AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Love Horoscope: ಪ್ರೇಮಿಗಾಗಿ ಹುಡುಕುತ್ತಿದ್ದೀರಾ?; ಈ ರಾಶಿಯವರು ನಿಮಗೆ ಬೆಸ್ಟ್ ಜೋಡಿಯಾಗಬಹುದು!

ನಿಮಗೆ ಸೂಕ್ತವಾದ ಜೋಡಿ ಯಾರು ಮತ್ತು ಎಲ್ಲಿದ್ದಾರೆ? ಅವರು ನಿಮಗೆ ಪರಿಪೂರ್ಣ ಜೋಡಿಯೇ? ಯಾವ ರಾಶಿಚಕ್ರದ ಚಿಹ್ನೆಗಳವರು ಉತ್ತಮ ಜೋಡಿಯಾಗುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.

Valentine's Love Horoscope: ಪ್ರೇಮಿಗಾಗಿ ಹುಡುಕುತ್ತಿದ್ದೀರಾ?; ಈ ರಾಶಿಯವರು ನಿಮಗೆ ಬೆಸ್ಟ್ ಜೋಡಿಯಾಗಬಹುದು!
ಪ್ರೇಮಿಗಳ ದಿನ
ಸುಷ್ಮಾ ಚಕ್ರೆ
|

Updated on: Feb 08, 2023 | 4:07 PM

Share

ಪ್ರೇಮಿಗಳ ದಿನ (Valentine’s Day) ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ವಿಶೇಷ ವ್ಯಕ್ತಿಯನ್ನು ಹುಡುಕಲು ಬಯಸಬಹುದು. ಆದರೆ, ನಿಮಗೆ ಸೂಕ್ತವಾದ ಜೋಡಿ ಯಾರು ಮತ್ತು ಎಲ್ಲಿದ್ದಾರೆ? ಅವರು ನಿಮಗೆ ಹತ್ತಿರವಿರುವ ಯಾರಾದರೂ ಆಗಿದ್ದರೆ, ಅವರು ನಿಮ್ಮ ಪರಿಪೂರ್ಣ ಜೋಡಿಯೇ? ಯಾವ ರಾಶಿಚಕ್ರದ ಚಿಹ್ನೆಗಳವರು (Zodiac Signs) ಉತ್ತಮ ಜೋಡಿಯಾಗುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.

ಮೇಷ ಮತ್ತು ಧನು ರಾಶಿ: ಮೇಷ ಮತ್ತು ಧನು ರಾಶಿ ಎರಡೂ ಬಹಳ ವಿನೋದ ಮತ್ತು ಪ್ರೀತಿಯ ಚಿಹ್ನೆಗಳು. ಈ ರಾಶಿಗಳ ಜೋಡಿ ಜೀವನವನ್ನು ಒಬ್ಬರಿಗೊಬ್ಬರು ಸಾಹಸಮಯವಾಗಿಸುತ್ತಾರೆ ಮತ್ತು ಒಬ್ಬರಿಗೊಬ್ಬರು ಸ್ಪೇಸ್ ನೀಡುತ್ತಾರೆ. ಈ ರಾಶಿಯವರಿಗೆ ಅತ್ಯುತ್ತಮ ಸನ್ನಿವೇಶಗಳನ್ನು ಹೇಗೆ ಮಾಡಬೇಕೆಂದು ತಿಳಿದಿರುತ್ತದೆ. ಅವರ ವೈಬ್ಸ್​ ಪರಸ್ಪರ ಹೊಂದಾಣಿಕೆ ಆಗುವುದರಿಂದ ಜೀವನಪೂರ್ತಿ ಹೊಂದಿಕೊಂಡು ಬದುಕುತ್ತಾರೆ.

ವೃಷಭ ಮತ್ತು ಮಕರ: ಸ್ಥಿರತೆಯೇ ಈ ರಾಶಿಗಳ ಜೋಡಿಗೆ ಆಧಾರ. ಈ ರಾಶಿಯ ಜೋಡಿ ಪ್ರಾರಂಭದಿಂದ ಕೊನೆಯವರೆಗೆ ಪರಸ್ಪರ ಪ್ರೀತಿಸುತ್ತಾರೆ. ಸಾಮಾನ್ಯ ಸೌಕರ್ಯವನ್ನು ಇಷ್ಟಪಡುವ ವೃಷಭ ರಾಶಿಯವರಿಗೆ ಅದೇ ಹೇಳಬಹುದು. ಈ ಎರಡೂ ರಾಶಿಗಳವರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಆದ್ದರಿಂದ, ಈ ದಂಪತಿಗಳು ಎಲ್ಲರಿಗಿಂತ ಹೆಚ್ಚು ಸಮತೋಲಿತ ಮತ್ತು ಸುರಕ್ಷಿತರಾಗಿರುತ್ತಾರೆ.

ಇದನ್ನೂ ಓದಿ: Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!

ಕನ್ಯಾ ಮತ್ತು ತುಲಾ: ಪ್ರೀತಿ ಮತ್ತು ಸಂವಹನದ ಗ್ರಹಗಳಿಂದ ಆಳಲ್ಪಡುವ ಈ ದಂಪತಿಗಳು ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ. ತುಲಾ ರಾಶಿಯವರು ತುಂಬಾ ತಾಳ್ಮೆ ಸ್ವಭಾವದವರಾಗಿದ್ದು, ಬೇರೆಯವರು ಹೇಳಿದ್ದನ್ನು ಕೇಳಲು ಸಿದ್ಧರಿರುತ್ತಾರೆ. ತುಲಾ ಮತ್ತು ಮಿಥುನ ರಾಶಿಯವರು ಪ್ರೀತಿಯಲ್ಲಿದ್ದಾಗ ಅಭಿವ್ಯಕ್ತಿಶೀಲರಾಗಿರುತ್ತಾರೆ. ಅದರಿಂದ ಅವರ ಪಾರ್ಟನರ್​ಗೆ ಸಂತೋಷವಾಗುತ್ತಿದೆಯೇ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

ಕರ್ಕಾಟಕ ಮತ್ತು ಮೀನ: ಮೀನ ರಾಶಿಯು ಸಹಾನುಭೂತಿಯ ಚಿಹ್ನೆಯಾಗಿದ್ದು, ಈ ರಾಶಿಯವರು ಹೊಸ ಸಂಪರ್ಕಗಳನ್ನು ಮಾಡಲು ಇಷ್ಟಪಡುತ್ತಾರೆ. ಮೀನ ರಾಶಿಯವರ ಪ್ರೀತಿ ಮತ್ತು ಸೃಜನಶೀಲತೆಯ ಭಾವನೆಗಳು ಕರ್ಕಾಟಕ ರಾಶಿಯವರ ಆಚರಣೆ ಮತ್ತು ಚಿಂತನಶೀಲತೆಗೆ ಹೊಂದಿಕೆಯಾಗುತ್ತವೆ. ಇದು ಅವರಿಬ್ಬರನ್ನೂ ಪರಸ್ಪರ ಪರಿಪೂರ್ಣವಾಗಿಸುತ್ತದೆ. ಪ್ರಯತ್ನಗಳು ಮತ್ತು ಪ್ರೀತಿ ಈ ಸಂಬಂಧದ ಮಂತ್ರವಾಗಿರುತ್ತದೆ.

ಇದನ್ನೂ ಓದಿ: Valentines day 2023: ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯನ್ನು ಖುಷಿಪಡಿಸಿ, ಸಿಂಪಲ್​ ಟಿಪ್ಸ್​​ ಇಲ್ಲಿವೆ

ಸಿಂಹ ಮತ್ತು ವೃಶ್ಚಿಕ: ಈ ಜೋಡಿಯನ್ನು ಪಟಾಕಿಗೆ ಹೋಲಿಸಬಹುದು. ಇವರಿಬ್ಬರೂ ತಮ್ಮ ಸ್ವಭಾವದಲ್ಲಿ ಮೊಂಡುತನದವರಾಗಿರುತ್ತಾರೆ. ಆದರೆ, ಅಷ್ಟೇ ತೀವ್ರತೆಯಿಂದ ಪ್ರೀತಿಸುತ್ತಾರೆ. ಸಿಂಹ ಮತ್ತು ವೃಶ್ಚಿಕ ಪರಸ್ಪರ ಅದ್ಭುತವಾದ ಕೆಮಿಸ್ಟ್ರಿಯನ್ನು ಹೊಂದಿದ್ದು, ಸರಳ ಮತ್ತು ಸಂವೇದನಾಶೀಲವಾಗಿರುತ್ತಾರೆ. ಈ ಜೋಡಿ ಬಹಳ ಬೇಗ ಜಗಳವಾಡುತ್ತಾರೆ, ಅಷ್ಟೇ ಬೇಗ ಕಾಂಪ್ರಮೈಸ್ ಆಗುತ್ತಾರೆ.

ಕನ್ಯಾ ಮತ್ತು ಕುಂಭ: ಕನ್ಯಾರಾಶಿಯು ಪರಿಪೂರ್ಣತಾವಾದಿಯಾಗಿರುವುದರಿಂದ ಮತ್ತು ಅಕ್ವೇರಿಯಸ್ ಕೇವಲ ಜೀವನವನ್ನು ಜೀವಿಸುವುದರಿಂದ, ಅವರು ಪರಸ್ಪರ ಅಂತರವನ್ನು ಸಮತೋಲನಗೊಳಿಸುತ್ತಾರೆ. ಇದರ ಹೊರತಾಗಿ, ಈ ಎರಡೂ ರಾಶಿಯವರು ಸಾಹಸಮಯವಾಗಿರುತ್ತಾರೆ. ಅವರು ಇಷ್ಟಪಡುವದನ್ನು ಮಾಡಲು ಸಮಯ ಮೀಸಲಿಡುತ್ತಾರೆ. ಅವರು ಬಲವಾದ ಸಂವಹನ ಕೌಶಲಗಳನ್ನು ಹೊಂದಿರುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ