Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಬುಧವಾರದ ದಿನ ಭವಿಷ್ಯ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 22 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಶೋಭಕೃತ್ ಸಂವತ್ಸರವು ಎಲ್ಲ ರಾಶಿಯವರಿಗೂ ಶುಭವನ್ನು ತರಲಿ. ಇಷ್ಟಾರ್ಥಗಳು ಸಿದ್ಧಿಸಲಿ. ಅಮಂಗಲವು ದೂರವಾಗಿ, ಮಂಗಲಮಯ ವಾತಾವರಣ ಇಡೀ ವರ್ಷ ತುಂಬಿರಲಿ. ಹೊಸತನವು ಬರಲಿ, ಹೊಸ ಮನವು ಇರಲಿ, ಎಲ್ಲರಿಗೂ ನೂತನಸಂವತ್ಸರಕ್ಕೆ ಶುಭಾಶಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಕ್ಲ, ಕರಣ : ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ 02:10ರವರೆಗೆ, ಯಮಘಂಡ ಕಾಲ ಬೆಳಗ್ಗೆ 08:08 ರಿಂದ 09:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:09 ರಿಂದ ಮಧ್ಯಾಹ್ನ 12:40ರ ವರೆಗೆ.
ಸಿಂಹ: ಇಂದು ನಿಮ್ಮ ಯಶಸ್ಸಿನ ಕ್ಷಣವಾಗಲಿದೆ. ನೀವು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡುವ ಸ್ಥಿತಿ ಬರಲಿದೆ. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಇಂದು ನಕಾರಾತ್ಮಕತೆಯ ವಿರುದ್ಧ ತೀವ್ರವಾದ ಹೋರಾಟ ಮಾಡುವಿರಿ. ಇದಕ್ಕಾಗಿ ಮನೆಯವರ ಜೊತೆ ಕಲಹವಾಗಬಹುದು. ಇಷ್ಟು ಬಹಳ ಸಹನೆಯಿಂದ ಇದ್ದ ನೀವು ಇಂದು ಸಹನೆಯ ಕಟ್ಟೆ ಒಡೆದುಹೋಗಲಿದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಒಳ್ಳೆಯ ಸ್ಥಾನ ಲಭ್ಯವಾಗಲಿದೆ. ಸೂರ್ಯೋಪಾಸನೆ ಅಗತ್ಯತೆ ಬಹಳ ಇರಲಿದೆ.
ಕನ್ಯಾ: ನಿಮ್ಮ ಕುಟುಂಬಜೀವನವು ಉತ್ತಮವಾಗಿರಲಿದೆ. ಇಂದು ಕೌಟುಂಬಿಕಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವಿರಿ. ಅನಿರೀಕ್ಷಿತ ಶುಭ ಸುದ್ದಿಗಳು ಮನೆಯಲ್ಲಿ ಸಂತೋಷವನ್ನು ಉಂಟುಮಾಡಲಿದೆ. ಪೂರ್ವಜರ ಆಸ್ತಿಯನ್ನು ಪಡೆಯುವ ಬಗ್ಗೆ ಮಾತುಕತೆಗಳು ನಡೆಯಲಿವೆ. ಸ್ಥಳೀಯರ ಪ್ರೀತಿಯ ಜೀವನವು ಮಿಶ್ರವಾಗಿರಬಹುದು. ನಿಮ್ಮ ಪ್ರೀತಿಯಲ್ಲಿ ನೀವು ಯಾವುದೇ ಮಹತ್ವದ ಬದಲಾವಣೆ ಇಲ್ಲದೇ ಸಪ್ಪೆ ಎನಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ವಿವಾದವನ್ನು ಮಾಡುವಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಪಹಾಸ್ಯದ ಮಾತುಗಳನ್ನಾಡಬಹದು. ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ. ಶುಭವಾರ್ತೆ ಕೇಳಿ ಬರುವುದು.
ತುಲಾ: ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮವಹಿಸುವಿರಿ. ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡಯುವಿರಿ. ಅವರಿಂದ ಮೆಚ್ಚುಗೆ ಸಿಗಲಿದೆ. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಸಂಕಷ್ಟವಾಗಲಿದೆ. ಸಂಗಾತಿಯ ಜೊತೆ ಸಮಯ ಚೆನ್ನಾಗಿರಲಿದೆ ಉತ್ತಮವಾಗಿರುತ್ತದೆ. ಈ ವಾರದ ಆರಂಭದಲ್ಲಿ, ನಿಮ್ಮ ಪ್ರೀತಿಪಾತ್ರರ ಜೊತೆ ಕುಳಿತು ಕಾಲ ಕಳೆಯುವಿರಿ. ನಿಮ್ಮ ಸಂಬಂಧವು ಮತ್ತಷ್ಟು ಆಪ್ತವಾಗಲು ಯೋಚಿಸುವಿರಿ. ಕಷ್ಟಪಟ್ಟು ಕೆಲಸ ಮಾಡಬೇಕಾಗಿ ಬರಬಹುದು. ನಿಮ್ಮ ವೃತ್ತಿಜೀವನವು ಉತ್ತಮವಾಗಿರಲಿದೆ. ದುರ್ಗಾಮಾತೆಯ ಸ್ತುತಿ ಮಾಡಿ.
ವೃಶ್ಚಿಕ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ದೂರಕ್ಕೆ ಹೋಗಲಿದ್ದಾರೆ. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ತರುವುದು. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾರ್ತೆ ಇರಲಿದೆ. ಪ್ರೀತಿಪಾತ್ರರ ಜೊತೆ ಉದ್ವೇಗದಿಂದ ಮಾತನಾಡುವಿರಿ. ನಿಮ್ಮ ಹಾಸ್ಯ ಸ್ವಭಾವವು ಜನರಿಗೆ ಮೆಚ್ಚುಗೆ ಆಗಲಿದೆ. ಸಹೋದ್ಯೋಗಿಗಳ ಜೊತೆ ಸಣ್ಣ ವಿವಾದ ಆಗಬಹುದು. ಯಾರಿಂದಲಾದರೂ ಮೋಸ ಹೋಗುವ ಸಾಧ್ಯತೆ ಇದೆ. ಅಂತಹ ಜನರ ಬಗ್ಗೆ ಎಚ್ಚರವಿರಲಿ. ನೀವು ಕೆಲಸ ಮಾಡುತ್ತಿದ್ದರೆ, ನಿಮಗೆ ಬಹಳಷ್ಟು ಸಂತೋಷವಿರಲಿದೆ. ಗಣಪತಿಯ ಆರಾಧನೆ ಮಾಡಿ.
-ಲೋಹಿತಶರ್ಮಾ ಇಡುವಾಣಿ