Horoscope Today 16 November: ಇಂದು ಈ ರಾಶಿಯವರ ಮನೋಬಲವು ಹಣದ ವ್ಯಯದಿಂದ ಕುಗ್ಗಲಿದೆ…

ನವೆಂಬರ್ 16, 2026 ರ ನಿತ್ಯ ಭವಿಷ್ಯದ ಪ್ರಕಾರ, ಕೆಲವು ರಾಶಿಗಳ ಮನೋಬಲವು ಹಣದ ಖರ್ಚುಗಳಿಂದ ಕುಗ್ಗಲಿದೆ. ಹೋಲಿಕೆಯಿಂದ ಅಸಮಾಧಾನ, ವಿವಾಹಕ್ಕೆ ವಿರೋಧ ಮತ್ತು ಹೂಡಿಕೆಯಲ್ಲಿ ಮಿತಿಯಂತಹ ಸವಾಲುಗಳು ಎದುರಾಗಬಹುದು. ಆದಾಗ್ಯೂ, ಯೋಜನಾಬದ್ಧ ಶ್ರಮ ಮತ್ತು ಆತ್ಮಾವಲೋಕನದಿಂದ ಅನೇಕ ರಾಶಿಗಳಿಗೆ ಯಶಸ್ಸು ಸಿಗಲಿದೆ. ಪ್ರತಿಯೊಂದು ರಾಶಿಯ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

Horoscope Today 16 November: ಇಂದು ಈ ರಾಶಿಯವರ ಮನೋಬಲವು ಹಣದ ವ್ಯಯದಿಂದ ಕುಗ್ಗಲಿದೆ...
Horoscope Today, November 16
Image Credit source: Google
Edited By:

Updated on: Nov 16, 2026 | 4:52 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಸೋಮವಾರದಂದು ಹೋಲಿಕೆಯಿಂದ ಅಸಮಾಧಾನ, ವಿವಾಹಕ್ಕೆ ವಿರೋಧ, ಯೋಜನಾಬದ್ಧ ಶ್ರಮ, ಹೂಡಿಕೆಯಲ್ಲಿ ಮಿತಿ, ತ್ಯಾಗ ಮನೋಭಾವ, ಆತ್ಮಾವಲೋಕನ, ನಿರ್ದಿಷ್ಟ ಆದಾಯದ ಕೊರತಡ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಸಪ್ರಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಶೂಲಿ, ಕರಣ : ಗರಜ, ಸೂರ್ಯೋದಯ – 06 – 19 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:46 – 09:12, ಯಮಗಂಡ ಕಾಲ 10:38 – 12:04, ಗುಳಿಕ ಕಾಲ 13:30 – 14:57

Loading...

ಮೇಷ ರಾಶಿ :
ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಯಾವುದೂ ಶಾಶ್ವತವಲ್ಲ ಎಂಬ ಅರಿವು ಆಗಾಗ ನಿಮ್ಮ ಮನಸ್ಸಿಗೆ ಬರುತ್ತಲೇ ಇರುವುದು. ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವಿರಿ. ಇಂದಿನ ಹೆಚ್ಚಿನ ಸಮಯವನ್ನು ಧಾರ್ಮಿಕ ಕೆಲಸಕ್ಕೆ ಮೀಸಲಿಡುವಿರಿ.

ವೃಷಭ ರಾಶಿ :
ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ನಿಮ್ಮ ಮಾತು ಸುತ್ತಿ ಬಳಸಿ ನಿಮ್ಮ ಬುಡಕ್ಕೇ ಬರಲಿದೆ. ನೀವು ಅಂದಿಕೊಂಡಂತೆ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು. ನವವಿವಾಹಿತರಿಗೆ ಸಂತಸದ ಸುದ್ದಿಯು ಇರಲಿದೆ. ಉದ್ಯೋಗದಲ್ಲಿ ಒತ್ತಡವಿರುವ ಕಾರಣ ಬದಲಾವಣೆಯನ್ನು ಬಯಸುವಿರಿ.

ಮಿಥುನ ರಾಶಿ :
ಏಕಕಾಲಕ್ಕೆ ಹಲವಾರು ಖರ್ಚುಗಳು ಬಂದು ನಿಮಗೆ ತಲೆಬಿಸಿ ಆಗಲಿದೆ. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಅವರವರ ತೂಕವೇ ಬೇರೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ. ನಿಮ್ಮ ಕಾರ್ಯಕ್ಕೆ ರಾಜಕೀಯ ಅಡ್ಡ ಬರಲಿದೆ. ಯಾರಾದರೂ ನಿಮ್ಮ ಅರ್ಹತೆಯನ್ನು ಪ್ರಶ್ನಿಸಬಹುದು. ಅದಕ್ಕೆ ನಿಮಗೆ ಉತ್ತಮ ಮಾರ್ಗೋಪಯ ಕೊಡುವರು.

ಕರ್ಕಾಟಕ ರಾಶಿ :
ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಿದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ಕ್ರೀಡಾಸಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದೀತು.

ಸಿಂಹ ರಾಶಿ :
ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಅಶಿಸ್ತಿನ ಕಾರಣಕ್ಕೆ ಹಿರಿಯರಿಂದ ಉಪದೇಶ ಸಿಗಲಿದೆ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವಿರಿ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ವಾಗ್ವಾದವು ನಡೆದು ಅತಿರೇಕವಾದೀತು.

ಕನ್ಯಾ ರಾಶಿ :
ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಭೂಮಿಯನ್ನು ಉಳಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನ ಮಾಡುವಿರಿ. ಸಹವಾಸದ ಕಾರಣ ನಿಮ್ಮ ಮೇಲೆ ಸಲ್ಲದ ಆರೋಪಗಳು ಕೇಳಿಬರಬಹುದು. ಹಣಕಾಸಿನ ವಿಚಾರದಲ್ಲಿ ಗಮನಾರ್ಹ ಬೆಳವಣಿಗೆ ಉಂಟಾಗಲಿದೆ.

ತುಲಾ ರಾಶಿ :
ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಸ್ಥಿರ ಮನಸ್ಸಿನಿಂದ ಯಾವುದನ್ನೂ ಒಪ್ಪಲಾರಿರಿ. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ಬಂದ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ಮಾಡಿ.

ವೃಶ್ಚಿಕ ರಾಶಿ :
ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ನಿಮ್ಮ ರೂಢಿಗಳು ನಿಮಗೆ ಗೊತ್ತಾಗದಂತೆ ಬದಲಾಗಬಹುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ಹೊಸ ಕೆಲಸದಲ್ಲಿ ಉತ್ಸಾಹವು ಇರಲಿದೆ. ನಿಮ್ಮ ಅಂತರಂಗವು ಎಲ್ಲರಿಗೂ ಗೊತ್ತಾದೀತು. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಕ್ರಿಯಾಶೀಲರಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ.

ಧನು ರಾಶಿ :
ನಿಮ್ಮ ಬೆಳವಣಿಕೆಗೆಯು ಸಾತ್ತ್ವಿಕ ರೀತಿಯಲ್ಲಿ ಇರಲಿ. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಕಾರ್ಯವೇ ದೀರ್ಘವಾಗಬಹುದು. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಕ್ಷ್ಮತೆಯ ಅಗತ್ಯತೆ ಇದೆ.

ಮಕರ ರಾಶಿ :
ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇರಲಿದೆ. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಚಿಂತೆನೆಗಳು ಉತ್ತಮವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರವುದು ಕಷ್ಟ.

ಕುಂಭ ರಾಶಿ :
ಅತಿಯಾಗಿ ತಲೆ ಹಾಳುಮಾಡಿಕೊಳ್ಳದೇ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ವಿದೇಶ ಪ್ರಯಾಣದ ಗುಂಗಿನಲ್ಲಿ ನೀವು ಇರುವಿರಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗುವುದು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ತಪ್ಪನ್ನು ಎತ್ತಿ ತೋರಿಸುವವರು ಇಂದು ಕಾಣಿಸುವರು. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮನ್ನು ಕಡೆಗಣಿಸಬಹುದು.

ಮೀನ ರಾಶಿ :
ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ತೊಂದರೆ. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಾನೂನು ಸಮರಕ್ಕೆ ನಿಮಗೆ ಹೊಸ ಆಯಾಮ ಸಿಗಲಿದೆ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ನಷ್ಟವಾಗಬಹುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us