Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ
2023 ಮಾರ್ಚ್ 20 ಸೋಮವಾರದ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 20 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮವಾರ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 08:09 ರಿಂದ 09:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:10 ರಿಂದ 12:40ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:41ರ ವರೆಗೆ.
ಮೇಷ: ನೀವು ಇಂದು ನಿಮ್ಮ ಕುಟುಂಬದಲ್ಲಿ ಒಳ್ಳೆಯ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸುವಿರಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ದೀರ್ಘಕಾಲದ ಖಾಯಿಲೆಯು ಇಂದು ಸ್ವಲ್ಪ ಕಡಿಮೆಯಾಗಲಿದೆ. ಅನಾರೋಗ್ಯದ ಆಸ್ಪತ್ರೆಗೆ ದಾಖಲಾಗುವ ಸಂಭವವಿದೆ. ಇದರಿಂದ ಆರ್ಥಿಕವಾಗಿ ಏರುಪೇರಾಗಬಹುದು. ಮಕ್ಕಳು ನಿಮ್ಮೊಂದಿಗೆ ಕಳೆಯಲು ಇಚ್ಛಿಸುವರು. ಅವರ ಬಯಕೆಯನ್ನು ಪೂರೈಸಿ. ವೈಯಕ್ತಿಕ ಕೆಲಸದ ಕಾರಣ ಕಛೇರಿಯ ಕಾರ್ಯಗಳು ಹಿಂದುಳಿಯಬಹುದು. ನಿಮ್ಮ ಸಂಗಾತಿಯನ್ನು ಬೆಂಬಲಿಸಿ,ದುರ್ಬಲಗೊಂಡ ಬಂಧವನ್ನು ಮತ್ತೆ ಬಲಗೊಳಿಸಿ. ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗಿ ಧ್ಯಾನ ಮಾಡಿ ಬನ್ನಿ.
ವೃಷಭ: ಇಂದು ಕೆಲವೊಂದು ಸಮಸ್ಯೆಗಳ ಇದ್ದರೂ ಅದನ್ನು ಬದಿಗೊತ್ತಿ ಸಕಾರಾತ್ಮಕ ಚಿಂತನೆಯಿಂದ ಅದನ್ನು ಸರಿಪಡಿಸಿಕೊಳ್ಳುವಿರಿ. ನಿಮ್ಮ ಕಾರ್ಯಗಳು ಅಪರಿಪೂರ್ವಾಗುತ್ತದೆ ಎಂಬ ಭರವಸೆಯಿದ್ದರೆ ಅದನ್ನು ಬಿಟ್ಟುಬಿಡಿ. ಆರ್ಥಿಕವಾದ ಹೂಡಿಕೆಯನ್ನು ಇಂದು ಮಾಡುವುದು ಬೇಡ. ಅಪವ್ಯಯವಾದೀತು. ಸುಮ್ಮನೇ ಓಡಾಟವಾಗುವುದು. ಅಪರಿತರನ್ನು ಪರಿಚಿತರನ್ನಾಗಿ ಮಾಡಿಕೊಳ್ಳಿ. ಸ್ನೇಹ ಬೆಳೆಸಲು ಸಮಯವನ್ನು ತೆಗೆದುಕೊಳ್ಳಿ. ಕೆಲವು ಚುಚ್ಚು ಮಾತುಗಳು ಕೇಳುವುದು. ತಲೆ ಕೆಡಿಸಿಕೊಳ್ಳದೇ ಜಾಣ್ಮೆಯಿಂದ ಪರಿಹರಿಸಿ. ಕುಲದೇವರ ಸ್ಮರಣೆ ಮಾಡಿ.
ಮಿಥುನ: ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಾಯ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ವಿವಾದವಾದೀತು. ಅಹಿತಕರ ಸುದ್ದಿಯು ನಿಮ್ಮನ್ನು ಕುಗ್ಗಿಸೀತು. ವ್ಯವಹಾರದ ಬಗ್ಗೆ ಗಂಭೀರ ನಿರ್ಧಾರ ತೆಗೆದುಕೊಳ್ಳಿ. ಪತಿ-ಪತ್ನಿಯರ ನಡುವೆ ಇದ್ದ ಮನಸ್ತಾಪಗಳು ಬಗೆಹರಿಯಲಿವೆ. ರಾಮಾಯಣದಲ್ಲಿ ಬರುವ ಸೀತಾಕಲ್ಯಾಣ ಪ್ರಸಂಗವನ್ನು ಪಠಿಸಿ. ವೈಮಸ್ಯವು ಸೌಮನಸ್ಯವಾಗುವುದು.
ಕಟಕ: ಇಂದು ಒಂದೇ ರೀತಿಯ ದಿನಚರಿಯನ್ನು ಅನುಸರಿಸಿ ಬೇಸರಗೊಂಡು ಹೊಸತರನಾದ ಕ್ರಮವನ್ನು ಆರಂಭಿಸುವಿರಿ. ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಆರ್ಥಿಕತೆಯ ದುರ್ಬಲದಿಂದಾಗಿ ದುರ್ಮಾರ್ಗದವನ್ನು ಅನುಸರಿಸುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮವಲ್ಲ. ಮಾನಸಿಕ ನೆಮ್ಮದಿಯು ಕಡಿಮೆ ಆಗಲಿದೆ. ಶಿವಕವಚವನ್ನು ಓದಿ.