ಪ್ರಾತಿನಿಧಿಕ ಚಿತ್ರ
Image Credit source: unsplash.com
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 07 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಪೂರ್ವಾಷಾಢ ಮಹಾನಕ್ಷತ್ರ, ಪುಷ್ಯ ಮಾಸ, ಕೃಷ್ಣ ಪಕ್ಷ, ಶನಿವಾರ, ಪ್ರತಿಪತ್ ತಿಥಿ, ಪುನರ್ವಸು ನಿತ್ಯನಕ್ಷತ್ರ, ಐಂದ್ರ ಯೋಗ, ಬಾಲವ ಕರಣ, ಸೂರ್ಯೋದಯ: 07 ಗಂಟೆಗೆ, ಸೂರ್ಯಾಸ್ತ – 06 ಗಂಟೆ 17 ನಿಮಿಷಕ್ಕೆ. ಶುಭಾಶುಭಕಾಲ: ರಾಹು ಕಾಲ 09:50 ರಿಂದ 11:14, ಯಮಘಂಡ ಕಾಲ 2:03 ರಿಂದ 3:28, ಗುಳಿಕ ಕಾಲ 07:01 ರಿಂದ 08:25ರ ವರೆಗೆ.
ತಾ. 07-01-2023ರ ಶನಿವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ವಿಶ್ವಾಸಃ ಫಲದಾಯಕ ಎನ್ನುವ ಉಕ್ತಿಯನ್ನು ಪಾಲಿಸುವಿರಿ. ಯಾರ ಮೇಲಾದರೂ ದ್ವೇಷವಿದ್ದರೆ ತೋರಿಸಿಕೊಳ್ಳಬೇಡಿ. ಆರ್ಥಿಕವಾಗಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಿಟ್ಟಿನ ಕೈಗೆ ಬುದ್ಧಿಯನ್ನು ಕೆಲಸವನ್ನು ಕೆಡಿಸಿಕೊಳ್ಳುವ ಅಗತ್ಯವು ಬಂದು ಒದಗಬಹುದು. ನಿಮ್ಮನ್ನು ನಡೆತೆಯ ಕುರಿತು ಪ್ರಶ್ನಿಸಬಹುದು. ಮೌನವನ್ನೇ ಉತ್ತರವಾಗಿ ನೀಡಿ. ಕಾಲ ಬಂದಾಗ ತಾನಾಗಿಯೇ ಉತ್ತರವು ಅವರಿಗೆ ಗೋಚರಿಸುವುದು. ನಿಮ್ಮವರ ಜೊತೆ ದೀರ್ಘಕಾಲದಿಂದ ಬಿಟ್ಟಿದ್ದ ಮಾತುಗಳನ್ನು ಇಂದಿನಿಂದ ಮುಂದುವರಿಸುವಿರಿ.
- ವೃಷಭ: ಒತ್ತಡದಿಂದ ಇಂದು ಬದುಕು ಹೈರಾಣಾಗುವ ಸಾಧ್ಯತೆ ಇದೆ. ಇದರಿಂದ ಯಾರಾದರೂ ನಿಮ್ಮೊಡನೆ ಮಾತನಾಡಲು ಬಂದರೆ ರೇಗುವ ಸ್ವಭಾವ ಅತಿಯಾಗವುದು. ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ. ಆರ್ಥಿಕವಾಗಿ ಸಬಲರು. ಹಾಗಿದ್ದರೂ ಇಂದಿನ ಖರ್ಚು ನಿಮ್ಮನ್ನು ಕಂಗೆಡಿಸುವುದು. ಹೊಸ ಉದ್ಯೋಗದ ಕಡೆಗೆ ಮನಸ್ಸು ಮಾಡುವಿರಿ. ಮನೋರಂಜನೆಯ ಕಾರ್ಯಕ್ರಮವನ್ನು ವೀಕ್ಷಿಸುವ ಮನಸ್ಸು ಮಾಡುವಿರಿ. ಕುಟುಂಬದವ ಹೆಚ್ಚು ಸಮಯವನ್ನು ಕಳೆಯುವಿರಿ.
- ಮಿಥುನ: ಭೂಮಿಯ ವಿಚಾರವಾಗಿ ಕಲಹವೇ ಆಗಿದೆ. ಇನ್ನೊಬ್ಬರು ನಿಮಗೆ ನೀಡುವ ಆರೋಗ್ಯದ ಸಲಹೆಗಳಿಂದ ಗೊಂದಲಗಳಿಗೆ ತುತ್ತಾಗಿ ಅನಾರೋಗ್ಯವನ್ನು ಹೆಚ್ಚಿಸಿಕೊಳ್ಳುವಿರಿ. ಗೃಹಬಳಕೆಯ ವಸ್ತುಗಳನ್ನು ಖರೀದಿಸುವ ಕೆಲಸಕ್ಕೆ ಹೋಗುವಿರಿ. ಕಬ್ಬಿಣದ ವ್ಯಾಪಾರಗಳು ನಷ್ಟವನ್ನು ಅನುಭವಿಸುವಿರಿ. ಇಂದಿನ ಬೆಳಗಿನ ನಿಮ್ಮ ಮನಃಸ್ಥಿತಿಯೇ ಇಂದಿನ ದಿನವನ್ನು ಹೇಳುತ್ತದೆ. ಸ್ನೇಹಿತರು ನಿಮ್ಮನ್ನು ಹಾಸ್ಯದ ವ್ಯಕ್ತಿಯಾಗಿ ಕಾಣುವರು. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ಶಿಕ್ಷಕರು ವಿದ್ಯಾರ್ಥಿಗಳಿಂದ ಸಮ್ಮಾನಿತರಾಗಲಿದ್ದಾರೆ.
- ಕರ್ಕ: ಬಿಡುವಿಲ್ಲದ ಸ್ಥಿತಿಯಲ್ಲಿಯೂ ನಿಮ್ಮ ಸಹನೆ, ಕೆಲಸದಲ್ಲಿ ಇಟ್ಟುಕೊಂಡ ಶಿಸ್ತನ್ನು ಯಾರೂ ಮೆಚ್ಚುವರೇ. ದೂರದ ಪ್ರಯಾಣ ಅನಿವಾರ್ಯವಾದರೆ ಮಾಡಿ. ಇಲ್ಲವಾದರೆ ಇರುವ ಸ್ಥಳವೇ ನಿಮ್ಮ ಇಂದಿನ ಸ್ಥಿತಿಗೆ ಯೋಗ್ಯವಾಗಿದೆ. ನಿಮ್ಮ ಬಗ್ಗೆ ಇಲ್ಲದ ಆಪಾದನೆಗಳು ಬರಬಹುದು. ಕಿವಿಗೊಡಬೇಡಿ. ಸರಿಯಾದಿ ದಾರಿಯಲ್ಲಿ ಸಾಗಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಇರುವುದಿಲ್ಲ. ಯಂತ್ರಾಗಾರದಲ್ಲಿ ಕೆಲಸ ಮಾಡುವವರಿಗೆ ಶುಭದಿನವಾಗಲಿದೆ. ಮಾನಸಿಕ ತುಮುಲಗಳು ಇಂದಿರಲಿವೆ.
- ಸಿಂಹ: ಮಕ್ಕಳ ಜೊತೆ ಇಂದಿನ ದಿನವನ್ನು ಬಹಳ ಸಂತೋಷದಿಂದ ಕಳೆಯುವಿರಿ. ಧಾನ್ಯ ವ್ಯಾಪಾರದವರಿಗೆ ಹೆಚ್ಚಿನ ಲಾಭವಿದೆ. ಸಂಗಾತಿಯೊಡನೆ ಇಂದು ಹಣದ ವಿಚಾರದಲದಲಿ ವೈಮನಸ್ಯ ಉಂಟಾಗಲಿದೆ. ನಿಮ್ಮ ಪ್ರಭಾವವು ಅಷ್ಟಾಗಿ ನಡೆಯದು. ಸಹೋದರನ ಜೊತೆ ನಿಮ್ಮ ಕಲಹವಿರಲಿದೆ. ಸಾಪ್ಟ್ ವೇರ್ ಉದ್ಯೋಗಿಗಳು ಒಳ್ಳೆಯ ಲಾಭವನ್ನು ಪಡೆಯಲಿದ್ದಾರೆ. ಮನೆಯ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಹೊಸ ವಸ್ತ್ರಗಳ ಖರೀದಿಯನ್ನು ಮಾಡಲಿದ್ದೀರಿ.
- ಕನ್ಯಾ: ನಿಮ್ಮ ಮೇಲಿಟ್ಟ ಭರವಸೆಯನ್ನು ಹುಸಿಗೊಳಿಸಿಕೊಳ್ಳಬೇಡಿ. ಓಡಾಟದಿಂಸ ಇಂದು ಬಹಳ ಬಳಲಿಕೆಯು ಉಂಟಾಗಲಿದೆ. ಉದರಸಂಬಂಧವಾದ ಖಾಯಿಲೆಗಳು ಬರಲಿವೆ. ನಿಮ್ಮ ಯಾವುದೋ ಅತಿ ಮುಖ್ಯವಾದ ಕೆಲಸಕ್ಕೆಂದು ವ್ಯಯಿಸಿದ ಸಂಪತ್ತು ವ್ಯರ್ಥವಾಗಿ ಹೋಗುವ ಲಕ್ಷಣವಿದೆ. ವಾಹನ ಚಾಲನೆಯ ಆನಂದವನ್ನು ದೀರ್ಘಪ್ರಯಾಣದಿಂದ ಪಡೆದುಕೊಳ್ಳುವಿರಿ. ಭೂವ್ಯವಹಾರ ನಿಮಗೆ ಲಾಭವನ್ನು ಕೊಡುವುದು. ಔಷಧದ ವ್ಯಾಪಾರಿಗಳಿಗೆ ಧನಲಾಭ.
- ತುಲಾ: ಇಂದಿಡೀ ದಿನ ವಿಶ್ರಾಂತಿಯನ್ನು ಪಡೆಯಲು ಇಚ್ಛಿಸುವಿರಿ. ಆದರೆ ಬಂಧುಗಳ ಅನಿರೀಕ್ಷಿತ ಭೇಟಿ ನಿಮ್ಮ ಯೋಜನೆಯನ್ನು ತಲೆಕೆಳಗೆ ಮಾಡಲಿದೆ. ಉತ್ತಮ ಆಹಾರವನ್ನು ಸೇವಿಸುವಿರಿ. ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನಕ್ಕೆ ಸಿಕ್ಕಿಹಾಕಿಕೊಳ್ಳುವಿರಿ. ಶೀತದಿಂದ ಜ್ವರವು ಬರಬಹುದು. ಒಂಟಿಯಾಗಿ ನಿಮ್ಮ ಕೆಲಸಗಳನ್ನು ಮಾಡಲು ಬಯಸುವಿರಿ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ನಿದ್ರಾಹಿನತೆಯಿಂದ ಆಲಸ್ಯವೂ ಬರಬಹುದು. ಉತ್ತಮ ಪುಸ್ತಕವನ್ನು ಇಂದಿನ ಸಖನನ್ನಾಗಿಸಿಕೊಳ್ಳಿ.
- ವೃಶ್ಚಿಕ: ಉದ್ಯೋಗದ ಸ್ಥಳದಲ್ಲಿ ಅಕಸ್ಮಾತ್ ಉಂಟಾದ ಬೆಳವಣಿಗೆಯಿಂದ ನಿಮ್ಮ ಸ್ಥಾನದ ಬಗ್ಗೆ ನಿಮಗೆ ಸಂಶಯಬರಬಹುದು. ನೂತನ ಸಂಗಾತಿಯ ಅನ್ವೇಷಣೆಗೆ ಇಂದು ತೆರೆ ಬೀಳಬಹುದು. ತಾಳ್ಮೆಯನ್ನು ಕಳೆದುಕೊಂಡು ದುಃಖಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಎಲ್ಲದಕ್ಕೂ ಮಿತಿಯಿದೆ ಎಂದು ನಿಮಗೆ ನೀವೇ ಅಂದುಕೊಂಡು ಸಮಾಧಾನವನ್ನು ಪಡೆಯುವಿರಿ. ನೀವಂದುಕೊಂಡ ಯೋಚನೆಗೆ ಸರಿಯಾದ ಯೋಜನೆಯಾಗದೆ ತಲೆಕೆಡಿಕೊಳ್ಳಲಿದ್ದೀರಿ. ಅತಿಯಾದ ಮಾತು ನಿಮ್ಮ ಜೊತೆಗಿರುವವರಿಗೆ ಅಸಹ್ಯವಾದೀತು.
- ಧನುಸ್ಸು: ಒಂದು ಬೇಸರವನ್ನು ತರುವ ವಿಚಾರವು ನಿಮ್ಮ ಸಂಗಾತಿಯ ನಡುವಿನ ಎಲ್ಲ ಬಂಧಗಳನ್ನು ಕಳಚಿಕೊಳ್ಳುವ ಹಂತಕ್ಕೆ ಹೋಗಬಹುದು. ಆರೊಗ್ಯವು ತಕ್ಕಮಟ್ಟಿಗೆ ಚೆನ್ನಾಗಿರಲಿದೆ. ಅತಿಯಾದ ಬುದ್ಧಿಯನ್ನು ಬಳಸಲು ಹೋಗಿ ಹಳ್ಳಕ್ಕೆ ಬೀಳುವ ಅವಕಾಶವನ್ನು ಇಟ್ಟುಕೊಳ್ಳುವುದು ಬೇಡ. ಮಾಡಲು ಏನೂ ಕೆಲಸವಿಲ್ಲವೆಂದು ಹೇಳಿ ನಿಮ್ಮರ ಬಾಯಿಗೆ ಸಿಗಬೇಡಿ. ಏನಾದರೂ ಉತ್ತಮವಾದ ಕೆಲಸವನ್ನು ಮಾಡಿ, ಅದನ್ನೇ ಹೇಳಿ. ಆಗ ತಾನಾಗಿಯೇ ಬಾಯಿ ಮುಚ್ಚುವುದು. ಕೆಲಸದ ಮೂಲಕ ಉತ್ತರಿಸುವ ನಿಮ್ಮ ಸ್ವಭಾವ ಹಲವರಿಗೆ ಇಷ್ಟವಾಗುವುದು.
- ಮಕರ: ನಿಮ್ಮ ಯೋಜನೆಯು ಪ್ರಗತಿಯಾಗಿಲ್ಲವೆಂಬ ಕೊರಗು ನಿಮಲ್ಲಿದೆ. ಕಾಲಕ್ಕೆ ಕಾಯಬೇಕಾಗಿರುವುದರಿಂದ ನಿಮ್ಮ ಪ್ರಯತ್ನಗಳು ಸದಾ ನಡೆಯಲಿ. ದೈವಾನುಕೂಲ ಬಂದಾಗ ಅದಕ್ಕೆ ಹೊಳಪು ಬರಲಿದೆ. ಸಂಗಾತಿಯೊಡನೆ ಸಮಾರಂಭಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳು ಸಭೆಯನ್ನು ಮೂಕವಿಸ್ಮಿತಗೊಳಿಸಲಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲಿದ್ದೀರಿ. ಹೆಂಡತಿಯ ಮಾತಿಗೆ ಸಹಮತ ನೀಡಿ ಆಕೆಯ ಸಂತೋಷಕ್ಕೆ ಕಾರಣವಾಗಲಿದ್ದೀರಿ. ವಾಹನ ಖರೀದಿಗೆ ತಯಾರಿ ನಡೆಯಲಿದೆ.
- ಕುಂಭ: ಎಲ್ಲರನ್ನೂ ಮೋಹನಗೊಳಿಸುವ ಮಾತು ನಿಮಗಿಂದು ವರದಾನವಾಗಲಿದೆ. ನಿಮ್ಮ ಮುಂದಿನ ಬದುಕಿಗೆ ಇಂದಿನ ಮಾತೇ ಸಾಕಾಗಲಿದೆ. ಕ್ರೀಡಾಮನೋಭಾವವನ್ನು ಹೊಂದಿದ ನೀವು ಇಂದು ಗೆಳೆಯರ ಜೊತೆಯಲ್ಲಿ ಆಟವಾಡಲಿದ್ದೀರಿ. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸಿ ಕೈ ಬಿಡವರು. ಎಚ್ಚರಗೊಳ್ಳಬೇಕಾಗಿರುತ್ತದೆ. ವಿದ್ಯುದುಪಕರಣಗಳ ಖರೀದಿಯಿಂದ ನಿಮಗೆ ಧನವ್ಯಯವಾಗುವ ಸಾಧ್ಯತೆಯಿದೆ. ನಿಮಗಿರುವ ಕೌಶಲವು ಜನರಿಂದ ಮೆಚ್ಚುಗೆ ಪಡೆಯಲಿದೆ.
- ಮೀನ: ನಿಮಗಿಂದು ದಾನ ಮಾಡುವ ಮನಸ್ಸಿದ್ದು, ನಿಮಗಿಷ್ಟವಾದವರಿಗೆ ಇದಂ ನ ಮಮ ಎನ್ನುವ ನಿಸ್ಪೃಹಭಾವದಿಂದ ವಸ್ತು ಅಥವಾ ಹಣವನ್ನು ಕೊಡಲಿದ್ದೀರಿ. ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ಪತ್ನಿಯ ಅನಾರೋಗ್ಯ ನಿಮ್ಮಚಿಂತೆಗೆ ಕಾರಣವಾಗಿರಲಿದೆ. ಹೊಸಮನೆಯನ್ನೋ ಜಾಗವನ್ನೋ ತೆಗದುಕೊಳ್ಳುವ ಪ್ರಸ್ತಾಪವಿರಲಿದೆ. ದೂರಪ್ರಯಾಣವನ್ನು ನಿಲ್ಲಿಸಿ.
ಲೋಹಿತಶರ್ಮಾ, ಇಡುವಾಣಿ