ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಅಜಾಗರೂಕತೆಯಿಂದ ಸಂಪತ್ತು ಸಂಬಂಧಿಕರ ಪಾಲಾಗಲಿದೆ…

ನವೆಂಬರ್ 26ರ ನಿತ್ಯ ರಾಶಿ ಭವಿಷ್ಯದಲ್ಲಿ ನಿಮ್ಮ ಅದೃಷ್ಟ, ಹಣಕಾಸು, ಸಂಬಂಧಗಳ ಬಗ್ಗೆ ತಿಳಿಯಿರಿ. ಇಂದು ಕೆಲವು ರಾಶಿಗಳಿಗೆ ಅಜಾಗರೂಕತೆಯಿಂದ ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ. ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ನಿಮ್ಮ ಆರೋಗ್ಯ, ವೃತ್ತಿ, ಪ್ರೇಮ ಜೀವನ ಮತ್ತು ಕೌಟುಂಬಿಕ ವಿಷಯಗಳಲ್ಲಿ ಇಂದಿನ ಗ್ರಹಗಳ ಪ್ರಭಾವವನ್ನು ವಿಶ್ಲೇಷಿಸಲಾಗಿದೆ. ದಿನದ ಶುಭಾಶುಭ ಕಾಲಗಳನ್ನು ತಿಳಿದು ಉತ್ತಮ ನಿರ್ಧಾರ ಕೈಗೊಳ್ಳಿ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಅಜಾಗರೂಕತೆಯಿಂದ ಸಂಪತ್ತು ಸಂಬಂಧಿಕರ ಪಾಲಾಗಲಿದೆ...
Horoscope (3)
Edited By:

Updated on: Nov 26, 2026 | 3:12 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಗುರುವಾರದಂದು ಸ್ಥಾನಕ್ಕೆ ತಂತ್ರಗಾರಿಕೆ, ಅನಿರೀಕ್ಷಿತ ಪ್ರಯಾಣ, ಸ್ಪರ್ಧೆಯಲ್ಲಿ ಜಯ, ಒಪ್ಪಂದದಲ್ಲಿ ಭಿನ್ನಮತ, ಒಪ್ಪಂದ ಮುಕ್ತಾಯ, ಹೂಡಿಕೆಯ ಚಿಂತೆ, ಮನೆಯಲ್ಲಿ ಸಂಭ್ರಮ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪರಿಘ, ಕರಣ : ತೈತಿಲ, ಸೂರ್ಯೋದಯ – 06 – 24 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:32 – 14:58, ಯಮಗಂಡ ಕಾಲ 06:25 – 07:50, ಗುಳಿಕ ಕಾಲ 09:16 – 10:41

Loading...

ಮೇಷ ರಾಶಿ :
ನಿಮ್ಮ ನಿಜವಾದ ಪ್ರಯತ್ನಕ್ಕೆ ದೈವವೂ ಸಹಾಯ ಮಾಡುವುದು. ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ಪ್ರಯಾಣದಲ್ಲಿ ಜಾಗರೂಕತೆ ಇರಲಿ. ಗೊಂದಲ ವಾತಾವರಣವನ್ನು ನೀವು ಸೃಷ್ಟಿಮಾಡಿಕೊಳ್ಳುವಿರಿ. ಸಂಗಾತಿಯ ಕಿರಿಕಿರಿಯಿಂದ ನಿಮಗೆ ಕಷ್ಟವಾದೀತು. ಗಗನ ಕುಸುಮವು ನೋಡಲಷ್ಟೇ ಚಂದ.

ವೃಷಭ ರಾಶಿ :
ಮನಸ್ಸು ಚಂಚಲವಾಗಿ ಯಾವ ಕೆಲಸವು ಸೂಚಿಸದು. ಗೌಣವಾದುದನ್ನು ಪ್ರಾಮುಖ್ಯ ಮಾಡುವುದು ಬೇಡ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಸ್ತಿಕೆ ಬೇಡ. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಮಾನವೀಯ ಮನಸ್ಸು ಎಲ್ಲರಿಗೂ ಸಂತೋಷ. ಸಂಗಾತಿಯ ವ್ಯವಹಾರದ ವಿಷಯದಲ್ಲಿ ಭಿನ್ನಾಭಿಪ್ರಾಯ ಬರಬಹುದು.

ಮಿಥುನ ರಾಶಿ :
ಒಳ್ಳೆಯವರನ್ನೇ ಅನುಮಾನಿಸುವಂತೆ ವರ್ತನೆ ಇರಲಿದೆ. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಸ್ಪರ್ಧಾತ್ಮಕ ಮನೋಭಾವವು ನಿಮ್ಮ ದಾರಿಯನ್ನು ತಪ್ಪಿಸಬಹುದು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಹಿರಿಯರಿಂದ ಆದರ. ನಿಮ್ಮ ಜವಾಬ್ದಾರಿತನ ಎಲ್ಲರ ಮೆಚ್ಚುಗೆ ಪಡೆಯುತ್ತದೆ.

ಕರ್ಕಾಟಕ ರಾಶಿ :
ನಿಮಗೆ ಗೊತ್ತಿರುವುದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ನಿಮಗೆ ಇಷ್ಟವಿಲ್ಲದವರನ್ನು ಮನಸ್ಸಿನಿಂದ ಹೊರಹಾಕಿ. ದೂರದಿಂದ ಶುಭವಾರ್ತೆ ಸಾಧ್ಯ. ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು.

ಸಿಂಹ ರಾಶಿ :
ಮೇಲಿಂದ ಮೇಲೆ‌ ಬೀಳವ ಘಾತದಿಂದ ಬಲವಾದ ಘಾಸಿಯಾಗಲಿದೆ. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಗಾಯದ ಮೇಲೆ ಬರೆ ಬೀಳಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಕೃಷಿ ಚಟುವಟಿಕೆಯಲ್ಲಿ ಉತ್ಸಾಹವು ಸ್ವಲ್ಪ ಇರುವುದು. ಸಂತಾನಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿ ಮಾಡಿ.

ಕನ್ಯಾ ರಾಶಿ :
ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು. ಓಡಾಡಲಟದ ಗೀಳನ್ನು ತಪ್ಪಿಸಿಕೊಳ್ಳಬೇಕು. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ಸಂಬಂಧದಲ್ಲಿ ಸ್ನೇಹ, ಪ್ರೀತಿ ಹೆಚ್ಚಳ. ಕೆಲಸದಲ್ಲಿ ಶಾಂತ ಮನಸ್ಸಿನಿಂದ ಮಾಡಿದ ಪ್ರಯತ್ನ ಫಲವತ್ತಾಗುತ್ತದೆ. ಸಮಾರಂಭದಲ್ಲಿ ಅನಿರೀಕ್ಷಿತ ಗೌರವವು ನಿಮಗೆ ಪ್ರಾಪ್ತವಾಗುವುದು.

ತುಲಾ ರಾಶಿ :
ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾಗುವುದು. ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುತ್ತದೆ. ನಿಮ್ಮಲ್ಲಿರುವ ಅಲ್ಪ ಸ್ವಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಹೂಡಿಕೆಯಿಂದ ಅಲ್ಪ ಹಣವನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಿಂದ ಮನೆಯವರಿಗೆ ನೆರವಾಗಿದೆ ಎನ್ನಿಸುವ ನೆಮ್ಮದಿ. ನಿಮ್ಮ ಸಹನೆ ದೊಡ್ಡ ಸಾಧ್ಯತೆಯನ್ನು ತರಬಹುದು.

ವೃಶ್ಚಿಕ ರಾಶಿ :
ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಹಣ ಕೊಟ್ಟರೆ ಎಲ್ಲವೂ ಸಿಗದು. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ಸ್ವಲ್ಪ ಅಹಂಕಾರ ನಿಯಂತ್ರಿಸಿದರೆ ದಿನ ಅದ್ಭುತ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ಕಷ್ಟವೆಂದು ಸಿಕ್ಕ ಕೆಲಸವನ್ನು ಬಿಡುವಿರಿ. ಏನಾದರೂ ಹೇಳಬೇಕೆಂದು ಇದ್ದರೆ ನೇರವಾಗಿ ಹೇಳಿ.

ಧನು ರಾಶಿ :
ನಿಮ್ಮ ನಿಯೋಜಿತ ಕಾರ್ಯಗಳನ್ನು ಮಾಡಲು ಜನರು ಸಿಗದೇಹೋಗಬಹುದು. ಧಾರ್ಮಿಕ ಕಾರ್ಯಗಳಿಗೆ ಮುಂದಾಳುತ್ವವವನ್ನು ವಹಿಸುವಿರಿ. ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಸ್ನೇಹಿತರಲ್ಲಿ ಒಬ್ಬರಿಂದ ಉಪಯುಕ್ತ ಸಹಾಯ. ಆರೋಗ್ಯದಲ್ಲಿ ಹಗುರತೆ. ಮನಸ್ಸು ಧಾರ್ಮಿಕ ಚಿಂತನೆಗೆ ಒಲಿಯುವ ದಿನ.. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌

ಮಕರ ರಾಶಿ :
ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ಸರಿಯಾದ ಸಮಯಕ್ಕೆ ಉತ್ತಮ ವೈದ್ಯರ ಸಲಹೆಯನ್ನು ಪಡೆಯಿರಿ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಚಿಕ್ಕ ಪ್ರಯಾಣದ ಸಾಧ್ಯತೆ. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಆಲೋಚಿಸುವಿರಿ. ಯಾರೋ ಕೊಟ್ಟದ್ದನ್ನು ಸ್ವೀಕರಿಸುವುದಿಲ್ಲ. ‌

ಕುಂಭ ರಾಶಿ :
ಎಲ್ಲವೂ ನಿಮ್ಮ ಕೈಯಲಿದೆ ಎಂದುಕೊಂಡು ಬೀಗುವುದು ಬೇಡ. ಸಾಮಾಜಿಕ ಕಾರ್ಯಗಳ ಬಗ್ಗೆ ಕಿವಿಮಾತನ್ನು ಆಪ್ತರು ಹೇಳುವರು. ಪ್ರೇಮದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ಮುಂದುವರಿಯುವುದು ಮುಖ್ಯವಾದೀತು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಇರುವುದರಲ್ಲಿ ನೆಮ್ಮದಿಯನ್ನು ಕಾಣುವುದು ಮುಖ್ಯವಾದೀತು. ಮನಸ್ಸಿನ ಚಾಂಚಲತ್ಯವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಮೀನ ರಾಶಿ :
ನಿಮ್ಮ ಇಂದಿನ ಶ್ರಮವು ಎಷ್ಟೇ ಇದ್ದರು ಒಂದು ಮಾತು ಎಲ್ಲದಕ್ಕೂ ತಣ್ಣೀರು ಹಾಕುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ನೀವು ಇಂದು ಅಸಹಾಯಕರಂತೆ ತೋರುವಿರಿ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ.

-ಲೋಹಿತ್ ಹೆಬ್ಬಾರ್-8762924271 (what’s app only)

Published On - 3:11 am, Thu, 26 November 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us