Astrology: ದಿನಭವಿಷ್ಯ: ಈ ರಾಶಿಯವರಿಗೆ ಹೊಸತನ್ನು ಕಲಿಯುವ ಉತ್ಸಾಹ, ತಾಳ್ಮೆ ಇಟ್ಟುಕೊಳ್ಳಿ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 28 ಮೇ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮೇ 28ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಬ್ರಹ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ 15:43ರಿಂದ 17:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:17 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 14:07ರ ವರೆಗೆ.
ಮೇಷ ರಾಶಿ: ನೀವು ಸ್ನೇಹಿತರನ್ನು ನಂಬಿ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳಬಹುದು. ಬಟ್ಟೆಯ ವ್ಯಾಪಾರಿಗಳು ಲಾಭವನ್ನು ಗಳಿಸಲಿದ್ದಾರೆ. ವಿವಾಹಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ವ್ಯಾಪಾರದಲ್ಲಿ ಉಂಟಾಗುವ ಕ್ಲೇಶಗಳನ್ನು ಕಂಡು ವ್ಯಾಪಾರವನ್ನು ಬಿಡುವ ಯೋಚನೆ ಮಾಡುವಿರಿ. ಯಾರ ಬಳಿಯಾದರೂ ಆದಾಯದ ಮೂಲವನ್ನು ಕೇಳಿ ಬೈಸಿಕೊಳ್ಳುವ ಸಾಧ್ಯತೆ ಇದೆ. ತಾಳ್ಮೆಯಿಂದ ಕೆಲಸವನ್ನು ಮಾಡುವುದು ಉತ್ತಮ. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ಯಾವ ಕೆಲಸ ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ. ಪರಿಚಿತರಿಗೆ ಹಣವನ್ನು ಕೊಡಲು ಸಂಗಾತಿಯಿಂದ ಒತ್ತಡ ಬರಬಹುದು.
ವೃಷಭ ರಾಶಿ: ಏನೂ ಕೆಲಸವಿಲ್ಲದೇ ಸಮಯವನ್ನು ಕಳೆಯುವಿರಿ. ಆದಕಾರಣ ಹತ್ತಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ನಿಮಗೆ ಸಮಯವನ್ನು ಕೊಟ್ಟವರನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ನಿಧಾನವಾಗಿ ಸಿಗಲಿದೆ. ಏನೋ ಹೊಸತನ್ನು ಸಾಧಿಸಲು ನಿಮಗೆ ಪ್ರೋತ್ಸಾಹ ಸಿಗುವುದು. ತಾಳ್ಮೆಯನ್ನು ಇಟ್ಟುಕೊಳ್ಳಿ. ಹೂಡಿಕೆಯ ಕಾರಣ ಆರ್ಥಿಕವಾಗಿ ಕಷ್ಟವಾಗಬಹುದು. ಕುಟುಂಬದ ಜೊತೆಗಿನ ನಿಮ್ಮ ಈ ದಿನವು ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಸಣ್ಣ ಅಂತರದಲ್ಲಿ ಅಪಾಯದಿಂದ ಹೊರಬರುವಿರಿ. ನೀವು ಹನಿಮ್ಮ ಆವಿಷ್ಕಾರಕ್ಕೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳಬಹುದು.
ಮಿಥುನ ರಾಶಿ: ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭ ಬರಬಹುದು. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಕಾಣಿಸುವುದು. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ನಿಮಗೆ ಆಸುರಕ್ಷತೆಯ ಭಯವು ಉಂಟಾಗಬಹುದು. ಕಛೇರಿಯಲ್ಲಿ ನಿಮ್ಮ ಯೋಜನೆಗಳನ್ನು ಮೆಚ್ಚಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ನೀವು ಸಮಯಕ್ಕೆ ಮಹತ್ತ್ವವನ್ನು ಕೊಡುವುದು ಬಹಳ ಇಷ್ಟದ ಸಂಗತಿಯಾಗಿದೆ. ನಿಮ್ಮ ಆಲೋಚನೆಗಳು ಅಸ್ಥಿರ ಮತ್ತು ದ್ವಂದ್ವಗಳಿಂದ ಕೂಡಿರುತ್ತದೆ. ಮಕ್ಕಳಿಗೆ ಭಯವನ್ನು ಕೊಡುವುದು ಬೇಡ. ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ.
ಕಟಕ ರಾಶಿ; ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಅಪರಿಚಿತ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಕಲಹವಾಗಲಿದೆ. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗುವಿರಿ. ಇದು ನಿಮಗೆ ಉಪಯೋಗವಾಗಲಿದೆ. ನಿಮ್ಮ ದೈಹಿಕ ಪೀಡೆಯನ್ನು ಯಾರ ಬಳಿಯೂ ಹೇಳಲಾರಿರಿ. ಅತಿಯಾದ ನಿಮ್ಮ ಸೂಕ್ಷ್ಮ ಸ್ವಭಾವದಿಂದ ನಿಮಗೇ ತೊಂದರೆಯಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮಗೆ ತಪ್ಪಿತಸ್ಥ ಭಾವವು ಮೂಡುವುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ.