- Kannada News Photo gallery Valentines day 2023: Celebrate this Valentines day with your Partner who stands by you in every Situations
Valentines day 2023: ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯನ್ನು ಖುಷಿಪಡಿಸಿ, ಸಿಂಪಲ್ ಟಿಪ್ಸ್ ಇಲ್ಲಿವೆ
ವ್ಯಾಲೆಂಟೈನ್ಸ್ ಡೇ ಎಂಬುದು ಬರೀ ಪ್ರೇಮಿಗಳಿಗೆ ಮಾತ್ರವಲ್ಲ. ಬದಲಾಗಿ ನಿಮ್ಮೊಂದಿಗೆ ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯೊಂದಿಗೆ ಈ ವಿಶೇಷ ದಿನವನ್ನು ಆಚರಿಸಿ.
Updated on:Feb 07, 2023 | 11:52 AM

ವ್ಯಾಲೆಂಟೈನ್ಸ್ ಡೇ ಎಂಬುದು ಬರೀ ಪ್ರೇಮಿಗಳಿಗೆ ಮಾತ್ರವಲ್ಲ. ಬದಲಾಗಿ ನಿಮ್ಮೊಂದಿಗೆ ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯೊಂದಿಗೆ ಈ ವಿಶೇಷ ದಿನವನ್ನು ಆಚರಿಸಿ.

ಈ ವರ್ಷದ ಪ್ರೇಮಿಗಳ ದಿನದಂದು ನೀವು ನಿಮ್ಮ ಮಲಗುವ ಕೋಣೆಯನ್ನು ವಿಶೇಷವಾಗಿ ಅಲಂಕರಿಸಿ, ನಿಮ್ಮ ಸಂಗಾತಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಿರಿ.

ಪರಿಮಳಯುಕ್ತ ಕ್ಯಾಂಡಲ್ ಬಳಸಿ: ವೆನಿಲ್ಲಾ, ಕಸ್ತೂರಿಯಂತಹ ಸುವಾಸನೆಯ ಮೇಣದಬತ್ತಿಗಳಿಂದ ಅಲಂಕರಿಸಿ, ಸುಂದರ ಕ್ಷಣಗಳನ್ನು ಕಳೆಯಿರಿ.

ಸಾಫ್ಟ್ ಲೈಟಿಂಗ್ : ಈ ವಿಶೇಷ ದಿನದಂದು ನಿಮ್ಮ ಸಂಗಾತಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಲು ನೀವು ನಿಮ್ಮ ಮಲಗುವ ಕೋಣೆಯನ್ನು ಸಾಫ್ಟ್ ಲೈಟಿಂಗ್ನಿಂದ ಅಲಂಕರಿಸಿ.

ಗೋಡೆಯ ಅಲಂಕಾರ: ಈ ವಿಶೇಷ ದಿನದಂದು ನಿಮ್ಮ ಸಂಬಂಧಗಳು ಪ್ರಾರಂಭವಾದ ವರ್ಷದಿಂದ ಹಿಡಿದು ನೀವು ಸೆರೆಹಿಡಿದ ಎಲ್ಲಾ ರೋಮ್ಯಾಂಟಿಕ್ ಕ್ಷಣಗಳೊಂದಿಗಿನ ಫೋಟೋ ಫ್ರೇಮ್ನಿಂದ ಗೋಡೆಯನ್ನು ಅಲಂಕರಿಸಿ.

ವಿಶೇಷವಾಗಿ ಅಲಂಕರಿಸಿ: ನೀವು ಮಲಗುವ ಕೋಣೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆದಿರುತ್ತೀರಿ. ಆದರೆ ಒತ್ತಡದ ಜೀವನಶೈಲಿಯಿಂದಾಗಿ ಅವರೊಂದಿಗೆ ಸರಿಯಾಗಿ ಸಮಯ ಕಳೆಯಲು ಆಗದಿದ್ದರೆ, ಈ ವಿಶೇಷ ದಿನದಂದು ಅವರೊಂದಿಗೆ ಸುಂದರ ಕ್ಷಣ ಕಳೆಯಿರಿ.
Published On - 11:50 am, Tue, 7 February 23




