Horoscope: ದಿನ ಭವಿಷ್ಯ; ಈ ರಾಶಿಯವರು ವೃತ್ತಿಯಲ್ಲಿ ಬರುವ ಸವಾಲುಗಳನ್ನು ಎದುರಿಸುವಿರಿ

|

Updated on: May 28, 2024 | 12:12 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 28 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನ ಭವಿಷ್ಯ; ಈ ರಾಶಿಯವರು ವೃತ್ತಿಯಲ್ಲಿ ಬರುವ ಸವಾಲುಗಳನ್ನು ಎದುರಿಸುವಿರಿ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಬ್ರಹ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ 15:43ರಿಂದ 17:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:17 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 14:07ರ ವರೆಗೆ.

ಧನು ರಾಶಿ: ಇಂದು ನೀವು ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದುಕೊಳ್ಳುವಿರಿ. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಕಛೇರಿಯ ಕೆಲಸಗಳು ಒಂದು ಹಂತ ಮುಗಿದರೂ ಮತ್ತೊಂದಿಷ್ಟು ನಿಮಗೆ ಬರಲಿದೆ. ಹಿರಿಯರನ್ನು ಪ್ರೀತಿಯಿಂದ ಗೌರವಿಸಿ‌. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಭವಿಷ್ಯದ ಕುರಿತು ಯೋಚನೆಯನ್ನು ಮಾಡಲಿದ್ದೀರಿ. ನಿಮಗೆ ಇಷ್ಟವಾದ ಭೂಮಿಯ ಖರೀದಿಗೆ ಅನ್ಯಮಾರ್ಗವನ್ನು ಬಳಸಿಕೊಳ್ಳುವಿರಿ.‌ನಿಮ್ಮ ಸಿಟ್ಟಿನ ಸ್ವಭಾವದಿಂದ ಏನನ್ನೂ ಸಾಧಿಸಲಾಗದು. ಸಾಮಾಜಿಕ ಕಾರ್ಯಗಳಿಗೆ ಬೇಕಾದ ತಂಡವನ್ನು ಕಟ್ಟುವ ಆಸೆ ಇರುವುದು. ಯಾರನ್ನೋ ನೋಡಿ ನೀವು ಅಸೂಯೆ ಪಡೆಯುವುದು ಬೇಡ.‌ ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಯಾವ ಸಂದರ್ಭದಲ್ಲೊಯೂ ಉದ್ವೇಗಕ್ಕೆ ಒಳಗಾಗುವುದು ಬೇಡ. ದೂರದ ಬಂಧುಗಳ ಸಮಾಗಮವಾಗಬಹುದು.

ಮಕರ ರಾಶಿ: ನಿಮಗೆ ಆಲೋಚನೆಯ ಕಾರಣದಿಂದ ಸರಿಯಾಗಿ ನಿದ್ರೆ ಬಾರದೇ ಎಲ್ಲವೂ ಅಸ್ತವ್ಯಸ್ತವಾಗಬಹುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ‌. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಯಾವುದೇ ಯೋಜನೆಯಿಲ್ಲದೇ ಒಟ್ಟಾರೆ ಕೆಲಸ ಮಾಡುವಿರಿ. ಮನಸ್ಸು ಶಾಂತವಾಗುವುದು. ಇಲ್ಲ ಸಲ್ಲದ ಆಲೋಚನೆಗಳನ್ನು ಬಿಡಿ. ನಿಮ್ಮ ಕಾರ್ಯಕ್ಕೆ ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಶಿಸ್ತನ್ನು ಕಾಪಾಡಿಕೊಳ್ಳಲು ಬಯಸುವಿರಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. .

ಕುಂಭ ರಾಶಿ: ಇಂದು ಸಹೋದ್ಯೋಗಿಗಳು ನಿಮಗೆ ಸಿಗುವ ಜವಾಬ್ದಾರಿಯನ್ನು ಸಿಗದಂತೆ ಮಾಡುವರು. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಅನಾಯಾಸಕರವಾದ ಪ್ರಯಾಣವನ್ನು ಮಾಡಲಿದ್ದೀರಿ. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಿ ಇರಲಿವೆ. ಕಳೆದುಕೊಂಡ ವಸ್ತುಗಳನ್ನು ಹುಡುಕಿ ಸೋಲುವಿರಿ. ಸಂಗಾತಿಯ ಬಗ್ಗೆ ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವಿರಿ. ಬಹಳ ದಿನಗಳಿಂದ ಬಾರದೇ ಇರುವ ಹಣಕ್ಕೆ ಚಿಂತೆ ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಪ್ರಶಂಸೆಯು ನಿಮಗೆ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುವುದು. ನ್ಯಾಯ ಸಮ್ಮತವಾಗಿ ಇರಿ. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ.

ಮೀನ ರಾಶಿ: ನೀವು ಮಕ್ಕಳ ಜೀವನವನ್ನು ಕಂಡು ಸಂಕಟಪಡುವಿರಿ. ಅದಕ್ಕಾಗಿ ಏನಾದರೂ ಮಾಡಲು ಯೋಚಿಸುವಿರಿ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ನಿರೀಕ್ಷಿತ ಮಟ್ಟವನ್ನು ಇಂದು ನಿಮ್ಮ‌ಕೆಲಸವು ತಲುಪದು. ಹಿರಿಯರನ್ನು ಗೌರವಿಸುವುದು ನಿಮ್ಮ ಸ್ವಭಾವವಾಗಿರುತ್ತದೆ. ವೃತ್ತಿಯಲ್ಲಿ ಬರುವ ಸವಾಲುಗಳಿಂದ ಭಯಗೊಳ್ಳುವಿರಿ. ಎಲ್ಲ ಕಡೆಗಳಿಂದ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವಿರಿ. ಇಂದು ಬಿಡುವಿಲ್ಲದ ದಿನವಾಗಿರುವುದು. ಕೆಲವು ವಿಚಾರಕ್ಕೆ ತುಂಬಾ ಭಾವುಕರಾಗಬಹುದು. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ.