Nitya Bhavishya: ಈ ರಾಶಿಯವರಿಗೆ ವ್ಯಾಪಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ

| Updated By: ಸಾಧು ಶ್ರೀನಾಥ್​

Updated on: Feb 09, 2023 | 6:00 AM

2023 ಫೆಬ್ರವರಿ 09 ಗುರುವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರಿಗೆ ವ್ಯಾಪಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
ಪ್ರಾತಿನಿಧಿಕ ಚಿತ್ರ
Image Credit source: www.india.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 09 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ :ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ, ಸೂರ್ಯಾಸ್ತ ಸಂಜೆ 06 ಗಂಟೆ 33 ನಿಮಿಷಕ್ಕೆ. ರಾಹು ಕಾಲ 02:14 – 03:40, ಯಮಘಂಡ ಕಾಲ 07:00 ರಿಂದ 08 : 27, ಗುಳಿಕ ಕಾಲ 09:54 ರಿಂದ 11:20.

ಮೇಷ: ಇಂದು ನೀವು ಅಂದುಕೊಂಡ ಕೆಲಸಗಳು ಆಗದೇ ಇರಬಹುದು. ಪ್ರಯಾಣದ ಆಯಾಸವು ನಿಮಗೆ ವಿಶ್ರಾಂತಿಯನ್ನು ಕೇಳಬಹುದು. ಸಂಗಾತಿಯೊಂದಿಗೆ ಹಿಂದೆಂದೂ ಕಳೆಯದ ರೀತಿಯಲ್ಲಿ ಇರುವಿರಿ. ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ನೀವು ಏಳ್ಗೆಯನ್ನು ಕಾಣುವಿರಿ. ನಿಮ್ಮ ಸ್ವಾಂತ್ರ್ಯಕ್ಕೆ ಅಡ್ಡಿಯಾಗುವ ಘಟನೆಗಳು ನಡೆಯಬಹುದು. ಮಾತುಗಳೂ ಕೇಳಬಹುದು. ವಿಶಾಲವಾದ ಸ್ಥಳದಲ್ಲಿ ಒಂಟಿಯಾಗಿ ಓಡಾಡಲು ಇಚ್ಛಿಸುವಿರಿ. ಕೆಲಸವು ಒತ್ತಡವಿಲ್ಲದೇ ಮುಗಿಯುವುದು.

ವೃಷಭ: ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡಿ. ಅವರು ನಿಮ್ಮ ನಿರೀಕ್ಷೆಯಲ್ಲಿ ಇರಬಹುದು. ಕೆಲಸದ ಒತ್ತಡವಿದ್ದು ಹೊಸಬರ ಭೇಟಿಯಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ತಿಳಿಯುವುವು. ಮನಸ್ಸು ಭವಿಷ್ಯದ ಜೀವನವನ್ನು ಕಲ್ಪಿಸಿಕೊಂಡು ಸಂತೋಷಪಡುವುದು. ಯಾರ ಮಾತಿಗೆ ಎಷ್ಟು ಬೆಲೆ ಕೊಡಬೇಕು ಎನ್ನುವುದನ್ನು ಅರಿತಿದ್ದೀರಿ. ದುಃಖಕ್ಕೆ ಅವಕಾಶಗಳನ್ನು ಕೊಡಬೇಡಿ. ನಿಮ್ಮ ನಗುಮೊಗದ ಮಾತು ಎಲ್ಲರಿಗೂ ಆಪ್ತವಾಗುವುದು.

ಮಿಥುನ: ನೀವು ಮಾಡುತ್ತಿರುವ ಕೆಲಸವು ನಿಮಗೆ ತೃಪ್ತಿಯನ್ನು ತರುವುದು. ಮೇಲಧಿಕಾರಿಗಳಿಂದ ಪ್ರಶಂಸೆಗಳು ಬರಲಿವೆ. ಸಂಗಾತಿಯೊಂದಿಗೆ ವಿನಾಕಾರಣ ಅಥವಾ ಸಣ್ಣ ಕಾರಣಗಳಿಗೆ ಮುನಿಸಿಕೊಳ್ಳುವಿರಿ.‌ ಅದೇ ದೊಡ್ಡ ಕಲಹವಾಗಲೂಬಹುದು. ತಂದೆ – ತಾಯಿಗಳ ಸೇವೆಯನ್ನು ಮಾಡಲು ನಿಮಗೆ ಮನಸ್ಸಿರುವುದು. ಗೌರವವು ಸಿಗುವಲ್ಲಿ ಸಿಗದೇ ಇರುವುದು ನಿಮಗೆ ನೋವುಂಟು ಮಾಡಬಹುದು. ತಾಳ್ಮೆಯನ್ನು ಪರೀಕ್ಷಿಸಿ ಕೆಲವು ಘಟನೆಗಳು ನಡೆಯಬಹುದು.

ಕಟಕ: ವಿವಾಹೇತರ ಸಂಂಧಗಳಿಂದ ನೀವು ಸಂಕಷ್ಟಕ್ಕೆ ಈಡಾಗುವಿರಿ‌. ಸ್ತ್ರೀಯರು ನಿಮ್ಮ ವಿರುದ್ಧ ಇರುವರು. ಉದ್ಯೋಗದ ಸ್ಥಳದಲ್ಲಿ ಅಪಮಾನವಾದೀತು. ಉದ್ಯೋಗವನ್ನು ತ್ಯಾಗ ಮಾಡುವ ಆಲೋಚನೆ ಮಾಡುವಿರಿ. ಆರ್ಥಿಕತೆಯು ನಿಧಾನವಾಗಿ ಏರುವುದು. ಬಂಧುಗಳ ನಡೆವೆ ವಾದ – ವಿವಾದಗಳು ಆಗಬಹುದು. ನಿಮ್ಮ ಕುರಿತು ಅವಲೋಕನ ಮಾಡಿಕೊಳ್ಳಿ. ಯಾರದೋ ಒತ್ತಾಯಕ್ಕೆ ಮಣಿದು ಕೆಲಸಗಳನ್ನು ಮಾಡಲು ಹೋಗಿ ಸಮಯವನ್ನು ಹಣವನ್ನೂ ವ್ಯಯಿಸಬೇಡಿ. ಸ್ವಂತಿಕೆ ಇರಲಿ.

ಸಿಂಹ: ನಿಮಗೆ ಸಿಕ್ಕಿರುವ ಅಮೂಲ್ಯವಾದ ವಸ್ತುಗಳನ್ನು ಯೋಗ್ಯವಾದ ರೀತಿಯಲ್ಲಿ ಕಾಪಿಟ್ಟುಕೊಳ್ಳುವುದು ಒಳಿತು. ತಾಳ್ಮೆಗೆ ಬೇಕಾದ ವ್ಯವಸ್ಥೆಯನ್ನು ಆರಂಭಿಸಿವುದು ಒಳ್ಳೆಯದು. ಇಲ್ಲವಾದಲ್ಲಿ ಮನದ ಹಾಗೂ‌ ಮನೆಯ ಆರೋಗ್ಯವು ಹಾಳಾಗಬಹುದು. ಉದ್ವೇಗದಿಂದ ವರ್ತಿಸಿ ಅಪಹಾಸ್ಯಕ್ಕೆ ಒಳಗಾಗಬೇಡಿ. ದಿನವೂ ನಿಮ್ಮ ಅವಲೋಕನ ಮಾಡಿಕೊಳ್ಳುವುದು ಅಗತ್ಯ. ಯೋಗ್ಯವಾದ ವಾತಾವರಣವನ್ನು ನಿರ್ಮಿಸಿಕೊಳ್ಳಲು ಬಯಸುವಿರಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ.

ಕನ್ಯಾ: ಅಪಾಯವನ್ನು ತಂದುಕೊಳ್ಳಲು ಹೋಗಬೇಡಿ. ಪ್ರಯಾಣವು ಇಂದು ಶುಭಕರವಲ್ಲ. ಕಛೇರಿಯಲ್ಲಿ ಒತ್ತಡವು ಸಹಜವಾಗಿದ್ದು, ನಿಮ್ಮವರ ಸಹಕಾರವನ್ನು ಪಡೆಯುವಿರಿ. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಸಿಗಲಿದೆ. ಪುಣ್ಯಕ್ಷೇತ್ರಗಳ ದರ್ಶನಕ್ಕೆ ಪ್ರಯಾಣ ಬೆಳೆಸುವಿರಿ. ಕೈಯಲ್ಲಿ ಹಣವಿಲ್ಲದೇ ಸಾಲವನ್ನು ಮಾಡಬೇಕಾಗಿಬರಬಹುದು. ಮಕ್ಕಳು ನಿಮ್ಮ ಸೇವೆಯನ್ನು ಮಾಡಲು ಇಚ್ಛಿಸುವರು. ಅತಿಯಾದ ಆಹಾರದಿಂದ ಅನಾರೋಗ್ಯವು ಉಂಟಾಗಬಹುದು.

ತುಲಾ: ವ್ಯಾಪಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಉದ್ಯಮಕ್ಕೆ ಸಂಬಂಧಪಟ್ಟಂತೆ ನಿಮ್ಮ ಹೊಸ ಆಲೋಚನೆಗಳು ಪರಿಣಾಮಕಾರಿಯಾಗಿ ಆಗದೇ ಇರಬಹುದು‌. ಅನಿರೀಕ್ಷಿತ ಖರ್ಚೂ ನಿಮಗೆ ಇಂದು ಆತಂಕವನ್ನು ಸೃಷ್ಟಸೀತು. ವೃತ್ತಿಯಲ್ಲಿ ಸಹೋದ್ಯೋಗಿಗಳ ಜೊತೆ ಕಲಹವು ಉಂಟಾದೀತು. ಗೃಹನಿರ್ಮಾಣ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ನಿಮ್ಮವರ ಮೇಲೆ ಸಿಟ್ಟಗೊಳ್ಳುವಿರಿ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ.

ವೃಶ್ಚಿಕ: ಹೊಸ ಉದ್ಯೋಗಗಳ ಅನ್ವೇಷಣೆ ಮಾಡುತ್ತಿದ್ದರೆ ಒಳ್ಳೆಯ ಉದ್ಯೋಗವು ಸಿಗಲಿದೆ. ನಿಮ್ಮ ಯಶಸ್ಸಿನ ಗುಟ್ಟು ರಟ್ಟಾಗಬಹುದು. ಪ್ರಭಾವೀ ವ್ಯಕ್ತಿಗಳ ಭೇಟಿಯಾಗಲಿದೆ. ಮನೆಯವರ ಜೊತೆ ದೂರದ ಊರಿಗೆ ತೆರಳುವಿರಿ. ಸಂಗಾತಿಯೊಂದಿಗೆ ವೈಮನಸ್ಯವು ಉಂಟಾಗಿ ದಿನಾಂತ್ಯದಲ್ಲಿ ಕೊನೆಗೊಳ್ಳುವುದು. ಹಣ ಹೂಡಿಕೆ ಮಾರ್ಗವನ್ನು ಹುಡುಕುತ್ತಿರುವಿರಿ. ಕಛೇರಿಗೆ ಸಂಬಂಧಪಟ್ಟ ಕೆಲಸಗಳು ವೇಗವಾಗಿ ಮುಗಿಯುವುದು. ಸಹೋದರರ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ.

ಧನುಸ್ಸು: ನೀವು ಮಾಡುವ ಉದ್ಯೋಗಕ್ಕೆ ಕುಟುಂಬದಿಂದ ಸಹಕಾರ ಸಿಗಲಿದೆ. ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕೊಡುವುದು ಅಗತ್ಯ.‌ ಒತ್ತಡ ನಿವಾರಣೆಗೆ ಬೇಕಾದ ಯೋಗ ಮೊದಲಾದ ಚಿಕಿತ್ಸೆಯನ್ನು ಮಾಡಿ. ಅಲ್ಪ ತ್ಯಾಗದಿಂದ ಅನಂತವನ್ನು ಪಡೆಯಬೇಕು ಎನ್ನುವ ಮಾನಸಿಕವಾಗಿ ಸ್ಥಿತಿಯಿಂದ ಹೊರಬನ್ನಿ. ಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸಿ. ಅತಿಯಾದ ಹುಂಬುತನ ಒಳ್ಳೆದಲ್ಲ. ಅಪರಿಚಿತರನ್ನು ಆದಷ್ಟು ಬೇಗ ಹತ್ತಿರ ಇಟ್ಟುಕೊಳ್ಳಬೇಡಿ.

ಮಕರ: ಭೂಮಿಯ ವ್ಯವಹಾರದಿಂದ ನಿಮಗೆ ಅಧಿಕಲಾಭವು ಸಂಭವಿಸಬಹುದು. ವಿನಾಕಾರಣ ಯಾರಮೇಲಾದರೂ ರೇಗಲು ಹೋಗಬಹುದು. ಸತ್ಯವನ್ನು ಹೇಳಲು ಹೋಗಿ ನಿಷ್ಠುರವಾಗುವಿರಿ. ಆಪ್ತರೇ ನಿಮಗಿಂದು ಶತ್ರುಗಳಾಗಿ ಕಾಣಿಸುವರು. ಮನೆಯ ನಿರ್ಮಾಣದ ಕಾರ್ಯದಲ್ಲಿ ಕೆಲವು ವಿಘ್ನಗಳು ಬರಬಹುದು. ಸಂಕುಚಿತ ಭಾವದಿಂದ ಹೊರಬನ್ನಿ. ಕಛೇರಿಯಲ್ಲಿ ನಿಮ್ಮ ಬುದ್ಧಿ, ಕಾರ್ಯಕೌಶಲಗಳು ಗೊತ್ತಾಗುವುವು. ಯಾರಾದರೂ ಹೇಳಿದರೆ ಪ್ರತ್ಯುತ್ತವನ್ನು ಕೊಡಬೇಡಿ.

ಕುಂಭ: ಸುಖ ಹಾಗೂ ದುಃಖಗಳಿಂದ ಕೂಡಿದ ದಿನವಾಗಲಿದೆ. ನಿಮಗೆ ಉದ್ಯೋಗಕ್ಕೆ ಹಾಗೂ ಕುಟುಂಬಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತ ಕೆಲವು ಸಹಾಯ ನಿನಗೆ ಸಿಕ್ಕರೂ ಧನವ್ಯಯವಾಗಲಿದೆ. ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ನಿಮ್ಮ ಬಾಲ್ಯ ಸ್ನೇಹಿತನ ಭೇಟಿಯಾಗಲಿದೆ. ಭೋಜನದಿಂದ ಸಂತೃಪ್ತಿ ಸಿಗಲಿದೆ. ಆಸ್ತಿಯ ವ್ಯವಹಾರದಲ್ಲಿ ವಂಚನೆಯಾಗಬಹುದು. ಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸುವುದು ಬೇಡ. ಗುರಿಗಳು ಸ್ಪಷ್ಟವಾಗಿರಲಿ.

ಮೀನ: ಹತ್ತಾರು ಯೋಚನೆಗಳನ್ನು ಇಟ್ಟುಕೊಂಡು ಮುಂದುವರಿಯಬೇಡಿ. ನಿರೀಕ್ಷಿತ ಫಲ ಸಿಗದು. ಬಂಧುಗಳು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಆಪ್ತರೊಬ್ಬರು ನಿಮ್ಮನ್ನು ಬಿಟ್ಟು ಹೋಗುವರು. ಬಹಳ ದುಃಖಿಸಬೇಕಾದ ಸಂದರ್ಭವಿದೆ. ದಾಂಪತ್ಯದಲ್ಲಿ ಕೆಲವು ತಿಕ್ಕಾಟಗಳಿದ್ದರೂ ಅದನ್ನು ಸರಿ ದೂಗಿಸಿಕೊಂಡು ಹೋಗಬೇಕಾದುದು ನಿಮ್ಮ ಕರ್ತವ್ಯ ಎಂದು ಭಾವಿಸಿ.‌ ಸಮಯಕ್ಕೆ ಸರಿಯಾದ ಬೆಲೆ ಕೊಡಿ. ಅನ್ಯ ಆಲೋಚನೆಗಳನ್ನು ಬಿಡಿ.

-ಲೋಹಿತಶರ್ಮಾ, ಇಡುವಾಣಿ