
ವೃತ್ತಿ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ. ಉದ್ಯೋಗದ ನಿಮಿತ್ತ ಪ್ರಯಾಣದ ಯೋಗವಿದೆ. ನಿಮ್ಮ ಮಾತಿನ ಪ್ರಭಾವದಿಂದ ಅಧಿಕಾರಿ ವರ್ಗದವರ ಮನಸ್ಸು ಗೆಲ್ಲುವಿರಿ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ದೂರವಾಗಲಿವೆ. ಇದಕ್ಕೆ ಪ್ರಭಾವಿಗಳ ಬೆಂಬಲ ನಿಮಗೆ ದೊರೆಯಲಿದೆ. ಸಂಗಾತಿಯ ಜೊತೆಗೂಡಿ ಭವಿಷ್ಯದ ಆರ್ಥಿಕ ಹೂಡಿಕೆಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ. ನಾಯಕತ್ವದ ಗುಣಕ್ಕೆ ಮನ್ನಣೆ ಸಿಗಲಿದೆ. ತಲೆನೋವು ಬಾಧಿಸಬಹುದು, ಸಾಕಷ್ಟು ನೀರು ಕುಡಿಯಿರಿ.
ಭಾವನಾತ್ಮಕವಾಗಿ ನೀವು ಸ್ವಲ್ಪ ಮೃದುವಾಗಿರುವಿರಿ. ಹಣಕಾಸಿನ ವಿಚಾರಕ್ಕೆ ಈ ಹಿಂದಿನ ನಿಮ್ಮ ತೀರ್ಮಾನಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದ್ದು, ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಮುದ ನೀಡಲಿದೆ. ವ್ಯಾಪಾರಸ್ಥರಿಗೆ ಬಾಕಿ ಇದ್ದ ಹಣ ವಸೂಲಿಯಾಗುವ ಲಕ್ಷಣಗಳಿವೆ. ಜಲಮೂಲಗಳ ಹತ್ತಿರ ಪ್ರವಾಸ ಹೋಗುವ ಪ್ಲಾನ್ ಮಾಡಬೇಡಿ. ತಾಯಿಯ ಆರೋಗ್ಯದ ಕಡೆಗೆ ವಿಶೇಷ ಗಮನವಿರಲಿ. ನಿಮ್ಮ ಕ್ರಿಯಾಶೀಲತೆಗೆ ಮನೆಯವರಿಂದ ಉತ್ತಮ ಪ್ರೋತ್ಸಾಹ ಸಿಗಲಿದೆ. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಉತ್ತಮ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯಲ್ಲಿ ಹಿರಿಯರ ಆಶೀರ್ವಾದ ನಿಮ್ಮ ಮೇಲಿರಲಿದೆ. ಆರ್ಥಿಕವಾಗಿ ಖರ್ಚು ಹೆಚ್ಚಾಗಲಿದ್ದರೂ, ಅದು ಶುಭ ಕಾರ್ಯಗಳಿಗಾಗಿ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಕಲಿಕೆಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಬರವಣಿಗೆ ಅಥವಾ ಸಂಶೋಧನೆಯಲ್ಲಿ ತೊಡಗಿರುವವರಿಗೆ ಮನ್ನಣೆ ಸಿಗಲಿದೆ. ಮಕ್ಕಳ ಪ್ರಗತಿಯ ಬಗ್ಗೆ ಶುಭ ವಾರ್ತೆ ಕೇಳುವಿರಿ. ಸಂಜೆಯ ವೇಳೆಗೆ ಆಧ್ಯಾತ್ಮಿಕ ಚಿಂತನೆಗಳು ಸಮಾಧಾನ ನೀಡಲಿವೆ.
ಲೇಖನ- ಎನ್.ಕೆ.ಸ್ವಾತಿ