Horoscope Today – ದಿನ ಭವಿಷ್ಯ; ಈ ರಾಶಿಯವರಿಗೆ ಮಹತ್ವದ ಕೆಲಸದಲ್ಲಿ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ
Horoscope ಮೇ 22, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲಪಕ್ಷ, ದಶಮಿ ತಿಥಿ, ಶನಿವಾರ, ಮೇ 22, 2021. ಉತ್ತರೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 8.57 ರಿಂದ ಇಂದು ಬೆಳಿಗ್ಗೆ 10.34 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.42. ಸೂರ್ಯಾಸ್ತ: ಸಂಜೆ 6.43.
ತಾ.22-05-2021 ರ ಶನಿವಾರದ ರಾಶಿಭವಿಷ್ಯ:-
ಮೇಷ: ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವುದು. ಶುಭ ಸಂಖ್ಯೆ: 8
ವೃಷಭ: ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನಲಾಭವಾದರೂ ಹಳೆಯ ಸಾಲ ತೀರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 6
ಮಿಥುನ: ಪರಿವಾರದಲ್ಲಿ ಹೊಸಕಳೆ ಬರುವುದು. ಕುಟುಂಬದಲ್ಲಿ ಸುಖಯ ಇರುವುದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು. ಶುಭ ಸಂಖ್ಯೆ: 3
ಕಟಕ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 5
ಸಿಂಹ: ವಾಸಸ್ಥಾನ, ಉದ್ಯೋಗಸ್ಥಾನ ಬದಲಾವಣೆಯ ಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ವ್ಯವಹಾರಿಕ ಸೂಕ್ಷ್ಮತೆಯಿಂದ ಹಾನಿ ತಪ್ಪಿಸಿರಿ. ವೃಥಾಚಿಂತೆ ಇರುವುದು. ಹೊಸ ವ್ಯವಹಾರಗಳು ಬೇಡ. ಶುಭ ಸಂಖ್ಯೆ: 1
ಕನ್ಯಾ: ಎಲ್ಲವೂ ಇದ್ದಂತೆ ಇರಲಿ ಎಂಬ ಮನೋಭಾವನೆ ಇರುವುದು. ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ವಿದೇಶ ಪ್ರಯಾಣದ ಯೋಗವಿದೆ.ಉದ್ಯೋಗದಲ್ಲಿ ಪ್ರಗತಿ ಮುಂದುವರೆಯುವುದು. ಶುಭ ಸಂಖ್ಯೆ: 7
ತುಲಾ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವುದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವುದು. ಶುಭ ಸಂಖ್ಯೆ: 4
ವೃಶ್ಚಿಕ: ಮಾನಸಮ್ಮಾನಗಳು ದೊರೆಯುವವು. ಕಂಕಣಬಲ ಕೂಡಿಬರುವದು. ಮನೋಭಿಲಾಷೆಗಳು ಈಡೇರುವವು. ಆದರೆ ಉದ್ಯೋಗದಲ್ಲಿ ನಿರಾಸಕ್ತಿಯನ್ನು ಇರುವದು ಮತ್ತು ವ್ಯವಹಾರದಲ್ಲಿ ಅಸಮಾಧಾನ ಕಂಡುಬರುವದು. ಶುಭ ಸಂಖ್ಯೆ: 8
ಧನು: ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ. ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲಸ ನಿರ್ವಹಿಲು ಆಗದಂತಹ ಸ್ಥಿತಿ ಬರಬಹುದು. ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 9
ಮಕರ: ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಅಗೌರವ ಆಗುವ ಸಂಭವ ಇರುವದರಿಂದ ಸೂಕ್ಷ್ಮವಾಗಿರುವದು ಉತ್ತಮ. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವುದು. ಶುಭ ಸಂಖ್ಯೆ: 2
ಕುಂಭ: ಅನಿರೀಕ್ಷಿತ ಸಂಚಾರ ಒದಗಿಬಂದರೂ ತೃಪ್ತಿದಾಯಕವೆನ್ನಬಹುದು. ವ್ಯಾಪಾರಾದಿ ಉದ್ಯಮಗಳಲ್ಲಿ ಅಪೇಕಿಸಿದಂತೆ ಪ್ರಗತಿ. ಲಾಭ ತೋರಿಬರುತ್ತದೆ. ಹೊಸದಾದ ಆಲೋಚನಾ ಸಿದ್ಧಿ. ವಿಪರೀತ ಖರ್ಚು. ಶುಭ ಸಂಖ್ಯೆ: 6
ಮೀನ: ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ. ಶುಭ ಸಂಖ್ಯೆ: 8