದು. ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳಬಹುದು. ಸುತ್ತಾಟಗಳು ನಿಮಗೆ ಆಯಾಸವನ್ನು ಉಂಟುಮಾಡುವುವು.‌ ಅಂದುಕೊಂಡಷ್ಟು ಕೆಲಸವಾಗಿದ್ದರೂ ಆಗಿರುವಷ್ಟರಲ್ಲಿ ಖುಷಿಯಿರಲಿದೆ. ಜಬಾಬ್ದಾರಿಯಲ್ಲಿ ಸ್ವಲ್ಪ ಹಿನ್ನಡೆಯಾದೀತು. ಎಲ್ಲ ಸಂದರ್ಭವನ್ನೂ ಒಂದೇ ರೀತಿಯಲ್ಲಿ ನೋಡಲಾಗದು. ಸಂಗಾತಿಯ ಜೊತೆ ಕುಳಿತು ದುಃಖದಿಂದ ಸಮಾಧಾನ ಮಾಡುವಿರಿ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದಲೂ ದೂರವಿರಬೇಕು.

ಮೀನ ರಾಶಿ: ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಧನದ ಸಹಕಾರ ಲಭ್ಯ. ನಿಮ್ಮ ಪ್ರಯತ್ನಕ್ಕೆ ಅದೃಷ್ಟವೂ ಜೊತೆಯಾಗುವ ಸಂಭವವಿದೆ. ಅಲ್ಪ ಪ್ರಯತ್ನದಿಂದ ಇಂದು ಕೆಲಸವನ್ನು ಸಾಧಿಸಿಕೊಳ್ಳಬಹುದು. ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೂ ಇನ್ನೊಬ್ಬರು ಅದನ್ನು ಬೇರೇ ರೀತಿಯಲ್ಲಿ ಅರ್ಥೈಸುವರು. ಗೆಳೆಯರು ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುಬರು. ಕುಟುಂಬದಲ್ಲಿ ಶಾಂತಿ ಸಂಚಾರವಾಗಲಿದೆ. ಹಣದ ಲೆಕ್ಕಪತ್ರಗಳಲ್ಲಿ ಜಾಗರೂಕರಾಗಿರಿ. ಹಳೆಯ ಕಷ್ಟಗಳಿಗೆ ಪರಿಹಾರ ಸಿಗಲಿದೆ. ಸಂಬಂಧಿಕರಿಂದ ಒಳ್ಳೆಯ ಸುದ್ದಿ ಬರಬಹುದು. ಸಾಮೂಹಿಕ ಕಾರ್ಯದ ನೇತೃತ್ವ ವಹಿಸುವಿರಿ. ಎಲ್ಲರ ಜೊತೆ ಸಂತೋಷದಿಂದ ಮಾಡುವುದು ಒಳ್ಳೆಯದು. ಸಲುಗಿಯನ್ನು ಹೆಚ್ಚು ಮಕ್ಕಳ ವಿಚಾರದಲ್ಲಿ ಕೊಡುವುದು ಬೇಡ. ಗೃಹದ ನಿರ್ವಹಣೆಗೆ ಅಧಿಕ ಖರ್ಚು ಬರಬಹುದು. ಇದು ಅನಿವಾರ್ಯವಾದುದು ಆಗಿದೆ. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಮಾಡುವ ಸಾಹಸ ಬೇಡ.