AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಗುರುವಾರದ ದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಗುರುವಾರದ ದಿನ ಭವಿಷ್ಯ
ಇಂದಿನ ರಾಶಿಭವಿಷ್ಯ
Rakesh Nayak Manchi
|

Updated on:Mar 16, 2023 | 10:34 PM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 16 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ14:12 – 15:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ06:41 – 08:112ರವರೆಗೆ, ಗುಳಿಕ ಕಾಲ ಬೆಳಗ್ಗೆ09:41 – 11:11ರ ವರೆಗೆ.

ಸಿಂಹ: ನಿಮ್ಮ ಸ್ವಭಾವವು ಸಂತೋಷದಿಂದ ಕೂಡಿರುತ್ತದೆ. ನೀವು ಭೇಟಿಯಾಗುವ ಪ್ರತಿಯೊಬ್ಬರೂ ನಿಮ್ಮ ಶಕ್ತಿಯ ಬಗ್ಗೆ ಭಯ ಪಡುತ್ತಾರೆ. ಕೆಲಸದಲ್ಲಿ ನೀವು ಮೇಲುಗೈ ಹೊಂದಿರುವಿರಿ. ನೀವು ಕಾಳಜಿ ವಹಿಸದಿದ್ದರೆ ಈ ಆತ್ಮವಿಶ್ವಾಸವು ಅಹಂಕಾರವಾಗಿ ಬದಲಾಗಬಹುದು. ಇಂದಿನ ಕೆಲಸಗಳು ನಕಾರಾತ್ಮ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೆಲಸದ ವಿಷಯದಲ್ಲಿ ಸ್ವಯಂ ಶಿಸ್ತಿನ ಮೇಲೆ ಕೆಲಸ ಮಾಡಿ. ಇಂದು ಎಲ್ಲವೂ ನಿಮ್ಮ ಪರವಾಗಿರುವುದರಿಂದ ನೀವು ಪ್ರಯತ್ನಿಸಿದರೆ ಸಾಕಷ್ಟು ಲಾಭಕರವಾದುದನ್ನು ಗಳಿಸಲು ಸಾಧ್ಯವಾಗುತ್ತದೆ.

ಕನ್ಯಾ: ಪ್ರೇಮ ಜೀವನವು ನಿರೀಕ್ಷೆಗಳಿಂದ ತುಂಬಿರುತ್ತದೆ. ಇದೇ ಇಂದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಲಿದೆ. ವೃತ್ತಿಜೀವನವು ಅನಿರೀಕ್ಷಿತ ದಿಕ್ಕಿನತ್ತ ಹೊರಳಬಹುದು. ನಿಮ್ಮ ತುಂಬಾ ಉತ್ಸಾಹವು ಹೊಸ ಅವಕಾಶಗಳ ಉಗಮಕ್ಕೆ ಕಾರಣವಾಗಲಿದೆ. ಈ ಹೊಸ ಉದ್ಯಮದಲ್ಲಿ ನಿಮ್ಮ ಪೋಷಕರು ಅಥವಾ ನಿಮ್ಮ ಕುಟುಂಬಗಳ ಬೆಂಬಲ ನಿಮಗೆ ಕಡಿಮೆ ಇರಲಿದೆ. ನೀವು ಊಹಿಸದಷ್ಟು ಯಶಸ್ಸು ನಿಮ್ಮದಾಗಲುದೆ. ನೀವು ಮಾಡುತ್ತಿರುವ ಹೂಡಿಕೆಗಳ ಬಗ್ಗೆ ನಿರಂತರವಾಗಿ ಗಮನವಿಡಿ. ನೀವು ಬಹಳಷ್ಟು ಆತಂಕವನ್ನು ಅನುಭವಿಸಲಿದ್ದೀರಿ.

ತುಲಾ: ಇಂದು ಬಹಳಷ್ಟು ಹೊಸ ಸ್ನೇಹಿತರನ್ನು ಮಾಡಿಳ್ಳುವ ಸಾಧ್ಯತೆ ಇದೆ. ನೀವು ಪ್ರವಾಸಕ್ಕೆ ಹೋಗಲಿದ್ದೀರಿ. ನಿಮ್ಮ ವ್ಯಾಪಾರ, ವ್ಯವಹಾರವು ಎತ್ತರದ ಸ್ಥಿತಿಯನ್ನು ಕಾಣಲಿದಗದೀರಿ. ನೀವು ಈಗ ತೆಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಇಂದು ನಿಮಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವಿರತ್ತದೆ. ಸ್ಪಷ್ಟವಾದ ಯೋಚನೆಗಳು ಇರಲಿದೆ.ಅನುಭವಿಗಳಿಂದ ಸಾಕಷ್ಟು ಸಲಹೆಗಳನ್ನು ಪಡೆಯಯವಿರಿ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚು ಸಮಯವನ್ನು ತೆಗದುಕೊಳ್ಳಿ. ಆತುರರಾಗಬೇಡಿ.

ವೃಶ್ಚಿಕ: ಕೋಪ ಮತ್ತು ಹತಾಶೆಯು ದಿನವಿಡೀ ನೀವು ಅನುಭವಿಸುವ ಭಾವನೆಗಳಾಗಿವೆ. ನಿಮ್ಮರೇ ನಿಮ್ಮ ವಿರುದ್ಧ ಕೆಲಸ ಮಾಡುವುದರಿಂದ ನಿಮಗೆ ಸಂಕಟವಾಗಲಿದೆ. ನಿಮ್ಮ ಪ್ರೇಮಜೀವನ ಮತ್ತು ವೃತ್ತಿಪರಜೀವನ ದುರ್ಮಾರ್ಗವನ್ನು, ಅನೇಕ ತಿರುವನ್ನು ಪಡೆದುಕೊಳ್ಳಬಹುದು. ನೀವು ಹಣಕಾಸಿನ ನಷ್ಟವನ್ನು ನಿವಾರಿಸಲು ಹೆಚ್ಚಿನ ಆದಾಯದ ಕೆಲಸವನ್ನು ಹುಡುಕುವಿರಿ. ಈ ವಿಷಯದಲ್ಲಿ ನಿಮ್ಮ ಪಾಲುದಾರರಿಂದ ನೀವು ತುಂಬಾ ಕಡಿಮೆ ಬೆಂಬಲ ಪಡೆಯುವಿರಿ. ಆರೋಗ್ಯವು ಸ್ವಲ್ಪ ಏರುಪೇರಾಗುತ್ತದೆ.

ಲೇಖನ-ಲೋಹಿತಶರ್ಮಾ ಇಡುವಾಣಿ

Published On - 6:47 am, Thu, 16 March 23