Harsha Yoga: ಹರ್ಷಯೋಗ ಎಂದರೇನು? ಇದರಿಂದ ಯಾರಿಗೆ ಹರ್ಷ?
ಹರ್ಷ ಯೋಗವು ಜ್ಯೋತಿಷ್ಯದಲ್ಲಿ ಒಂದು ಶುಭ ಯೋಗವಾಗಿದ್ದು, ಆರನೇ ರಾಶಿಯಲ್ಲಿ ಕುಜ, ಶನಿ, ರವಿಗಳ ಸ್ಥಾನದಿಂದ ಉಂಟಾಗುತ್ತದೆ. ಇದು ಆರೋಗ್ಯ, ಸಂಪತ್ತು, ಸಂತಾನ, ಮತ್ತು ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಆದರೆ, ಪಾಪಗ್ರಹಗಳ ಪ್ರಭಾವದಿಂದ ಈ ಯೋಗದ ಪರಿಣಾಮ ಕಡಿಮೆಯಾಗಬಹುದು. ಮೇಷ, ವೃಷಭ, ಮಿಥುನ ಮುಂತಾದ ರಾಶಿಗಳಿಗೆ ಈ ಯೋಗದ ಪ್ರಭಾವ ಅನುಭವಕ್ಕೆ ಬರುತ್ತದೆ.

ಖಗೋಳದಲ್ಲಿ ನವಗ್ರಹಗಳ ಕ್ರಮಬದ್ಧವಾದ ಚಲನೆಯಿಂದ ಕೆಲವು ಯೋಗಗಳು ಸಂಭವಿಸುತ್ತವೆ. ಆ ಯೋಗಗಳು ಜನ್ಮಕಾಲದಲ್ಲಿಯೂ ತೋರುವುದು ಅಥವಾ ವರ್ತಮಾನ ಕಾಲದಲ್ಲಿಯೂ ಅದು ಆಗುವುದು. ಹರ್ಷ ಯೋಗ ಕುಂಡಲಿಯಲ್ಲಿ ಉಂಟಾದಾಗ ಅನೇಕ ಪರಿಣಾಮಗಳು ಉಂಟಾಗಲಿವೆ. ಈ ಯೋಗ ಹೇಗಾಗುತ್ತದೆ, ಏನಾಗುತ್ತದೆ ಎನ್ನುವುದನ್ನು ನೋಡೋಣ.
ಆರನೇ ರಾಶಿಯಲ್ಲಿ ಕುಜ, ಶನಿ, ರವಿ ಇದ್ದು, ಈ ಮೂರೂ ಗ್ರಹಗಳು ಯಾವುದಾದರೂ ಒಂದು ನೋಡಿದರೆ ಹರ್ಷ ಯೋಗ. ಆರನೇ ರಾಶಿಯ ಅಧಿಪತಿ ತೃತೀಯಾ, ಅಷ್ಟಮ, ದ್ವಾದಶ ಮೊದಲಾದ ದುಃಸ್ಥಾನದಲ್ಲಿ ಇದ್ದರೆ ಈ ಯೋಗ ಸಂಭವಿಸುವುದು.
ಸುಖಭೋಗಭಾಗ್ಯ:
ಈ ಯೋಗದಲ್ಲಿ ಅನೇಕ ರೀತಿ ಸುಖಭೋಗಗಳು ನಿಮ್ಮದಾಗಲಿದೆ. ಆರೋಗ್ಯ ಸರಿಯಾಗಲಿದೆ. ಶತ್ರುಗಳ ಕಾಟವೂ ಕಡಿಮೆಯಾಗುವುದು. ಯಾವುದೇ ಪೀಡೆ ಇಲ್ಲವಾಗಿದ್ದು ಸುಖದಿಂದ ಕಳೆಯುವರು. ಕೆಟ್ಟಸ್ಥಾನವಾದರೂ ಒಳ್ಳೆಯ ಫಲವನ್ನೇ ನೀಡುವರು.
ದೃಢಗಾತ್ರ:
ಈ ಯೋಗದವರ ಶರೀರ ದೃಢವಾಗಿರುವುದು. ಹೊರಗಿನಿಂದ ದಷ್ಟಪುಷ್ಟವೂ ರೋಗವೂ ದೇಹದೊಳಗೆ ಬಾಧಿಸದೇ ಸ್ತಸ್ಥವಾಗಿರುವರು.
ಪಾಪಭೀತಿ:
ಆರೆನೇ ಸ್ಥಾನದಲ್ಲಿ ಪಾಪ ಗ್ರಹರಿದ್ದರೆ ಪಾಪ ಕಾರ್ಯಕ್ಕೆ ಭೀತಿಯುಂಟಾಗಲಿದೆ. ಪಾಪಾಸ್ಥಾನದಲ್ಲಿ ಪಾಪಗ್ರಹರಿದ್ದರೆ, ಪಾಪದ ಕಾರ್ಯಕ್ಕೆ ಅವಕಾಶ ಕೊಡಲಾರದು.
ಜನವಲ್ಲಭ:
ಕೀರ್ತಿವಂತರಾಗಿದ್ದು ಎಲ್ಲ ಜನರಿಗೂ ಪ್ರಿಯರಾಗಿ, ಗೌರವಕ್ಕೂ ಪಾತ್ರರಾಗುವರು. ಜನರ ಬಳಕೆಯನ್ನು ಹೆಚ್ಚು ಮಾಡಿಕೊಳ್ಳುವರು. ಜನಸೇವೆಯಲ್ಲಿ ಹೆಚ್ಚು ಕಾಲ ಕಳೆಯುವರು.
ಧನಲಾಭ:
ಧನಲಾಭವಿಲ್ಲದೇ ಇರುವಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಲಾಭವಾಗಲಿದೆ. ಶತ್ರುವಿನಿಂದಲೂ ದೈಹಿಕ ಶ್ರಮದಿಂದಲೂ ಲಾಭವಾಗಲಿದೆ. ಮಿತ್ರರ ಲಾಭವೂ ಆಗಲಿದೆ. ಕೀರ್ತಿಯೂ ಸಿಗುವುದು.
ಸುತಪ್ರಾಪ್ತಿ:
ಈ ಯೋಗದವರು ವಿವಾಹದ ಅನಂತರ ಸಂತಾನವನ್ನು ಬೇಗ ಪಡೆಯುವರು ಮತ್ತು ಹೆಚ್ಚು ಸಂತಾನ ಪ್ರಾಪ್ತಿಯು ಈ ಯೋಗದಿಂದ ಸಿಗುವುದು.
ಯಾರಿಗೆಲ್ಲ ಯೋಗ?
ಸದ್ಯದ ಗ್ರಹಸ್ಥಿತಿತಿಯಲ್ಲಿ ಯಾರಿಗೆ ಈ ಯೋಗವಿದೆ ಎಂದು ನೋಡುವುದಾದರೆ, ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ಧನು, ಮೀನ ಇವಿಷ್ಟೂ ರಾಶಿಗಳಿಗೆ ಇರಲಿದ್ದು, ಪ್ರಮಾಣ ಭೇದದಿಂದ ಪರಿಣಾಮವೂ ವ್ಯತ್ಯಾಸವಾಗಲಿದೆ. ದುಸ್ಥಾನದಲ್ಲಿ ಇದ್ದು, ದುಷ್ಟಗ್ರಹರಿಂದ ನೋಡಲ್ಪಟ್ಟರೆ ಪೂರ್ಣ ಪ್ರಮಾಣದ ಯೋಗವಾಗಲಿದೆ.
ಇದು ಆಗಾಗ ಸಂಭವಿಸುವ ಕಾರಣ ವ್ಯಕ್ತಿಯ ಜೀವನದಲ್ಲಿ ಆಗಬೇಕಾದ ಕೆಲವಾರು ಅಂಶಗಳು ಆಗುವುದು. ಯೋಗ ಬಂದಾಗ ಪಡೆಯಬೇಕಾದುದನ್ನು ಪಡೆಯಬಹುದು ಅಥವಾ ನಿರೀಕ್ಷೆ ಇಲ್ಲದಿದ್ದರೂ ಅದಾಗಿಯೇ ಕೊಟ್ಟು ಹೋಗುತ್ತದೆ. ಅದೃಷ್ಟ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಹೀಗೆ ಕೆಲಸಮಾಡುತ್ತಲೇ ಇರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Wed, 16 July 25








