ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ದಶಮಿ ತಿಥಿ, ಶನಿವಾರ, ಫೆಬ್ರವರಿ 26, 2022. ಮೂಲ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 09.32ರಿಂದ ಇಂದು ಬೆಳಿಗ್ಗೆ 11.00ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.36. ಸೂರ್ಯಾಸ್ತ: ಸಂಜೆ 6.21
ತಾ.26-02-2022 ರ ಶನಿವಾರದ ರಾಶಿಭವಿಷ್ಯ.
ಕಟಕ: ಅಭದ್ರತೆ ಕಾಡುವ ಸಂಭವವಿದೆ. ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ. ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು. ಶುಭ ಸಂಖ್ಯೆ: 7
ಸಿಂಹ: ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಉನ್ನತ ಶಿಕ್ಷಣದ ಕನಸು ಈಡೇರುವುದು. ಶುಭ ಸಂಖ್ಯೆ: 2
ಕನ್ಯಾ: ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸಿ. ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಾಮಾಜಿಕ ಗೌರವಗಳು ಅರಸಿಕೊಂಡು ಬರಲಿವೆ. ಮಾಲೀಕತ್ವದ ಆಸ್ತಿ ಕೈತಪ್ಪದಂತೆ ಎಚ್ಚರಿಕೆ ವಹಿಸಿರಿ. ಧನದ ಅಪವ್ಯಯ ಆಗದಂತೆ ನೋಡಿರಿ. ಶುಭ ಸಂಖ್ಯೆ: 5
ತುಲಾ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 2
ವೃಶ್ಚಿಕ: ಅನಿರೀಕ್ಷಿತ ಸಂಚಾರ ಒದಗಿಬಂದರೂ ತೃಪ್ತಿದಾಯಕವೆನ್ನಬಹುದು. ವ್ಯಾಪಾರಾದಿ ಉದ್ಯಮಗಳಲ್ಲಿ ಅಪೇಕಿಸಿದಂತೆ ಪ್ರಗತಿ. ಲಾಭ ತೋರಿಬರುತ್ತದೆ. ಹೊಸದಾದ ಆಲೋಚನಾ ಸಿದ್ಧಿ. ವಿಪರೀತ ಖರ್ಚು. ಶುಭ ಸಂಖ್ಯೆ: 8
ಧನು: ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವುದು. ಶುಭ ಸಂಖ್ಯೆ: 6
ಮಕರ: ಅಪರಿಮಿತ ಖರ್ಚು ತೋರಿದರೂ ಅಡಚಣೆಯಾಗುವ ಸಂಭವವಿಲ್ಲದೆ. ಸ್ಥಾನಮಾನಗಳೂ ಭದ್ರವಾಗಿ ಸಾಂಸಾರಿಕ ದೃಷ್ಟಿಯಲ್ಲೂ ಸುಖದಾಯಕ, ವಿಶೆಷ ಪ್ರಯತ್ನದಿಂದ ವ್ಯವಹಾರ ಸಿದ್ಧಿ ಇರುವುದು. ಶುಭ ಸಂಖ್ಯೆ: 3
ಕುಂಭ: ಯಶಸ್ಸು. ಶ್ರಮಕ್ಕೆ ತಕ್ಕ ಲಾಭ, ಕೀರ್ತಿ, ಕೃಷಿಯಲ್ಲಿ ಉತ್ತಮ ಸಾಧನೆ, ಮನೆಯಲ್ಲಿ ಮಂಗಲಕಾರ್ಯ, ಬುಧ, ಮಂಗಳ ಯೋಗ ಶುಭದಾಯಕ ಆದರೂ ಕಿರಿಕಿರಿ ಸಂಭವ. ಪರಿಹಾರಕ್ಕಾಗಿ ಅನ್ನದಾನ ಮಾಡಿರಿ. ಶುಭ ಸಂಖ್ಯೆ: 6
ಮೀನ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 1. ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937