AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರ ಲಾಭದಲ್ಲಿ ಏರುಪೇರು ಕಂಡುಬರಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ಸಪ್ತಮೀ ತಿಥಿ ಗುರುವಾರ ಮಕ್ಕಳಿಗೆ ಸಮಯಾಭಾವ, ಸ್ಪರ್ಧಾತ್ಮಕತೆಗೆ ಗಮನ, ಸಮನ್ವಯದ ಕೊರತೆ, ಆತ್ಮಸ್ಥೈರ್ಯಕ್ಕೆ ಜಯ ಇವು ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ವ್ಯಾಪಾರ ಲಾಭದಲ್ಲಿ ಏರುಪೇರು ಕಂಡುಬರಬಹುದು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 17, 2025 | 1:51 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಗ್ರೀಷ್ಮ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುನರ್ವಸು, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಅತಿಗಂಡ, ಕರಣ: ಭದ್ರ, ಸೂರ್ಯೋದಯ – 06 : 12 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:48 – 17:26, ಯಮಘಂಡ ಕಾಲ 09:17 – 10:54, ಗುಳಿಕ ಕಾಲ 12:32 – 14:10

ಮೇಷ ರಾಶಿ: ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಇಂದು ನಿಮ್ಮ ಅನೇಕ ದಿನಗಳ ಕಾಲ ಬಾಕಿ ಇರುವ ಕೆಲಸಗಳು ಒಂದೊಂದಾಗಿಯೇ ಸಮಾಪ್ತಿಯಾಗಲಿದೆ‌. ವ್ಯಾಪಾರ ಲಾಭದಲ್ಲಿ ಏರುಪೇರು ಕಂಡುಬರಬಹುದು. ಆತ್ಮಸ್ಥೆರ್ಯ ಕಾಪಾಡಿಕೊಳ್ಳಿ. ಕೆಲಸದ ಒತ್ತಡ ಜಾಸ್ತಿಯಾಗಬಹುದು. ಕುಟುಂಬದಲ್ಲಿ ಹಿರಿಯರ ಮಾತಿಗೆ ಕಿವಿಗೊಡಿ. ಹಣದ ನಿರ್ವಹಣೆ ಸಾವಧಾನದಿಂದ ಮಾಡಿ. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯು ಕೆಲವು ವಿಚಾರದಲ್ಲಿ ಕಾಣಿಸುವುದು. ಮಕ್ಕಳಿಗೆ ಸಮಯ ಕೊಡಲಾಗದಷ್ಟು ಕಾರ್ಯದಲ್ಲಿ ನಿರತರಾಗುವಿರಿ. ಇಂದು ನಿಮ್ಮ ಶ್ರಮ ಹೆಚ್ಚು ಆದಾಯ ಕಡಿಮೆಯಾಗಬಹುದು. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಅಧಿಕಾರದಲ್ಲಿ ಇದ್ದರೂ ವಿನಯತೆಯು ನಿಮ್ಮನ್ನು ಮೇಲಕ್ಕೆ ಏರಿಸುವುದು.

ವೃಷಭ ರಾಶಿ: ನೀವು ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ಇಂದು ನಿಮಗೆ ಅಪರೂಪದ ವ್ಯಕ್ತಿಗಳ ಭೇಟಿಯಾಗಬಹುದು. ಘಟನೆಗಳು ನಿಮ್ಮ ಅಲೋಚನಾ ಕ್ರಮಗಳು ಬದಲಿಸಬಹುದು.‌ ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಒಳ್ಳೆಯದು. ನಿಮ್ಮ ಪರೀಕ್ಷೆಗಳೂ ಆಗಬಹುದು. ಆಪ್ತರೇ ನಿಮ್ಮನ್ನು ಎಲ್ಲರೆದುರು ಟೀಕಿಸಿಯಾರು. ಯಾರನ್ನೂ ಹೆಚ್ಚು ಅವಲಂಬಿಸಿ ಯೋಜನೆಗಳನ್ನು ಘೋಷಿಸಿ. ಯಾರನ್ನೋ ಮೆಚ್ಚಿಸಲು ಕೆಲಸವನ್ನು ಮಾಡಬೇಕಾಗುವುದು. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸರಕಾರವನ್ನು ಕೇಳಿದರೆ ಆಗುವುದಿಲ್ಲ ಎನುವುದು ಬೇಡ. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ.

ಮಿಥುನ ರಾಶಿ: ಇಂದು ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಸರ್ಕಾರಿ ಕೆಲಸಗಳಿಗೆ ದಿನವನ್ನು ಹೊಂದಿಕೆ ಮಾಡಿಕೊಳ್ಳುವಿರಿ. ಸಂಬಂಧಿಕರಿಂದ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಒಳ್ಳೆಯ ಹೆಸರು ಪಡೆಯುವಿರಿ. ಆಯ್ಕೆ‌ ಮಾಡಿಕೊಳ್ಳುವಾಗ ಎಡವುವಿರಿ. ನಿಮ್ಮ ಯೋಗ್ಯತೆಯ ಪರೀಕ್ಷೆಗೆ ಆಗಬಹುದು. ಎಚ್ಚರವಾಗಿರಿ. ಮಕ್ಕಳ ಯಶಸ್ಸನ್ನು ಎಲ್ಲರೂ ಖುಷಿಯಿಂದ ಹಂಚಿಕೊಳ್ಳುವಿರಿ. ಸಹೋದರ ಜೊತೆಗಿನ ಸಂಬಂಧವು ಅತ್ಯಂತ ಆಪ್ತವಾಗಲಿದೆ. ಅತಿಯಾದ ಚಿಂತೆಯಿಂದ ಯಾವ ಪ್ರಯೋಜನವಾಗದು. ಇಂದು ನಿಮಗೆ ಬಂಧನದಿಂದ ಬಿಡುಗಡೆಯಾದ ಅನಿಭವವಾಗಿವುದು. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ನೀವೇ ಮಾಡುವ ಕಾರ್ಯವನ್ನು ಖುದ್ದಾಗಿ ನಿರ್ವಹಿಸಿ.

ಕರ್ಕಾಟಕ ರಾಶಿ: ಇಂದು ಪ್ರತಿ ಸಣ್ಣ ವಿಚಾರಕ್ಕೂ ಕಿರಿಕಿರಿ, ಸಂಗಾತಿಯಿಂದ ತಿಳಿವಳಿಕೆ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ನಿಮ್ಮ ಶ್ರದ್ಧೆ ಮತ್ತು ಪರಿಶ್ರಮ ಫಲ ನೀಡುತ್ತದೆ. ಹಿರಿಯರ ಜತೆಗಿನ ಮಾತುಕತೆಗಳಿಂದ ಉತ್ತಮ ಮಾರ್ಗ. ಹಣದ ಲೆಕ್ಕಪತ್ರಗಳನ್ನು ಸರಿಯಾಗಿ ಇಡಿ. ಸ್ನೇಹಿತರ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಬೆಂಬಲ ಮತ್ತು ನೆಮ್ಮದಿ ಸಿಗುತ್ತದೆ. ಹೊಸದಾಗಿ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದವರಿಗೆ ಕೆಲಸವು ಸಿಗುವುದು ಕಷ್ಟವಾದೀತು. ಸ್ವಂತ ವ್ಯವಹಾರದಲ್ಲಿ ಲಾಭವಿರಲಿದೆ. ಕೆಲವರ ಮಾತು ನಿಮಗೆ ಕಿರಿಕಿರಿಯಾದೀತು. ಹಣವನ್ನು ಖರ್ಚು ಮಾಡಲು ಯೋಚಿಸಿ. ಕಛೇರಿಗೆ ಹೋಗುವಾಗ ಏನಾದರೂ ಆದೀತು. ನಿಮಗೆ ಗೊತ್ತಿರುವ ವಿಚಾರವನ್ನು ಇನ್ನೊಬ್ಬರಿಗೆ ಹಂಚುವಿರಿ. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯನ್ನು ಬಲದಿಂದ ತಂದುಕೊಳ್ಳಬೇಕು. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು.

ಸಿಂಹ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗಲಿದೆ. ಭೂಮಿಯ ವ್ಯವಹಾರದಲ್ಲಿ ಉತ್ತಮ‌ ನಡೆ ಇರಲಿದೆ. ನಡೆಯುವಾಗ ಎಚ್ಚರಿಕೆ ಇರಲಿ. ಭವಿಷ್ಯದ ತೀವ್ರವಾಗಿ ಕಾಡುವುದು. ಇಂದು ಸಂಗಾತಿಯೊಂದಿಗಿನ ಅನುಭವಗಳು ಆನಂದದಾಯಕ. ಮಕ್ಕಳಿಂದ ಖುಷಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ಇರುತ್ತದೆ. ವಿದೇಶದಿಂದ ಒಳ್ಳೆಯ ಸುದ್ದಿ ಬರಬಹುದು. ಆರೋಗ್ಯದಲ್ಲಿ ಶಕ್ತಿಯುಳ್ಳ ಸ್ಥಿತಿ.ಅಪರಿಚಿತರಿಂದ ನಿಮಗೆ ದುಃಖವಾದೀತು. ದುರಭ್ಯಾಸವನ್ನು ಅಂಟಿಸಿಕೊಳ್ಳುವ ವಾತಾವರಣ ನಿಮ್ಮ ಸುತ್ತ‌ ನಿರ್ಮಾಣವಾಗುವುದು. ನಗು ಮುಖವೇ ನಿಮ್ಮ ಹಲವಾರು ಕೆಲಸಗಳನ್ನು ಮಾಡಿಕೊಡುವುದು. ಮಾತನ್ನು ಸ್ಪಷ್ಟವಾಗಿ ಆಡಿ. ಒತ್ತಡವು ಹೆಚ್ಚಿದ್ದೀತು. ಕುಳಿತಲ್ಲೇ ಕುಳಿತರೇ ಆಗದು. ಬಂಧುಗಳ ವಿಚಾರದಲ್ಲಿ ನಿಮಗೆ ನಂಬಿಕೆ ಕಡಿಮೆಯಾಗುವುದು. ನಿಮಗೆ ಸಿಕ್ಕ ಅನಾದರದಿಂದ ಬೇಸರವಾಗಬಹುದು. ಮಕ್ಕಳ ಉದ್ಯಮಕ್ಕೆ ನೀವು ಸಹಾಯ ಮಾಡುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವೂ ಆಗಬಹುದು.

ಕನ್ಯಾ ರಾಶಿ: ಇಂದು ಅಪರಿಚಿತರು ಮಾರಾಟದಲ್ಲಿ ಮೋಸ ಮಾಡುವರು. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ಮನಸ್ಸು ಇಂದು ಅಸ್ಥಿರವಾದರೆ ಧ್ಯಾನದಿಂದ ಶಾಂತಿ ನೆಮ್ಮದಿಯ ಕಡೆಗೆ ಕರೆತನ್ನಿ. ಕೆಲಸದಲ್ಲಿ ವಿಳಂಬ ಉಂಟಾಗಬಹುದು. ನಿರೀಕ್ಷಿಸಿದ ಹಣ ವಿಳಂಬವಾಗಬಹುದು. ಸ್ನೇಹಿತರಿಂದ ಸಹಾಯ ಸಿಗುತ್ತದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಯತ್ನಿಸಬಹುದು. ಕುಟುಂಬಕ್ಕೆ ಸಹಕಾರ ಕೊಡಲಿದ್ದೀರಿ. ಇಂದಿನ ಕೆಲವು ಸಮಯವನ್ನು ವ್ಯರ್ಥವಾಗಿ ಕಳೆಯಬೇಕಾಗುವುದು. ವಿವಾದದ ಹೇಳಿಕೆಗಳಿಂದ ನಿಮಗೆ ತೊಂದರೆಯಾದೀತು. ಮನಸ್ಸಿನಲ್ಲಿ ಅಶಾಂತಿಯು ಇರಲಿದೆ. ಎಂದೋ ಮಾಡಿದ ಹೂಡಿಕೆಯಿಂದ ಸಹಾಯವಾಗಲಿದೆ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತ ಯಾವ ಕಾರ್ಯವನ್ನೂ ಸಫಲ ಮಾಡಲಾಗದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..