Nitya Bhavishya: ಮೀನ ರಾಶಿಯವರಿಗೆ ಅನಿಶ್ಚಯವಾಗಿದ್ದ ವಿವಾಹವು ನಿಶ್ಚಯವಾಗಲಿದೆ

| Updated By: ಆಯೇಷಾ ಬಾನು

Updated on: Jan 11, 2023 | 6:00 AM

Horoscope Today: ಜನವರಿ 11, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ ಮಧ್ಯಾಹ್ನ 12 ಗಂಟೆ 41 ನಿಮಿಷದಿಂದ ಮಧ್ಯಾಹ್ನ 2 ಗಂಟೆ 05 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 19 ನಿಮಿಷಕ್ಕೆ.

Nitya Bhavishya: ಮೀನ ರಾಶಿಯವರಿಗೆ ಅನಿಶ್ಚಯವಾಗಿದ್ದ ವಿವಾಹವು ನಿಶ್ಚಯವಾಗಲಿದೆ
ಮೀನ ರಾಶಿ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 11 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ಬುಧವಾರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮಘಾ, ಯೋಗ: ಆಯುಷ್ಮಾನ್, ಕರಣ: ಬಾಲ, ರಾಹು ಕಾಲ ಮಧ್ಯಾಹ್ನ 12 ಗಂಟೆ 41 ನಿಮಿಷದಿಂದ ಮಧ್ಯಾಹ್ನ 2 ಗಂಟೆ 05 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 19 ನಿಮಿಷಕ್ಕೆ.

ತಾ. 11-01-2023 ರ ಬುಧವಾರ ರಾಶಿ ಭವಿಷ್ಯ ಹೀಗಿದೆ:

  1. ಮೇಷ: ಸಮಸ್ಯೆಗಳು ಬರುತ್ತವೆ ಹೋಗುತ್ತವೆ.‌ ಅವುಗಳ ಕುರಿತು ಅತಿಯಾಗಿ ಆಲೋಚಿಸಿದಷ್ಟೂ ಸಮಸ್ಯೆಗಳು ಹಾಗೇ ಇರುತ್ತವೆ. ಹಣದ ವಿಚಾರವಾಗಿ ಸಣ್ಣ ಕಲಹಗಳು ಸಂಗಾತಿಯ ನಡುವೆ ನಡೆಯಬಹುದು. ವೃತ್ತಿಯಲ್ಲಿ ನಿಮಗೆ ಸಂತೋಷದ ವಾತಾವರಣವು ಇರಲಿದೆ. ಸಮಾರಂಭಗಳಿಗೆ ಹೋಗಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾಗಲಿದೆ. ಸ್ವಂತ ಉದ್ಯೋಗಿಗಳಿಗೆ ಶುಭವಾಗಲಿದೆ.
  2. ವೃಷಭ: ಸ್ನೇಹಿತರ ಬೆಂಬಲವು ನಿಮ್ಮ ಕಾರ್ಯಕ್ಕೆ ಬಲವನ್ನು ತುಂಬಲಿದೆ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತನಾಡಿಕೊಳ್ಳಬಹುದು. ಯಾರಿಗೂ ಸಲಹೆಯನ್ನು ಕೊಡಲು ಇಂದು ಹೋಗಬೇಡಿ. ನಿಮ್ಮನ್ನೇ ಗುರಿಯಾಗಿಸಿಯಾರು. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ದೂರದ ಪ್ರಯಾಣ ಸುಖಕರವಲ್ಲ. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಬಹುದು.
  3. ಮಿಥುನ: ಕೂಡಿಟ್ಟ ಹಣದಿಂದ ನಿಮಗೆ ಇಂದು ಲಾಭವಾಗುವ ಸಾಧ್ಯತೆ ಇದೆ. ಅನಾರೋಗ್ಯವು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡಬಹುದು. ವಿದೇಶದ ವ್ಯವಹಾರವು ನಿಮಗೆ ಸಿಗಲಿದೆ. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕ ಮಾರ್ಗದಲ್ಲಿ ಹೋಗುವಂತೆ ನೋಡಿಕೊಳ್ಳಿ. ಬಲವಂತದಿಂದ ಯಾವ ಕಾರ್ಯವನ್ನೂ ಮಾಡಲು ಹೋಗದೇ ಇರುವುದು ಉತ್ತಮ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರಬಹುದು.
  4. ಕರ್ಕ: ಯಾರನ್ನೂ ಅಪಮಾನ ಮಾಡಲು ಹೋಗಬೇಡಿ. ಅದು ನಿಮಗೆ ಮುಳುವಾದೀತು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಅನಿರೀಕ್ಷಿತ ಸುದ್ದಿಯನ್ನು ನೀವು ಕೇಳಬೇಕಾಗಬಹುದು. ಕುಟುಂಬದವರ ಜೊತೆ ಪ್ರೀತಿಯಿಂದ ಮಾತನಾಡಿ. ಉದ್ಯೋಗದ ಸ್ಥಳದಲ್ಲಿ ಸ್ವಲ್ಪ ಹಿನ್ನಡೆಯ ಸಾಧ್ಯತೆ ಇದೆ. ಉತ್ತಮ ಮಾತುಗಳು ನಿಮ್ಮ ನೆಮ್ಮದಿಗೆ ಸಹಾಯಕವಾಗಲಿದೆ.
  5. ಸಿಂಹ: ಆಯಾಸದ ದಿನವಾಗಲಿದೆ ಇಂದು. ಮನಸ್ಸು ಹಾಗು ದೇಹವು ವಿಶ್ರಾಂತಿಯನ್ನು ಬಯಸಲಿದೆ. ಮನೆಯಲ್ಲಿ ನಡೆಯುವ ಕಲಹದಿಂದ ನೀವು ಬೇಸರಗೊಳ್ಳಬಹುದು. ನಿಮ್ಮ ಮಾತನ್ನೇ ಎಲ್ಲರೂ ಪಾಲಿಸಬೇಕು ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳುವುದು ಉತ್ತಮ. ಅನಿವಾರ್ಯದ ಪ್ರಯಾಣವು ನಿಮ್ಮನ್ನು ಹೈರಾಣ ಮಾಡುವುದು. ಆರ್ಥಿಕವಾದ ಹೂಡಿಕೆಯತ್ತ ನಿಮ್ಮ ಗಮನ ಹರಿಸುವಿರಿ. ಶೇರ್ ಮಾರುಕಟ್ಟೆಯಲ್ಲಿ ಹಣವನ್ನು ಹೂಡಲು ಮುಂದಾದರೆ ಪೂರ್ವಾಪರ ಆಲೋಚನೆಗಳು ಇರಲಿ.
  6. ಕನ್ಯಾ: ನಿಮ್ಮ ಪ್ರಯತ್ನವು ಎಷ್ಟೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ ಎನ್ನುವ ಸತ್ಯವು ಅರಿವಿಗೆ ಬರಲಿದೆ. ದುಃಖಿಸುವ ಅಗತ್ಯವಿಲ್ಲ. ಅವನ ಸೃಷ್ಟಿಯಲ್ಲಿ ಎಲ್ಲವೂ ಸಹಜವೇ. ತಂದೆಯಿಂದ ಧನಸಹಾಯವಾಗಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಶುಭಸುದ್ದಿಯು ಸಿಗಲಿದೆ‌. ಸಂಗಾತಿಯ ಅನ್ವೇಷಣೆಯಲ್ಲಿ ನೀವು ತೊಡಗಿಕೊಳ್ಳುವಿರಿ. ಯಾರ ಮೇಲಾದರೂ ಪ್ರೀತಿಯು ಉಂಟಾಗಬಹುದು. ಈ ಕುರಿತು ಪೂರ್ವಾಪರ ಜ್ಞಾನವು ನಿಮ್ಮಲ್ಲಿ ಇರಲಿ.
  7. ತುಲಾ: ವ್ಯಸನಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಯಾರನ್ನೋ ನಂಬಿ ಮೋಸಹೋಗುವ ಸಾಧ್ಯತೆ ಇರುತ್ತದೆ. ಗಳಿಕೆ ಭರದಲ್ಲಿ ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಲು ಶ್ರಮವನ್ನು ವಹಿಸಬೇಕು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಒಂಟಿಯಾಗಿ ದಿನವನ್ನು ಕಳೆಯುವಿರಿ.
  8. ವೃಶ್ಚಿಕ: ಅನಿರೀಕ್ಷಿತ ಬಂಧುಗಳ ಆಗಮನದಿಂದ ನಿಮ್ಮ ಯೋಜಿತವಾದ ಕಾರ್ಯಗಳು ಸಲೀಸಾಗಿ ಸಾಗದು. ನಿಮ್ಮ ಲಾಭಕ್ಕೆ ಇದರಿಂದಾಗಿ ಸ್ವಲ್ಪ ತೊಂದರೆಯಾಗಬಹುದು. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ನಿಮ್ಮವರ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಅಲೆದಾಟವಾಗಬಹುದು. ಬಂಗಾರವನ್ನು ಖರೀದಿಸಲು ಮುಂದಾಗುವಿರಿ. ಹಣದ ಹರಿವು ಇಂದು ಇರಲಿದೆ. ನಾಲ್ಕು ಜನರ ಮಾತುಗಳನ್ನು ಕೇಳಿ ಸರಿ ಯಾವುದು ಎನ್ನುವ ಗೊಂದಲಕ್ಕೆ ನೀವು ಬರಬಹುದು.
  9. ಧನುಸ್ಸು: ಏಕಾಗ್ರತೆಯ ಕೊರತೆ ನಿಮ್ಮನ್ನು ಬಹಳವಾಗಿ ಕಾಡಬಹುದು. ಎತ್ತರದ ಯಾವುದಾದರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ‌ ಮುಂದಿನ ಯೋಜನೆಗೆ ಸಹಕರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಸಭೆಗಳಿಗೆ ಭಾಗವಹಿಸಲು ಆಹ್ವಾನವು ಬರಬಹುದು. ಸಂಗಾತಿಯಿಂದ ಹಣವನ್ನು ಪಡೆಯಲಿದ್ದೀರಿ.
  10. ಮಕರ: ನಿಮಗೆ ಓದಿನ ಬಗ್ಗೆ ಆಸಕ್ತಿ ಕೆರಳಲಿದೆ. ನಿಮಗೇ ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹಿಂಜರಿಕೆ ಉಂಟಾಗಬಹುದು.‌ ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು.
  11. ಕುಂಭ: ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳನ್ನೂ ನಿರಾತಂಕವಾಗಿ ಎದುರಿಸುವಿರಿ. ಹೊಸತನವನ್ನು ರೂಢಿಸಿಕೊಳ್ಳುವ ನಿಮ್ಮ ಆಸಕ್ತಿಯನ್ನು ಕಂಡ ಜನರಿಂದ ಮೆಚ್ಚುಗೆಯನ್ನು ಗಳಿಸುವಿರಿ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಗಳನ್ನು ಮಾಡಿರಿ. ಸಂತಸದ ವಾರ್ತೆ ನಿಮ್ಮನ್ನು ಅರಸಿ ಬರಬಹುದು.
  12. ಮೀನ: ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಕುಟುಂಬದ ಕುರಿತು ನಿಮಗೆ ಕಾಳಜಿ ಇರಲಿದೆ. ಅನಿಶ್ಚಯವಾಗಿದ್ದ ನಿಮ್ಮ ವಿವಾಹವು ಇಂದು ನಿಶ್ಚಯವಾಗಲಿದೆ. ಮಕ್ಕಳ ವಿಚಾರಕ್ಕೆ ಹಣವನ್ನು ಖರ್ಚುಮಾಡಬೇಕಾಗಿಬರಬಹುದು. ನಿದ್ರಾಹೀನತೆಯಿಂದ ಆರೋಗ್ಯವು ಹಾಳಾಗಬಹುದು. ಸ್ನೇಹಿತರೊಂದಿಗೆ ಪ್ರಯಾಣವನ್ನು ಮಾಡುವಿರಿ. ಸ್ತ್ರೀರಿಂದ ಅಪಮಾನವಾಗಬಹುದು. ಬರಬೇಕಾದ ಸಂಪತ್ತು ಬರಲಿದೆ.

    -ಲೋಹಿತಶರ್ಮಾ, ಇಡುವಾಣಿ