ವಾರ ಭವಿಷ್ಯ: ಸೂರ್ಯನ ರಾಶಿ ಬದಲಾವಣೆ ಹಾಗೂ ಗ್ರಹಗಳ ಸಂಚಾರದಿಂದ ಈ ವಾರ ಯಾವ ರಾಶಿಗೆ ಅದೃಷ್ಟ?
ಈ ವಾರ ಗ್ರಹಗಳ ಸಂಚಾರವು ೧೨ ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಸೂರ್ಯನ ರಾಶಿ ಬದಲಾವಣೆ, ಬುಧ ಮತ್ತು ಶುಕ್ರರ ನೇರ ಸಂಚಾರ, ಗುರು, ಕುಜ, ಕೇತು, ಶನಿ, ರಾಹುಗಳ ಸ್ಥಾನಗಳು, ಹಣಕಾಸು, ಸಂಬಂಧ, ವೃತ್ತಿ ಮತ್ತು ಆರೋಗ್ಯದ ಮೇಲೆ ವಿಭಿನ್ನ ಫಲಗಳನ್ನು ನೀಡಲಿವೆ. ಗ್ರಹಗಳ ಪ್ರಭಾವವನ್ನು ಅರಿತು, ಜಾಗೃತಿಯಿಂದ ಸವಾಲುಗಳನ್ನು ಎದುರಿಸಿ.

ಈ ವಾರ ಸೂರ್ಯ ೧೬ರ ವರೆಗೆ ತುಲಾದಲ್ಲಿದ್ದು, ಅನಂತರ ವೃಶ್ಚಿಕಕ್ಕೆ ಪ್ರವೇಶಿಸುವನು. ಬುಧ ತುಲಾದಲ್ಲಿ ಋಜು, ಶುಕ್ರನು ಕನ್ಯಾದಲ್ಲಿ ಋಜು. ಸಿಂಹದಲ್ಲಿ ಗುರು, ಕುಜ, ಕೇತು ಒಟ್ಟಿಗೆ. ಶನಿ ಮೀನದಲ್ಲಿ, ರಾಹು ಕುಂಭದಲ್ಲಿ ಹೀಗೆ ಗ್ರಹಗಳ ಸ್ಥಿತಿ ಇರಲಿದೆ.
ಮೇಷ ರಾಶಿ : ಮೂರು ಗ್ರಹಗಳು ಪಂಚಮದಲ್ಲಿರುವುದರಿಂದ ಬುದ್ಧಿ, ಸೃಜನಶೀಲತೆ, ಪ್ರೇಮ, ಮಕ್ಕಳ ವಿಷಯದಲ್ಲಿ ಚಟುವಟಿಕೆ ಹೆಚ್ಚು. ಷಷ್ಠದ ಶುಕ್ರನು ಸ್ಪರ್ಧೆ ಮತ್ತು ಸೇವಾ ಕ್ಷೇತ್ರದಲ್ಲಿ ಜಯ ಕೊಡುತ್ತಾನೆ. ಲಾಭಸ್ಥಾನದ ರಾಹು ಹಣ ಬರುವ ದಾರಿ ತೆರೆಯುತ್ತಾನೆ, ಆದರೆ ದ್ವಾದಶದ ಶನಿ ಅನಗತ್ಯ ಖರ್ಚು ತರುತ್ತಾನೆ. ಅಷ್ಟಮದ ಸೂರ್ಯನಿಂದ ಆರೋಗ್ಯ ಮತ್ತು ಹಿರಿಯರೊಂದಿಗೆ ಸಂಬಂಧದಲ್ಲಿ ಎಚ್ಚರ ಬೇಕು.
ವೃಷಭ ರಾಶಿ : ಚತುರ್ಥದಲ್ಲಿ ಮೂರು ಗ್ರಹ ಸೇರಿರುವುದರಿಂದ ಮನೆ, ಭೂಮಿ, ವಾಹನ, ತಾಯಿಯ ವಿಷಯಗಳು ಮುನ್ನೆಲೆಗೆ ಬರುತ್ತವೆ. ಮನೆಯಲ್ಲಿ ಬಿಸಿ ಮಾತುಗಳಾಗದಂತೆ ನೋಡಿಕೊಳ್ಳಿ. ದಶಮದ ರಾಹು ಕೆಲಸದಲ್ಲಿ ಹೊಸ ಅವಕಾಶ ತರುತ್ತಾನೆ, ಲಾಭದ ಶನಿ ಆದಾಯ ಸ್ಥಿರಗೊಳಿಸುತ್ತಾನೆ. ಪಂಚಮದ ಶುಕ್ರ ಮನಸ್ಸಿಗೆ ಹಿತ ನೀಡುತ್ತಾನೆ. ಮನೆಯ ಹಿರಿಯರ ಅಭಿಪ್ರಾಯಕ್ಕೆ ಬೆಲೆ ಕೊಡಿ.
ಮಿಥುನ ರಾಶಿ : ತೃತೀಯದ ಗುರು, ಕುಜ ಧೈರ್ಯ, ಸಂವಹನ, ಒಡಹುಟ್ಟಿದವರ ಬೆಂಬಲ ಕೊಡುತ್ತಾರೆ. ಬರವಣಿಗೆ, ಮಾರಾಟ, ಮಾಧ್ಯಮ ಕ್ಷೇತ್ರದವರಿಗೆ ಉತ್ತಮ ವಾರ. ದಶಮದ ಶನಿ ಕೆಲಸ ನಿಧಾನಗೊಳಿಸಿದರೂ ಅಡಿಪಾಯ ಗಟ್ಟಿಯಾಗುತ್ತದೆ. ಭಾಗ್ಯದ ರಾಹುವಿನಿಂದ ದೂರ ಪ್ರಯಾಣದ ಯೋಜನೆ ರೂಪುಗೊಳ್ಳಬಹುದು. ಕೈಗೆತ್ತಿಕೊಂಡ ಕೆಲಸಗಳನ್ನು ಒಂದೊಂದಾಗಿ ಮುಗಿಸಿ.
ಕರ್ಕಾಟಕ ರಾಶಿ : ದ್ವಿತೀಯದ ಗುರು ಕುಟುಂಬ ಮತ್ತು ಧನದ ವಿಷಯದಲ್ಲಿ ಶುಭ, ಆದರೆ ಅದೇ ಸ್ಥಾನದ ಕುಜ ಮಾತಿಗೆ ಕಠೋರತೆ ತರಬಹುದು. ಅಷ್ಟಮದ ರಾಹು ಅನಗತ್ಯ ಭಯ ಮತ್ತು ಚಿಂತೆ ಹೆಚ್ಚಿಸುತ್ತಾನೆ. ನವಮದ ಶನಿ ಹಿರಿಯರ ಸೇವೆಗೆ ಪ್ರೇರಣೆ ಕೊಡುತ್ತಾನೆ. ಮಾತಿಗೆ ಮೊದಲು ಒಂದು ಕ್ಷಣ ಯೋಚಿಸಿ, ಹಣಕಾಸಿನ ಲೆಕ್ಕ ಬರೆದಿಡಿ.
ಸಿಂಹ ರಾಶಿ : ಈ ರಾಶಿಯಲ್ಲಿ ಗುರು, ಕುಜ, ಕೇತು ಕೂಡಿರುವುದರಿಂದ ಆತ್ಮವಿಶ್ವಾಸ ಮತ್ತು ಶಕ್ತಿ ಹೆಚ್ಚು, ಜೊತೆಗೆ ಹಠ ಮತ್ತು ದೇಹದ ಉಷ್ಣ ಹೆಚ್ಚಬಹುದು. ಕೇತುವಿನಿಂದ ಮನಸ್ಸಿನಲ್ಲಿ ವೈರಾಗ್ಯ ಭಾವ. ದ್ವಿತೀಯದ ಶುಕ್ರನು ಧನ ಮತ್ತು ಮಾತಿನ ಮಾಧುರ್ಯ ತರುತ್ತಾನೆ. ಸಪ್ತಮದ ರಾಹುವಿನಿಂದ ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಸಾಧ್ಯ.
ಕನ್ಯಾ ರಾಶಿ : ನಿಮ್ಮದೇ ರಾಶಿಯಲ್ಲಿ ಶುಕ್ರ ಮಾರ್ಗಿಯಾಗಿ ಸೌಂದರ್ಯ, ಸಂತೋಷ, ಸಂಬಂಧಗಳಲ್ಲಿ ಹೊಸ ಹೊಳಪು ತರುತ್ತಾನೆ. ದ್ವಾದಶದ ಗುರು, ಕುಜರಿಂದ ಖರ್ಚು, ವಿದೇಶ ಸಂಪರ್ಕ, ನಿದ್ರೆಯ ಕೊರತೆ. ಷಷ್ಠದ ರಾಹುವು ಶತ್ರುಗಳ ಮೇಲೆ ಜಯ ಕೊಡುತ್ತಾನೆ. ಸಪ್ತಮದ ಶನಿಯಿಂದ ಪಾಲುದಾರಿಕೆಯಲ್ಲಿ ಗಂಭೀರತೆ. ಖರ್ಚಿಗೆ ಮಿತಿ ಇಟ್ಟುಕೊಂಡರೆ ವಾರ ಸುಖಕರ.
ತುಲಾ ರಾಶಿ: ಲಗ್ನದ ಬುಧ ಋಜುವಾಗಿ ಮಾತು ಮತ್ತು ಬುದ್ಧಿಗೆ ಹೊಸ ಚುರುಕು ಕೊಡುತ್ತಾನೆ. ಲಾಭಸ್ಥಾನದ ಗುರು, ಕುಜ ಸ್ನೇಹಿತರ ಬೆಂಬಲ ಮತ್ತು ಆದಾಯ ವೃದ್ಧಿ ತರುತ್ತಾರೆ. ಪಂಚಮದ ರಾಹುವು ಪ್ರೇಮ, ಮಕ್ಕಳ ವಿಷಯದಲ್ಲಿ ಗೊಂದಲ ಉಂಟುಮಾಡಬಹುದು. ದ್ವಿತೀಯದ ಸೂರ್ಯನಿಂದ ಮಾತಿನಲ್ಲಿ ಎಚ್ಚರ ಬೇಕು. ಹಳೆಯ ಆಸೆಯೊಂದನ್ನು ಈಡೇರಿಸಲು ಈ ವಾರ ಒಳ್ಳೆಯದು.
ವೃಶ್ಚಿಕ ರಾಶಿ : ದಶಮದ ಗುರು, ಕುಜ ಕೆಲಸದಲ್ಲಿ ನಾಯಕತ್ವ, ಬಡ್ತಿ, ಹೊಸ ಜವಾಬ್ದಾರಿ ತರುತ್ತಾರೆ. ಸೂರ್ಯ ನಿಮ್ಮ ರಾಶಿಗೆ ಬಂದು ಮುಖದಲ್ಲಿ ತೇಜಸ್ಸು ನೀಡುತ್ತಾನೆ. ಲಾಭದ ಶುಕ್ರನು ಆದಾಯಕ್ಕೆ ಬೆಂಬಲ ಕೊಡುತ್ತಾನೆ. ಚತುರ್ಥದ ರಾಹುವಿನಿಂದ ಮನೆಯಲ್ಲಿ ಮನಸ್ಸಿನ ಅಶಾಂತಿ ಸಾಧ್ಯ. ಕೆಲಸದ ಒತ್ತಡವನ್ನು ಮನೆಗೆ ಕೊಂಡೊಯ್ಯಬೇಡಿ.
ಧನು ರಾಶಿ : ಭಾಗ್ಯಸ್ಥಾನದಲ್ಲಿ ಗುರು, ಕುಜ, ಕೇತು ಇರುವುದರಿಂದ ಅದೃಷ್ಟ, ತೀರ್ಥಯಾತ್ರೆ, ಹಿರಿಯರ ಆಶೀರ್ವಾದ ಸಿಗುತ್ತದೆ. ಕೇತುವಿನಿಂದ ಆಧ್ಯಾತ್ಮಿಕ ಒಲವು ಹೆಚ್ಚು. ದಶಮದ ಶುಕ್ರ ಕೆಲಸದಲ್ಲಿ ಮೆಚ್ಚುಗೆ ತರುತ್ತಾನೆ. ತೃತೀಯದ ರಾಹು ಧೈರ್ಯ ಕೊಡುತ್ತಾನೆ. ಚತುರ್ಥದ ಶನಿ ಮನೆಯ ಜವಾಬ್ದಾರಿ ಹೆಚ್ಚಿಸುತ್ತಾನೆ. ಗುರು ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯಿರಿ.
ಮಕರ ರಾಶಿ : ಸಪ್ತಮದ ಬುದ್ಧಿವಂತ ಬುಧನು ವ್ಯಾಪಾರ ಮಾತುಕತೆಗೆ ಸಹಾಯ ಮಾಡುತ್ತಾನೆ. ಅಷ್ಟಮದ ಗುರು, ಕುಜ, ಕೇತು ಹಠಾತ್ ಘಟನೆ, ಗುಪ್ತ ವಿಷಯಗಳು ಹೊರಬರುವುದನ್ನು ಸೂಚಿಸುತ್ತಾರೆ. ವಾಹನ ಚಾಲನೆಯಲ್ಲಿ ಎಚ್ಚರ. ಭಾಗ್ಯದ ಶುಕ್ರ ಸಮಾಧಾನ ಕೊಡುತ್ತಾನೆ. ತೃತೀಯದ ಶನಿ ಪ್ರಯತ್ನಕ್ಕೆ ಫಲ ನೀಡುತ್ತಾನೆ. ವಾದ ತಪ್ಪಿಸಿ, ಸಾಲ ಕೊಡುವುದು ಬೇಡ.
ಕುಂಭ ರಾಶಿ : ಲಗ್ನದ ರಾಹು ಮನಸ್ಸನ್ನು ಚಂಚಲಗೊಳಿಸುತ್ತಾನೆ. ಸಪ್ತಮದ ಗುರು, ಕುಜ ಪಾಲುದಾರಿಕೆ ಮತ್ತು ದಾಂಪತ್ಯದಲ್ಲಿ ಚರ್ಚೆಗೆ ಶುಭ, ಆದರೆ ಕುಜನಿಂದ ಬಿಸಿ ಮಾತು ಸಾಧ್ಯ. ದ್ವಿತೀಯದ ಶನಿ ಧನ ಸಂಗ್ರಹಕ್ಕೆ ಸಹಕಾರಿ. ದಶಮದ ಸೂರ್ಯ ಕೆಲಸದಲ್ಲಿ ಗೌರವ ತರುತ್ತಾನೆ. ಒಪ್ಪಂದಗಳನ್ನು ಲಿಖಿತವಾಗಿ ಮಾಡಿ.
ಮೀನ ರಾಶಿ : ಲಗ್ನದ ಶನಿ ತಾಳ್ಮೆ ಮತ್ತು ಜವಾಬ್ದಾರಿ ಕೇಳುತ್ತಾನೆ. ಷಷ್ಠದ ಗುರು, ಕುಜ ಶತ್ರು, ಸಾಲ, ರೋಗಗಳ ಮೇಲೆ ಜಯ ಕೊಡುತ್ತಾರೆ. ಸಪ್ತಮದ ಶುಕ್ರ ದಾಂಪತ್ಯದಲ್ಲಿ ಮಾಧುರ್ಯ ತರುತ್ತಾನೆ. ದ್ವಾದಶದ ರಾಹುವಿನಿಂದ ಖರ್ಚು ಮತ್ತು ನಿದ್ರೆಯ ಏರುಪೇರು ಸಾಧ್ಯ.
– ಲೋಹಿತ್ ಹೆಬ್ಬಾರ್




