Horoscope 17 Nov: ದಿನಭವಿಷ್ಯ, ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 10:52 ರಿಂದ 12:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:01 ರಿಂದ 09:26ರ ವರೆಗೆ.
ಮೇಷ ರಾಶಿ: ಅಡೆತಡೆಯ ಪ್ರಯಾಣವನ್ನೂ ಲೆಕ್ಕಿಸದೇ ಮುನ್ನಡೆಯುವಿರಿ. ಉದ್ಯಮಿಗಳು ಇಂದು ದೊಡ್ಡ ಲಾಭವನ್ನು ಗಳಿಸುವ ಯೋಜನೆಯು ಸಿಗುವುದು. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ಹೊರಗಿನ ಆಹಾರವನ್ನು ತ್ಯಜಿಸಲು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ ಆಗುವುದು. ಕಛೇರಿಯಲ್ಲಿ ಉಂಟಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೀವು ಯತ್ನಿಸುವಿರಿ. ನಿಮಗೆ ಅವಶ್ಯಕತೆ ಇರುವಷ್ಟು ಬಳಸಿಕೊಂಡು, ಇನ್ನೊಬ್ಬರ ವಸ್ತುವನ್ನು ಹಿಂದಿರುಗಿಸುವಿರಿ.
ವೃಷಭ ರಾಶಿ: ಸಹೋದ್ಯೋಗಿಗಳ ನಡುವೆ ಸಖ್ಯವುಂಟಾಗುವುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ತುಂಬಾ ಆಯಾಸವನ್ನು ಪಡುವಿರಿ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ಗುರುವಿನ ದರ್ಶನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ವ್ಯಾಪಾರವನ್ನು ನಮ್ರರಾಗಿ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮಗೆ ಇಷ್ಟವಾದ ಕೊಡುಗೆಯು ಸಿಗಬಹುದು. ಇಂದಿನ ಆದಾಯವನ್ನು ಪ್ರಕಟಮಾಡುವುದು ಬೇಡ.
ಮಿಥುನ ರಾಶಿ: ಕಛೇರಿಯಲ್ಲಿ ನಿಮ್ಮ ಎಲ್ಲ ಕೆಲಸಗಳನ್ನು ನೀವು ತ್ವರಿತವಾಗಿ ಪೂರ್ಣಗೊಳಿಸ ಬೇಕಾಗುವುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು. ನಿಮ್ಮ ಕಾರ್ಯದ ಪರಿಶೀಲನೆಗೆ ಅಧಿಕಾರಿಗಳು ಬರಬಹುದು. ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡಲಡುವರು. ಯಾವುದಾದರೂ ಒಂದು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇಟ್ಟಕೊಳ್ಳಿ. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸುವಿರಿ. ಪ್ರೀತಿಯಿಂದ ಹೊರಬರಲು ಆಗದು. ಕೆಲಸದಲ್ಲಿ ನೈಪುಣ್ಯತೆಯನ್ನು ಬೆಳೆಸಿಕೊಂಡಿರುವಿರಿ.
ಕರ್ಕಾಟಕ ರಾಶಿ: ವೃತ್ತಿಯ ಸ್ಥಳದಲ್ಲಿ ಇನ್ನೊಬ್ಬರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಇಂದು ಉತ್ತಮ ಲಾಭವನ್ನು ಪಡೆಯುವರು. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಧನವ್ಯಯವಾದರೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನವಿದ್ದರೂ ಸ್ವಲ್ಪ ಫಲವು ಇರಲಿದೆ. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು. ನಿಮ್ಮ ಕಲ್ಪನೆಯಂತೆ ಎಲ್ಲವೂ ಆಗದು ಎಂಬ ಸತ್ಯವು ತಿಳಿಯಲಿದೆ. ಯೋಜನೆಯನ್ನು ಮಾಡುವಾಗ ಸರಿಯಾಗಿ ಇರಲಿ. ನಿಮ್ಮ ಇಂದಿನ ವರ್ತನೆಯು ಊಹಾತೀತವಾಗಿರುವುದು.
ಸಿಂಹ ರಾಶಿ: ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಸಂತೋಷದಿಂದ ಇರುವಿರಿ. ಆರ್ಥಿಕತೆಯಿಂದ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ದುಡಿಯುವವು ತಮ್ಮ ಶ್ರಮಕ್ಕೆ ಉಚಿತ ಫಲಿತಾಂಶವನ್ನು ನಿರೀಕ್ಷಿಸುವರು. ನಿಮ್ಮ ಆಸೆಯನ್ನು ಇನ್ನೊಬ್ಬರ ಎದುರು ಪ್ರಕಟಪಡಿಸಲು ಮುಜುಗರ ಆಗಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವಾಗಬಹುದು. ಧನಾತ್ಮಕ ಚಿಂತನೆಯಿಂದ ಕಳೆದುಕೊಂಡ ಉತ್ಸಾಹವು ಮತ್ತೆ ಬರುವುದು. ಪ್ರಭಾವೀ ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ.
ಕನ್ಯಾ ರಾಶಿ: ಹೂಡಿಕೆಯು ಆರ್ಥಿಕ ಚಿಂತನೆಯನ್ನು ದೂರ ಮಾಡುವುದು. ಇಂದಿನ ನಿರಾಸೆಯು ಮನಸ್ಸಿಗೆ ನೋವನ್ನು ಕೊಡುವುದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ವ್ಯಾಪಾರಸ್ಥರಾದ ನೀವು ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಿರಿ. ಮಗುವಿನ ಆರೋಗ್ಯದ ಚಿಂತೆ ಇಂದು ಕಾಡಬಹುದು. ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಇತರರ ಬೆಂಬಲವು ನಿಮಗೆ ಕಡಿಮೆ ಆಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು. ಪ್ರಯತ್ನವು ಫಲಿಸುವ ತನಕ ಸಹನೆ ಅತ್ಯವಶ್ಯಕ. ನಡೆದಾಡುವಾಗ ಜಾಗರೂಕತೆ ಬೇಕು.
ತುಲಾ ರಾಶಿ: ದೂರದ ಊರಿನಲ್ಲಿ ಉದ್ಯೋಗಕ್ಕೆ ಹೋಗಬೇಕಾಗಬಹುದು. ಇಂದಿನ ನಿಮ್ಮ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಮನೆಯಲ್ಲಿ ಸಂತೋಷದ ವಾತಾವರಣವನ್ನು ನೀವೇ ಸೃಷ್ಟಿಸುವಿರಿ. ಬಂಧುಗಳು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ವಿಳಂಬವಾದರೂ ಮಾರ್ಗ ಸರಿಯಾಗಿರಲಿದೆ. ನಿಮ್ಮ ಮಾತಿನ ಮೇಲೆ ನಂಬಿಕೆ ಕಡಿಮೆ ಆಗುವುದು. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವರು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡಬೇಕಾದೀತು. ಇಂದಿನ ಕಾರ್ಯವು ಪೂರ್ಣವಾಗುವ ತನಕ ನಿಮಗೆ ಮಾನಸಿಕ ವಿಶ್ರಾಂತಿಯು ಇರದು. ನಿಮ್ಮ ಮಾತು ವಿವಾದವನ್ನು ಹುಟ್ಟುಹಾಕಬಹುದು. ನಿತ್ಯ ಬಳಕೆಯ ವಸ್ತುವಿನ ವ್ಯಾಪಾರದಿಂದ ಲಾಭ ಗಳಿಸುವಿರಿ. ಸಂಗಾತಿಯ ಬಯಕೆಯನ್ನು ಪೂರ್ಣವಾಗಿಸುವಿರಿ.
ವೃಶ್ಚಿಕ ರಾಶಿ: ವಿದ್ಯಾಭ್ಯಾಸದ ಖರ್ಚನ್ನು ನೀವು ಸರಿದೂಗಿಸಿಕೊಳ್ಳುವಿರಿ. ನಡವಳಿಕೆಯು ಹದ ಮೀರದಿರಲಿ. ಪ್ರೇಮಿಗಳು ಇಂದು ಸ್ವತಂತ್ರವಾಗಿ ಇರಲು ಆಸೆಪಡುವರು. ವಿವಾಹಿತರ ಜೀವನವು ಆನಂದದಿಂದ ಇರುವುದು. ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿದ್ದು ಹತಾಶ ಭಾವವಿರುವುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು. ವ್ಯಾಪಾರಸ್ಥರಿಗೆ ಸಾಮಾನ್ಯವಾಗಿ ಇರುವುದು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಯುಕ್ತಿಯಿಂದ ಕೆಲಸವನ್ನು ಸಾಧಿಸಿದ ಎಲ್ಲವೂ ಕ್ಷೇಮ. ನಿಮ್ಮ ನಡವಳಿಕೆಯು ಕೆಲವರಿಗೆ ಇಷ್ಟವಾಗದೇ ಇರಬಹುದು.
ಧನು ರಾಶಿ: ನ್ಯಾಯಾಲಯದಲ್ಲಿ ಜಯವನ್ನು ಸಾಧಿಸುವಿರಿ. ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡುವಿರಿ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ ಪಾಲಿಗೆ ಬರುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು. ಇಂದಿನ ನಿಮ್ಮ ಉತ್ಸಾಹವು ಸಮಾರಂಭಗಳಲ್ಲಿ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ.
ಮಕರ ರಾಶಿ: ವಿದ್ಯುತ್ ಉಪಕರಣಗಳು ದುರಸ್ತಿಗೆ ಬರಬಹುದು. ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ಯಾರನ್ನೂ ಕುರುಡಾಗಿ ನಂಬವುದು ಬೇಡ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ.
ಕುಂಭ ರಾಶಿ: ವ್ಯವಹಾರದಲ್ಲಿ ಚಾತುರ್ಯ ಸಾಲದು. ಒತ್ತಡವನ್ನು ನೀವು ಸಹಜಸ್ವಭಾವವಾಗಿ ಸ್ವೀಕರಿಸುವಿರಿ. ನೀವು ಬಹಳ ಕಾಲದಿಂದ ಪ್ರಮುಖ ಕೆಲಸದಲ್ಲಿ ತೊಂದರೆಯಾಗುತ್ತಿದ್ದು, ಅದು ಕೊನೆಗೊಳ್ಳಬಹುದು. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಹಣದ ಪರಿಸ್ಥಿತಿ ಉತ್ತಮವಾಗಿದ್ದರೂ, ಯಥಾಯೋಗ್ಯವಾದ ಖರ್ಚೂ ಇರಲಿದೆ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಕಂಡುಬರುವುದು. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ಹೆಚ್ಚಿಸುವುದು. ಆಪ್ತರಿಂದ ನಡೆವಳಿಕೆಗೆ ಟೀಕೆಗಳು ಬರಬಹುದು.
ಮೀನ ರಾಶಿ: ಪಾಲುದಾರಿಕೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವುದು ಹಾಗೆಯೇ ಉಳಿದುಕೊಳ್ಳುವುದು. ಗೃಹಬಳಕೆಯ ವಸ್ತುಗಳಿಂದ ಹೆಚ್ಚಿನ ಲಾಭವಿರುವುದು. ಉದ್ಯಮದಲ್ಲಿ ಬರುವ ಸಮಸ್ಯೆಯನ್ನೂ ನಿವಾರಿಸಿಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲವೇ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಬೇಸರಿಸದೇ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದದಿಂದ ಬೇಸರ ಇರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವು ಸಂತೋಷಗೊಳ್ಳುವರು. ಅಪರಿಚಿತರನ್ನು ನಂಬಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ.
-ಲೋಹಿತಶರ್ಮಾ -8762924271 (what’s app only)