Horoscope Today: ದಿನ ಭವಿಷ್ಯ; ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರದಿಂದಿರಿ

| Updated By: sandhya thejappa

Updated on: Dec 07, 2021 | 6:40 AM

Horoscope ಡಿಸೆಂಬರ್ 07, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today: ದಿನ ಭವಿಷ್ಯ; ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರದಿಂದಿರಿ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಚಳಿಗಾಲ, ಮಂಗಳವಾರ, 7, ಡಿಸೆಂಬರ್ 2021. ಉತ್ತರಾಷಾಢ ನಕ್ಷತ್ರ. ರಾಹುಕಾಲ: ಇಂದು ಮಧ್ಯಾಹ್ನ 2.53ರಿಂದ ಸಂಜೆ 4.16ರ ತನಕ. ಸೂರ್ಯೋದಯ: ಬೆಳಿಗ್ಗೆ 6.33. ಸೂರ್ಯಾಸ್ತ: ಸಂಜೆ 5.41ಕ್ಕೆ.

ತಾ.07-12-2021 ರ ಮಂಗಳವಾರದ ರಾಶಿಭವಿಷ್ಯ.

ಮೇಷ
ನೆರೆಹೊರೆಯವರೊಂದಿಗೆ ಕಲಹ ಸಂಭವ. ಸಮಾಧಾನದ ನಡವಳಿಕೆ ಅಗತ್ಯ. ಮಕ್ಕಳಿಂದ ನೆಮ್ಮದಿ. ವಿವಾಹ ಯೋಗ. ಗೃಹ ನಿರ್ಮಾಣ ಕೆಲಸಗಳಲ್ಲಿ ಪ್ರಗತಿ. ಸಂಖ್ಯೆ: 6

ವೃಷಭ
ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಾಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಉದ್ಯಮದಲ್ಲಿ ಪ್ರಗತಿ. ಸಂಖ್ಯೆ: 9

ಮಿಥುನ
ಸೋದರರಿಂದ ಸಲಹೆ. ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ದೂರದ ಊರಿಂದ ಪ್ರಮುಖ ಸುದ್ದಿಯೊಂದನ್ನು ಕೇಳಲಿದ್ದೀರಿ. ಸಂಖ್ಯೆ: 8

ಕಟಕ
ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ಹೊಸ ಅತಿಥಿ ಆಗಮನ ಸಾಧ್ಯತೆ. ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು, ನೆಮ್ಮದಿಯ ಜೀವನಕ್ಕೆ ನಾಂದಿ. ಶಿವ ಅಷ್ಟೋತ್ತರ ಪಠಿಸಿ. ಸಂಖ್ಯೆ: 2

ಸಿಂಹ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ಯಂತ್ರೋಪಕರಣಗಳ ಖರೀದಿಗಾಗಿ ಖರ್ಚು. ಸಂಖ್ಯೆ: 4

ಕನ್ಯಾ
ಪ್ರಾಪ್ತ ವಯಸ್ಕರಿಗೆ ಉತ್ತಮ ಸಂಬಂಧಗಳು ದೊರಕುವ ಸಾಧ್ಯತೆ. ಕೃಷಿ ಒಕ್ಕಲುತನ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ತೊಡಕು. ಮಕ್ಕಳಿಂದ ಶುಭ ವಾರ್ತೆ. ಸಂಖ್ಯೆ: 7

ತುಲಾ
ಹಿರಿಯರ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರತೆ ತೋರಿ ಗಂಡಾಂತರಕ್ಕೆ ಸಿಲುಕದಿರಿ. ಸಂಖ್ಯೆ: 8

ವೃಶ್ಚಿಕ
ದೂರದ ಪ್ರಯಾಣ ಯೋಗ. ವಾಹನ ಖರೀದಿ ಸಾಧ್ಯತೆ. ನ್ಯಾಯಾಲಯದಲ್ಲಿ ಜಯ. ಹಳದಿ ಲೋಹ ವ್ಯಾಪಾರಿಗಳಿಗೆ ಉತ್ತಮ ಲಾಭ. ಕುಟುಂಬ ಸದಸ್ಯರಿಂದ ಹೊಸ ಕೆಲಸ-ಕಾರ್ಯಗಳಿಗೆ ಸಹಕಾರ ದೊರಕಿ ನಿರಾಳತೆ. ಸಂಖ್ಯೆ: 1

ಧನು
ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಕುಲದೇವತಾ ದರ್ಶನ ಲಭ್ಯ. ಋಣ ಪರಿಹಾರದಿಂದ ಸಂತೃಪ್ತಿ. ಚಿನ್ನಾಭರಣ ಖರೀದಿ ಸಾಧ್ಯತೆ. ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುವಿರಿ. ಸಂಖ್ಯೆ: 3

ಮಕರ
ವೃತ್ತಿ ಸಮಸ್ಯೆಗಳಿಂದ ಪರಿಹಾರ. ಮಹಿಳೆಯರು, ಕಲಾವಿದರುಗಳಿಗೆ ಉತ್ತಮ ಅವಕಾಶ ದೊರೆತು ಗೌರವಾದರ. ವಿವಾದಾತ್ಮಕ ಸಮಸ್ಯೆಗಳಿಂದ ಮುಕ್ತರಾಗುವಿರಿ. ಸಂಖ್ಯೆ: 5

ಕುಂಭ
ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ವೈದ್ಯರ ಸಲಹೆ ಅಗತ್ಯ. ಅನಾವಶ್ಯಕ ವ್ಯವಹಾರಕ್ಕೆ ತಲೆಹಾಕದಿರಿ. ಬಂಧುಗಳ ಆಗಮನದಿಂದಾಗಿ ಸಂತಸ. ಸಂಖ್ಯೆ: 2

ಮೀನ
ಗೃಹಿಣಿಯರು ಆಯುಧಗಳ ವಿಷಯದಲ್ಲಿ ಜಾಗರೂಕರಾಗಿರಿ. ಆಧ್ಯಾತ್ಮಿಕ ಜೀವನದಲ್ಲಿ ಸಂತೃಪ್ತಿ ಕಾಣುವಿರಿ. ವಿಶೇಷ ವ್ಯವಹಾರಗಳಲ್ಲಿ ಅಗತ್ಯ ಪ್ರೋತ್ಸಾಹಗಳು ದೊರಕುವುದು. ಸಂಖ್ಯೆ: 6

 

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937