ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ದ್ವಿತೀಯ, ನಿತ್ಯನಕ್ಷತ್ರ : ರೇವತೀ, ಯೋಗ : ಐಂದ್ರ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02 :10 ರಿಂದ 03:41ರವರೆಗೆ, ಯಮಘಂಡ ಕಾಲ 06:36 ರಿಂದ 08:07ರ ವರೆಗೆ, ಗುಳಿಕ ಕಾಲ 09:38 ರಿಂದ ಮಧ್ಯಾಹ್ನ 11:09ರ ವರೆಗೆ.
ಸಿಂಹ: ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವುದು ಉತ್ತಮ. ಅನೇಕ ದಿನಗಳಿಂದ ಸಣ್ಣ ಪುಟ್ಟ ಅನಾರೋಗ್ಯದ ತೊಂದರೆಯಾಗಲಿದ್ದು ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ಅಪರಿಚಿತರ ವರ್ತನೆಯಿಂದ ಸಹವಾಸವನ್ನು ಮಾಡಬೇಡಿ. ಸಹಾಯವನ್ನು ಮಾಡಿ ಸಮಯವನ್ನು ವ್ಯರ್ಥಮಾಡಬೇಡಿ. ವೃತ್ತಿಯಿಂದ ನಿಮಗೆ ಬೇಸರವುಂಟಾಗಬಹುದು. ಯಾವುದೇ ನಿರ್ಧಾರಗಳನ್ನು ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಡಿ. ಹಣವು ಖರ್ಚಾಗುವುದೆಂಬ ಆತಂಕ ಬೇಡ. ಆದಿತ್ಯಹೃದಯವನ್ನು ಪಠಿಸಿ.
ಕನ್ಯಾ: ಆಲಸ್ಯವನ್ನು ಇಂದು ಮೈಗೂಡಿಸಿಕೊಂಡಿರುತ್ತೀರಿ. ಫಲವು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ಮಕ್ಕಳಿಂದ ತಲೆ ತಗ್ಗಿಸುವ ಕೆಲಸವಾಗಲಿದೆ. ಸಮಾಜಸೇವೆಗೆ ನಿಮ್ಮನ್ನು ತೊಡಗಿಸಿಕೊಳ್ಳುವ ಹಂಬಲದಲ್ಲಿ ಇರುತ್ತೀರಿ. ಆರೋಗ್ಯದ ವ್ಯತ್ಯಸವನ್ನು ಗಮನಿಸುತ್ತ ವೈದ್ಯರ ಸಲಹೆಯನ್ನು ನಿರಾಕರಿಸದೇ ಹಾಗೆಯೇ ನಡೆದುಕೊಳ್ಳಿ. ಬೆಳಗಿನಿಂದ ಮನಸ್ಸು ಭಾರವಾದಂತೆ ಅನ್ನಿಸುವುದು. ಬಹಳ ದಿನಗಳಿಂದ ಇದ್ದ ಆಸೆಯನ್ನು ಇಂದು ಪೂರೈಸಿಕೊಳ್ಳುವಿರಿ. ಚಕ್ರಾಣಿಯಾದ ಮಹಾವಿಷ್ಣುವಿನ ಸ್ತೋತ್ರಮಾಡಿ.
ತುಲಾ: ಇಂದು ಉದ್ಯೋಗಸ್ಥರು ಒತ್ತಡಗಳು ಇಲ್ಲದೇ ನಿಶ್ಚಿಂತೆಯಿಂದ ಕೆಲಸವನ್ನು ಮಾಡುವಿರಿ. ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ ಇದೆ. ವಿಶ್ವಾಸಘಾತಕರು ನಿಮ್ಮ ಸುತ್ತಲೇ ಇದ್ದಾರೆ ಎಂದು ಅನ್ನಿಸುತ್ತದೆ. ಸಣ್ಣ ಅನಾಹುತವೂ ನಿಮ್ಮ ವೃತ್ತಿಗೆ ಕಂಟಕವಾದೀತು. ಸ್ತ್ರೀಯರಿಂದ ಅಪಮಾನಕ್ಕೆ ಒಳಗಾಗುವಿರಿ. ಇದು ನಿಮ್ಮ ಮನೋಬಲವನ್ನು ಕುಗ್ಗಿಸೀತು. ಸ್ವಂತ ಆಲೋಚನೆಗಳಿಂದ ಮಾಡಬೇಕಾದುದನ್ನು ಮಾಡಿಕೊಳ್ಳಿ. ಋಣಮುಕ್ತರಾಗಲು ನೀವು ಬಹಳ ಶ್ರಮಪಡಬೇಕಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಬೇರಯಂತ್ರವನ್ನು ತಂದು ಮನೆಯಲ್ಲಿ ಇರಿಸಿಕೊಳ್ಳಿ. ಸಂಪತ್ತಿನ ಹರಿವು ಇರುವುದು.
ವೃಶ್ಚಿಕ: ರೂಪಕ್ಕೆ ತಕ್ಕಂತೆ ಸ್ವರೂಪವಿರುವುದಿಲ್ಲ ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತ ಇರಿ. ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ನಿಮಗೆ ಸಲ್ಲದ ಮಾತುಗಳು ನಿಮ್ಮೆದುರು ಬರಬಹುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ನಿಮ್ಮನ್ನು ಅನ್ಯರಂತೆ ಕಂಡಾರು. ಮೇಲಧಿಕಾರಿಗಳ ಜೊತೆ ಅಥವಾ ಸಹೋದ್ಯೋಗಿಗಳ ಜೊತೆ ಕಲಹವಾದರೂ ಆದೀತು. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ದಾಂಪತ್ಯದಲ್ಲಿ ವಿರಸವು ಮೂಡಲಿದೆ. ಮಾತನ್ನು ಕೇಳಿಸಿಕೊಳ್ಳುವರ ಜೊತೆ ಮಾತ್ರ ಮಾತನಾಡಿ. ಅನ್ಯಕಾರ್ಯಗಳಿಗೆ ಸಂಪತ್ತು ನಷ್ಟವಾಗಲಿದೆ. ಲಕ್ಷ್ಮೀಸ್ತೋತ್ರವನ್ನು ಮಾಡಿ. ಸಂಪತ್ತಿನ ವ್ಯಯವನ್ನು ತಡೆಯುವಳು.
Published On - 6:00 am, Thu, 23 March 23