ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ಚತುರ್ದಶಿ ತಿಥಿ, ಗುರುವಾರ, ಜುಲೈ 08, 2021. ಮೃಗಶಿರ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1.58 ರಿಂದ ಇಂದು ಸಂಜೆ 3.36 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.47. ಸೂರ್ಯಾಸ್ತ: ಸಂಜೆ 6.54
ತಾ.08-07-2021 ರ ಗುರುವಾರದ ರಾಶಿಭವಿಷ್ಯ.
ಮೇಷ: ಯಾವುದೇ ಅಡೆತಡೆ ಇಲ್ಲದ ನಿರಾತಂಕ ಜೀವನ ಇರುವುದು. ಸಾಮಜಿಕ ಕಾರ್ಯಗಳಿಂದ ಗೌರವಾದರಗಳು ದೊರೆಯುವವು. ಆಸೆಗೆ ತಕ್ಕಂತೆ ಫಲಗಳು ಕೈಗೂಡುವವು. ಬಂಧುಗಳಲ್ಲಿ ಮನಸ್ತಾಪ ಕಂಡುಬರುವುದು. ಶುಭ ಸಂಖ್ಯೆ: 9
ವೃಷಭ: ಸ್ವಪ್ರತಿಷ್ಟೆ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವುದು. ಹಳೆಯ ಮಿತ್ರರ ಒಡನಾಟ ಸಂತಸ ತರುವುದು. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಇರುವುದು. ಶುಭ ಸಂಖ್ಯೆ: 1
ಮಿಥುನ: ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 8
ಕಟಕ: ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಉನ್ನತ ವ್ಯಾಸಂಗದ ಯೋಗವಿದೆ. ವಿದೇಶ ಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವುದು. ಆರೋಗ್ಯದ ಮೇಲೆ ನಿಗಾ ಇರಲಿ. ಶುಭ ಸಂಖ್ಯೆ: 2
ಸಿಂಹ: ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವದು. ಶ್ರಮಿಕವರ್ಗಕ್ಕೆ ಉನ್ನತಿ ಇರುವುದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವುದು. ಶುಭ ಸಂಖ್ಯೆ: 7
ಕನ್ಯಾ: ಸರಳತೆ ದುರುಪಯೋಗವಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿಯ ಕುಂದು ಕೊರತೆಗಳನ್ನು ನಿಭಾಯಿಸುವಿರಿ. ಮಹತ್ವದ ಅಧಿಕಾರ ದೊರೆಯುವ ಯೋಗವಿದೆ. ವ್ಯಾಪಾರದಲ್ಲಿ ಹೆಚ್ಚಿನ ಹಣ ಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 3
ತುಲಾ: ಪೂರ್ವತಯಾರಿ ಇಲ್ಲದ ಕೆಲಸವನ್ನೂ ಸಕಾಲಕ್ಕೆ ಮುಗಿಸುವಿರಿ. ಅನಿಯಮಿತ ಬದುಕು ಇರುವುದು. ಮೇಲಧಿಕಾರಿಗಳ ಒತ್ತಡ ಬೇಸರ ತರುವುದು. ಕಾರ್ಯಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗುವುದು. ಶ್ರಮಕ್ಕೆ ತಕ್ಕ ಲಾಭ ದೊರೆಯುವುದು. ಶುಭ ಸಂಖ್ಯೆ: 6
ವೃಶ್ಚಿಕ: ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ವಿವಿಧ ಮೂಲಗಳಿಂದ ಸಹಾಯ ದೊರೆಯುವುದು. ಸ್ವಸಾಮರ್ಥ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 4
ಧನು: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು. ಶುಭ ಸಂಖ್ಯೆ: 5
ಮಕರ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 6
ಕುಂಭ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವುದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ. ಶುಭ ಸಂಖ್ಯೆ: 1
ಮೀನ: ಆದಾಯ ಹೆಚ್ಚುವುದು. ವ್ಯವಹಾರಿಕ ಏಳ್ಗೆ ಇರುವುದು. ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಶಾಂತಚಿತ್ತರಾಗಿ ವ್ಯವಹರಿಸಿರಿ. ಕೆಲಸದಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಶುಭ ಸಂಖ್ಯೆ: 9