Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ದಿನ ಭವಿಷ್ಯ

|

Updated on: Mar 20, 2023 | 6:15 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯ
Image Credit source: freepik
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 20 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:09 ರಿಂದ 09:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:10 ರಿಂದ ಮಧ್ಯಾಹ್ನ 12:40ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:41ರ ವರೆಗೆ.

ಸಿಂಹ: ಪಿತ್ರಾರ್ಜಿತ ಆಸ್ತಿಯು ಸಮಸ್ಯೆಯಿಂದ ಕೂಡಿದ್ದು ಇಂದು ಅದಕ್ಕೆ ಪರಿಹಾರವು ಅನ್ಯ ವ್ಯಕ್ತಿಗಳಿಂದ ಸಿಗಲಿದೆ. ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ತಂದೆ-ತಾಯಿ ಅಥವಾ ಹಿರಿಯರ ಗೌರವಕ್ಕೆ ಚ್ಯುತಿ ತರುವ ಕೆಲಸವನ್ನು ಮಾಡುವಿರಿ. ಜಾಗರೂಕರಾಗಿರಿ. ವಿವಾಹವು ವಿಳಂಬವಾದರೆ ಬೇಸರಿಸಬೇಡಿ. ಉತ್ತಮವಾದುದನ್ನು ನಿರೀಕ್ಷಿಸಿ. ವ್ಯವಹಾರ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ಪ್ರಯೋಗಕ್ಕೆ ತರುವಿರಿ. ಹನುಮಾನ್ ಚಾಲೀಸ್ ನಿಮ್ಮ ದುರ್ಬಲತೆಯನ್ನು ಸರಿ ಮಾಡುತ್ತದೆ.

ಕನ್ಯಾ: ಇಂದು ಜಾಣತನದಿಂದ ಕೆಲಸ ಮಾಡಿ. ಇದರಿಂದ ನೀವು ಜಟಿಲವಾದ ಸಮಸ್ಯೆಯನ್ನು ಸರಾಗವಾಗಿ ಪರಿಹರಿಸಿಕೊಳ್ಳುವಿರಿ. ಪುತ್ರೋತ್ಸವವಿರಲಿದೆ. ಧಾರ್ಮಿಕಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅನುಭವಿಗಳ ಸಲಹೆಯನ್ನು ಅವಶ್ಯವಾಗಿ ಪಡೆದುಕೊಳ್ಳಿ. ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡಾರು. ಅತಿಯಾದ ಒತ್ತಡವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವುದು. ವ್ಯಾಪಾರದಲ್ಲಿ ಲಾಭವು ಅಧಿಕವಾಗಲಿದೆ. ವಿಷ್ಣುಸಹಸ್ರನಾಮವನ್ನು ಓದಿ. ಮುನ್ನೋಟ ತರೆದುಕೊಳ್ಳುವುದು.

ತುಲಾ: ಈ ದಿನ ಹೆಚ್ಚಿನ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಂದ ಕಳೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ಯುವಕರು ಕೆಟ್ಟ ಅಭ್ಯಾಸಗಳತ್ತ ಗಮನ ಹರಿಸುವರು. ಕೆಟ್ಟ ನಿರ್ಧಾರಗಳು ಇಂದು ದುಃಖಕ್ಕೆ ಕಾರಣವಾಗಬಹುದು. ವ್ಯಾಪಾರ ಯೋಜನೆಗಳು ಯಶಸ್ವಿಯಾಗಲಿವೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಆಹಾರದ ವ್ಯತ್ಯಾಸದಿಂದ ತೊಂದರೆಗಳು ಬಂದಾವು. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಮಹಾಗಣಪತಿಗೆ ದೂರ್ವಾಪತ್ರೆಯನ್ನು ನೀಡಿ.

ವೃಶ್ಚಿಕ: ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಕಾರ್ಯಗಳು ಇಂದು ನಡೆಯುವ ಸಾಧ್ಯತೆ ಇದೆ‌. ಕುಟುಂಬದಲ್ಲಿ ವಾರ್ಷಿಕವಾದ ಧಾರ್ಮಿಕಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇರಲಿದೆ. ಮನೆಗೆ ಅವಶ್ಯಕವಿರುವ ವಸ್ತುಗಳಿಗ ಖರೀದಿ ಆಗಲಿದೆ. ಹಣ ಹೊರಹರಿವು ಹೆಚ್ಚಾಗಲಿದೆ. ಮನೆಯ ಸದಸ್ಯರು ನಿಮ್ಮ ಆರೋಗ್ಯದ ಮೇಲಿಟ್ಟ ಕಾಳಜಿಯನ್ನು ಅರಿಯುವಿರಿ. ಇಂದು ನೀವು ಮಾಡಲೇಬೇಕಾದ ಕೆಲಸವನ್ನು ಬಿಟ್ಟು ಆಪ್ತತೆಯ ಕಾರಣಕ್ಕೆ ಅವರ ಕೆಲಸವನ್ನು ಮಾಡಿಕೊಡಲಿದ್ದೀರಿ. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಲಿ. ಒತ್ತಡದಿಂದ ದೂರವಿರಲು ಸಂಗೀತವನ್ನೋ ಉದ್ಯಾನವನವನ್ನೋ ಆರಿಸಿಕೊಳ್ಳುವಿರಿ. ವ್ಯಾಪಾಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ಪ್ರಾಣಾಂತಿಕ ವೇದನೆ ಇದ್ದರೆ ಮೃತ್ಯುಂಜಯ ಮಂತ್ರವನ್ನು ಪಠಿಸಿ.

-ಲೋಹಿತಶರ್ಮಾ ಇಡುವಾಣಿ