Ugadi 2023 Horoscope: ಈ ಹೊಸ ವರ್ಷ ಜೀವನದಲ್ಲಿ ತರಲಿದೆ ಬದಲಾವಣೆ, ದ್ವಾದಶ ರಾಶಿಗಳ ಯುಗಾದಿ ಭವಿಷ್ಯ ಹೀಗಿದೆ

ಹಿಂದೂಗಳ ಹೊಸ ವರ್ಷ ಯುಗಾದಿ ಹೊಸ ಹರುಷ ಹೊತ್ತು ಬರಲಿ. ಈ ಸಂವತ್ಸರದಲ್ಲಿ ದ್ವಾದಶ ರಾಶಿಯವರ ಕೌಟುಂಬಿಕ, ವೃತ್ತಿ, ಆರ್ಥಿಕ, ಆರೋಗ್ಯ ಜೀವನವು ಹೇಗಿರಲಿದೆ ಎನ್ನುವ ಮಾಹಿತಿ ಈ ಯುಗಾದಿ ಭವಿಷ್ಯದಲ್ಲಿದೆ.

Ugadi 2023 Horoscope: ಈ ಹೊಸ ವರ್ಷ ಜೀವನದಲ್ಲಿ ತರಲಿದೆ ಬದಲಾವಣೆ, ದ್ವಾದಶ ರಾಶಿಗಳ ಯುಗಾದಿ ಭವಿಷ್ಯ ಹೀಗಿದೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Mar 22, 2023 | 11:17 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಕ್ಲ, ಕರಣ : ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ 02:10ರವರೆಗೆ, ಯಮಘಂಡ ಕಾಲ ಬೆಳಗ್ಗೆ 08:08 ರಿಂದ 09:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:09 ರಿಂದ ಮಧ್ಯಾಹ್ನ 12:40ರ ವರೆಗೆ.

ಮೇಷ ರಾಶಿ: ಈ ಹಿಂದೂ ಹೊಸ ವರ್ಷದಲ್ಲಿ ಮೇಷ ರಾಶಿಯವರ ಭವಿಷ್ಯವನ್ನು ನೋಡುವುದಾದರೆ ಮಿಶ್ರಫಲವನ್ನು ನಿರೀಕ್ಷಿಸಬಹುದು. ಸಾಮಾನ್ಯವಾಗಿ ಕೆಲವು ಸವಾಲುಗಳು ಮತ್ತು ಅಡೆತಡೆಗಳೂ ಇರಬಹುದು. ಇದರ ಜೊತೆಗೆ ಬೆಳವಣಿಗೆಗೆ ಮತ್ತು ಯಶಸ್ಸಿಗೂ ಅವಕಾಶಗಳಿವೆ. ಹೆಚ್ಚಿನ ಹಣವನ್ನು ಗಳಿಸಲು ಅಥವಾ ನಿಮ್ಮ ಆದಾಯವನ್ನು ಹೆಚ್ಚಿಸಲು ಅವಕಾಶಗಳು ಇರಬಹುದು, ಆದರೆ ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಜಾಗರೂಕರಾಗಿರಿ. ಈ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಇದು ನಷ್ಟಕ್ಕೆ ಕಾರಣವಾಗಬಹುದು. ಬದಲಾಗಿ, ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಹಣಕಾಸನ್ನು ಯೋಚನೆ ಮಾಡಿ ಯೋಜಿಸಿ ಮತ್ತು ಬಜೆಟ್ ಮೇಲೆ ಕೇಂದ್ರೀಕರಿಸಿ. ಈ ಅವಧಿಯಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮುಖ್ಯ. ಈ ಸಮಯದಲ್ಲಿ ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು, ಆದ್ದರಿಂದ ಆರೋಗ್ಯಕರ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಉತ್ತಮ. ಈ ಅವಧಿಯಲ್ಲಿ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಅತ್ಯಗತ್ಯ. ಧ್ಯಾನ, ಯೋಗ, ಅಥವಾ ಇತರ ವಿಶ್ರಾಂತಿ ವಿಧಾನಗಳು ಇದಕ್ಕೆ ಸಹಾಯಕವಾಗಬಹುದು. ಪರಿಹಾರ: ನಿಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿ. ಅಗತ್ಯವಿರುವವರಿಗೆ ಆಹಾರ ಪದಾರ್ಥಗಳು ಮತ್ತು ಬಟ್ಟೆಗಳನ್ನು ದಾನ ಮಾಡಿ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಈ 4 ಮಹಾಯೋಗದ ಸಂಯೋಜನೆಯು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ನೀವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು. ಹಠಾತ್ ಧನಲಾಭವಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆಕರ್ಷಣೆ ಹೆಚ್ಚಾಗುತ್ತದೆ. ಹೊಸ ಮೂಲಗಳಿಂದ ಆದಾಯ ಹುಟ್ಟುತ್ತದೆ. ಹಳೆಯ ಹೂಡಿಕೆ ಲಾಭವಾಗಲಿದೆ. ನೀವು ದೊಡ್ಡ ಹುದ್ದೆಯನ್ನು ಪಡೆಯಬಹುದು. ಕಳೆದ ಬಾರಿ ನೀವು ಗಳಿಸಿದ ಹಣವನ್ನು ಈಗ ಹೂಡಿಕೆ ಮಾಡುವ ಸಮಯ. ಅಂದರೆ ಈ ವರ್ಷದಲ್ಲಿ ನೀವು ಮನೆ ಕಟ್ಟಲು ಕೈ ಹಾಕಬಹುದು, ಸೈಟ್ ತೆಗೆದುಕೊಳ್ಳಲು ಕೈ ಹಾಕಬಹುದು. ಅಥವಾ ಒಂದು ಹೊಸ ಬಿಸಿನೆಸ್ ಪ್ರಾರಂಭ ಮಾಡಲು ನಿರ್ಧರಿಸಬಹುದು. ಈ ರೀತಿ ಯೋಚನೆ ಮಾಡಿ ನೀವು ಉಳಿತಾಯ ಮಾಡಿರುವ ಹಣವನ್ನು ಹೂಡಿಕೆ ಮಾಡುವಿರಿ. ಇದರಿಂದ ಸುಖಾಸುಮ್ಮನೆ ಹಣ ಫೋಲಾಗುವುದು ತಪ್ಪಿಸಿದಂತಾಗುತ್ತದೆ. ಈ ವರ್ಷ ಹೂಡಿಕೆ ಮಾಡಿದ ಹಣಕ್ಕೆ ಮುಂದಿನ ವರ್ಷ ಲಾಭವನ್ನು ಪಡೆದುಕೊಳ್ಳುವಿರಿ. ಆದರೆ ಸಾಲದಿಂದ ಹೂಡಿಕೆ ಮಾಡುವುದು ನಿಮಗೆ ಕೆಟ್ಟ ಪರಿಣಾಮವನ್ನು ಬೀರಬಹುದು. ಆದರೆ ಗುರು ನಿಮ್ಮನ್ನು ಸಾಲಗ್ರಸ್ಥರನ್ನಾಗಿಯೂ ಮಾಡಬಹುದು. ಇದರಿಂದ ಜಾಗರೂಕರಾಗಿ ಇರುವುದು ಉತ್ತಮ. ಜೊತೆಗೆ ಇನ್ಯಾರಿಗೋ ಸಾಲ ಕೊಡಿಸುವುದು, ಶೇರ್‌ನಲ್ಲಿ ಹೂಡಿಕೆ ಮಾಡುವುದು, ಚೀಟಿ ವ್ಯವಹಾರ, ಬಡ್ಡಿ ಕೊಡಿಸುವುದು, ಸಾಲ ಕೊಡುವುದು, ಎಲ್ಲಾ ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವುದು ಇಂತದ್ದನ್ನೆಲ್ಲ ತಪ್ಪಿಸಬೇಕು. ಪರಿಹಾರ: ಗುರು ಸಮಾನವಾದವರಿಗೆ ವಸ್ತ್ರ ಪಂಚೆ ಶಲ್ಲ್ಯಾ ನೀಡಿ.

ಮಿಥುನ ರಾಶಿ: ಹಿಂದೂ ಹೊಸ ವರ್ಷವು ನಿಮ್ಮ ಪಾಲಿಗೆ ಅದೃಷ್ಟವನ್ನೇ ಹೊತ್ತು ತರಲಿದೆ. ಮಿಥುನ ರಾಶಿಯವರು ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ಲಾಭವಾಗುವುದು. ಯಾವ ವ್ಯವಹಾರವೇ ಆಗಿರಲಿ ಅದರಲ್ಲಿ ಅದೃಷ್ಟ ಒಲಿದು ಬರಲಿದೆ. ಹಿಂದೂ ಹೊಸ ವರ್ಷದಲ್ಲಿ, ಮಿಥುನ ರಾಶಿಯವರು ಶುಭ ಫಲಿತಾಂಶಗಳನ್ನೇ ಪಡೆಯಲಿದ್ದಾರೆ. ಸೂರ್ಯ ದೇವರು ಕೂಡಾ ನಿಮ್ಮ ಜಾತಕದಲ್ಲಿ ಅನುಕೂಲಕರ ಸ್ಥಳದಲ್ಲಿ ಇರಲಿದ್ದಾರೆ. ಈ ಸಮಯದಲ್ಲಿ ನೀವು ಮಾಡುವ ಹೂಡಿಕೆಯಿಂದ ಲಾಭವಾಗುವುದು. ಹೊಸ ವ್ಯಾಪಾರ ಒಪ್ಪಂದ ಅಂತಿಮವಾಗಬಹುದು. ಈ ರಾಜಯೋಗವು ಮಿಥುನ ರಾಶಿಯವರಿಗೆ ಯಶಸ್ಸನ್ನು ನೀಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಹೊಸ ಉದ್ಯೋಗ ಸಿಗಬಹುದು. ಬಡ್ತಿ, ವರ್ಗಾವಣೆ, ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ಅಧಿಕಾರ ಮತ್ತು ಆಡಳಿತಕ್ಕೆ ಸಂಬಂಧಿಸಿದ ಕೆಲಸ ಇರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಪರಿಹಾರ: ಸೂರ್ಯನಮಸ್ಕಾರ ಮಾಡಿ ಮತ್ತು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

ಕರ್ಕ ರಾಶಿ: ಈ ಸಮಯವು ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ತರುತ್ತದೆ, ಇದು ನಿಮ್ಮ ಆರ್ಥಿಕ ಜೀವನದಲ್ಲಿ ಸರಿಯಾದ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ನೀವು ಆಗಾಗ್ಗೆ ಭರವಸೆ ನೀಡುತ್ತೀರಿ. ಇದರಿಂದಾಗಿ ನೀವು ತುಂಬಾ ತೊಂದರೆಗೆ ಸಿಲುಕುತ್ತೀರಿ. ರಿಯಲ್ ಎಸ್ಟೇಟ್ ಖರೀದಿ ಮತ್ತು ಮಾರಾಟದ ಪ್ರಯತ್ನದಲ್ಲಿ ನೀವು ಯಶಸ್ವಿಯಾದರೆ ನಿಮಗೆ ಉತ್ತಮ ಆರ್ಥಿಕ ಪ್ರತಿಫಲವನ್ನು ತರಬಹುದು, ಆದರೆ ನಿಮ್ಮ ಪ್ರಣಯ ಸಂಬಂಧಗಳು ಈ ಸಮಯದಲ್ಲಿ ಸ್ವಲ್ಪ ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಪಾತ್ರರನ್ನು ನಿಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪ್ರೀತಿಸುವ ಮೂಲಕ ನೀವು ಅವರ ಹೃದಯವನ್ನು ಗೆಲ್ಲಬಹುದು. ನಿಮ್ಮ ಸೃಜನಾತ್ಮಕ ಸಾಮರ್ಥ್ಯದಲ್ಲಿ ತೀವ್ರ ಇಳಿಕೆ ಕಂಡುಬರುತ್ತದೆ, ಇದರಿಂದಾಗಿ ಮೇಲ್, ಇಂಟರ್ನೆಟ್ ಇತ್ಯಾದಿ ಮಾಧ್ಯಮವನ್ನು ಸರಿಯಾಗಿ ಬಳಸದೆ ನಿಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲು ನೀವು ವಿಫಲರಾಗುತ್ತೀರಿ. ಇದು ನಿಮ್ಮ ಬಡ್ತಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ವೃತ್ತಿಜೀವನದಲ್ಲಿ ನಿಮ್ಮ ವೇಗವನ್ನು ಕಡಿಮೆ ಮಾಡುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯುವುದಿಲ್ಲ, ಇದು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಸಮಯದ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ, ನಿಮ್ಮ ಹೃದಯ ಮತ್ತು ಆತ್ಮದೊಂದಿಗೆ ಅಧ್ಯಯನ ಮಾಡಲು ನೀವು ಸಂಪೂರ್ಣವಾಗಿ ಗಮನಹರಿಸಬೇಕು. ಪರಿಹಾರ: ಪ್ರತಿ ಕೃಷ್ಣ ಪ್ರದೋಷ ಕಾಲದಲ್ಲಿ ಶಿವನ ದರ್ಶನ ಮಾಡುವುದು.

ಸಿಂಹ ರಾಶಿ: ಹಿಂದೂ ಹೊಸ ವರ್ಷವು ಸಿಂಹ ರಾಶಿಯವರ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ. ಯಾವುದೇ ಕೆಲಸವನ್ನು ಯಾವ ಹಿಂಜರಿಕೆ ಇಲ್ಲದೆ ಮಾಡಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಜನರು ಲಾಭವನ್ನು ಪಡೆಯುತ್ತಾರೆ. ಹಳೆಯ ಹೂಡಿಕೆಗಳಿಂದ ಈ ಸಮಯದಲ್ಲಿ ಪ್ರಯೋಜನವಾಗಲಿದೆ. ಭೂ-ನಿರ್ಮಾಣ ಇತ್ಯಾದಿ ವಿಷಯದಲ್ಲಿ ಸುಧಾರಣೆ ಕಂಡುಬರುತ್ತದೆ. ಈ ಅವಧಿಯಲ್ಲಿ, ಧಾರ್ಮಿಕ ಪ್ರಯಾಣದ ಅವಕಾಶಗಳು ಸೃಷ್ಟಿಯಾಗುತ್ತವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಹಣಕಾಸಿನ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಸಾಲದಬಾಧೆಯಿಂದ ಬಳಲುತ್ತಿರುವ ಸಿಂಹ ರಾಶಿಯವರು ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವಿರಿ. ಈ ಹಿಂದೆ ಋಣ ಸ್ಥಾನದಲ್ಲಿ ಶನಿ ದೇವನಿದ್ದ, ಶನಿ ನಿಮಗೆ ಸಾಲ ತೀರಿಸಲು ಅಡೆತಡೆಯನ್ನುಟು ಮಾಡುತ್ತಿದ್ದನು. ಆದರೀಗ ಶನಿ ಈಗ ಏಳನೇ ಮನೆ ಪ್ರವೇಶ ಮಾಡಿರುವುದರಿಂದ ಸಾಲವನ್ನು ತೀರಿಸಲು ನಿಮಗೆ ಸಹಾಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಹೋಗುತ್ತದೆ. ಪರಿಹಾರ: ಶನಿವಾರ ತಪ್ಪದೇ ಹನುಮಾನ ಚಾಲೀಸ್ ಪಠಿಸಿ

ಕನ್ಯಾ ರಾಶಿ: ಈ ರಾಜಯೋಗವು ಕನ್ಯಾ ರಾಶಿಯವರಿಗೆ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ದೊಡ್ಡ ಧನಲಾಭವಿರುತ್ತದೆ. ಸರ್ವತೋಮುಖ ಯಶಸ್ಸು ದೊರೆಯಲಿದೆ. ಜೀವನದಲ್ಲಿ ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಪಾಲುದಾರಿಕೆ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ವೈವಾಹಿಕ ಜೀವನ, ಪ್ರೇಮ ಜೀವನ ಉತ್ತಮವಾಗಿರುತ್ತದೆ. ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಈ ವರ್ಷ ಮಿಶ್ರವಾಗಿರುತ್ತದೆ. ಅಂದರೆ ಸ್ವಂತ ಉದ್ಯೋಗದಲ್ಲಿ ಕೆಲಸ ಮಾಡುವಂತವರು ಬಂಡಾವಳವನ್ನೆಲ್ಲಾ ಕಳೆದುಕೊಂಡು ನಷ್ಟ ಪರಿಸ್ಥಿತಿ ಎದುರಿಸುವಂತಾಗಬಹುದು. ಹಾಗಾಗಿ ಯಾವುದೇ ಹೂಡಿಕೆಯನ್ನು ಈ ವರ್ಷ ತಪ್ಪಿಸುವುದು ಉತ್ತಮ. ನಿಮ್ಮ ಹಣ ಬೇರೆಯವರಿಗೆ ಕೊಟ್ಟು ಅದು ವಾಪಸ್ಸು ಬಾರದೇ ಇರಬಹುದು. ಹಣ ಕಳ್ಳತನವಾಗಬಹುದು ಅಥವಾ ಸಾಲವಾಗಿ ಕೊಟ್ಟ ಹಣ ವಾಪಸ್ಸು ಬಾರದೇ ಇರಬಹುದು. ಕುಟುಂಬಸ್ಥರಿಂದ, ಸ್ನೇಹಿತರಿಂದ ಸಾಕಷ್ಟು ನೆಮ್ಮದಿ ಇರುತ್ತದೆ. ಅಷ್ಟಮದಲ್ಲಿ ಗುರು ಚಾಂಡಾಲ ಯೋಗ ಇರುವುದರಿಂದ ನಿಮ್ಮ ಸಂಸಾರದಲ್ಲಿ ಮನಸ್ತಾಪಗಳು ಬರಬಹುದು. ತಪ್ಪಾಗಿ ತಿಳಿದುಕೊಳ್ಳುವಂತದಾಗುತ್ತದೆ. ಹಾಗಾಗಿ ಯಾವುದೇ ವಿಚಾರವನ್ನು ತಾಳ್ಮೆಯಿಂದ ಯೋಚಿಸಿ ನಂತರ ಮುನ್ನಡೆಯಿರಿ. ನಿಮ್ಮ ವೈಯಕ್ತಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಶತ್ರುಗಳಿಂದ ಬಿಡುಗಡೆ ಸಿಗುತ್ತದೆ. ಪರಿಹಾರ: ಗುರು ದಕ್ಷಿಣಾಮೂರ್ತಿಗೆ ಜೋಡಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಪ್ರದಕ್ಷಿಣೆ ಮಾಡುವುದು.

ತುಲಾ ರಾಶಿ: ತುಲಾ ರಾಶಿಯವರಿಗೆ ಪಂಚಮ ಶನಿ ನಡೆಯುತ್ತಿದೆ. ಪಂಚಮ ಶನಿ, ಅಷ್ಟಮ ಶನಿ, ಸಾಡೇಸಾತ್ ಶನಿ ಬಂದ ರಾಶಿಗೆ ಗುರು ದೃಷ್ಟಿ ಇದ್ದರೆ ಸಂಕಷ್ಟದಿಂದ ಕೊಂಚ ಪರಿಹಾರ ಸಿಗಲಿದೆ. ಈಗ ತುಲಾ ರಾಶಿಯವರಿಗೆ ಪಂಚಮ ಶನಿ ಶುರುವಾಗಿದೆ. ಸ್ವಲ್ಪ ಆತಂಕ ಪಡುವಂತಹ ವಿಚಾರ ಇದಾಗಿದೆ. ಹಾಗಂತ ಭಯಪಡುವ ಅವಶ್ಯಕತೆ ಇಲ್ಲ. ಈ ವರ್ಷ ಯುಗಾದಿ ತುಲಾ ರಾಶಿಯವರಿಗೆ ಆರ್ಥಿಕವಾಗಿ ಮಿಶ್ರ ಫಲವನ್ನು ಕೊಡುತ್ತದೆ. ಕಷ್ಟಪಟ್ಟ ಹಣ ನಿಮಗೆ ಸಿಗುತ್ತದೆ. ಆದರೆ ಹಣಕಾಸಿನ ವಿಷಯದಲ್ಲಿ ಸ್ಪಲ್ಪ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಗುರುವಿನ ಜೊತೆ ರಾಹು ಕೂಡ ಇರುವುದರಿಂದ ಯಾರಿಗೇ ದುಡ್ಡು ಕೊಟ್ಟರೂ ಹಣ ವಾಪಸ್ಸು ಬರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ತುಂಬಾ ವ್ಯವಸ್ಥೆ ಮಾಡಿಕೊಂಡಿರಬೇಕು. ತುಲಾ ರಾಶಿಯವರು ಹಣಕಾಸಿನ ಸಮಸ್ಯೆ ಬರುವುದನ್ನು ತಪ್ಪಿಸಲು ಸಾಲ ಮಾಡಬೇಡಿ. ಸಾಲವನ್ನೂ ಕೊಡಬೇಡಿ. ಪಾಲುದಾರಿಕೆಯಲ್ಲಿ ಅತೀಯಾದ ನಂಬಿಕೆ ಬೇಡ. ಲಾಭ ಬಂದರೂ ಪ್ರಯೋಜನವಾಗುವುದುಇಲ್ಲ. ಹಣ ಬರುವುದು ನಿಧಾನ ಆಗುತ್ತದೆ. ರಾಜಯೋಗ ಯೋಗ ಕೊಡುವ ಶನಿ ನಿಮಗೆ ಬರಬೇಕಾದ ಹಣವನ್ನು ತಡೆಯುತ್ತಾನೆ. ಯಾವುದೇ ಪಲಿತಾಂಶವನ್ನು ತಡೆ ಹಿಡಿದು ನಿಧಾನ ಮಾಡುತ್ತಾನೆ. ಈ ರೀತಿ ಫಲವನ್ನು ಶನಿ ಕೊಡುತ್ತಾನೆ. ಸ್ವಂತ ಉದ್ಯೋಗ ಮಾಡುವಂತವರಿಗೆ ಆದಾಯ ಮತ್ತು ಖರ್ಚು ಎರಡೂ ಸರಿಸಮನಾಗಿರುತ್ತದೆ. ವಿಶೇಷವಾಗಿ ಉಳಿತಾಯ ಸಾಧ್ಯವಾಗುವುದಿಲ್ಲ. ಪರಿಹಾರ: ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ. ಪ್ರಾತಃಕಾಲ ಅಶ್ವತವೃಕ್ಷಕ್ಕೆ 48 ದಿನಗಳ ಕಾಲ ನೀರನ್ನು ಹಾಕಿ ಪೂಜೆ ಮಾಡಿ ಜೋಡಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಪ್ರದಕ್ಷಿಣೆ ಮಾಡುವುದು

ವೃಶ್ಚಿಕ ರಾಶಿ: ಈ ವರ್ಷ ವೃಶ್ಚಿಕ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ವೃಶ್ಚಿಕ ರಾಶಿಯವರಿಗೆ ಈ ವರ್ಷ ಶನಿಯ ಫಲ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ, ಶನಿ ಈ ವರ್ಷ ಪೂರ್ಣ ಚತುರ್ಥಭಾವದಲ್ಲಿ ಸ್ಥಿತನಾಗಿರುತ್ತಾನೆ. ಚತುರ್ಥಭಾವ ಅಂದರೆ ಮನೆ, ವಾಹನ, ಭೂಮಿ, ಮನಶಾಂತಿ, ನೆಮ್ಮದಿ ಇತ್ಯಾದಿಗಳನ್ನು ಸೂಚಿಸುತ್ತದೆ. ಆದರೆ ಶನಿ ನಾಲ್ಕನೇ ಸ್ಥಾನಕ್ಕೆ ಬರುವುದರಿಂದ ಕರ್ಮ ಸ್ಥಾನವನ್ನು ನೋಡುವುದರಿಂದ ಕೆಲಸದಲ್ಲಿ ನೆಮ್ಮದಿ ಹಾಳಾಗುತ್ತದೆ. ಕೆಲಸ ಮಾಡುವ ಕಡೆ ಮೇಲಾಧಿಕಾರಿಗಳು ಜಾಸ್ತಿ ಕೆಲಸ ಕೊಡಿಸುವಂತದ್ದು, ಹೆಚ್ಚು ಕೆಲಸ ಒತ್ತಡ ಹೇರುವಂತದ್ದು, ಪದೇ ಪದೇ ಕೆಲಸ ಹೇಳುವಂತ ಸಮಸ್ಯೆಗಳನ್ನು ಶನಿ ವೃಶ್ಚಿಕ ರಾಶಿಯವರಿಗೆ ಕೊಡುತ್ತಾನೆ. ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಆರ್ಥಿಕ ಜೀವನ ರಾಹು ಯಾವುದೇ ಸಮಸ್ಯೆಗಳನ್ನು ಕೊಡದೇ ಹೋದರು ಗುರು ಕೆಲ ಸಮಸ್ಯೆಗಳನ್ನು ನೀಡುತ್ತಾನೆ. ಗುರು ಗ್ರಹ ನಿಮ್ಮನ್ನು ಸಾಲದಬಾಧೆಗೆ ತಳ್ಳಬಹುದು. ಎಷ್ಟೇ ದುಡಿದರೂ ಎಲ್ಲಾ ಖರ್ಚಾಗುತ್ತದೆ. ಈ ವರ್ಷದಲ್ಲಿ ತುಂಬಾ ಖರ್ಚಾಗುತ್ತದೆ. ಉಳಿತಾಯದ ಹಣ ಖರ್ಚಾಗುತ್ತದೆ. ಮನೆ, ಸೈಟ್ ಖರೀದಿ ಮಾಡಲೂ ನೀವು ಹಣವನ್ನು ಖರ್ಚು ಮಾಡಿಕೊಳ್ಳಬಹುದು. ಯಾವುದೇ ಕಾರಣಕ್ಕೂ ವೃಶ್ಚಿಕ ರಾಶಿಯವರು ಗುರು ಹಿರಿಯರನ್ನು ನೋಯಿಸಬಾರದು. ಮನೆಯಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವುದರಿಂದ ಜೀವನ ಸುಖಮಯವಾಗಿರುತ್ತದೆ. ತಾಳ್ಮೆ ಕಳೆದುಕೊಳ್ಲಬೇಡಿ. ಈ ಸಮಯ ನಿಮ್ಮ ತಾಳ್ಮೆಯನ್ನು ಪರಿಶೀಲಿಸಲಾಗುತ್ತದೆ. ಪರಿಹಾರ: ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.

ಧನು ರಾಶಿ: ಹಿಂದೂ ಹೊಸ ವರ್ಷವು ಧನು ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಇದರೊಂದಿಗೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಅಧಿಕಾರಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹ ಸಿಗಲಿದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಧನು ರಾಶಿಯವರಿಗೆ ಸಾಡೇಸಾತ್ ನಡೆಯುತ್ತಿತ್ತು. ಇದರಿಂದ ಈ ವರ್ಷ ಧನು ರಾಶಿಯವರಿಗೆ ಬಿಡುಗಡೆ ಸಿಕ್ಕಿರುವುದು ಖುಶಿ ವಿಚಾರ. ಧನು ರಾಶಿಯವರಿಗೆ ಎಲ್ಲಾ ಗ್ರಹಗಳು ಶುಭ ಫಲವನ್ನೇ ಕೊಡುತ್ತವೆ. ಆದರೆ ರಾಹು ಮಾತ್ರ ಅಶುಭ ಫಲವನ್ನು ಕೊಡುತ್ತಾನೆ. ಹೀಗಾಗಿ ಹೆದರುವ ಅವಶ್ಯಕತೆ ಇಲ್ಲ. ಅದಕ್ಕೆ ಪರಿಹಾರ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ. ಸಾಡೇಸಾತ್ ನಿಂದ ಬಿಡುಗಡೆಯಾದ ಬಳಿಕೆ ಸಾಕಷ್ಟು ತಿಳುವಳಿಕೆಯನ್ನು ಧನು ರಾಶಿಯವರಿಗೆ ಶನಿ ಕೊಟ್ಟಿದ್ದಾನೆ. ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೀರಿ. ಎಲ್ಲಿ ಎಷ್ಟು ಮಾತನಾಡಬೇಕು? ಯಾರ ಜೊತೆ ಸುಮ್ಮನಿರಬೇಕು? ಯಾರ ಜೊತೆ ವಾದ ಮಾಡಬಾರದು ಎನ್ನುವುದನ್ನು ನೀವು ತಿಳಿದವರಾಗಿರುವಿರಿ. ಕೆಲಸದಲ್ಲಿ ಅನುಕೂಲಕರ ಸಮಯ ಇದಾಗಿದೆ. ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿ ಹೆಚ್ಚಾಗಲಿದೆ. ನವೆಂಬರ್ ವರೆಗೂ ಕೆಲಸ ನಿಧಾನವಾಗುತ್ತದೆ. ನಂತರ ತುಂಬಾ ಉತ್ತಮ ಫಲ ಸಿಗಲಿದೆ. ಪರಿಹಾರ: ವಸ್ತ್ರಸಹಿತ, ಉದ್ದಿನ ಬೇಳೆ, ಹುರಳಿ ಕಾಳು ಹಾಗೂ ಕಪ್ಪು ಎಳ್ಳು ದಕ್ಷಿಣ ಸಮೇತವಾಗಿ ಪೂಜ್ಯರಿಗೆ ದಾನ ಕೊಡಿ.

ಮಕರ ರಾಶಿ: ಮಕರ ರಾಶಿಯ ಎರಡನೇ ಮನೆಗೆ ಶನಿ ಆಗಮನವಾಗಿದೆ. ಇಷ್ಟು ದಿನ ಗುರು ಮೀನ ರಾಶಿಯಲ್ಲಿ ಸ್ಥಿತನಾಗಿದ್ದರೆ ಯುಗಾದಿ ಕಳೆದ ನಂತರ ಗುರು ಮೇಷ ಪ್ರವೇಶ ಮಾಡುತ್ತಾನೆ. ಅಂದರೆ ಚತುರ್ಥಭಾವಕ್ಕೆ ಗುರು ಪ್ರವೇಶ ಮಾಡುತ್ತಾನೆ. ಮಕರ ರಾಶಿಯವರ ಆರ್ಥಿಕ ಜೀವನ ಈ ವರ್ಷ ಮಿಶ್ರವಾಗಿರುತ್ತದೆ. ಮಕರ ರಾಶಿಯವರ ಎರಡನೇ ಮನೆಯಲ್ಲಿ ಶನಿ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಈ ವರ್ಷ ಸ್ವಲ್ಪ ಕಷ್ಟವಾಗುತ್ತದೆ. ಅಂದರೆ ನೀವು ಯಾರಿಗಾದರೂ ಹಣವನ್ನು ಕೊಟ್ಟರೆ ಅದು ವಾಪಸ್ಸು ಬರುವುದಿಲ್ಲ. ಅವರಿಗೆ ಮೋಸ ಮಾಡುವ ಉದ್ದೇಶ ಇರುವುದಿಲ್ಲವಾದರೂ ನಿಮಗೆ ಬರುವ ಹಣ ತುಂಬಾ ನಿಧಾನವಾಗುತ್ತವೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಕೊಂಚ ಉಳಿತಾಯ ಮಾಡುವುದು ಮುಖ್ಯವಾಗಿರುತ್ತದೆ. ನೀವು ಎಲ್ಲೋ ಹಣ ಹೂಡಿಕೆ ಮಾಡಿದ್ದರೆ, ಸಾಲ ಕೊಟ್ಟಿದ್ದರೆ, ಆ ಹಣ ಬರುವುದು ನಿಧಾನವಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಮಕರ ರಾಶಿಯವರು ಈ ವರ್ಷ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳಿಗೆ ತುಂಬಾ ಉತ್ತಮ ಸಮಯ ಇದಾಗಿದೆ. ಮಕರ ರಾಶಿಯ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯುತ್ತೀರಿ. ಕೇತು ಕೂಡ ನಿಮ್ಮ ಜ್ಞಾನ ವೃದ್ಧಿಗೆ ಸಹಕಾರ ಮಾಡುತ್ತಾನೆ. ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳುವುದರ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಮಾಡುವ ಅವಕಾಶವನ್ನು ಕಾಯುತ್ತಿದ್ದರೆ ಅದೇ ಅವಕಾಶವನ್ನು ಪಡೆಯುತ್ತೀರಿ. ಮಕ್ಕಳ ಜಾತಕ ಕೂಡ ತುಂಬಾ ಚೆನ್ನಾಗಿದೆ. ಪೋಷಕರು ತುಂಬಾ ಸಂತೋಷ ಪಡುತ್ತಾರೆ. ಪರಿಹಾರ: ನೀಲ ವಸ್ತ್ರ ದಾನ ಮಾಡಿ, ಎಳ್ಳನ್ನು ನಿಮ್ಮ ಆಹಾರದಲ್ಲಿ ಬಳಸಿ, ಎಳ್ಳನ್ನು ದಾನ ಮಾಡಿ.

ಕುಂಭ ರಾಶಿ: ರಾಜಯೋಗಗಳ ಸಂಯೋಜನೆಯು ಕುಂಭ ರಾಶಿಯವರಿಗೆ ಹೆಚ್ಚಿನ ಸಮಾಧಾನವನ್ನು ತರುತ್ತದೆ. ಶನಿಯ ಸಾಡೇ ಸಾತಿಯಿಂದ ಜೀವನದಲ್ಲಿ ತೊಂದರೆಗಳು ಕಡಿಮೆಯಾಗುತ್ತವೆ. ಅದೃಷ್ಟವು ನಿಮ್ಮನ್ನು ಬೆಂಬಲಿಸಲು ಪ್ರಾರಂಭಿಸುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಕುಂಭ ರಾಶಿಯವರು ಈ ವರ್ಷ ಹಣದ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಶೇರ್ ಮಾರುಕಟ್ಟೆಯಿಂದ ಅಥವಾ ಯಾರಿಗೋ ಹಣ ಕೊಟ್ಟು ಮೋಸ ಹೋಗಬಹುದು. ಹಣಕಾಸಿನ ವಿಚಾರದಲ್ಲಿ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳಬೇಡಿ. ಹೂಡಿಕೆಯನ್ನು ತಪ್ಪಿಸಿ. ಪಾಲುದಾರರು ನಿಮಗೆ ಸಮಸ್ಯೆ ತರಬಹುದು. ಹೀಗಾಗಿ ಯೋಚನೆ ಮಾಡಿ ಕೆಲಸ ಮಾಡಿ. ಪರಿಸ್ಥಿತಿ ಎದುರಿಸಲು ಸಾಧ್ಯವಾದರೆ ಮಾತ್ರ ಹಣಕಾಸಿನ ವಿಚಾರಕ್ಕೆ ಕೈ ಹಾಕಿ. ಉನ್ನತ ವ್ಯಾಸಾಂಗ ಮಾಡುವವರಿಗೆ ಉತ್ತಮವಾಗಿರುತ್ತದೆ. ಮನೆ, ಭೂಮಿ, ವಾಹನ ಖರೀದಿಸಲು ಈ ಸಮಯ ಉತ್ತಮವಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸಾಲ ಮಾಡಿ ಮನೆ, ಭೂಮಿ, ವಾಹನ ಖರೀದಿಗೆ ಮುಂದಾಗಬೇಡಿ. ಇದು ನಿಮಗೆ ಕಷ್ಟವನ್ನು ನೀಡಬಹುದು. ಸಾಲ ತೀರಿಸಲಾಗದಂತ ಸಮಸ್ಯೆಗಳು ನಿಮಗೆ ಬರಬಹುದು. ಪರಿಹಾರ: ಸಂಕಷ್ಟ ಚತುರ್ಥಿ ವ್ರತ ಮಾಡಿ.

ಮೀನ ರಾಶಿ: ಹಿಂದೂ ಹೊಸ ವರ್ಷ ಶೋಭಾಕೃತ್‌ ಸಂವತ್ಸರಲ್ಲಿ ಮೀನ ರಾಶಿಯ 7 ನೇ ಮನೆಯಲ್ಲಿ ಗುರುವಿನ ಸ್ಥಾನ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ತರಬಹುದು. ಶನಿಯ ಸ್ಥಾನವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕೆಲವು ಸವಾಲುಗಳನ್ನು ತರಬಹುದು. ಇದು ಅನಿರೀಕ್ಷಿತ ಬದಲಾವಣೆಗಳು ಅಥವಾ ಅಡೆತಡೆಗಳಾಗಿ ಪ್ರಕಟವಾಗಬಹುದು. ಇದಕ್ಕೆ ನೀವು ಹೊಂದಿಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ಗಮನಹರಿಸುವುದು ಮತ್ತು ಶಿಸ್ತುಬದ್ಧವಾಗಿರುವುದು ಮುಖ್ಯ, ಮತ್ತು ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ಅಥವಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ವ್ಯಾಪಾರ ಪಾಲುದಾರಿಕೆ ಅಥವಾ ಹೂಡಿಕೆಗಳ ಮೂಲಕ ಹೆಚ್ಚಿದ ಆದಾಯವಾಗಿ ಪ್ರಕಟವಾಗಬಹುದು.ನಿಮ್ಮ ಜಾತಕದ 8 ನೇ ಮನೆಯಲ್ಲಿ ಶಿಸ್ತು ಮತ್ತು ಜವಾಬ್ದಾರಿಯ ಗ್ರಹವಾದ ಶನಿಯ ಸಾಗಣೆಯು ಕೆಲವು ಹಣಕಾಸಿನ ಸವಾಲುಗಳನ್ನು ತರಬಹುದು. ಇದು ಅನಿರೀಕ್ಷಿತ ವೆಚ್ಚಗಳು, ನಷ್ಟಗಳು ಅಥವಾ ಹಣಕಾಸಿನ ಹಿನ್ನಡೆಗಳಾಗಿ ಪ್ರಕಟವಾಗಬಹುದು. ಪರಿಹಾರ: ಸೂರ್ಯನಮಸ್ಕಾರ ಮಾಡಿ ಮತ್ತು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

ಲೇಖನ: ವೇ!!ಶ್ರೀ!!ಕುಮಾರಸ್ವಾಮಿ, ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ

Published On - 11:14 am, Wed, 22 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ