Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 29ರ ದಿನಭವಿಷ್ಯ
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 29ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಜನ್ಮಸಂಖ್ಯೆಯ ಆಧಾರದಲ್ಲಿ ದಿನಭವಿಷ್ಯ ಜತೆಗೆ ಇನ್ನೊಂದು ಬೋನಸ್. ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಪೂರ್ತಿ ಮಾಡುವ ತನಕ ಅದೇ ಉತ್ಸಾಹ ಉಳಿಸುತ್ತಾ ಇಲ್ಲ. ದಿಢೀರ್ ಉತ್ಸಾಹ ಹಾಗೂ ಅಷ್ಟೇ ವೇಗದಲ್ಲಿ ಆ ಉತ್ಸಾಹ ಕರಗಿ ಹೋಗುತ್ತಾ ಇದೆ ಅನ್ನುವವರಿಗೆ ಮೂನ್ ಸ್ಟೋನ್ ಬಹಳ ಸಹಕಾರಿ. ನಿಮ್ಮದು ವೃಷಭ, ಕರ್ಕಾಟಕ ರಾಶಿಯಾದರೆ ಇನ್ನೂ ಒಳೆಯದು. ವೃಶ್ಚಿಕ ರಾಶಿಯಾದರೆ ಮೂನ್ ಸ್ಟೋನ್ ಬೇಡ. ಆದರೆ ವೃಶ್ಚಿಕ ರಾಶಿಯವರು ಕಾರ್ನೇಲಿಯನ್ ಧರಿಸಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಸರಳವಾದ ಸಂಗತಿ, ವಿಷಯಗಳೇ ಸಿಕ್ಕು ಸಿಕ್ಕಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡಲಿದೆ. ನೀವು ಹೇಳಿದ್ದನ್ನೆಲ್ಲ ಕೇಳಿದ ಮೇಲೋ ಯಾರೋ ಮಾಡಿಕೊಂಡ ಸಮಸ್ಯೆಗೆ ತಲೆ ಕೊಡುವಂತೆ ಆಗಿ ಬಿಡುತ್ತದೆ. ಸಂಕೋಚಕ್ಕೆ ಬಿದ್ದು, ಧ್ವನಿ ಎತ್ತರಿಸಿ ಕೇಳದೆ ಹೋಗಿಬಿಟ್ಟರೆ ನೀವು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತೆ ಆಗಿಬಿಡುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಮೊದಲಿನ ಉತ್ಸಾಹದಿಂದ ನಿಮ್ಮ ಮಾತಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸಂಗಾತಿಯ ಮೇಲೋ ಗೆಳೆಯ- ಗೆಳತಿ, ಪ್ರಿಯಕರ ಮೇಲೋ ಸಿಟ್ಟಾಗುವಂಥ ಸಂದರ್ಭ ಎದುರಾಗಲಿದೆ. ಯಾವುದಕ್ಕೂ ತಾಳ್ಮೆಯಿಂದ ವರ್ತಿಸಿ. ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿಕೊಳ್ಳುವ ಸ್ವಭಾವ ಈ ದಿನ ಮಾತ್ರ ಖಂಡಿತಾ ಬೇಡ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಅದೂ ಇರಲಿ, ಇದೂ ಇರಲಿ ಎಂದು ವಸ್ತುಗಳ ಮೇಲೆ ವಿಪರೀತ ಆಸೆ ಪಡುವುದಕ್ಕೆ ಹೋಗಬೇಡಿ. ಆದಾಯ ಚೆನ್ನಾಗಿ ಬರಲಿದೆ, ಲಾಭ ನಿಮ್ಮ ಕೈಯಲ್ಲಿ ಉಳಿಯಲಿದೆ ಎಂದೆನಿಸಿದ ಕೂಡಲೇ ಅದನ್ನು ಬ್ಯಾಂಕ್ ನಲ್ಲಿಯೇ ಇರಲಿ ಎಂಬ ಧೋರಣೆಯೊಂದಿಗೆ ಇರುವುದು ತುಂಬ ಒಳ್ಳೆಯದು.
ಲೇಖನ- ಸ್ವಾತಿ ಎನ್.ಕೆ.
