ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆಗೆ. ರಾಹು ಕಾಲ ಮಧ್ಯಾಹ್ನ 12:21 ರಿಂದ 01:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:06 ಗಂಟೆ 09:31 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:21ರ ವರೆಗೆ.
ಮೇಷ ರಾಶಿ: ನಿಮ್ಮ ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದೋ ಕೆಲಸವನ್ನು ಮಾಡಿಕೊಡಬೇಕಾಗುವುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಅಚಾತುರ್ಯದಿಂದ ತಪ್ಪನ್ನು ಮಾಡಿ, ಪಶ್ಚಾತ್ತಾಪ ಪಡುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಕುಟುಂಬದ ಸದಸ್ಯರ ಪ್ರೀತಿಯು ಸಿಕ್ಕಿ ಹರ್ಷಿಸುವಿರಿ. ಆಕಸ್ಮಿಕ ವಾರ್ತೆಯಿಂದ ಉದ್ವೇಗಕ್ಕೆ ಒಳಗಾಗುವಿರಿ. ಸುಖ ಜೀವನದ ನಿರೀಕ್ಷೆಯಲ್ಲಿಯೇ ದಿನವನ್ನು ಕಳೆಯುವಿರಿ. ಇಂದಿನ ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತೂ ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ. ವಾತ ರೋಗವು ಕಾಣಿಸಿಕೊಂಡೀತು.
ವೃಷಭ ರಾಶಿ: ಸಾಮಾಜಿಕ ಕಾರ್ಯವನ್ನು ಮಾಡಲು ಒತ್ತಡವು ಬರಬಹುದು. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಇನ್ನೊಬ್ಬರನ್ನು ಸರಿ ಮಾಡಲು ಹೋಗಿ ನೀವೇ ಹಾಳಾಗಬಹುದು. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂದಿದ್ದರೂ ಆಗದು. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ನೀವು ಯಶಸ್ಸನ್ನು ಕಾಯ್ದುಕೊಳ್ಳುವಿರಿ. ತಾಯಿಯು ನಿಮಗೆ ಹಿತವಚನವನ್ನು ಹೇಳುವರು.
ಮಿಥುನ ರಾಶಿ: ಸಂಗಾತಿಯ ಉಡುಗೊರೆಯು ನಿಮಗೆ ಹಿಡಿಸುವುದು. ಜಾಣ್ಮೆಯ ಹೆಜ್ಜೆಯನ್ನು ನೀವು ಇಡಬೇಕಾದೀತು. ಮನೆಯ ಕುಂದು ಕೊರತೆಗಳನ್ನು ವಿಚಾರಿಸುವ ಸಮಯ ನಿಮಗೆ ಸಿಗದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು. ಸಗಟು ವ್ಯವಹಾರವು ನಿಂದು ಕಷ್ಟವಾಗಬಹುದು. ಸಕಾಲಕ್ಕೆ ಭೋಜನವು ನಿಮಗೆ ಮಾಡಲು ಸಾಧ್ಯವಾಗದೇ ಇದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ನಿಮಗೆ ಅಭದ್ರತೆಯು ಕಾಡಬಹುದು. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋದನೆಯು ನಿಮಗೆ ಖುಷಿ ಕೊಡುವುದು. ಸಾಹಿತ್ಯಾಸಕ್ತರಿಗೆ ಅವಕಾಶಗಳು ಬರಬಹುದು. ಆರೋಗ್ಯದ ವ್ಯತ್ಯಯಸಲ್ಲಿಯೂ ನೀವು ಉತ್ಸಾಹದಿಂದ ಮಾಡುವ ಕೆಲಸಕ್ಕೆ ಪ್ರಶಂಸೆ ಮಾಡುವರು.
ಕಟಕ ರಾಶಿ: ನಿಮ್ಮ ಇಂದಿನ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಯಾರ ಸಹಾಯವನ್ನು ಪಡೆದರೂ ನಿಮಗೆ ಸಮಾಧಾನ ಇರದು. ಯಾವುದನ್ನೂ ಒಪ್ಪಿಕೊಳ್ಳುವ ಮೊದಲು ನಿಮಗೆ ನಾಲ್ಕು ಬಾರಿ ಯೋಚಿಸಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಇಂದಿನ ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ಜವಾಬ್ದಾರಿಯಿಂದ ಜಾರಿಕೊಳ್ಳುವ ಯೋಚನೆ ಮಾಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ನಿಮ್ಮ ವಸ್ತುಗಳ ಉಪಯೋಗವನ್ನು ನೀವು ಬಹಳ ನಿರ್ಲಕ್ಷ್ಯದಿಂದ ಮಾಡುವಿರಿ. ಸರಳವಾಗಿ ಮಾತನಾಡುವುದು ನಿಮಗೆ ಬಾರದು. ಸಂಕೀರ್ಣ ಕಾರ್ಯವನ್ನು ಸರಳ ಮಾಡಿಕೊಳ್ಳುವಿರಿ. ಹೊಸ ಕೆಲಸಕ್ಕೆ ಸೇರಲು ನಿಮ್ಮಲ್ಲಿ ಬಹಳ ಉತ್ಸಾಹವು ಇರುವುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ