Astrology: ಯಾವುದೇ ಕಾರ್ಯದಲ್ಲೂ ಮುಖ್ಯವಾಗಿ ಗಮನಿಸುವ ತಾರಾ ಬಲ ಅಂದರೇನು? ಲೆಕ್ಕಾಚಾರ, ಮಹತ್ವದ ಮಾಹಿತಿ ಇಲ್ಲಿದೆ

| Updated By: Srinivas Mata

Updated on: Jul 24, 2021 | 8:01 AM

ಯಾವುದೇ ಶುಭ ಕಾರ್ಯ ಮಾಡುವಾಗ, ಕೆಲಸ ಮಾಡುವಾಗ ತಾರಾ ಬಲ ಬಹಳ ಮುಖ್ಯ. ಆದ್ದರಿಂದ ಜ್ಯೋತಿಷ ರೀತಿಯಾಗಿ ತಾರಾ ಬಲದ ಪ್ರಾಮುಖ್ಯ, ಲೆಕ್ಕಾಚಾರ ಇತ್ಯಾದಿಗಳನ್ನು ಇಲ್ಲಿ ನೀಡಲಾಗುತ್ತಿದೆ.

Astrology: ಯಾವುದೇ ಕಾರ್ಯದಲ್ಲೂ ಮುಖ್ಯವಾಗಿ ಗಮನಿಸುವ ತಾರಾ ಬಲ ಅಂದರೇನು? ಲೆಕ್ಕಾಚಾರ, ಮಹತ್ವದ ಮಾಹಿತಿ ಇಲ್ಲಿದೆ
ರಾಶಿ ಚಕ್ರ
Follow us on

ಈ ದಿನದ ಲೇಖನದಲ್ಲಿ ತಾರಾ ಬಲದ ಬಗ್ಗೆ ತಿಳಿಸಿಕೊಡಲಾಗುವುದು. ಶುಭ ಕಾರ್ಯವನ್ನು ಮಾಡುವಾಗ, ಯಾವುದಾದರೂ ವಸ್ತುಗಳು ಖರೀದಿಸುವಾಗ, ವ್ಯಾಪಾರ ಶುರು ಮಾಡುವಾಗ, ಹೊಸ ವಿದ್ಯೆಯ ಕಲಿಕೆ ಆರಂಭಿಸುವಾಗ, ವಿವಾಹಾದಿ ಮುಹೂರ್ತಗಳಿಗೆ ನಿರ್ಧಾರ ಮಾಡುವಾಗ ತಾರಾ ಬಲ ಬಹಳ ಮುಖ್ಯ. ಇಲ್ಲಿ ಎರಡು ಪದಗಳಿವೆ. ತಾರೆ ಹಾಗೂ ಬಲ. ಅಂದರೆ ನಕ್ಷತ್ರದ ಶಕ್ತಿ. ಪದಶಃ ಅರ್ಥ ಏನೆಂದರೆ, ನಾವು ಕಾರ್ಯಕ್ರಮ ಆಯೋಜಿಸಿದ ದಿನದಂದು ನಕ್ಷತ್ರದ ಬೆಂಬಲ ಇರಬೇಕು. ಹುಟ್ಟುವ ಸಮಯದಲ್ಲಿ ಯಾವ ನಕ್ಷತ್ರದಲ್ಲಿ ಚಂದ್ರ ಇರುತ್ತದೋ ಅದೇ ನಮ್ಮ ಜನ್ಮ ನಕ್ಷತ್ರ. ಮತ್ತು ಕಾರ್ಯಕ್ರಮ ಆಯೋಜಿಸಿರುವ ದಿನದಂದು ಚಂದ್ರ ಯಾವ ನಕ್ಷತ್ರದಲ್ಲಿ ಇರುವುದೋ ಅದನ್ನು ಸಹ ಗಮನಿಸಬೇಕು. ಜನ್ಮ ನಕ್ಷತ್ರ ಹಾಗೂ ಕಾರ್ಯಕ್ರಮವನ್ನು ನಿಗದಿ ಮಾಡಿದ ದಿನದಂದು ಇರುವ ನಕ್ಷತ್ರದ ತನಕ ಎಣಿಸಿದಾಗ ಎಷ್ಟು ಅಂಕಿ ಬರುತ್ತದೋ ಅದರ ಆಧಾರದಲ್ಲಿ ಒಳ್ಳೆಯ ಅಥವಾ ಕೆಟ್ಟ ಫಲ ನೀಡುವುದು ನಿರ್ಧಾರ ಆಗುತ್ತದೆ.

ಉದಾಹರಣೆಗೆ ಹೇಳುವುದಾದರೆ, ಕಾರ್ಯಕ್ರಮ ನಿಗದಿ ಮಾಡಿದ ದಿನದಂದು ರೋಹಿಣಿ ನಕ್ಷತ್ರ ಎಂದುಕೊಳ್ಳಿ. ಅದನ್ನು ಮಾಡಬೇಕು ಅಂದುಕೊಂಡಿರುವವರದು ಶ್ರವಣ ನಕ್ಷತ್ರ ಎಂದುಕೊಳ್ಳಿ. ಶ್ರವಣದಿಂದ ರೋಹಿಣಿ ನಕ್ಷತ್ರ 10ನೇ ನಕ್ಷತ್ರ ಆಗುತ್ತದೆ. ತಾರಾಬಲದ ಪಟ್ಟಿಯಲ್ಲಿ ಇದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದನ್ನು ನೋಡಿಕೊಳ್ಳಬೇಕು. ಹಾಗಿದ್ದರೆ ಆ ಪಟ್ಟಿಯ ಬಗ್ಗೆ ಗೊತ್ತಿದ್ದರೆ ಉತ್ತಮ ಅಲ್ಲವಾ? ಇಲ್ಲಿ ನಿಮ್ಮ ಅನುಕೂಲಕ್ಕಾಗಿ ನೀಡಲಾಗುತ್ತಿದೆ. ನೀವು ಯಾವುದಾದರೂ ಶುಭ ಕಾರ್ಯಗಳನ್ನು ಮಾಡುವಾಗ, ಹೊಸ ಕೆಲಸಗಳನ್ನು ಶುರು ಮಾಡುವಾಗ ಇದನ್ನು ಗಮನಿಸಿ.

ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 1, 10, 19 ಆದಲ್ಲಿ ಜನ್ಮ ತಾರೆ ಆಗುತ್ತದೆ. ಅದು ಕೆಟ್ಟದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 2, 11, 20 ಆದಲ್ಲಿ ಸಂಪತ್ ತಾರೆ ಆಗುತ್ತದೆ. ಅದು ಒಳ್ಳೆಯದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 3, 12, 21 ಆದಲ್ಲಿ ವಿಪತ್ ತಾರೆ ಆಗುತ್ತದೆ. ಅದು ಕೆಟ್ಟದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 4, 13, 22 ಆದಲ್ಲಿ ಕ್ಷೇಮ ತಾರೆ ಆಗುತ್ತದೆ. ಅದು ಒಳ್ಳೆಯದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 5, 14, 23 ಆದಲ್ಲಿ ಪ್ರತ್ಯಕ್ ತಾರೆ ಆಗುತ್ತದೆ. ಅದು ಕೆಟ್ಟದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 6, 15, 24 ಆದಲ್ಲಿ ಸಾಧನ ತಾರೆ ಆಗುತ್ತದೆ. ಅದು ಒಳ್ಳೆಯದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 7, 16, 25 ಆದಲ್ಲಿ ವಧಾ ತಾರೆ ಆಗುತ್ತದೆ. ಅದು ಕೆಟ್ಟದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 8, 17, 26 ಆದಲ್ಲಿ ಮಿತ್ರ ತಾರೆ ಆಗುತ್ತದೆ. ಅದು ಒಳ್ಳೆಯದ್ದು.
ಜನ್ಮ ನಕ್ಷತ್ರದಿಂದ ನಿರ್ದಿಷ್ಟ ದಿನದ ನಕ್ಷತ್ರದ ತನಕ ಎಣಿಸಿದಾಗ 9, 18, 27 ಆದಲ್ಲಿ ಪರಮ ಮೈತ್ರ ತಾರೆ ಆಗುತ್ತದೆ. ಅದು ತುಂಬಾ ಒಳ್ಳೆಯದ್ದು.

ಈಗ ಮೇಲಿನ ಪಟ್ಟಿಯ ಆಧಾರದ ಮೇಲೆ ನೋಡಿಕೊಂಡು, ಉದಾಹರಣೆಯಲ್ಲಿನ ನಕ್ಷತ್ರದ ಮೇಲಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಶ್ರವಣ ನಕ್ಷತ್ರಕ್ಕೆ ರೋಹಿಣಿ ಜನ್ಮತಾರೆ ಆಗುತ್ತದೆ. ಆದ್ದರಿಂದ ಒಳ್ಳೆಯದಲ್ಲ. ಆದರೆ ಮೃಗಶಿರಾ ನಕ್ಷತ್ರವಾದಲ್ಲಿ ಸಂಪತ್ ತಾರೆ ಆಗುತ್ತದೆ. ಏಕೆಂದರೆ ಅದು ಹನ್ನೊಂದನೆಯದಾಗುತ್ತದೆ. ಹೀಗೇ ಯಾವುದೇ ವ್ಯಕ್ತಿ ತಮ್ಮ ಜನ್ಮ ನಕ್ಷತ್ರದಿಂದ ಆರಂಭಿಸಿ, ಆ ನಿರ್ದಿಷ್ಟ ದಿನದಂದು ಇರುವ ನಕ್ಷತ್ರದ ತನಕ ಎಣಿಸಿ, ತಾರಾ ಬಲವನ್ನು ತಿಳಿದುಕೊಂಡು ಮುಂದುವರಿಯಬಹುದು. ನೆನಪಿರಲಿ, ಮುಹೂರ್ತದಲ್ಲಿ ಪ್ರಮುಖ ಅಂಶಗಳ ಪೈಕಿ ತಾರಾಬಲವೂ ಒಂದು. ಇದೇ ರೀತಿ ಇತರ ಅಂಶಗಳೂ ಇವೆ. ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಶಾಂತಿ ಮಾಡಿಸಿಕೊಂಡು ಮುಂದುವರಿಯಬಹುದು.

ಇದನ್ನೂ ಓದಿ: Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

ಇದನ್ನೂ ಓದಿ: Unfaithful Zodiac: ಪ್ರೀತಿಯಲ್ಲಿ ನಂಬಿಕೆಗೆ ಅರ್ಹರಲ್ಲದ 6 ರಾಶಿಗಳ ಪುರುಷರು ಇವರು

(Importance Significance And Calculation Of Tara Bala According To Vedic Astrology)

Published On - 8:00 am, Sat, 24 July 21