AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

ಯಾವುದೇ ತಿಂಗಳಿನ 6, 15 ಅಥವಾ 24ನೇ ತಾರೀಕಿನಂದು ಹುಟ್ಟಿದವರ ಜನ್ಮಸಂಖ್ಯೆ 6 ಆಗುತ್ತದೆ. ಈ ದಿನದಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬ ವಿವರ ಇಲ್ಲಿದೆ.

Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jun 06, 2021 | 7:27 AM

Share

ಜನ್ಮ ಸಂಖ್ಯೆ 6 ಬರುವಂಥವರ ಬಗೆಗಿನ ಲೇಖನ ಇದು. ಯಾವುದೇ ತಿಂಗಳಿನ 6, 15 ಹಾಗೂ 24ನೇ ತಾರೀಕಿನಂದು ಜನಿಸಿದವರ ಜನ್ಮಸಂಖ್ಯೆ 6 ಆಗುತ್ತದೆ. ಇವರ ಅಧಿಪತಿ ಶುಕ್ರ. ಬಹಳ ಆಕರ್ಷಕವಾದ ವ್ಯಕ್ತಿತ್ವ ಇವರದು. ಸಿನಿಮಾ, ಫ್ಯಾಷನ್ ಡಿಸೈನಿಂಗ್, ಸೌಂದರ್ಯವರ್ಧಕ ಕ್ಷೇತ್ರ ಇಂಥ ಕಡೆ ಇವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಅಷ್ಟೇ ಅಲ್ಲ. ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಹಣ, ಹೆಸರು ಮಾಡಬೇಕೆಂದರು ಕೂಡ ಶುಕ್ರನ ಅನುಗ್ರಹ ಬಹಳ ಮುಖ್ಯವಾಗುತ್ತದೆ. ಇವರ ಕಡೆಗೆ ಜನರು ಬಹಳ ಬೇಗ ಆಕರ್ಷಿತರಾಗುತ್ತದೆ. ವಿಲಾಸಿ ವಸ್ತುಗಳನ್ನು ಸೂಚಿಸುವ ಶುಕ್ರ ಗ್ರಹವು ಇವರಿಗೆ ವಾಹನ ಸೌಖ್ಯವನ್ನು ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಕಾಣಬಹುದು. ಶುಕ್ರನ ಪ್ರಭಾವ ಇರುವ ಪುರುಷರಿಗೆ ಸ್ತ್ರೀಯರ ಜತೆಗಿನ ಸ್ನೇಹ ಹೆಚ್ಚಾಗಿರುತ್ತದೆ.

ಆದರೆ, ಇವರಿಗೊಂದು ಅಹಂಕಾರ ಸದಾ ತೊಂದರೆ ಕೊಡುತ್ತಲೇ ಇರುತ್ತದೆ. ತಾನು ಸಾಧಿಸಲು ಸಾಧ್ಯವಿಲ್ಲದ ಕೆಲಸ ಯಾವುದೂ ಇಲ್ಲ ಎಂಬ ಮನಸ್ಥಿತಿಯ ಕಾರಣಕ್ಕೆ ಆಗಾಗ ಹಣಕಾಸು ವಿಚಾರದಲ್ಲಿ ಪೆಟ್ಟು ತಿನ್ನುತ್ತಾರೆ. ಅಷ್ಟೇ ಬೇಗ ಚೇತರಿಸಿಕೊಂಡೂ ಬಿಡುತ್ತಾರೆ. ತುಂಬ ಎತ್ತರದ ಹುದ್ದೆಗಳನ್ನು ತಲುಪಲು ಇವರ ಮನಸ್ಸು ಸದಾ ಹಂಬಲಿಸುತ್ತಿರುತ್ತದೆ. ಅಧಿಕಾರ ಮತ್ತು ಹಣ ಇವರ ಆಕರ್ಷಣೆಯಾಗಿರುತ್ತದೆ. ಇದರ ಸಲುವಾಗಿ ಕೈಗೊಳ್ಳುವ ಇವರ ನಿರ್ಧಾರಗಳು ಸ್ವಾರ್ಥಿ ಎನಿಸಿಕೊಳ್ಳುವಂತೆ ಮಾಡುತ್ತವೆ. ಆದರೆ ಆ ಬಗ್ಗೆ ಇವರು ಸ್ವಲ್ಪ ಕೂಡ ವಿಚಲಿತರಾಗುವುದಿಲ್ಲ. ಫೈನಾನ್ಷಿಯಲ್ ಮ್ಯಾನೇಜ್​ಮೆಂಟ್ ವಿಚಾರದಲ್ಲಿ ತುಂಬ ಎತ್ತರಕ್ಕೆ ತಲುಪಿಕೊಳ್ಳುವ ಇವರು, ತಮ್ಮ ಕೆಲ ಧೋರಣೆ ಅಥವಾ ಅಭ್ಯಾಸದಿಂದ ಜೀವನದಲ್ಲಿ ಒಮ್ಮೆಯಾದರೂ ತಳವನ್ನು ಕಾಣುವಂಥ ಸನ್ನಿವೇಶ ಎದುರಾಗುತ್ತದೆ.

ಆರೋಗ್ಯದ ವಿಚಾರಕ್ಕೆ ಬಂದಲ್ಲಿ ಗುಪ್ತಾಂಗ ಸಮಸ್ಯೆಗಳು ಇವರನ್ನು ಹೆಚ್ಚಿನ ಪಕ್ಷ ಕಾಡುತ್ತವೆ. ಸಾಧ್ಯವಾದಷ್ಟೂ ತಮ್ಮ ಇಗೋವನ್ನು ಬಿಟ್ಟಲ್ಲಿ ಸಮಸ್ಯೆಗಳು ಕಡಿಮೆ ಇರುತ್ತವೆ. ಲಕ್ಷುರಿ ವಸ್ತುಗಳು, ಒಡವೆ, ವಸ್ತು, ಆಭರಣ, ವಾಹನಗಳ ಬಗ್ಗೆ ಇವರಿಗೆ ವಿಪರೀತ ಆಕರ್ಷಣೆ ಇರುತ್ತದೆ. ಮನುಷ್ಯರಿಗಿಂತ ವಸ್ತುಗಳಿಗೇ ಆದ್ಯತೆ ನೀಡುತ್ತಾರೆ ಎಂದು ಸ್ನೇಹಿತರು ಇವರ ಬಗ್ಗೆ ದೂರುತ್ತಾರೆ. ಈ ಪೈಕಿ 15ನೇ ತಾರೀಕಿನಂದು ಹುಟ್ಟಿದವರ ಮೇಲೆ ರವಿ- ಬುಧ ಹಾಗೂ ಶುಕ್ರನ ಪ್ರಭಾವ ಇದ್ದರೆ, 24ನೇ ತಾರೀಕು ಕುಟ್ಟಿದವರಿಗೆ ಚಂದ್ರ- ರಾಹು ಹಾಗೂ ಶುಕ್ರ ಈ ಮೂರೂ ಗ್ರಹ ಪ್ರಭಾವ ಇರುತ್ತದೆ. ಈ ಪೈಕಿ ಶುಕ್ರನ ಸಂಪೂರ್ಣ ಪ್ರಭಾವ ನೋಡಬೇಕು ಅಂದಲ್ಲಿ 6ನೇ ತಾರೀಕಿನವರನ್ನು ನೋಡಬಹುದು.

ಇದನ್ನೂ ಓದಿ: Numerology Number 7: ಯಾವುದೇ ತಿಂಗಳ 7, 16, 25ರಂದು ಹುಟ್ಟಿದವರ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಏನು ಹೇಳಲಾಗಿದೆ ಗೊತ್ತೆ?

(Numerology number 6 born people nature, characteristics explained here

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್