Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 22ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 22ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 22ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 22ರ ದಿನಭವಿಷ್ಯ Image Credit source: freepik
Follow us
Rakesh Nayak Manchi
|

Updated on: Mar 22, 2023 | 6:15 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 22ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕಮಿಷನ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಈ ದಿನ ಉತ್ತಮವಾದ ಆದಾಯ ಇದೆ. ಅತಿಯಾದ ಆಲೋಚನೆಯಿಂದ ನಿಮಗೆ ಬರಬೇಕಾದ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಈ ದಿನದ ಒಂದಿಷ್ಟು ಸಮಯ ಇತರರ ಸಲುವಾಗಿ ಮೀಸಲಿಡುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಹಳೇ ಪರಿಚಯ ಎಂದು ಹೇಳಿಕೊಂಡು ಕೆಲ ವ್ಯಕ್ತಿಗಳು ನಿಮ್ಮ ಬಳಿ ಅಲ್ಪಾವಧಿಗೆ ಸಾಲ ಕೇಳಿಕೊಂಡು ಬರಬಹುದು. ಈ ಸನ್ನಿವೇಶ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತೀರೋ ಅದೇ ಉದ್ದೇಶಕ್ಕಾಗಿ ಬಳಸುವ ಕಡೆಗೆ ಗಮನ ನೀಡಿ. ಇತರರು ಹೊಗಳಿದರು ಎಂಬ ಕಾರಣಕ್ಕೆ ನಿಮ್ಮ ಸಾಮರ್ಥ್ಯದ ನಿಜವಾದ ತಾಕತ್ತನ್ನು ಮೀರಿ ಆಲೋಚಿಸಬೇಡಿ. ತಮ್ಮ ಉಪಯೋಗಕ್ಕೆ ನಿಮ್ಮನ್ನು ಮೆಚ್ಚುವವರು ಯಾರು, ಹೊಗಳುವವರು ಯಾರು ಎಂಬ ಬಗ್ಗೆ ತಿಳಿವಳಿಕೆ ಇಟ್ಟುಕೊಳ್ಳಿ. ಹೊಸದಾಗಿ ವ್ಯಾಪಾರ- ವ್ಯವಹಾರ ಆರಂಭಿಸಿರುವವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವೃಥಾ ಕಾರಣಕ್ಕೆ ಖರ್ಚು ಮಾಡಲಿದ್ದೀರಿ. ಒಂದು ರೂಪಾಯಿಯಲ್ಲಿ ಆಗುವ ಕೆಲಸಕ್ಕೆ ಮೂರು ರೂಪಾಯಿ ಕೈ ಬಿಡಲಿದೆ. ಆದ್ದರಿಂದ ನೀವು ಕೆಲವು ಕೆಲಸಗಳನ್ನು ಬೇರೆಯವರಿಗೆ ವಹಿಸುವುದೇ ಲಾಭದಾಯಕ ಎಂದೆನಿಸುತ್ತದೆ. ಕ್ಷಣ ಕಾಲದ ಮೋಹಕ್ಕೆ ಸಿಲುಕಿ, ತಪ್ಪಾದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಯಾವ ತೀರ್ಮಾನವನ್ನೇ ಆದರೂ ಕೂತು, ಸಮಾಧಾನವಾಗಿ ಆಲೋಚಿಸಿ ಆ ನಂತರ ತೆಗೆದುಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮವರು ಯಾರು, ನಿಮ್ಮಿಂದ ಕೇವಲ ಅನುಕೂಲ ಪಡೆದುಕೊಂಡು, ಕಷ್ಡದ ಸಮಯದಲ್ಲಿ ದೂರ ನಿಲ್ಲುವವರು ಯಾರು ಎಂಬುದು ಈ ದಿನ ಗೊತ್ತಾಗುತ್ತದೆ. ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರು ಅದರಿಂದ ಸ್ವಲ್ಪ ಮೊತ್ತವನ್ನು ಹಿಂಪಡೆದುಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ವ್ಯವಹಾಸ್ಥರಿಗೆ ಮಿಶ್ರ ಫಲಿತಾಂಶ ದೊರೆಯುವ ದಿನ ಇದಾಗಿರಲಿದೆ. ಮಹಿಳೆಯರು ಅಡುಗೆ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುವ ವೇಳೆ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮಹತ್ತರ ಒಪ್ಪಂದ ಅಥವಾ ವಿಚಾರಗಳಲ್ಲಿ ನಿಮ್ಮ ಅಭಿಪ್ರಾಯ, ನಿರ್ಧಾರಗಳಿಗೆ ಪ್ರಾಮುಖ್ಯ ಇರುತ್ತದೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಸೂಕ್ತ ಸಂಬಂಧವೊಂದು ಹುಡುಕಿಕೊಂಡು ಬರುವಂಥ ಯೋಗ ಇದೆ. ದಾಕ್ಷಿಣ್ಯಕ್ಕೆ ಸಿಲುಕಿ, ಯಾರದೇ ಸಾಲಕ್ಕೂ ಜಾಮೀನಾಗಿ ನಿಲ್ಲದಿರಿ. ಮನೆಯಲ್ಲಿ ಮುಖ್ಯ ಕಾಗದ- ಪತ್ರಗಳು ಸಮಯಕ್ಕೆ ಸರಿಯಾಗಿ ಸಿಗದೆ ಆತಂಕಕ್ಕೆ ಗುರಿ ಆಗಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ವೃತ್ತಿ, ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಸ್ ಸೇರ್ಪಡೆ ಆಗುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಇನ್ನಷ್ಟು ದಾಖಲಾತಿಗಳು ಬೇಕು ಎಂದು ಕೇಳಬಹುದು. ಮೊದಲ ಬಾರಿಗೆ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ ಆನ್ ಲೈನ್, ವಾಟ್ಸಾಪ್ ಇಂಥವುಗಳ ಮೂಲಕ ಬರುವ ಸಲಹೆಗಳನ್ನು ನಂಬಿಕೊಂಡು ಹಣ ಹೂಡುವ ನಿರ್ಧಾರ ಕೈಗೊಳ್ಳದಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಭವಿಷ್ಯದಲ್ಲಿ ನಡೆಯಲಿರುವ ಅತಿದೊಡ್ಡ ಘಟನೆಯೊಂದರ ಸುಳಿವು ನಿಮಗೆ ಸಿಗಲಿದೆ. ಯಾರೂ ಊಹಿಸದ ರೀತಿಯಲ್ಲಿ ನಿಮ್ಮ ಕೆಲವು ನಡೆಗಳು ಈ ದಿನ ಇರಲಿವೆ. ದಿನದ ದ್ವಿತೀಯಾರ್ಧದಲ್ಲಿ ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್, ಗ್ಯಾಜೆಟ್ ಖರೀದಿಸುವುದಕ್ಕೆ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಜಾಬ್ ಕನ್ಸಲ್ಟೆಂಟ್ ಮೂಲಕ ಉದ್ಯೋಗ ಬದಲಾವಣೆಗೆ ಪ್ರಯತ್ನ ಪಡುತ್ತಿರುವವರಿಗೆ ಒಂದಿಷ್ಟು ಹಣ ಖರ್ಚಾದರೂ ಉತ್ತಮ ಅವಕಾಶ ದೊರೆಯುವ ಸಾಧ್ಯತೆ ಇದೆ. ಇನ್ನು ಹೂಡಿಕೆ ಮಾಡಬೇಕು ಎಂದಿರುವವರಿಗೆ ಸಮಯಕ್ಕೆ ಸೂಕ್ತವಾಗಿ, ನೀವು ನಿರೀಕ್ಷೆಯೇ ಮಾಡಿರದಂತೆ ಇತರರ ನೆರವು- ಮಾರ್ಗದರ್ಶನ ದೊರೆಯಲಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಬದಲಾವಣೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ಎನ್‌ಜಿಒಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಇದಕ್ಕೆ ಇತರರ ನೆರವು ಸಿಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಅನುಮಾನಗಳು ನಿಜ ಆಗಬೇಕು ಅಂತೇನಿಲ್ಲ. ಹಿಂದೆ ಯಾವಾಗಲೋ ಆದ ಕೆಟ್ಟ ಅನುಭವವೊಂದನ್ನು ಈಗ ಹೋಲಿಕೆ ಮಾಡುತ್ತಾ ಹೋಗದಿರಿ. ವಿದೇಶಕ್ಕೆ ಹೋಗುವುದಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಶುಭ ವಾರ್ತೆ ಕೇಳುವ ಯೋಗ ಇದೆ. ಸೈಟು ಖರೀದಿ ಮಾಡಬೇಕು ಅಂತಿದ್ದಲ್ಲಿ ಇಷ್ಟು ಆಗುವಂಥ ಜಾಗ ಸಿಗಲಿದೆ. ಈ ದಿನ ಮನೆಯಿಂದ ಹೊರಗೆ ಹೋಗುವ ಮುನ್ನ ಹಸಿ ಕಡಲೇಕಾಳು ಬಾಯಿಗೆ ಹಾಕಿಕೊಂಡು ಹೋಗಿ.

ಲೇಖನ- ಎನ್‌.ಕೆ.ಸ್ವಾತಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ