Nithya Bhavishya: ಈ ರಾಶಿಯವರ ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ
ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ :ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ವರಿಯಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 11:11 – 12:41ರ ವರೆಗೆ, ಯಮಘಂಡ ಕಾಲ 03:42 – 05:12ರವರೆಗೆ, ಗುಳಿಕ ಕಾಲ ಬೆಳಗ್ಗೆ08:11 – 09:41ರ ವರೆಗೆ.
ಮೇಷ: ವಿದ್ಯಾರ್ಥಿಗಳಾಗಿದ್ದಾರೆ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ನಿಮ್ಮ ಪ್ರಯತ್ನಕ್ಕೆ ದೃಷ್ಟವು ಜೊತೆಗಿತಲಿದೆ. ನೀವಿಂದು ಅಲ್ಪ ಪ್ರಯತ್ನದಿಂದ ಕೆಲಸವನ್ನು ಸಾಧಿಸಿಕೊಳ್ಳಬಹುದು. ಇಂದು ಬಂದಿರುವ ಕೆಲಸಗಳನ್ನು ಒಂದೊಂದಾಗಿಯೇ ಮುಗಿಸುತ್ತ ಬನ್ನಿ. ಒತ್ತಡದ ಕೆಲಸಗಳನ್ನು ನಿರ್ವಹಿಸಬೇಕಾಗಬಹುದು. ಮೆಚ್ಚುಗೆಯು ನಿಮ್ಮ ಕೆಲಸಕ್ಕೆ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ. ಉದ್ವಿಗ್ನತೆಗೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ. ದಾಂಪತ್ಯದಲ್ಲಿ ಸುಖವಿರಲಿದೆ. ಗುರುರಾಘವೇಂದ್ರ ಸ್ಮರಣೆ ಮಾಡಿ. ಇಂದಿನ ಕಾರ್ಯವು ಶೀಘ್ರವಾಗಿ ಮುಕ್ತಾಯಗೊಳ್ಳುವುದು.
ವೃಷಭ: ಇಂದು ನಿಮಗೆ ಕೆಲವು ಗೊಂದಲಗಳು ಇರಲಿವೆ. ಮನಸ್ಸು ಬಹಳ ಚಂಚಲವಾಗಿರಲಿದೆ. ಅನಗತ್ಯ ಖರ್ಚುಗಳು ಆಗಬಹುದಾಗಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ನಿಮ್ಮ ರಹಸ್ಯವು ಇಂದು ಬಯಲಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಕಲಹವಿದ್ದರೂ ದಿನಾಂತ್ಯದಲ್ಲಿ ಎಲ್ಲವೂ ಮರೆಯಾಗಿ ಸುಂದರವಾಗಿರಲಿದೆ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ಸಹೋದರರ ಜೊತೆ ವಿವಾದಗಳು ಆಗಬಹುದು. ತಾಳ್ಮೆಯಿಂದ ವಾದವನ್ನು ತಣ್ಣಗಾಗಿಸಿಕೊಳ್ಳಿ. ದೂರದ ಪ್ರಯಾಣವು ಸುಖದಾಯಕವಲ್ಲ. ಮಹಾಮೃತ್ಯುಂಜಮಂತ್ರವನ್ನು ಪಠಿಸಿ.
ಮಿಥುನ: ನಿಮ್ಮ ಆಸ್ತಿಯನ್ನು ಮಾರಾಟ ಮಾಡುವ ಮನಸ್ಸು ಮಾಡುವಿರಿ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಲಾಭವಾದೀತು. ನಿಮ್ಮ ವರದತೆಯಿಂದ ನಿಮ್ಮ ಸ್ನೇಹಿತರು ಬೇಸರಗೊಂಡಾರು. ಶರೀರಕ್ಕೆ ಅತಿಯಾಗಿ ಆಯಾಸವಾಗುವ ಕೆಲಸಗಳನ್ನು ಮಾಡಬೇಡಿ, ಅಶಕ್ತತೆಯು ಉಂಟಾಗಬಹುದು. ಕಛೇರಿಯಲ್ಲಿ ಕೆಲಸವು ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ. ಖರ್ಚನ್ನು ಕಡಿಮೆ ಮಾಡಲು ಹೊರಟರೂ ಅನಿವಾರ್ಯವಾಗಿ ಖರತಚಾಗುವುದು. ಹೊಸ ಪ್ರೇಮವು ಅಂಕುರಿಸು ಸಾಧ್ಯತೆ. ಪ್ರೇಮಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ. ಪ್ರಸನ್ನಾಂಜನೇಯನನನ್ನು ಭಜಿಸಿ. ಧೈರ್ಯದಿಂದ ಇಂದಿನ ದಿನವನ್ನು ಎದುರಿಸಿ.
ಕಟಕ: ನೀವಿಂದು ಭಯದ ವಾತಾವರಣದಲ್ಲಿ ಇರುವಿರಿ. ನಿಮ್ಮ ಕೆಲಸವನ್ನು ಬದಿಗಿರಿಸಿ ನಿಮಗೆ ಸಿಕ್ಕ ಕೀರ್ತಿಯನ್ನು ಅನುಭವಿಸಿ. ಹಣದ ವಿಷಯದಲ್ಲಿ ಏರಿಳಿತಗಳು ಆಗಬಹುದು. ನಿಮ್ಮ ಮತ್ತು ಪ್ರೇಮಿಯ ನಡುವೆ ಇಗೋ ಉಂಟಾಗಿ ಘರ್ಷಣೆಯಾಗಲಿದೆ. ನಿಮ್ಮ ಹೆತ್ತವರ ಆಲೋಚನೆಗಳು ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರಪಂಚದಿಂದ ಮರೆ ಮಾಡುವ ಅಗತ್ಯವಿಲ್ಲ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ಮ ಅಧ್ಯಯನದಲ್ಲಿ ನಿಮಗೆ ಯಾವುದೇ ಸಮಸ್ಯೆ ಇದ್ದರೆ ನಿಮ್ಮ ಶಿಕ್ಷಕರೊಂದಿಗೆ ಮಾತನಾಡಿ.
ಸಿಂಹ: ನೀವು ಪ್ರೀತಿಪಾತ್ರರನ್ನು ಹೊಂದಿದ್ದು ಯಾವಾಗಲೂ ಅವರಿಗೆ ಸಹಾಯ ಮಾಡಲು ಸಿದ್ಧರಾಗಿರುವಿರಿ. ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತೆಯನ್ನು ಅನುಭವಿಸುವಿರಿ. ಬೆಳಗಿನಲ್ಲಿ ಕೇಳಿದ ಸಂಗೀತ ನಿಮಗೆ ಹೆಚ್ಚಿನ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ. ಇದು ನಕಾರಾತ್ಮಕ ಸಂದರ್ಭದ ವಿರುದ್ಧ ಹೋರಾಡುವಿರಿ. ಪೂರ್ವ ಮಾಡಿದ ಎಲ್ಲಾ ಶ್ರಮದ ಫಲವನ್ನು ನೀವು ಪಡೆಯಲಿದ್ದೀರಿ. ಇದು ತಾಳ್ಮೆಯಿಂದಿರಬೇಕಾದ ಸಮಯವಾಗಿದೆ. ಶಾಂತ ಮನಸ್ಸಿನಿಂದ ಮಾಡಿದ ಕೆಲಸವು ಹೆಚ್ಚು ಸುಲಭವಾಗಿ ಫಲ ನೀಡುತ್ತದೆ. ಇದಲ್ಲದೆ. ನೀವು ಸಾಮಾಜಿಕ ವಿವಾದದಲ್ಲಿ ಸಿಲುಕಿಕೊಳ್ಳಬಹುದು. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಹೊಸ ಉದ್ಯೋಗವು ನಿಮಗೆ ಉತ್ತಮ ಅವಕಾಶಗಳನ್ನು ತರುತ್ತದೆ.
ಕನ್ಯಾ: ನಿಮ್ಮ ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ಸಣ್ಣಪುಟ್ಟ ಕಲಹಗಳಿದ್ದರೂ ಮನೆಯಲ್ಲಿ ಸುಖ-ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಕುಟುಂಬದಲ್ಲಿ ಪ್ರೀತಿಯ ಭಾವನೆ ಇರುತ್ತದೆ. ಈ ವಾರ ನೀವು ಹೊಸ ಮನೆ ನಿರ್ಮಾಣದ ಬಗ್ಗೆ ಯೋಚಿಸಬಹುದು. ಕೆಲವು ಒಳ್ಳೆಯ ಸುದ್ದಿಗಳು ಮನೆಯ ಸಂತೋಷಕ್ಕೆ ಬೆಳಕನ್ನು ತರುತ್ತವೆ. ಪೂರ್ವಜರ ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳು ಪ್ರಬಲವಾಗಿವೆ. ಪ್ರೀತಿಯ ಜೀವನವು ಮಿಶ್ರವಾಗಿರಬಹುದು. ಸಂಗಾತಿಯೊಂದಿಗೆ ವಿವಾದವು ಆಗಬಹುದು.
ತುಲಾ: ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸಿಗೆ ನೀವು ಹೊಸ ಆಲೋಚನೆಗಳೊಂದಿಗೆ ಮುಂದುವರಿಯಬೇಕು. ಈ ವಿಷಯದಲ್ಲಿ, ಹಿರಿಯ ಅಧಿಕಾರಿಗಳ ಸಲಹೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಹಣಕಾಸಿನ ವಿಚಾರದಲ್ಲಿ ಹೊಸ ಯೋಜನೆಯನ್ನು ಮಾಡಲಿದ್ದೀರಿ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಕೆಲವು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಸಂಗಾತಿಯೊಂದಿಗೆ ಸಮಯವನ್ನು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆಯಿರಲಿದೆ. ಇಂದು ನಿಮಗೆ ಇಷ್ಟವಾದವರ ಜೊತೆ ಕುಳಿತು ಹರಟೆ ಹೊಡೆಯುವಿರಿ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ
ವೃಶ್ಚಿಕ: ಇಂದು ವಿದ್ಯಾಭ್ಯಾಸಕ್ಕೆ ಒಳ್ಳೆಯ ದಿನ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಶ್ರಮ ಸಫಲವಾಗುವುದು. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ಇಂದು ಸಂದರ್ಭಗಳು ನಿಮಗೆ ಅನುಕೂಲಕರವಾಗಿರುತ್ತವೆ. ನಿಮ್ಮ ಹೊಸ ಪ್ರೇಮಪ್ರಕರಣವು ಪ್ರಾರಂಭವಾಗಬಹುದು. ಪ್ರೀತಿಪಾತ್ರರೊಂದಿಗೆ ಉದ್ವಿಗ್ನತೆಗೆ ಒಳಗಾಗಿ ಮತನಾಡಬೇಡಿ. ಕೈ ಮೀರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿ. ಸಹೋದ್ಯೋಗಿಗಳೊಂದಿಗೆ ನೀವು ವಿವಾದವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಎಚ್ಚರದಿಂದಿರಿ. ನೀಮ್ಮ ಕೆಲಸವು ನಿಮಗೆ ಸಂತೋಷವನ್ನು ತರುತ್ತದೆ. ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸುವರು ಪ್ರಶಂಸೆಯೂ ಸಿಗಲಿದೆ.
ಧನುಸ್ಸು: ಕುಟುಂಬ ಸದಸ್ಯರೊಂದಿಗೆ ಜಗಳಗಳವಾಗುವ ಸಾಧ್ಯತೆಯಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸುವುದು ಬಹಳ ಮುಖ್ಯ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಇದು ಉಡುಗೊರೆಯೂ ಆಗಿರಬಹುದು. ಅಮೂಲ್ಯವಾದ ವಸ್ತುವೂ ಆಗಿರಬಹುದು. ಅದನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಸ್ವಲ್ಪ ಸವಾಲಾಗುವುದು. ನಿಮ್ಮ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸುವುದು ಉತ್ತಮ. ವಿದೇಶಿ ವ್ಯಾಪಾರ ಹೊಂದಿರುವವರಿಗೆ ತೊಂದರೆ ಎದುರಾಗಬಹುದು.
ಮಕರ: ನಿಮ್ಮ ಜೀವನದಲ್ಲಿ ಕೆಲವರ ಬಗದಗೆ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಆಲೋಚನೆಗಳಿಂದ ತುಂಬಿದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗಬಹುದು. ನೀವು ಕಾನೂನುಬಾಹಿರ ಕೃತ್ಯವನ್ನು ಮಾಡಿದರೆ ಆದಷ್ಟು ಬೇಗ ಅದನ್ನು ಬಿಟ್ಟುಬಿಡುವುದು ಉತ್ತಮ. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು.
ಕುಂಭ: ಮನೆಯಲ್ಲಿ ಉಂಟಾದ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯನ್ನು ಬಳಸಬೇಕಾಗುತ್ತದೆ. ಹಾಗಾದಾಗ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ನಿಮ್ಮ ಮಹಾಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಿಟ್ಟುಕೊಡಬೇಡಿ. ನೀವು ನಿಮ್ಮ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಬಯಸುವಿರಿ. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿದರೆ ನಿರ್ಧಾರಗಳನ್ನು ಸರಿಯಾಗಿರುತ್ತವೆ. ಮನೆಯನ್ನು ಖರೀದಿಸುವ ಯೋಚನೆಯನ್ನು ಮಾಡುವಿರಿ.
ಮೀನ: ಅದೃಷ್ಟ ನಿಮ್ಮ ಕಡೆ ಇದೆ ಎಂಬುದು ಸತ್ಯ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಸವಾಲಿನ ಪರಿಸ್ಥಿತಿಗಳು ಬರಬಹುದು. ನೀವು ಅವುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಿದೆ. ನೀವು ಇಂದು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿಮ್ಮ ಕಠಿಣ ಪರಿಶ್ರಮ ಮೆಚ್ಚಗೆಯು ಸಿಗಲಿದೆ. ನಿಮ್ಮ ಕೆಲಸಕ್ಕೆ ಇದು ಉತ್ತೇಜಕವಿದ್ದಂತೆ. ಪ್ರತಿ ಬಾರಿಯೂ ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಾಗದು. ನೀವು ಕೆಲ ಕಾಲ ಹೊಸ ಉದ್ಯಮದಲ್ಲಿ ಪಾಲುದಾರರಾಗುವುದು ಬೇಡ. ಸಂಗಾತಿಯ ಆಸೆಗಳನ್ನು ತಿಳಿದುಕೊಳ್ಳಿ. ಕೆಲವನ್ನು ಪೂರೈಸಿ.
ಲೋಹಿತಶರ್ಮಾ ಇಡುವಾಣಿ