Horoscope Today – ದಿನ ಭವಿಷ್ಯ; ಈ ರಾಶಿಯವರಿಗೆ ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ

| Updated By: Skanda

Updated on: May 14, 2021 | 6:36 AM

Horoscope ಮೇ 14, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today - ದಿನ ಭವಿಷ್ಯ; ಈ ರಾಶಿಯವರಿಗೆ ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲಪಕ್ಷ, ಬಿದಿಗೆ ತಿಥಿ, ಶುಕ್ರವಾರ, ಮೇ 14, 2021. ರೋಹಿಣಿ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.34 ರಿಂದ ಇಂದು ಮಧ್ಯಾಹ್ನ 12.11 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.44. ಸೂರ್ಯಾಸ್ತ: ಸಂಜೆ 6.40.

ತಾ.14-05-2021 ರ ಶುಕ್ರವಾರದ ರಾಶಿಭವಿಷ್ಯ
ಅಕ್ಷಯ ತೃತೀಯ ಶುಭಾಶಯಗಳು

ಮೇಷ: ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವುದು. ಶುಭ ಸಂಖ್ಯೆ: 8

ವೃಷಭ: ವಿವಿಧ ಮೂಲಗಳಿಂದ ಸಹಾಯ ದೊರೆಯುವುದು. ಉದ್ಯೋಗದಲ್ಲಿ ಅಭಿವೃದ್ಧಿ ಇರುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಲೆಕ್ಕಾಚಾರ ತಪ್ಪದಂತೆ ಎಚ್ಚರವಹಿಸಿರಿ. ಮನೆಯಲ್ಲಿ ಮಂಗಳಕಾರ್ಯ ಜರುಗುವುದು. ಶುಭ ಸಂಖ್ಯೆ: 1

ಮಿಥುನ: ಚಂಚಲಚಿತ್ತದಿಂದ ಕಾರ್ಯಹಾನಿಯಾಗುವ ಲಕ್ಷಣಗಳಿವೆ. ಆಸ್ತಿ ಸಂಬಂದಿತ ಕ್ರಯವಿಕ್ರಯ ವ್ಯವಹಾರಗಳು ಕುದುರುವವು. ಅನವಶ್ಯಕ ಮಾತಿನಿಂದ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ತಜ್ಞರ ಸಹಾಯ ಪಡೆಯಿರಿ. ಶುಭ ಸಂಖ್ಯೆ: 4

ಕಟಕ: ಅಭದ್ರತೆ ಕಾಡುವ ಸಂಭವವಿದೆ. ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ. ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು. ಶುಭ ಸಂಖ್ಯೆ: 3

ಸಿಂಹ: ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವುದು. ಅಡೆತಡೆಗಳ ನಿವಾರಣೆ ಯಾಗುವುದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವದಿಲ್ಲ. ಹಿರಿಯರ ಸಲಹೆ ದೊರೆಯುವುದು. ಶುಭ ಸಂಖ್ಯೆ: 5

ಕನ್ಯಾ: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಗೊಂದಲಕ್ಕೆ ಒಳಗಾಗದೆ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು. ಶುಭ ಸಂಖ್ಯೆ: 2

ತುಲಾ: ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ: 9

ವೃಶ್ಚಿಕ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 7

ಧನು: ವ್ಯಾಪಾರಾದಿ ಉದ್ಯಮಗಳಲ್ಲಿ ಪ್ರಗತಿಯಿದ್ದು ಧನಲಾಭ, ಐಶ್ವರ್ಯ ವೃದ್ಧಿಯಿದೆ. ಆದರೆ ವ್ಯವಹಾರಿಕ ಕಿರಿಕಿರಿ ಇರುವುದು. ಅನಿರೀಕ್ಷಿತ ಧನಲಾಭವೂ ಇದೆ. ಕೈಗೊಂಡ ಕಾರ್ಯಗಳಿಗೆ ವಿಘ್ನ ತೋರಿದರೂ ನೆರವೇರುತ್ತದೆ. ಶುಭ ಸಂಖ್ಯೆ: 4

ಮಕರ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 6

ಕುಂಭ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ. ಶುಭ ಸಂಖ್ಯೆ: 8

ಮೀನ: ನಿಮ್ಮ ಶತ್ರುಗಳು ತಮ್ಮ ಕೃತ್ಯಗಳಿಂದ ತಾವಾಗಿಯೇ ಮಣಿಯುವರು. ಶತ್ರುದೋಷ ಪರಿಹಾರವಾಗುವುದು.ಚೋರ ಭಯ, ಅಗ್ನಿ ಭಯ ಮುಂತಾದ ಭಯ ನಿವಾರಣೆಯಾಗುವುದು. ಪುತ್ರಸೌಖ್ಯ, ಮನೆಯಲ್ಲಿ ಸಂತೋಷವಿರುವುದು. ಶುಭ ಸಂಖ್ಯೆ: 3

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Published On - 6:34 am, Fri, 14 May 21