ಅಭ್ಯಾಸದ‌ ಕಡೆಕೊಟ್ಟ ಗಮನವು ಉತ್ತಮ ಕೆಲಸ ಸಿಗುವಂತೆ ಮಾಡುತ್ತದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ ಮಂಗಳವಾರ ಸಹಭಾಗಿತ್ವ, ನಿರಾಕರಣ, ವಿವಾಹದ ಚಿಂತೆ, ಬಾರದ ಹಣದ ಚಿಂತೆ ಇದೆಲ್ಲ ಇಂದಿನ ಭವಿಷ್ಯ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಅಭ್ಯಾಸದ‌ ಕಡೆಕೊಟ್ಟ ಗಮನವು ಉತ್ತಮ ಕೆಲಸ ಸಿಗುವಂತೆ ಮಾಡುತ್ತದೆ
ಜ್ಯೋತಿಷ್ಯ
Edited By:

Updated on: Jul 29, 2025 | 1:04 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುಷ್ಯಾ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ : ವರಿಯಾನ್, ಕರಣ: ವಣಿಜ, ಸೂರ್ಯೋದಯ – 06 : 16 am, ಸೂರ್ಯಾಸ್ತ – 07 : 01 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:50 – 17:26 ಗುಳಿಕ ಕಾಲ 09:28 – 11:04 ಯಮಗಂಡ ಕಾಲ 12:39 – 14:15

ನಾಗರ ಪಂಚಮೀ, ನಾಗಪಂಚಮೀ ಎಂದು ಕರೆಯುವ ದಿನ ಇಂದು. ಪಂಚಮೀ ತಿಥಿ ಸರ್ಪದ ಆಧಿಪತ್ಯದ್ದು. ಶ್ರಾವಣ ದೈವಿಕ ಮಾಸ. ವರ್ಷ ಋತುವಿನಲ್ಲಿ ಅನಂತ, ವಾಸುಕಿಗಳೇ ಮೊದಲಾದ ಶ್ರೇಷ್ಠ ನಾಗರನ್ನು ಆರಾಧಿಸಿ, ಅವರ ಅನುಗ್ರಹ ಪಡೆಯುವುದು. ರೋಗಿಗಳೂ ಸಂತಾನಾಪೇಕ್ಷಿಗಳೂ ಸರ್ಪಗಳ ಅನುಗ್ರಹ ಪಡೆಯಬಹುದು.

ಮೇಷ ರಾಶಿ: ಆರೋಗ್ಯ ಸುಧಾರಣೆಗೆ ಮನಸ್ಸು ಮೊದಲು ಗಟ್ಟಿಯಾಗಬೇಕು. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಇಂದು ನಿಮಗೆ ಒಳ್ಳೆಯ ಲಾಭದ ನಿರೀಕ್ಷೆಯನ್ನು ಮಾಡಬಹುದು. ಇಂದು ನಿಮ್ಮ ಅಪೂರ್ಣ ಕಾರ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದು. ಪೂರ್ಣವಾಗವ ತನಕ ಸಮಾಧನಾವೇ ಇರದು. ಹೊಸ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಇದೆ. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನೀವು ಓಡಾಟ‌ಮಾಡಬೇಕಾದೀತು. ಸಂಗಾತಿಗೆ ನಿಮ್ಮ ಅರ್ಥಿಕತೆಯದ್ದೇ ಚಿಂತೆಯಾಗಲಿದೆ. ಹಣವನ್ನೂ ಈ ವಿಚಾರಕ್ಕೆ ಖರ್ಚು ಮಾಡುವಿರಿ. ಸಂತೋಷದಿಂದ ಎಲ್ಲರ ಜೊತೆ ಒಡನಾಡುವಿರಿ. ಸಂಬಂಧಗಳಿಗೆ ಬೆಲೆಯನ್ನು ಕೊಡಬೇಕು ಎಂದು ಅನ್ನಿಸಬಹುದು. ಅಗ್ನಿಯ ಭೀತಿಯು ಕಾಡುವುದು. ಕುಟುಂಬದ ಜೊತೆ ಸಂತೋಷದಲ್ಲಿ ಭಾಗಿಯಾಗುವಿರಿ. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಹಿರಿಯರ ಪ್ರೀತಿಗೆ ಪಾತ್ರರಾಗುವಿರಿ. ನಿಮ್ಮ ಪ್ರಭಾವವನ್ನು ಯಾರಾದರೂ ಬಳಸಿಕೊಳ್ಳಬಹುದು.

ವೃಷಭ ರಾಶಿ: ಅಮೂಲ್ಯ ದಾಖಲೆಗಳು ಕಳೆದುಹೋದ ಅನುಭವವಾಗಲಿದೆ. ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಭವಿಷ್ಯದ ಬಗ್ಗೆ ಒಳ್ಳೆಯ ಯೋಜನೆಯನ್ನು ತಯಾರಿಸುವಿರಿ. ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ. ಮರೆವನ್ನು ದೂರ ಮಾಡಿಕೊಂಡರೆ ಉತ್ತಮ. ಇಂದು ನಿಮಗಾದ ವಿಶ್ವಾಸದ್ರೋಹವು ನಿಮ್ಮನ್ನು ಸಿಟ್ಟಿಗೇಳಿಸೀತು. ನಿಮ್ಮ ಸುಳ್ಳನ್ನು ನೀವೇ ಸತ್ಯ ಮಾಡಬೇಕಾಗಬಹುದು. ಇಂದಿನ ನಿಮ್ಮ ಸಣ್ಣ ಓಡಾಟವೂ ಕಾರ್ಯವನ್ನು ಮಾಡಿಸುವುದು. ಹಳೆಯ ಸ್ನೇಹಿತನು ನಿಮ್ಮನ್ನು ದೂರದ ಪ್ರದೇಶದಲ್ಲಿ ಭೇಟಿಯಾಗಲು ಇಚ್ಛಿಸುವನು. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು.

ಮಿಥುನ ರಾಶಿ: ಧಾರ್ಮಿಕ ಆಚರಣೆಯಲ್ಲಿ ಭಕ್ತಿ ಹೆಚ್ಚು. ಕಾರ್ಯದ ಒತ್ತಡದಿಂದ ಆರೋಗ್ಯವು ಹದ ತಪ್ಪಬಹುದು. ಅಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನೀವು ಇಂದು ಬೆಲೆಬಾಳುವ ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ವಿವಾಹಬಂಧವು ಬೆಸೆಯು ಸೂಚನೆ ಕಾಣಿಸುವುದು. ಇದು ನಿಮ್ಮ ನಿರೀಕ್ಷೆಯನ್ನು ದಾಟಿ ಮುಂದೆ ಹೋಗುವುದು. ನಿಮ್ಮನ್ನು ಹೊಗಳಬೇಕೆಂಬ ಆಸೆ ಇರುವುದು. ಯಾರದೋ ಒತ್ತಾಯಕ್ಕೆ ಮಣಿದು ಅವರ ಜೊತೆ ಪ್ರಯಾಣ ಮಾಡುವಿರಿ. ತಾಯಿಯ ಬಂಧುಗಳ ಜೊತೆ ಇಂದು ಹೆಚ್ಚು ಸಮಯವನ್ನು ಕಳೆಯುವಿರಿ. ಸಹೋದರರ ಸಹಭಾಗಿತ್ವದಲ್ಲಿ ಹೊಸ ಉದ್ಯಮವನ್ನು ಆರಂಭಿಸಬಹುದು. ಸಂಗಾತಿಯನ್ನು ದೂರ ಮಾಡಿಕೊಂಡ ಬೇಸರ ಕಾಡುವುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ಸಿಕ್ಕೇ ಸಿಗುತ್ತದೆ. ಒಳ್ಳೆಯ ಕಾರ್ಯಕ್ಕೆ ಧನನಷ್ಟವಾಗಲಿದೆ. ನಿಮ್ಮ ನಿಶ್ಚಿತ ಬುದ್ಧಿಯಂತೆ ನಿಮ್ಮ‌ ಕೆಲಸಗಳನ್ನು ಮಾಡಿ ಮುಗಿಸುವಿರಿ. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ.

ಕರ್ಕಾಟಕ ರಾಶಿ: ನೀವು ಸರಿಯಾದ ಮಾದರಿ ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸೂಕ್ಷ್ಮ ಮತಿಯಿಂದ ವ್ಯವಹಾರವನ್ನು ಮಾಡಬೇಕಾಗುವುದು. ವಿವೇಚನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ. ಯಾವ ಮಾತನ್ನೂ ನೋವಾಗುವಂತೆ ಆಡಬೇಡಿ. ನಿಮ್ಮ ಜ್ಞಾನದ ಬಗ್ಗೆ ನಿಮಗೇ ಹೆಮ್ಮಯಾಗಬಹುದು. ನಿಮ್ಮ ವಸ್ತುವನ್ನು ಯಾರಿಗಾದರೂ ಕೊಟ್ಟಬಿಡಿ. ಪುಣ್ಯ ಸ್ಥಳಗಳು ನಿಮಗೆ ಸಂತೋಷವನ್ನು ಕೊಡುವುದು. ಮತ್ತೆ ಅದರ ಬಗ್ಗೆ ಚಿಂತೆ ಬೇಡ. ಅವರು ಅಂದುಕೊಂಡಿದ್ದನ್ನು ಸಾಧಿಸಲು ಬಿಡಿ. ಹೃದಯಕ್ಕೆ ನಾಟದ ಮಾತಿನಿಂದ ಪ್ರಯೋಜನವಾಗದು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ಹೂಡಿಕೆಯಲ್ಲಿ ಅಲ್ಪ ಲಾಭ ಸಿಗುವುದು. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಕೆಲಸದ ನಿಮ್ಮಿತ್ತ ನೀವು ಮನೆಯಿಂದ ದೂರ ಹೋಗಬೇಕಾಗುವುದು.

ಸಿಂಹ ರಾಶಿ: ವಿದ್ಯಾರ್ಥಿಗಳು ಉದ್ಯೋಗದ ಚಿಂತೆಯನ್ನು ಮಾಡುವರು. ಅಭ್ಯಾಸದ‌ ಕಡೆಕೊಟ್ಟ ಗಮನವು ಉತ್ತಮ ಕೆಲಸ ಸಿಗುವಂತೆ ಮಾಡುತ್ತದೆ. ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಯಾರಾದರೂ ಅಪಮಾನ ಮಾಡಬಹುದೆಂಬ ಭಯವೂ ಕಾಡುವುದು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪಗಳು ನಿಮಗೆ ಇಂದು ಅಧಿಕವಾಗಬಹುದು. ಎಲ್ಲವೂ ಗೊಂದಲವಾಗಿ ಯಾವದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಲವಿಲನೆ ಒದ್ದಾಡಬಹುದು. ವ್ಯವಹಾರದ ಅಭಿವೃದ್ಧಿಗೆ ಮಾಡಿದ ಪ್ರಯತ್ನಗಳು ಫಲಪ್ರದವಾಗಿಲ್ಲ ಎಂಬ ಕೊರಗು ಮತ್ತೊಂದೆಡೆ ಬಾಧಿಸುವುದು. ಉತ್ಪಾದನೆಯ ಉದ್ಯಮ ವೇಗವಾಗಿ ಸಾಗುವುದು. ವಿರಾಮದ ಸುಖವು ದುಃಖವಾಗಿ ಪರಿವರ್ತನೆ ಆಗಬಹುದು‌ ಎಲ್ಲವೂ ನಿಮ್ಮ ವಿರುದ್ಧವಿದ್ದಂತೆ ಅನ್ನಿಸುವುದು. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕೇಳಿದಷ್ಟೇ ವಿಚಾರಕ್ಕೆ ಉತ್ತರಿಸಿದರೆ ಸಾಕು.

ಕನ್ಯಾ ರಾಶಿ: ಎಲ್ಲರೂ ದೂರಾಗುತ್ತಿರುವುದು ಶುಭ ಲಕ್ಷವಲ್ಲ. ನಿಮ್ಮನ್ನು ನೀವೇ ನೋಡಿಕೊಂಡರೆ ಸೂಕ್ತ‌. ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ನಿಮ್ಮ ಮೇಲಧಿಕಾರಿಗಳ ಜೊತೆ ಚರ್ಚಿಸಿ. ಹಣವನ್ನು ಕೊಟ್ಟಾದರೂ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಕರ್ತವ್ಯಲೋಪವಿಲ್ಲದೇ ಮಾಡಿದ ಕೆಲಸದಿಂದ ನಿಮಗೆ ಈ ಧೈರ್ಯವು ಸಿದ್ಧವಾಗಿದೆ‌. ನೀವು ಇತರರಿಗೆ ಶುಭವನ್ನೇ ಬಯಸುವಿರಿ. ಇಂದು ನಿಮ್ಮ‌ ಕುಟುಂಬದಲ್ಲಿ ಎದ್ದ ವೈಮನಸ್ಯದ ಬಿರುಗಾಳಿಯನ್ನು ಪ್ರಶಾಂತಗೊಳಿಸಲು ಸಮರ್ಥರಾಗುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಸಹಸ್ಥಿಗೆ ಬರಲಿದೆ. ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ನಿರ್ಲಜ್ಜೆಯಿಂದ ಮಾತನಾಡುವಿರಿ. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಹೇಳಿಕೊಳ್ಳುವಷ್ಟು ಸುಲಭವಾಗಿ ಯಾವುದನ್ನೂ ಬದಲಿಸಲಾಗದು.